For Quick Alerts
ALLOW NOTIFICATIONS  
For Daily Alerts

ಪ್ರತಿ ಬುಧವಾರ ಶ್ರೀ ಕೃಷ್ಣನ ಮಂತ್ರ ಪಠಿಸಿ, ಎಲ್ಲವೂ ಒಳ್ಳೆಯದಾಗುವುದು!

By Manohar
|

ಅನಾದಿ ಕಾಲದಲ್ಲಿ ಜ್ಞಾನಿಗಳು ಮತ್ತು ಋಷಿಗಳು ವಾರದ ಒಂದು ದಿನದಲ್ಲಿ ನಿರ್ದಿಷ್ಟ ದೇವರನ್ನು ಪೂಜಿಸಬಹುದಾಗಿತ್ತು. ಆ ದಿನದಂದು ಆ ದೇವರಿಗೆ ನಿರ್ದಿಷ್ಟ ಪೂಜೆಯನ್ನು ನೀಡುವುದರಿಂದ ದೇವರ ಅನುಗ್ರಹವನ್ನು ಪಡೆದುಕೊಳ್ಳಬಹುದು ಎಂಬುದು ಅವರ ವಿಚಾರವಾಗಿತ್ತು. ಅಂತೆಯೇ ಬುಧವಾರವನ್ನು ಶ್ರೀಕೃಷ್ಣನಿಗೆ ಸಮರ್ಪಿಸಲಾಗಿದೆ. ಈ ದಿನ ಕೃಷ್ಣ ಭಕ್ತರು ಕೃಷ್ಣನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸುತ್ತಾರೆ. ಅಂತೆಯೇ ದೇವರ ಅನುಗ್ರಹವನ್ನು ಪಡೆದುಕೊಳ್ಳಲು ವ್ರತ ಉಪವಾಸವನ್ನು ಕೈಗೊಳ್ಳುತ್ತಾರೆ.

ಅಂತೆಯೇ ಕೃಷ್ಣನ ದೇವಾಲಯಗಳು ಈ ದಿನ ವಿಶೇಷ ಪೂಜೆಯನ್ನು ನಡೆಸುತ್ತವೆ. ಇನ್ನು ಮನೆಯಲ್ಲಿ ಕೃಷ್ಣ ಭಕ್ತರು ಪ್ರಾತಃ ಕಾಲಕ್ಕೆ ಎದ್ದು ಸ್ನಾನ ಮಾಡಿ ಪೂಜೆಯನ್ನು ಅಣಿಗೊಳಿಸುತ್ತಾರೆ. ಕೃಷ್ಣನ ಮೆಚ್ಚಿನ ತಿನಿಸಾದ ಮೊಸರು, ಬೆಣ್ಣೆಯನ್ನು ದೇವರಿಗೆ ಅರ್ಪಿಸುತ್ತಾರೆ. ಅಂತೆಯೇ ಕೃಷ್ಣನ ಕುರಿತಾಗಿರುವ ಹಾಡು, ಕೀರ್ತನೆ ಭಜನೆಗಳನ್ನು ಮಾಡುತ್ತಾರೆ. ಕೃಷ್ಣನನ್ನು ಪೂಜಿಸುವಾಗ ಹೆಚ್ಚು ಬಳಕೆ ಮಾಡುವ ಕೀರ್ತನೆ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಎಂದಾಗಿದೆ.

ಈ ಮಂತ್ರವು ಹೆಚ್ಚು ಜನಪ್ರಿಯವಾಗಿದ್ದು ಬುಧವಾರದಂದು ಪಠಿಸಲಾಗುತ್ತದೆ. ಅಂತೆಯೇ ಹೆಚ್ಚಿನ ಮಂತ್ರಗಳನ್ನು ಈ ದಿನ ಕೃಷ್ಣನ ಪೂಜಿಸುವ ಸಮಯದಲ್ಲಿ ಹೇಳಲಾಗುತ್ತದೆ. ಈ ದಿನ ನಮ್ಮ ಲೇಖನದಲ್ಲಿ ಕೃಷ್ಣನನ್ನು ಪೂಜಿಸುವ ಕೆಲವೊಂದು ಮಂತ್ರಗಳ ವಿವರಗಳನ್ನು ನೀಡುತ್ತಿದ್ದು ಕೃಷ್ಣ ಪೂಜೆಯ ಸಮಯದಲ್ಲಿ ಈ ಮಂತ್ರಗಳನ್ನು ಬಳಸಿ ನೀವು ಪೂಜೆಯನ್ನು ನಡೆಸಬಹುದಾಗಿದೆ. ಅದೇ ರೀತಿ ವಿಶೇಷವಾಗಿ ಬುಧವಾರದಂದು ಈ ಮಂತ್ರವನ್ನು ಜಪಿಸುವುದು ದೇವರ ವಿಶೇಷ ಅನುಗ್ರಹ ಮತ್ತು ಕೃಪೆಯನ್ನು ನಿಮ್ಮ ಮೇಲೆ ತೋರುತ್ತದೆ...

ಶ್ರೀ ಕೃಷ್ಣ ಸ್ತೋತ್ರಂ

ಶ್ರೀ ಕೃಷ್ಣ ಸ್ತೋತ್ರಂ

ವಂದೇ ನವ ಗಾನಾ ಶ್ಯಾಮಮಂ, ಪೀತ ಕೌಸೇಯ ವಾಸಮ್

ಸನಂದನ್ ಸುಂದರಾಮ್ ಶುಧಾಮ್, ಶ್ರೀ ಕೃಷ್ಣಮ್ ಪ್ರಕೃತೇ ಪ್ಯಾರಮ್

ಗಾಢ ಮೋಡಗಳ ಅಧಿಪತಿ ಎಂದೆನಿಸಿರುವ ಕೃಷ್ಣನಿಗೆ ನನ್ನ ಪ್ರಣಾಮಗಳು. ಹಳದಿ ಬಟ್ಟೆಯನ್ನು ಧರಿಸಿರುವ ಮನಮೋಹಕ ಕೃಷ್ಣನಿಗೆ ನಾನು ವಂದಿಸುತ್ತೇನೆ. ಯಾವಾಗಲೂ ಮಂದಸ್ಮಿತನಾಗಿರುವ, ಸುಂದರನಾಗಿರುವ ಭಗವಂತನಿಗೆ ನನ್ನ ನಮಸ್ಕಾರಗಳು.

ಶ್ರೀ ಕೃಷ್ಣ ಸ್ತೋತ್ರಂ

ಶ್ರೀ ಕೃಷ್ಣ ಸ್ತೋತ್ರಂ

ರಾಧೇಶ್ಯಾಮ್ ರಾಧಿಕ ಪ್ರಾಣ ವಲ್ಲಭಂ, ವಲ್ಲವೀ ಸುತಂ

ರಾಧಾ ಸೇವಿತ ಪಾದಭಜಂ, ರಾಧ ವಕ್ಷ ಸ್ಥಲ ಸ್ಥಿತಂ

ಸೃಷ್ಟಿಕರ್ತ ಎಂದೆನಿಸಿರುವ ಕೃಷ್ಣನಿಗೆ ನಾನು ಮೊದಲು ವಂದಿಸುತ್ತೇನೆ. ಕೃಷ್ಣನು ಯಶೋಧೆಯ ಪುತ್ರನಾಗಿದ್ದಾರೆ. ರಾಧೆಯ ಸಖ ಭಗವಂತನ ಕೃಷ್ಣನಾಗಿದ್ದಾರೆ. ಅಂತೆಯೇ ಆಕೆಯ ಆತ್ಮಕ್ಕೆ ನಾಯಕ ಕೃಷ್ಣ.

ಶ್ರೀ ಕೃಷ್ಣ ಸ್ತೋತ್ರಂ

ಶ್ರೀ ಕೃಷ್ಣ ಸ್ತೋತ್ರಂ

ರಾಧಾನುಗಮ್ ರಾಧಿಕೇಸಮ್ ರಾಧಾನುಕಾ ಮಾನಸಂ

ರಾಧಾಧರಮ್ ಭವಧರಮ್ ಸರ್ವಧರಮ್ ನಮಾಮಿ ತಮ್

ರಾಧೆಗಾಗಿಯೇ ಜನ್ಮವೆತ್ತಿರುವ ಕೃಷ್ಣನ ಸೇವೆಯನ್ನು ನಾನು ಮಾಡುತ್ತೇನೆ. ಆಕೆಯ ಜೀವ ಜೀವದಲ್ಲಿ ಕೃಷ್ಣನಿದ್ದು ಆಕೆಯೊಂದಿಗೆ ನಿತ್ಯವೂ ಇರುತ್ತಾರೆ. ರಾಧೆಯ ಭಗವಂತನೇ ಕೃಷ್ಣನಾಗಿದ್ದಾರೆ. ಹಾಗೂ ಅವರ ಮನಸ್ಸು ಯಾವಾಗಲೂ ರಾಧೆಯ ಜೊತೆಗೆ ಇರುತ್ತದೆ. ರಾಧೆಯ ಕಾಳಜಿಯನ್ನು ತೆಗೆದುಕೊಳ್ಳುವ ಭಗವಂತನೇ ನನ್ನನ್ನು ಸಂರಕ್ಷಿಸಿ.

ಶ್ರೀ ಕೃಷ್ಣ ಸ್ತೋತ್ರಂ

ಶ್ರೀ ಕೃಷ್ಣ ಸ್ತೋತ್ರಂ

ಧಯಾಯಂತೆ ಯೋಗಿನೆ ಯೋಗತ್ ಸಿಧ, ಸಿದ್ಧೇಶ್ವರಸ್ಚ ಯಾಮ್

ಥಾಮ್ ದಯೇತ್ ಸಂತಾತ್ಮಮ್ ಶುಧಾಮ್ ಭಗವಂತಮ್ ಸಂತಾನಮ್

ಮಹಾನ್ ಯೋಗಿಗಳು ತಮ್ಮ ಯೋಗ ಬಲದಿಂದ ನಿಮ್ಮನ್ನು ಪೂಜಿಸುತ್ತಾರೆ. ನಿಮಗೆ ಮರಣವಿಲ್ಲ ಅಂತೆಯೇ ಕಷ್ಟವನ್ನು ಅನುಭವಿಸಬೇಕಾಗಿಲ್ಲ.

ಶ್ರೀ ಕೃಷ್ಣ ಸ್ತೋತ್ರಂ

ಶ್ರೀ ಕೃಷ್ಣ ಸ್ತೋತ್ರಂ

ಸೆವಂತ ಸತ್ತಾಥ್ ಸಂಟೋ ಬ್ರಾಹ್ಮೇಶೇ ಸೀಶ ಸಂಗ್ಕಾರ,

ಸೆವಂತೇ ನಿರ್ಗುಣಮ್. ಬ್ರಹ್ಮ ಭಗವಂತಂ ಸನಾಥಾಮ್.

ನಿಮ್ಮನ್ನು ಜ್ಞಾನಿಗಳು ಅಂತೆಯೇ ಶಿವ, ಬ್ರಹ್ಮ ಕೂಡ ಪೂಜಿಸುತ್ತಾರೆ. ನಿಮ್ಮ ಹೆಸರನ್ನು ಪಠಿಸುವ ಮೂಲಕ ಸಾಧು ಸಂತರು ಮೋಕ್ಷವನ್ನು ಪಡೆದಿದ್ದಾರೆ. ನೀವು ನಿರಾಕಾರವಾಗಿದ್ದು ಸತ್ಯದ ಆಧಾರದ ಮೇಲೆ ಸೃಷ್ಟಿಯಾಗಿದ್ದೀರಿ.

ಶ್ರೀ ಕೃಷ್ಣ ಸ್ತೋತ್ರಂ

ಶ್ರೀ ಕೃಷ್ಣ ಸ್ತೋತ್ರಂ

ನರ್ಲಿಪ್ತಂ ಚಾ ನಿರಹಂ ಚಾ ಪರಮಮಾನಂದೇಶ್ವರಂ,

ನಿತ್ಯಂ ಸತ್ಯಂಚ ಪರಮಂ ಭಗವಂತಂ ಸನಾಥಾಮ್.

"ನೀವು ಶಾಶ್ವತವಾಗಿರುವಿರಿ ಮತ್ತು ದೀರ್ಘಾವಧಿಯವರೆಗೂ ಯಾವುದೇ ಸಂಬಂಧಗಳ ಕಟ್ಟುಪಾಡುಗಳಿಂದ ಬಂಧಿಸಲ್ಪಟ್ಟಿರುವುದಿಲ್ಲ ನಿಮಗೆ ಯಾವುದೇ ಆಸೆಗಳಿಲ್ಲ ಮತ್ತು ಕೇವಲ ಶುದ್ಧ ಆನಂದವಿದೆ ನೀವು ಶಾಶ್ವತವಾಗಿರುವಿರಿ, ನೀವು ಸತ್ಯ, ಮತ್ತು ನೀವು ಯಾವಾಗಲೂ ಅಸ್ತಿತ್ವದಲ್ಲಿರುತ್ತೀರಿ."

ಶ್ರೀ ಕೃಷ್ಣ ಸ್ತೋತ್ರಂ

ಶ್ರೀ ಕೃಷ್ಣ ಸ್ತೋತ್ರಂ

ಯಮ ಶ್ರೆರತಧಿ ಭೂತಂಚಾ ಸರ್ವ ಭೀಜ ಪರಾತ್ ಪಾರಾಮ್,

ಯೋಗಿನಾಥಂ ಪ್ರಪಧಾಂತ ಭಗವಂತಂ ಸನಾಥಾಮ್

"ಎಲ್ಲವೂ ಸೃಷ್ಟಿಯಾಗುವ ಮೊದಲು ನೀವು ಅಸ್ತಿತ್ವದಲ್ಲಿದ್ದಿರಿ ಮತ್ತು ಸೃಷ್ಟಿಗೆ ಕಾರಣಕರ್ತರಾದ ನೀವು ವಿವಿಧ ಅವತಾರಗಳಿಗೆ ಕಾರಣರಾಗಿದ್ದೀರಿ."

ಶ್ರೀ ಕೃಷ್ಣ ಸ್ತೋತ್ರಂ

ಶ್ರೀ ಕೃಷ್ಣ ಸ್ತೋತ್ರಂ

ಭೀಜಮ್ ನನವತರಣಂ ಸರ್ವ ಕರಣ ಕರಣಂ,

ವೇದ ವೇದ್ಯಾಮ್ ವೇದಭೀಜಂ ವೇದ ಕರಣ ಕರಣಂ.

"ನೀವು ಎಲ್ಲದರ ಮೂಲವಾಗಿದ್ದೀರಿ, ಎಲ್ಲಾ ಕಾರಣಗಳಿಗೆ ಕಾರಣೀಕರ್ತರು ನೀವಾಗಿದ್ದೀರಿ. ನಿಮ್ಮನ್ನು ವೇದಗಳು ಕೂಡ ಸಂಪೂರ್ಣವಾಗಿ ವಿವರಿಸಲಾಗುವುದಿಲ್ಲ. ವೇದಗಳ ರಚನೆಗೆ ಕಾರಣರಾಗಿರುವವರು ನೀವಾಗಿದ್ದೀರಿ".

English summary

Krishna Stotram To Chant On Wednesdays

The wise men and Sages of ancient India allotted a day of the week to worship a particular God. It is believed that prayers and poojas to the God on the day dedicated to them pleases them easily and helps you to reap good benefits.Wednesday is dedicated to Lord Krishna. The devotees of Lord Krishna go to the temples that are dedicated to him. They often keep vrats and fasts to please the Lord. The temples that are dedicated to Lord Krishna have special poojas and rituals performed on Wednesdays.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more