For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2023: ಕೃಷ್ಣನ ಬಗ್ಗೆ ನೀವು ತಿಳಿಯದೇ ಇರುವ ಆಸಕ್ತಿಕರ ಸಂಗತಿಗಳು

|

ದುಷ್ಟರನ್ನು ಶಿಕ್ಷಿಸಲು ಹಾಗೂ ಧರ್ಮ ಸಂಸ್ಥಾಪನೆಗಾಗಿ ವಿಷ್ಣು ಕೃಷ್ಣನ ಅವತಾರವೆತ್ತಿದ ಎನ್ನಲಾಗುತ್ತದೆ. ಒಬ್ಬ ಬೋಧಕನಾಗಿ, ಸ್ನೇಹಿತನಾಗಿ, ತಂದೆಯಾಗಿ, ಹಿತೈಷಿಯಾಗಿ, ಮಾರ್ಗದರ್ಶಕನಾಗಿ, ದುಷ್ಟರ ಪಾಲಿಗೆ ಸಂಹಾರಕನಾಗಿ ಶ್ರೀ ಕೃಷ್ಣ ಪರಮಾತ್ಮ ಸದಾ ಕಾಯುತ್ತಾನೆ. ಶ್ರೀಕೃಷ್ಣ ಸಾಕಷ್ಟು ವಿಚಾರಗಳಿಗಾಗಿ ಆಕರ್ಷಣೆಯ ಕೇಂದ್ರ ಬಿಂದು.

ಕೃಷ್ಣ ಬಗ್ಗೆ ನಾವು ತಿಳಿದಿರುವ ಸಂಗತಿಗಳಿದ್ದರು ತಿಳಿಯದೇ ಇರುವ ಸಂಗತಿಗಳು ಸಹ ಸಾಕಷ್ಟಿದೆ. 2023ನೇ ಸಾಲಿನಲ್ಲಿ ಸೆಪ್ಟೆಂಬರ್‌ 6ರಂದು ಬರಲಿರುವ ಕೃಷ್ಣ ಜನ್ಮಾಷ್ಟಮಿ ವಿಶೇಷ ಕೃಷ್ಣನ ಬಗ್ಗೆ ನೀವು ಈವರೆಗೂ ತಿಳಿಯದೇ ಇರುವ ಸಂಗತಿಗಳ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ:

1. ಎಲ್ಲ ರೀತಿಯಲ್ಲೂ ಆಕರ್ಷಕವಾಗಿ ಕಾಣುವ ಕೃಷ್ಣನ ಚರ್ಮದ ಬಣ್ಣ ಗಾಢ ನೀಲಿ ಅಲ್ಲ, ಕಪ್ಪು. ಆದ್ದರಿಂದಲೇ ಕಪ್ಪಾದ ಹೆಣ್ಣು ಮಕ್ಕಳನ್ನು ಕೃಷ್ಣ ಸುಂದರಿ ಎನ್ನುತ್ತಾರೆ.

1. ಎಲ್ಲ ರೀತಿಯಲ್ಲೂ ಆಕರ್ಷಕವಾಗಿ ಕಾಣುವ ಕೃಷ್ಣನ ಚರ್ಮದ ಬಣ್ಣ ಗಾಢ ನೀಲಿ ಅಲ್ಲ, ಕಪ್ಪು. ಆದ್ದರಿಂದಲೇ ಕಪ್ಪಾದ ಹೆಣ್ಣು ಮಕ್ಕಳನ್ನು ಕೃಷ್ಣ ಸುಂದರಿ ಎನ್ನುತ್ತಾರೆ.

ಆರಾಧ್ಯ ದೇವ ಕೃಷ್ಣನು ಮಾನವಕುಲದ ಮೇಲೆ ಬಹಳ ಪ್ರಭಾವ ಬೀರಿದ್ದಾನೆ. ತನ್ನ ಅತ್ಯುತ್ತಮ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುವ ಕೃಷ್ಣನ ಬಗೆಗಿನ ಒಂದು ಕುತೂಹಲಕಾರಿ ವಿಷಯವೆಂದರೆ, ಅವನ ಬಣ್ಣವು ಗಾಢವಾದದ್ದು ನೀಲಿ ಅಲ್ಲ. ಕೃಷ್ಣನನ್ನು ಸಾಮಾನ್ಯವಾಗಿ ವರ್ಣಚಿತ್ರಗಳು ಮತ್ತು ವಿಗ್ರಹಗಳಲ್ಲಿ ನೀಲಿ ಬಣ್ಣದಲ್ಲಿ ಚಿತ್ರಿಸಲಾಗಿದ್ದರೂ, ಅವನ ನಿಜವಾದ ಚರ್ಮದ ಬಣ್ಣವು ಗಾಢವಾಗಿದೆ.

2. 16,100 ಪತ್ನಿಯರ ಪ್ರಿತಿಯ ಪತಿ ಗೋಪಾಲ

2. 16,100 ಪತ್ನಿಯರ ಪ್ರಿತಿಯ ಪತಿ ಗೋಪಾಲ

ಕೃಷ್ಣನಿಗೆ 16,100 ಪತ್ನಿಯರಿದ್ದರು, ಅವರಲ್ಲಿ ಎಂಟು ಮಂದಿ ಅವರ ಪ್ರಮುಖ ಪತ್ನಿಯರು ಅಂದರೆ ರುಕ್ಮಿಣಿ, ಸತ್ಯಭಾಮ, ಜಾಂಬವತಿ, ನಾಗನಜಿತಿ, ಭದ್ರ, ಕಾಳಿಂದಿ, ಲಕ್ಷ್ಮಣ ಮತ್ತು ಮಿತ್ರವಿಂದ. ರುಕ್ಮಿಣಿ ಲಕ್ಷ್ಮಿ ದೇವಿಯ ಅವತಾರವಾಗಿದ್ದು, ಕೃಷ್ಣನು ತನ್ನ ಸಂಬಂಧಿಕರಿಂದ ರಕ್ಷಿಸಲು ಮದುವೆಯಾದನು. ಉಳಿದ 16,100 ಪತ್ನಿಯರನ್ನು ಕೃಷ್ಣ ನರಕಾಸುರನಿಂದ ರಕ್ಷಿಸಿದ. ಅವನು ರಾಕ್ಷಸನನ್ನು ಕೊಂದನು ಮತ್ತು ಬಲವಂತವಾಗಿ ಅವನ ಸ್ಥಾನದಲ್ಲಿ ಇರಿಸಲಾಗಿರುವ ಎಲ್ಲ ಮಹಿಳೆಯರನ್ನು ಬಿಡುಗಡೆ ಮಾಡಿದನು.

3. ಶ್ರೀ ಕೃಷ್ಣನ 80 ಮಕ್ಕಳ ಹೆಸರು ನಿಮಗೆ ಗೊತ್ತೆ?

3. ಶ್ರೀ ಕೃಷ್ಣನ 80 ಮಕ್ಕಳ ಹೆಸರು ನಿಮಗೆ ಗೊತ್ತೆ?

ಶ್ರೀ ಕೃಷ್ಣನ ಎಂಟು ಹೆಂಡತಿಯರಿಗೂ ತಲಾ ಹತ್ತು ಮಕ್ಕಳು.

ಪಟ್ಟದ ರಾಣಿ ರುಕ್ಮಿಣಿ : ಪ್ರದ್ಯುಮ್ನ, ಚಾರುದೇಷ್ಣೆ, ಸುದೇಷ್ಣೆ, ಚಾರುದೇಹ, ಸುಚಾರು , ಚಾರುಗುಪ್ತ , ಭದ್ರಚಾರು , ಚಾರುಚಂದ್ರ , ವಿಚಾರು , ಚಾರು

ಸತ್ಯಭಾಮಾ : ಭಾನು , ಸುಭಾನು , ಸ್ವರ್ಭಾನು , ಪ್ರಭಾನು, ಭಾನುಮಂತ , ಚಂದ್ರಭಾನು , ಬೃಹದ್ಭಾನು , ಅತಿಭಾನು , ಶ್ರೀ ಭಾನು , ಪ್ರತಿಭಾನು

ಜಾಂಬವತಿ : ಸಾಂಬ , ಸುಮಿತ್ರ , ಪುರಜಿತ್, ಶತಜಿತ್ , ಸಹಸ್ರಜಿತ್ , ವಿಜಯ , ಚಿತ್ರಕೇತು , ವಸುಮಂತ , ದ್ರವಿಡ ಕ್ರತು

ಕಾಲಿಂದಿ : ಶ್ರುತ , ಕವಿ, ವೃಷ , ವೀರ , ಸುಬಾಹು , ಭದ್ರ , ಶಾಂತಿ , ದರ್ಶ, ಪೂರ್ಣಮಾಸ , ಸೋಮಕ

ಮಿತ್ರವೃಂದಾ : ವೃಕ , ಹರ್ಷ , ಅನಿಲ, ಗೃಧ್ರ , ವರ್ಧನ , ಅನ್ನಾದ , ಮಹಾಶ , ಪಾವನ , ವಹ್ನಿ , ಕ್ಷುಧಿ

ಸತ್ಯಾ : ವೀರ , ಚಂದ್ರ , ಅಶ್ವಸೇನ , ಚಿತ್ರಗು , ವೇಗವಂತ , ವೃಷ , ಆಮ , ಶಂಕು , ವಸು , ಕುಂತಿ

ಲಕ್ಷ್ಮಣಾ : ಪ್ರಘೋಷ , ಗಾತ್ರವಂತ , ಸಿಂಹ , ಬಲ , ಪ್ರಬಲ, ಊರ್ಧ್ವಗ , ಮಹಾಶಕ್ತಿ , ಸಹ , ಓಜ , ಅಪರಾಜಿತ

ಭದ್ರಾ : ಸಂಗ್ರಾಮಜಿತ್ , ಬೃಹತ್ಸೇನ , ಶೂರ , ಪ್ರಹರಣ , ಅರಿಜಿತ್ , ಜಯಾ , ಸುಭದ್ರ , ವಾಮ , ಆಯು , ಸತ್ಯಕ

4. ಹಲವು ಧರ್ಮದ ಆರಾಧ್ಯದೈವ ಶ್ರೀಕೃಷ್ಣ

4. ಹಲವು ಧರ್ಮದ ಆರಾಧ್ಯದೈವ ಶ್ರೀಕೃಷ್ಣ

ಕೃಷ್ಣ ಹಿಂದೂ ಧರ್ಮದ ಪ್ರಮುಖ ದೇವತೆ ಮತ್ತು ಹಿಂದೂ ಧರ್ಮದ ಅನೇಕ ಸಂಪ್ರದಾಯಗಳಲ್ಲಿ ವಿವಿಧ ದೃಷ್ಟಿಕೋನಗಳಲ್ಲಿ ಪೂಜಿಸಲಾಗುತ್ತದೆ. ಹಿಂದೂ ಧರ್ಮ ಮಾತ್ರವಲ್ಲದೆ ಶ್ರೀಕೃಷ್ಣನನ್ನು ಜೈನ ಧರ್ಮ, ಬೌದ್ಧ ಧರ್ಮದಲ್ಲೂ ಪೂಜಿಸುತ್ತಾರೆ. ಬೌದ್ಧಧರ್ಮದಲ್ಲಿ ಅವನು ತನ್ನ ದುಷ್ಟ ಚಿಕ್ಕಪ್ಪ ಕಂಸನನ್ನು ಕೊಂದನು ಎಂಬ ಕಥೆ ಇದೆ.

 5. ಹಿಂದೂ ಧರ್ಮಗ್ರಂಥಗಳಲ್ಲಿ ರಾಧೆಯ ದಾಖಲೆ ಇಲ್ಲ

5. ಹಿಂದೂ ಧರ್ಮಗ್ರಂಥಗಳಲ್ಲಿ ರಾಧೆಯ ದಾಖಲೆ ಇಲ್ಲ

ರಾಧಾ ಕೃಷ್ಣನ ಕಥೆಗಳನ್ನು ವಿಶ್ವದ ಶ್ರೇಷ್ಠ ಪ್ರೇಮವೆಂದು ಪರಿಗಣಿಸಲಾಗಿದೆ. ಆದರೆ ಆಶ್ಚರ್ಯಕರವೆಂದರೆ ಮಹಾಭಾರತ ಮತ್ತು ಶ್ರೀಮದ್ ಭಾಗವತ ಸೇರಿದಂತೆ ಯಾವುದೇ ಪುರಾತನ ಗ್ರಂಥಗಳು ರಾಧೆಯನ್ನು ಉಲ್ಲೇಖಿಸಿಯೇ ಇಲ್ಲ. ಶ್ರೀಕೃಷ್ಣನ ಜೀವನ ಆಧಾರಿತ ಪುಸ್ತಕವಾದ ಹರಿವಂಶಂ ಕೂಡ ರಾಧೆಯ ಬಗ್ಗೆ ಯಾವುದೇ ದಾಖಲೆಯನ್ನು ಹೊಂದಿಲ್ಲ.

6. ಕೃಷ್ಣನು ಏಕಲವ್ಯ ಮತ್ತು ದ್ರೌಪದಿಯೊಂದಿಗೆ ಸಂಬಂಧ ಹೊಂದಿದ್ದನು

6. ಕೃಷ್ಣನು ಏಕಲವ್ಯ ಮತ್ತು ದ್ರೌಪದಿಯೊಂದಿಗೆ ಸಂಬಂಧ ಹೊಂದಿದ್ದನು

ದ್ರೌಪದಿ ಪಾರ್ವತಿ ದೇವಿಯ ಅವತಾರವೆಂದು ನಂಬಲಾಗಿದೆ. ಕೃಷ್ಣ ವಿಷ್ಣುವಿನ ಅವತಾರ ಎನ್ನಲಾಗುತ್ತದೆ. ಭಗವಾನ್ ವಿಷ್ಣುವಿನ ಸಹೋದರಿ ಪಾರ್ವತಿ ದೇವಿಯಾಗಿದ್ದು, ಅದಕ್ಕಾಗಿಯೇ ಶ್ರೀಕೃಷ್ಣ ಮತ್ತು ದ್ರೌಪದಿ ಒಡಹುಟ್ಟಿದವರು ಎಂದು ನಂಬಲಾಗಿದೆ.

ಏಕಲವ್ಯ ನುರಿತ ಬಿಲ್ಲುಗಾರನಾಗಿದ್ದು ವಾಸುದೇವನ ಸಹೋದರನಾಗಿದ್ದ ದೇವಶರುವಿನ ಮಗನಾಗಿದ್ದನು. ಏಕಲವ್ಯನನ್ನು ಬಲಗೈ ಹೆಬ್ಬೆರಳನ್ನು ಕತ್ತರಿಸುವಂತೆ ಮಾಡುವ ದ್ರೋಣಾಚಾರ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಶ್ರೀಕೃಷ್ಣನು ಅವನಿಗೆ ಪುನರ್ಜನ್ಮದ ವರವನ್ನು ನೀಡುತ್ತಾನೆ. ಏಕಲವ್ಯನು ದ್ರೋಣಾಚಾರ್ಯರ ಶಿರಚ್ಛೇದ ಮಾಡುವ ಏಕೈಕ ಉದ್ದೇಶದಿಂದ ಮಾಡಿದ ಯಜ್ಞದ ಬೆಂಕಿಯಿಂದ ಹೊರಬಂದ ಧೃಷ್ಟದ್ಯುಮ್ನನಾಗಿ ಪುನರ್ಜನ್ಮ ಪಡೆದನು.

7. ಕೃಷ್ಣನ ಸಾವಿಗೆ ಕಾರಣವಾದ ಶಾಪಗಳು

7. ಕೃಷ್ಣನ ಸಾವಿಗೆ ಕಾರಣವಾದ ಶಾಪಗಳು

ಕುರುಕ್ಷೇತ್ರ ಯುದ್ಧವು ಗಾಂಧಾರಿಯ ಎಲ್ಲಾ 100 ಮಕ್ಕಳು ಮೃತಪಟ್ಟರು. ತನ್ನ ಸಾಂತ್ವನ ಹೇಳಲು ಕೃಷ್ಣ ಅವಳನ್ನು ಸಂಪರ್ಕಿಸಿದಾಗ, ದುಃಖಿತಳಾದ ತಾಯಿ ಆತನನ್ನು ಯದುವಂಶದೊಂದಿಗೆ ಶಪಿಸಿ ಇನ್ನು 36 ವರ್ಷಗಳಲ್ಲಿ ಯದುವಂಶ ಹಾಗೂ ಕೃಷ್ಣ ಹತರಾಗುತ್ತಾರೆ ಎಂದು ಶಪಿಸುತ್ತಾಳೆ. ಕೃಷ್ಣನು ತನ್ನ ಬಂಧುಗಳನ್ನು ಉಳಿಸಿಕೊಳ್ಳಲು ಯುದ್ಧವನ್ನು ನಿಲ್ಲಿಸಿ ಉಳಿಸಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಗಾಂಧಾರಿಯ ಮಾತಿಗೆ ತಥಾಸ್ತು ಎಂದನು. ಶಾಪವನ್ನು ಪಡೆದು ಇಡೀ ವಂಶ ಪಾಪಿಗಳಾಗಿದ್ದಾರೆ. ಹಾಗಾಗಿ ಅವರ ನಾಶ ಪ್ರಸಕ್ತವಾದದ್ದು ಎಂದು ತಿಳಿದನು.

8. ಕೃಷ್ಣನು ಊದುತ್ತಿದ್ದ ಪಾಂಚಜನ್ಯ ಕುರುಕ್ಷೇತ್ರದಲ್ಲಿ ಪಾಂಡವರಿಗೆ ಯುದ್ಧದ ಕೂಗು

8. ಕೃಷ್ಣನು ಊದುತ್ತಿದ್ದ ಪಾಂಚಜನ್ಯ ಕುರುಕ್ಷೇತ್ರದಲ್ಲಿ ಪಾಂಡವರಿಗೆ ಯುದ್ಧದ ಕೂಗು

ಪಾಂಚಜನ್ಯ ಎಂಬ ಕೃಷ್ಣನ ಶಂಖವು ಊದಿದಾಗ ಪ್ರಪಂಚದಾದ್ಯಂತ ಪ್ರಬಲವಾದ ಪ್ರತಿಧ್ವನಿಯನ್ನು ಹೊಂದಿತ್ತು. ಕುರುಕ್ಷೇತ್ರ ಯುದ್ಧದ ಆರಂಭವನ್ನು ಸೂಚಿಸಲು ಕೃಷ್ಣನು ತನ್ನ ಶಂಖವನ್ನು ಊದಿದನು ಮತ್ತು ಕೊನೆಯಲ್ಲಿ ಧರ್ಮದ ವಿಜಯವನ್ನು ಸಂಕೇತಿಸಿದನು.

9. ಕೃಷ್ಣನು ಪ್ರಕೃತಿಯ, ಸಾವಿನ ಅಥವಾ ಮಾನವ ಜೀವನಕ್ಕೆ ಸಂಬಂಧಿಸಿದ ಯಾವುದಾದರೂ ಮಿತಿಯನ್ನು ಮೀರಿದವನು ಎನ್ನಲಾಗುತ್ತದೆ. ಹಲವಾರು ದಶಕಗಳು ಕಳೆದರೂ

9. ಕೃಷ್ಣನು ಪ್ರಕೃತಿಯ, ಸಾವಿನ ಅಥವಾ ಮಾನವ ಜೀವನಕ್ಕೆ ಸಂಬಂಧಿಸಿದ ಯಾವುದಾದರೂ ಮಿತಿಯನ್ನು ಮೀರಿದವನು ಎನ್ನಲಾಗುತ್ತದೆ. ಹಲವಾರು ದಶಕಗಳು ಕಳೆದರೂ

ಪುರಾಣಗಳ ಐತಿಹಾಸಿಕ ಚಿತ್ರಗಳಲ್ಲಿ ಕೃಷ್ಣವನು ವಯಸ್ಸಾದಂತೆ ಕಾಣುವುದೇ ಇಲ್ಲ. ಮಹಾಭಾರತವು ಹಲವು ಬಾರಿ ಶ್ರೀಕೃಷ್ಣನು ಯಾವ ಮಿತಿಗಳಿಗೆ ಒಳಪಡಿಸುವುದಿಲ್ಲ ಎಂದು ಉಲ್ಲೇಖಿಸಿದೆ. ಒಂದು ಪ್ರಸಂಗದಲ್ಲಿ, ದುರ್ಯೋಧನನು ಕೃಷ್ಣನನ್ನು ಬಂಧಿಸಲು ಪ್ರಯತ್ನಿಸಿದನು, ಅಲ್ಲಿ ಆತನ ದೇಹವು ತನ್ನೊಳಗೆ ಸೃಷ್ಟಿಯನ್ನೆಲ್ಲಾ ತೋರಿಸುತ್ತದೆ.

10. ಕೃಷ್ಣ ಪಾಂಡವರ ಸಂಬಂಧಿ

10. ಕೃಷ್ಣ ಪಾಂಡವರ ಸಂಬಂಧಿ

ಪಾಂಡವರ ತಾಯಿ ಕುಂತಿ ವಾಸ್ತವವಾಗಿ ವಾಸುದೇವನ ಸಹೋದರಿ. ವಾಸುದೇವ ಕೃಷ್ಣನ ತಂದೆ.

English summary

Krishna Janmashtami 2023: Interesting Facts About Lord Krishna in kannada

Here we are discussing about Krishna Janmashtami 2021: Interesting Facts About Lord Krishna in kannada. Read more.
X
Desktop Bottom Promotion