For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2022: ಪೂಜೆಗೆ ಶುಭ ಮುಹೂರ್ತ ಯಾವಾಗ? ಪೂಜಾವಿಧಿ ಹಾಗೂ ಮಂತ್ರಗಳು

|

ಹಿಂದೂಗಳಿಗೆ ಪ್ರಮುಖ ಹಬ್ಬಗಳಲ್ಲಿ ಒಂದು ಕೃಷ್ಣಜನ್ಮಾಷ್ಟಮಿ, ಶ್ರೀಕೃಷ್ಣನ ಜನ್ಮ ದಿನವನ್ನು ಜನ್ಮಾಷ್ಟಮಿ ಎಂದು ಆಚರಿಸಲಾಗುವುದು.ಈ ದಿನವನ್ನು ಗೋಕುಲಾಷ್ಟಮಿ, ಶ್ರೀಕೃಷ್ಣಾಷ್ಟಮಿ, ಶ್ರೀಕೃಷ್ಣ ಜಯಂತಿ, ಅಷ್ಟಮಿ ರೋಹಿಣಿ ಎಂದು ಆಚರಿಸಲಾಗುವುದು.

Krishna Janmashtami

ಕೃಷ್ಣ ಜನ್ಮಾಷ್ಟಮಿಯನ್ನು ಹೆಚ್ಚಾಗಿ ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನವನ್ನು ಸ್ಮಾರ್ಥ ಸಂಪ್ರದಾಯಕ್ಕಾಗಿಮತ್ತು ಎರಡನೆಯ ದಿನವನ್ನು ವೈಷ್ಣವ ಸಂಪ್ರದಾಯಕ್ಕಾಗಿ ಆಚರಿಸಲಾಗುತ್ತದೆ. ಒಂದು ವೇಳೆ ಹಿಂದೂ ಕ್ಯಾಲೆಂಡರ್‌ನಲ್ಲಿ ಜನ್ಮಾಷ್ಟಮಿಗಾಗಿ ಒಂದೇ ದಿನಾಂಕವನ್ನು ಪಟ್ಟಿ ಮಾಡಿದ್ದರೆ, ಇದರರ್ಥ ಎರಡೂ ಸಂಪ್ರದಾಯದವರು ಒಂದೇ ದಿನದಂದು ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ ಎಂದು ಹೇಳಬಹುದಾಗಿದೆ. ಈ ವರ್ಷ ಆಗಸ್ಟ್‌ 18ರಂದು ಆಚರಿಸಲಾಗುತ್ತಿದೆ.

2022ರಲ್ಲಿ ಕೃಷ್ಣ ಜನ್ಮಾಷ್ಟಮಿಯ ದಿನಾಂಕ

2022ರಲ್ಲಿ ಕೃಷ್ಣ ಜನ್ಮಾಷ್ಟಮಿಯ ದಿನಾಂಕ

ಕೃಷ್ಣ ಜನ್ಮಾಷ್ಟಮಿಯನ್ನು ಭಾದ್ರಪದ ತಿಂಗಳಿನ ಕೃಷ್ಣಪಕ್ಷದ ಎಂಟನೇ ದಿನ ಅಂದರೆ ಅಷ್ಟಮಿಯಂದು ಆಚರಿಸಲಾಗುವುದು. ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಗಸ್ಟ್‌ 18ರಂದು ಸ್ಮಾರ್ಥಚೋಘಾಡಿಯ ಮುಹೂರ್ತದಲ್ಲಿ ಆಚರಿಸಲಾಗುವುದು.

ಕೃಷ್ಣ ಜನ್ಮಾಷ್ಟಮಿ ಪೂಜಾ ಮುಹೂರ್ತ

ಕೃಷ್ಣ ಜನ್ಮಾಷ್ಟಮಿ ಪೂಜಾ ಮುಹೂರ್ತ

ದಿನಾಂಕ : ಆಗಸ್ಟ್‌ 18, 19

ಪೂಜೆಗೆ ಮುಹೂರ್ತ: ಆಗಸ್ಟ್‌ 18 ಮಧ್ಯರಾತ್ರಿ 12:03ರಿಂದ 12: 47ರವರೆಗೆ

ಪೂಜೆಯ ಅವಧಿ:44 ನಿಮಿಷ

ಅಷ್ಟಮಿ ಪ್ರಾರಂಭ: ಆಗಸ್ಟ್‌ 18 ರಾತ್ರಿ 9: 20ರಿಂದ

ಅಷ್ಟಮಿ ಮುಕ್ತಾಯ: ಆಗಸ್ಟ್ 19 ರಾತ್ರಿ 10:59ರವರೆಗೆ

ಜನ್ಮಾಷ್ಟಮಿಯ ಪೂಜಾ ವಿಧಿ

ಜನ್ಮಾಷ್ಟಮಿಯ ಪೂಜಾ ವಿಧಿ

ಒಂದು ಶುಚಿಗೊಳಿಸಿದ ಹಲಗೆಯ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಇಡಿ. ನಂತರ ದೇವರಿಗೆ ದೀಪ, ಧೂಪ ಹಚ್ಚಿ ಪ್ರಾರ್ಥನೆ ಮಾಡಿ. ಅದಾದ ಬಳಿಕ ಪಂಚಾಮೃತದಿಂದ ದೇವರಿಗೆ ಅಭಿಷೇಕ ಮಾಡಿ. ನಂತರ ಗಂಗಾ ಜಲದಿಂದ ಸ್ನಾನ ಮಾಡಿ. ಆ ನಂತರ ಶ್ರೀ ಕೃಷ್ಣನಿಗೆ ಹೊಸ ಬಟ್ಟೆಯನ್ನು ಹಾಕಿ, ಸಿಂಗರಿಸಬೇಕು, ನಂತರ ಮತ್ತೊಮ್ಮೆ ದೀಪ-ಧೂಪ ದೀಪ ಬೆಳಗಿ ಆರತಿ ಮಾಡಬೇಕು. ನಂತರ ದೇವರಿಗೆ ಅಷ್ಟಗಂಧ, ಚಂದನ ಹಾಗೂ ಅಕ್ಷತೆಯ ತಿಲಕವನ್ನಿಡಿ. ದೇವರಿಗೆ ಬೆಣ್ಣೆ, ಕಲ್ಲು ಸಕ್ಕರೆ ಹಾಗೂ ಪಂಚಖಾದ್ಯ ನೈವೇದ್ಯ ಅರ್ಪಿಸಿ.

ಶ್ರೀಕೃಷ್ಣನಿಗೆ ಪೂಜೆ ಮಾಡುವಾಗ ತುಳಸಿ ಹಾಗೂ ಗಂಗಾಜಲ ಅರ್ಪಿಸಿ. ಶ್ರೀಕೃಷ್ಣನ ಮಂತ್ರಗಳನ್ನು ಹೇಳಿ ಪೂಜೆ ಮಾಡಿ, ನಂತರ ಶ್ರೀಕೃಷ್ಣನಿಗೆ ಪುಷ್ಪ ಹಾಗೂ ಅಕ್ಕಿ ಅರ್ಪಿಸಿ ಪೂಜೆಗೆ ಬಂದು ಪೂಜೆ ಪೂಜೆ ಸ್ವೀಕರಿಸಿದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿ.

ಶ್ರೀಕೃಷ್ಣ ಮಂತ್ರಗಳು

ಶ್ರೀಕೃಷ್ಣ ಮಂತ್ರಗಳು

* ಓಂ ದೇವಕಿ ನಂದಾಯ ವಿದ್ಮಯೇ ವಾಸುದೇವಾಯ ಧಿಮಹಿ ತನ್ನೋ ಕೃಷ್ಣ ಪ್ರಚೋದಯಾತ್

* ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ...

* ಜಯ ಶ್ರೀ ಕೃಷ್ಣ ಚೈತನ್ಯ ಪ್ರಭು ನಿತ್ಯಾನಂದ ಅದ್ವೈತ ಗದಧರ್ ಶ್ರೀವಾಸದಿ ಗೌರ್ ಭಕ್ತ ವೃಂದಾ

* ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ ನಾರಾಯಣ ವಾಸುದೇವ

* ಓಂ ಕ್ಲೀಂ ಕೃಷ್ಣಾಯ ನಮಃ

* ಓಂ ಶ್ರೀ ಕೃಷ್ಣಂ ಶರಣಂ ಮಮ್

ಓಂ ಕೃಷ್ಣಾಯ ನಮಃ

ಕೃಷ್ಣ ಜನ್ಮಾಷ್ಟಮಿ 2022: ಮುರಳಿಧರ ಹುಟ್ಟಿದ ಕಥೆಯೇ ರೋಚಕ

English summary

Krishna Janmashtami 2022 Date, History, Muhurat, Puja Vidhi, Mantra, Rituals and Significance in kannada

When to celebrate Krishna Janmashtami, Here are date, puja timing, puja vidhi and mantra, read on...
X
Desktop Bottom Promotion