For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2021: ಮುರಳಿಧರ ಹುಟ್ಟಿದ ಕಥೆಯೇ ರೋಚಕ

|

ಇದೇ ಬರುವ ಆಗಸ್ಟ್ ಮೂವತ್ತರಂದು ಕೃಷ್ಣ ಜನ್ಮಾಷ್ಟಮಿ, ಅಂದರೆ ಕೃಷ್ಣ ಹುಟ್ಟಿದ ದಿನ. ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನವಿರುವ, ಬೆಣ್ಣೆ ಕಳ್ಳ ಎಂದು ಕರೆಯಲ್ಪಡುವ ಶ್ರೀಕೃಷ್ಣ ಹುಟ್ಟಿದ ಕಥೆಯೇ ರೋಚಕ. ಹೋರಾಟ ಮಾಡಿಕೊಂಡೇ ಜನಿಸಿದಾತ ಶ್ರೀ ಕೃಷ್ಣ. ವಿಷ್ಣುವಿನ ಎಂಟನೇ ಅವತಾರವಾದ ಗೋಕುಲಾನಂದನ ಜನನದ ಬಗ್ಗೆ ಇರುವ ದಂತಕಥೆಯೇನು ಎಂಬುದನ್ನು ನೋಡೋಣ.

Krishna Janmashtami 2021: The story of Lord Krishnas birth in kannada

ಶ್ರೀಕೃಷ್ಣ ಹುಟ್ಟಿದ ಕಥೆಯಿದು..

ಭೂದೇವಿಗೆ ಮಾನವ ಪಾಪಗಳ ಭಾರವನ್ನು ಹೊರಲು ಸಾಧ್ಯವಾಗಲಿಲ್ಲ. ಸಸ್ಯಗಳು, ಪ್ರಾಣಿಗಳು, ನೀರು, ಗಾಳಿ ಮತ್ತು ಭೂಮಿ ಮಾನವ ಪಾಪಗಳಿಂದ ನಾಶವಾಗುತ್ತಿದ್ದವು. ಆಗ ಭೂದೇವಿ ವಿಷ್ಣುವಿನ ಬಳಿ ಹೋಗಿ ತನ್ನನ್ನು ರಕ್ಷಿಸುವಂತೆ ಕೇಳಿಕೊಂಡಳು. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ಪ್ರಮುಖ ಘಟನೆಯು ಶ್ರೀಕೃಷ್ಣನ ಜನ್ಮಕ್ಕೆ ಸ್ಫೂರ್ತಿ ನೀಡಿತು. ಕೃಷ್ಣ ಹುಟ್ಟಲು ಇದು ಮೊದಲ ಕಾರಣ ಎನ್ನಲಾಗುತ್ತದೆ.

ಆ ಕಾಲದಲ್ಲಿ ಮಥುರೆಯಲ್ಲಿ ಉಗ್ರಸೇನನೆಂಬ ರಾಜನಿದ್ದ, ಆತನ ಮಗನೇ ಕಂಸ. ಈತ ಕರುಣೆ ಇಲ್ಲದ ಕ್ರೂರ ವ್ಯಕ್ತಿ. ಮಥುರೆಯ ಪ್ರತಿಯೊಬ್ಬರೂ ಅವನ ಕ್ರೂರ ಮತ್ತು ದುಷ್ಟ ಸ್ವಭಾವಕ್ಕೆ ಹೆದರುತ್ತಿದ್ದರು. ಕಂಸ ಪ್ರೀತಿಸುವ ಒಬ್ಬ ವ್ಯಕ್ತಿಯೆಂದರೆ, ಆತನ ಸಹೋದರಿ ದೇವಕಿ. ಆಕೆ ದಯೆ, ಪ್ರೀತಿ ಮತ್ತು ಕಾಳಜಿಯುಳ್ಳವಳು. ದೇವಕಿಯ ಮದುವೆಯನ್ನು ವಾಸುದೇವ ಎಂಬ ವ್ಯಕ್ತಿಯೊಂದಿಗೆ ನಿಶ್ಚಯಿಸಲಾಯಿತು.

ಮದುವೆ ಬಹಳ ವೈಭವದಿಂದ ನಡೆದು, ಎಲ್ಲಾ ಆಚರಣೆಗಳು ಮುಗಿದ ನಂತರ ತನ್ನ ತಂಗಿಯನ್ನು ಕಂಸ ರಥದ ಮೂಲಕ ಅತ್ತೆಯ ಮನೆಗೆ ಕರೆದೊಯ್ಯುತ್ತಿದ್ದನು. ಈ ದಾರಿಯಲ್ಲಿ, ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿ, ಮೋಡಗಳು ಆಕಾಶವನ್ನು ಆವರಿಸಿದವು. ಆಗಸದಿಂದ ಒಂದು ಅನಾಮಿಕ ಧ್ವನಿಯು "ಓ ಪ್ರಿಯ ಕಂಸ, ನೀನು ಯಾಕೆ ತುಂಬಾ ಸಂತೋಷವಾಗಿದ್ದೀಯ? ನೀವು ತುಂಬಾ ಪ್ರೀತಿಸುವ ಸಹೋದರಿಗೆ ಮಗ ಹುಟ್ಟುತ್ತಾನೆ, ದೇವಕಿಗೆ ಜನಿಸಿದ ಎಂಟನೆಯ ಮಗನು ನಿನ್ನನ್ನು ಕೊಲ್ಲುತ್ತಾನೆ ಎಂದು ಹೇಳಿತು.

ಇದನ್ನು ಕೇಳಿದ ಕಂಸನು ಕೋಪಗೊಂಡು, ಎಂಟನೇ ಮಗುವಿಗೆ ಜನ್ಮ ನೀಡುವ ಮೊದಲು ತನ್ನ ಸಹೋದರಿಯನ್ನು ಕೊಲ್ಲುವುದಾಗಿ ಆತ ಹೇಳಳುತ್ತಾನೆ, ಆಗ ವಾಸುದೇವ ಕಂಸನನ್ನು ಬೇಡಿಕೊಂಡು, ದೇವಕಿಯನ್ನು ಕೊಲ್ಲಬೇಡ. ಮದುವೆಯಾದ ದಿನವೇ, ತನ್ನ ಸ್ವಂತ ಸಹೋದರಿಯನ್ನು ಕೊಲ್ಲುವುದು ನ್ಯಾಯಸಮ್ಮತವಲ್ಲ. ತಮಗೆ ಜನಿಸಿದ ಎಲ್ಲಾ ಮಕ್ಕಳನ್ನು ಕಂಸನಿಗೆ ಹಸ್ತಾಂತರಿಸುವುದಾಗಿ ಭರವಸೆ ನೀಡಿದರು.

ಮದುವೆಯ ಮೆರವಣಿಗೆಯನ್ನು ಮಥುರೆಗೆ ಹಿಂತಿರುಗಲು ಆದೇಶ ನೀಡಿ, ವಾಸುದೇವ ಮತ್ತು ದೇವಕಿಯನ್ನು ಅರಮನೆಯ ಕತ್ತಲಕೋಣೆಯಲ್ಲಿ ಬಂಧಿಸಿದನು. ಒಂದು ದಿನ ಕಂಸನು ತನ್ನ ಕೋಣೆಯಲ್ಲಿ ಕುಳಿತಿದ್ದಾಗ, ದೇವಕಿಯು ಮಗುವಿಗೆ ಜನ್ಮ ನೀಡಿದ ಸುದ್ದಿ ಅವನಿಗೆ ತಿಳಿಯಿತು. ಕಂಸ ತಕ್ಷಣವೇ ಸೆರೆಮನೆಗೆ ಹೋಗಿ, ಆ ಮಗುವನ್ನು ಹಸ್ತಾಂತರಿಸುವಂತೆ ದೇವಕಿಯನ್ನು ವಿನಂತಿಸಿದನು ಆದರೆ ಅವಳು ನಿರಾಕರಿಸಿದಳು, ಆಗ ಅವನು ಮಗುವನ್ನು ದೇವಕಿಯಿಂದ ಕಸಿದುಕೊಂಡು ಕೊಂದನು. ಅದರ ನಂತರ ದೇವಕಿಗೆ ಜನಿಸಿದ ಮುಂದಿನ ಐದು ಮಕ್ಕಳನ್ನು ಕಂಸ ಕೊಂದನು. ದೇವಕಿ ಏಳನೇ ಬಾರಿ ಗರ್ಭಿಣಿಯಾಗಿದ್ದಳು. ಏಳನೆಯ ಮಗುವನ್ನು ಬುದ್ಧಿವಂತಿಕೆಯಿಂದ ರೋಹಿಣಿಗೆ ಹಸ್ತಾಂತರಿಸಿದರು. (ವಾಸುದೇವನ ಎರಡನೇ ಪತ್ನಿ), ಅವರು ಗೋಕುಲದಲ್ಲಿ ವಾಸಿಸುತ್ತಿದ್ದರು. ಏಳನೆಯ ಮಗುವನ್ನು ಬಲರಾಮ ಎಂದು ಕರೆಯಲಾಗುತ್ತಿತ್ತು.

ಈ ಕ್ರೂರತೆಯಿಂದ ಬೇಸತ್ತ ದಂಪತಿಗಳು 8 ನೇ ಮಗುವನ್ನು ಉಳಿಸಲು ವಿಷ್ಣುವನ್ನು ಕೇಳಿಕೊಂಡರು. ಒಂದು ರಾತ್ರಿ ವಿಷ್ಣು ವಾಸುದೇವನಿಗೆ ಕನಸಿನಲ್ಲಿ ಕಾಣಿಸಿಕೊಂಡು, ನಿನ್ನ ಮಗುವನ್ನು ಗೋಕುಲಕ್ಕೆ ಕರೆದುಕೊಂಡು ಹೋಗಿ ಅಲ್ಲಿರುವ ನಂದಗೋಪಾಲ ಮತ್ತು ಯಶೋದೆಗೆ ಜನಿಸಿದ ಮಗುವಿನ ಜೊತೆ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿ ವಿಷ್ಣು ಕಣ್ಮರೆಯಾದ.

ಕೃಷ್ಣ ಪಕ್ಷದ ಅಷ್ಟಮಿಯ ದಿನ ದೇವಕಿಯ ಎಂಟನೇ ಮಗ ಹುಟ್ಟಿದ, ಆತನೇ ಭಗವಾನ್‌ ಕೃಷ್ಣ. ಕೃಷ್ಣನ ತಂದೆ ವಾಸುದೇವನು ವಿಷ್ಣುವಿನ ಸೂಚನೆಯಂತೆ, ಬುಟ್ಟಿಯಲ್ಲಿಟ್ಟುಕೊಂಡು ಭಾರೀ ಮಳೆಯಲ್ಲೇ ತನ್ನ ಕಂದನನ್ನು ಕಂಸನಿಂದ ರಕ್ಷಿಸಲು ನಂದಗೋಪಾಲ ಮನೆಗೆ ಹೊರಡುತ್ತಾನೆ. ಆಗ ಇದ್ದಕ್ಕಿದ್ದಂತೆ ಜೈಲಿನ ಕಾವಲಿಗರು ನಿದ್ರೆಗೆ ಜಾರುತ್ತಾರೆ. ಅಷ್ಟು ಮಾತ್ರವಲ್ಲ, ಜೈಲಿನ ಬಾಗಿಲು ಇದ್ದಕ್ಕಿದ್ದಂತೆ ಸ್ವಯಂಚಾಲಿತವಾಗಿ ತೆರೆದುಕೊಂಡಿತು. ಅದೇ ಸಮಯದಲ್ಲಿ ಭಾರೀ ಮಳೆ ಬರುತ್ತಿತ್ತು.

ವಾಸುದೇವ ತನ್ನ ಕಂದ ಕೃಷ್ಣನನ್ನು ಯಮುನಾ ನದಿಯ ಸಹಾಯದಿಂದ ಗೋಕುಲದಲ್ಲಿನ ತನ್ನ ಸ್ನೇಹಿತ ನಂದಗೋಪ ಇರುವಲ್ಲಿಗೆ ಕರೆತರುತ್ತಾನೆ. ಅದೇ ಸಮಯದಲ್ಲಿ ನಂದಾ ಅವರ ಪತ್ನಿ ಯಶೋದಾ ಕೂಡ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಆಗ ವಾಸುದೇವನು ತನ್ನ ಮಗ ಕೃಷ್ಣನನ್ನು ಯಶೋದಾಳ ಮಡಿಲಲ್ಲಿ ಮಲಗಿಸಿ, ಆಕೆಯ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ.

ವಾಸುದೇವನು ನಂದರ ಹೆಣ್ಣು ಶಿಶುವಿನೊಂದಿಗೆ ಮಥುರಾದ ಜೈಲಿಗೆ ಮರಳಿದರು. ನಂತರ ಕಂಸನಿಗೆ ದೇವಕಿ ಮತ್ತು ವಾಸುದೇವನಿಗೆ 8 ನೇ ಮಗುವಾಗಿರುವ ವಿಷಯ ತಿಳಿಯಿತು. ಕಂಸನು ಆ ಮಗುವನ್ನು ಸಾಯಿಸಲು ಜೈಲಿಗೆ ಬರುತ್ತಾನೆ. ಆ ಹೆಣ್ಣು ಶಿಶುವನ್ನು ಕಲ್ಲಿನ ಮೇಲಿಟ್ಟು ಕೊಲ್ಲಲು ಯತ್ನಿಸಿದಾಗ ಮಗು ಆಕಾಶಕ್ಕೆ ಹಾರಿ ತನ್ನ ದಿವ್ಯ ಸ್ವರೂಪವನ್ನು ಪ್ರದರ್ಶಿಸುತ್ತಾಳೆ. ಕಂಸನಿಗೆ ಆತನ ಸಂಹಾರವನ್ನು ದೃಢಪಡಿಸಿ ವಿಂಧ್ಯಾಚಲ ಪರ್ವತವನ್ನೇರಿ ಕುಳಿತುಕೊಳ್ಳುತ್ತಾಳೆ. ಇಂದಿಗೂ ಆಕೆಯನ್ನು ವಿಂಧ್ಯಾವಾಸಿನಿ, ವಿಂಧ್ಯಾಚಲ ದೇವಿಯೆಂದು ಕರೆಯಲಾಗುತ್ತದೆ. ಇದನ್ನು ಕೇಳಿದ ಕಂಸನು ಭಯಭೀತನಾದನು. ವಾಸುದೇವ್ ಮತ್ತು ದೇವಕಿ ಸಂತೋಷಪಟ್ಟರು. ಇದೇ ಕೃಷ್ಣನ ಜನ್ಮದ ಹಿಂದಿರುವ ಕಥೆ.

English summary

Krishna Janmashtami 2021: The story of Lord Krishna's birth in kannada

Here we talking about Krishna Janmashtami 2021: The story of Lord Krishna's birth in kannada, read on
Story first published: Saturday, August 28, 2021, 13:30 [IST]
X
Desktop Bottom Promotion