For Quick Alerts
ALLOW NOTIFICATIONS  
For Daily Alerts

Krishna Janmashtami : ಕೃಷ್ಣ ಜನ್ಮಾಷ್ಟಮಿ 2021: ದಿನಾಂಕ, ಪೂಜಾ ಮುಹೂರ್ತ ಹಾಗೂ ಮಹತ್ವ

|

ಕೃಷ್ಣ ಜನ್ಮಾಷ್ಟಮಿಯನ್ನು ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನ, ದಕ್ಷಿಣ ಭಾರತದ ಕಡೆ ತುಂಬಾ ಅದ್ಧೂರಿಯಿಂದ ಆಚರಿಸಲಾಗುವುದು. ಕೃಷ್ಣ ಜನಿಸಿದ ದಿನವನ್ನು ಕೃಷ್ಣ ಜನ್ಮಾಷ್ಟಮಿಯೆಂದು ಆಚರಿಸಲಾಗುವುದು. ಜಗತ್‌ ಪಾಲಕನಾದ ವಿಷ್ಣುವಿನ 8ನೇ ಅವತರವೇ ಶ್ರೀಕೃಷ್ಣಾವತಾರ. ದುಷ್ಟರನ್ನು ಸಂಹರಿಸಿ, ಶಿಷ್ಟರ ಪಾಲನೆಗಾಗಿ ಶ್ರೀಕೃಷ್ಣ ಜನ್ಮವೆತ್ತಿದ ಎಂಬ ಪೌರಾಣಿಕ ಕತೆಯಿದೆ.

ಈ ವರ್ಷ ಕೃಷ್ಣಾಷ್ಟಮಿ ಯಾವಾಗ ಆಚರಿಸಲಾಗುವುದು? ಇತಿಹಾಸ, ಪೂಜಾ ಮುಹೂರ್ತ, ಮಹತ್ವದ ಬಗ್ಗೆ ಹೇಳಲಾಗಿದೆ ನೋಡಿ:

ಕೃಷ್ಣಾಷ್ಟಮಿ 2021 ದಿನಾಂಕ ಮತ್ತು ಇತಿಹಾಸ

ಕೃಷ್ಣಾಷ್ಟಮಿ 2021 ದಿನಾಂಕ ಮತ್ತು ಇತಿಹಾಸ

ಈ ವರ್ಷ ಆಗಸ್ಟ್‌ 30, ಸೋಮವಾರದಂದು ಆಚರಿಸಲಾಗುವುದು.

ಚಾಂದ್ರಮಾನ ಪಂಚಾಂಗ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀಕೃಷ್ಣ ಜನನವಾಯ್ತು, ಸೌರಮಾನ ಪಂಚಾಂಗ ಪ್ರಕಾರ ಸಿಂಹ ಮಾಸದಲ್ಲಿ ಶ್ರೀಕೃಷ್ಣ ಜನನವಾಯ್ತು. ದಕ್ಷಿಣ ಭಾರತೀಯರ ಪ್ರಕಾರ ಶ್ರಾವಣ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸಿದರೆ ಉತ್ತರ ಭಾರತೀಯರು ಭಾದ್ರಪದ ಮಾಸದಲ್ಲಿ ಆಚರಿಸುತ್ತಾರೆ, ಅಲ್ಲಿ ಹಾಗೂ ಇಲ್ಲಿ ಮಾಸ ವ್ಯತ್ಯಾಸವಾದರೂ ದಿನಾಂಕ ಒಂದೇ ದಿನವಾಗಿದೆ. ಆದ್ದರಿಂದ ಆಗಸ್ಟ್‌ 30ರಂದು ಭಾರತದೆಲ್ಲಡೆ ಕೃಷ್ಣಾಷ್ಟಮಿ ಆಚರಿಸಲಾಗುವುದು.

ಪೂಜಾ ಮುಹೂರ್ತ

ಪೂಜಾ ಮುಹೂರ್ತ

ನಿಶಿತಾ ಕಾಲ ಮುಹೂರ್ತ: ರಾತ್ರಿ 11:59ರಿಂದ 12:44ರವರೆಗೆ

ಅಷ್ಟಮಿ ತಿಥಿ ಪ್ರಾರಂಭ: ಆಗಸ್ಟ್ 29, 2021 ರಾತ್ರಿ 11:25ರವರೆಗೆ

ಅಷ್ಟಮಿ ತಿಥಿ ಮುಕ್ತಾಯ: ಆಗಸ್ಟ್‌ 30 ರಾತ್ರಿ 01:59ರವರೆಗೆ

ಮಧ್ಯ ರಾತ್ರಿ ಪೂಜಾ ಸಮಯ: ಆಗಸ್ಟ್‌ 30, 2021 ರಾತ್ರಿ 12:22ರವರೆಗೆ

ಚಂದ್ರೋದಯ ಸಮಯ: ರಾತ್ರಿ 11:35, ಕೃಷ್ಣ ದಶಮಿ

ರೋಹಿಣಿ ನಕ್ಷತ್ರ ಪ್ರಾರಂಭ: ಆಗಸ್ಟ್‌ 30, 2021 ಬೆಳಗ್ಗೆ 06:39ರವರೆಗೆ

ರೋಹಿಣಿ ನಕ್ಷತ್ರ ಮುಕ್ತಾಯ: ಆಗಸ್ಟ್ 31, 2021 ಬೆಳಗ್ಗೆ 09:44ರವರೆಗೆ

ಮೊಸರು ಮಡಿಕೆ ಹೊಡೆಯುವುದು: ಆಗಸ್ಟ್ 31, 2021 ಮಂಗಳವಾರ

ಪೂಜೆ ಹೇಗಿರಬೇಕು?

ಪೂಜೆ ಹೇಗಿರಬೇಕು?

ಬೆಳಗ್ಗೆ ಎದ್ದು ಸ್ನಾನ ಮಾಡಿ, ಭಕ್ತಿ ಹಗೂ ಶ್ರದ್ಧೆಯಿಂದ ಕೃಷ್ಣಾಷ್ಟಮಿ ಆಚರಿಸಬೇಕು. ಈ ದಿನ ಉಪವಾಸ ಇರಬೇಕು. ಸಂಪೂರ್ಣ ಉಪವಾಸ ಇರಲು ಸಾಧ್ಯವಾಗದವರು ಲಘು ಆಹಾರ ಸೇವಿಸಬಹುದು. ನಂತರ ರಾತ್ರಿಯೆಲ್ಲಾ ಜಾಗರಣೆ ಇದ್ದು ಶ್ರೀಕೃಷ್ಣ ಧ್ಯಾನ ಮಾಡುತ್ತಾ, ಕೀರ್ತನೆಗಳನ್ನು ಹೇಳುತ್ತಾ ಸಮಯ ಕಳೆಯಬೇಕು. ಪೂಜೆ ಮುಗಿಯುವವರೆಗೆ ಏನನ್ನೂ ತಿನ್ನದೆ ಪೂಜೆ ಮುಗಿದ ಬಳಿಕ ಪ್ರಸಾದ ಸೇವಿಸಬೇಕು.

ಕೃಷ್ಣಾಷ್ಟಮಿ ಮಹತ್ವ

ಕೃಷ್ಣಾಷ್ಟಮಿ ಮಹತ್ವ

ಜನ್ಮಾಷ್ಟಮಿ ಹಬ್ಬ ಒಂದು ಆಚರಣೆಯಾದರೆ ಮನುಷ್ಯನ ವ್ಯಕ್ತಿತ್ವದ ದೃಷ್ಟಿಯಿಂದ ನೋಡುವುದಾದರೆ ತುಂಬಾನೇ ಮಹತ್ವದ ಆಚರಣೆಯಾಗಿದೆ. ಪ್ರತಿಯೊಬ್ಬ ಮನುಷ್ಯನೊಳಗಿನ ಸದ್ಭಾವನೆಯನ್ನು ಉತ್ತೇಜಿಸುವ ಹಬ್ಬ ಇದಾಗಿದೆ. ಈ ನಂಬಿಕೆಯು ಅದರ ಬೇರುಗಳನ್ನು ಭಗವದ್ಗೀತೆಯಲ್ಲಿ ಕಂಡುಕೊಳ್ಳಬಹುದು. ಧರ್ಮ-ನೀತಿಯ ಮಾರ್ಗದಲ್ಲಿ ನಡೆಯುವಂತೆ ಈ ಆಚರಣೆ ಪ್ರೇರೇಪಿಸಿರುತ್ತದೆ. ಆಗಲೇ ಜೀವನದಲ್ಲಿ ಸದ್ಗತಿ ಹಾಗೂ ಯಶಸ್ಸು ಲಭಿಸುವುದು ಎನ್ನುವ ಜೀವನದ ಸಾರವನ್ನು ಈ ಹಬ್ಬ ತಿಳಿಸುತ್ತದೆ. ಈ ಕೃಷ್ಣಾಷ್ಟಮಿ ಹಬ್ಬದ ಸಮಯದಲ್ಲಿ ಕುಟುಂಬದವರು, ಬಂಧುಗಳು ಮತ್ತು ಸ್ನೇಹಿತರೆಲ್ಲರೂ ಒಗ್ಗೂಡುವುದರಿಂದ ತುಂಬಾನೇ ಸಡಗರ ಇರುತ್ತದೆ. ಮೊಸರು ಮಡಿಕೆ ಹೊಡೆಯುವುದು ಮಂಗಳವಾರ. ಇನ್ನೂ ಕೋವಿಡ್‌ 19 ಆತಂಕವಿರುವುದರಿಂದ ಹಬ್ಬದ ಸಡಗರವನ್ನು ಮನೆ ಮಂದಿಗಷ್ಟೇ ಸೀಮಿತಗೊಳಿಸಿ.

English summary

Krishna Janmashtami 2021 Date, History, Puja Muhurat and Significance in kannada

Krishna Janmashtami 2021 Date, History, Puja Muhurat and Significance in kannada
X
Desktop Bottom Promotion