For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2019: ದಿನಾಂಕ, ಸಮಯ, ಮಹತ್ವ

|

ದುಷ್ಟರ ಸಂಹಾರ ಹಾಗೂ ಶಿಷ್ಟರ ಸಂರಕ್ಷಣೆಗಾಗಿ ಭಗವಾನ್ ವಿಷ್ಣು ಹತ್ತು ಅವತಾರಗಳನ್ನು ಎತ್ತಿದ್ದಾನೆ, ಅದರಲ್ಲಿ ಶ್ರೀ ಕೃಷ್ಣನ ಅವತಾರವೂ ಒಂದು. ಕೃಷ್ಣ ತನ್ನ ಭಾಲ್ಯದಿಂದಲೂ ದುಷ್ಟ ಶಕ್ತಿಗಳನ್ನು ಸದೆ ಬಡಿಯುತ್ತಾ ಜಗತ್ತಿನ ಕಲ್ಯಾಣವನ್ನು ಮಾಡಿದನು. ಇವನ ಹುಟ್ಟು ವಿಶೇಷತೆಯಿಂದ ಕೂಡಿತ್ತು. ಜೊತೆಗೆ ಜೀವನದ ದಾರಿಯೂ ಸಾಕಷ್ಟು ಕಥೆ ಹಾಗೂ ಜೀವನದ ಮೌಲ್ಯಗಳಿಂದ ಕೂಡಿದೆ. ವಿಶೇಷವಾಗಿ ವ್ಯಕ್ತಿ ತನ್ನ ಜೀವನದಲ್ಲಿ ಯಾವ ಬಗೆಯ ದಾನ, ಧರ್ಮ, ಸತ್ಯ ಸಂಗತಿಗಳೊಂದಿಗೆ ಬದುಕಬೇಕು ಎನ್ನುವುದನ್ನು ತಿಳಿಸಿಕೊಡುತ್ತದೆ.

ಭಗವಾನ್ ಶ್ರೀ ಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಜನಿಸಿದನು. ಅಷ್ಟಮಿಯ ಮಧ್ಯರಾತ್ರಿ ಕಾರಾಗೃಹದಲ್ಲಿ ಜನಿಸಿದನು. ದುಷ್ಟ ಕಂಸನಿಂದ ತನ್ನ ಮಗನನ್ನು ರಕ್ಷಿಸುವ ಉದ್ದೇಶವನ್ನು ವಾಸುದೇವ ಹೊಂದಿದ್ದನು. ಹಾಗಾಗಿಯೇ ವಾಸುದೇವನು ಮಥುರಾದಲ್ಲಿ ಜನಿಸಿದ ಕೃಷ್ಣನನ್ನು ಗೋಕುಲಕ್ಕೆ ಕರೆದೊಯ್ದು, ನಂದ ರಾಜನ ಮನೆಯಲ್ಲಿ ಬಿಟ್ಟು ಬಂದನು. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೂ ಯಶೋದೆ ಕೃಷ್ಣನನ್ನು ಸಾಕಿ ಬೆಳೆಸಿದ ತಾಯಿ. ಕೃಷ್ಣನ ಹುಟ್ಟು ದುಷ್ಟ ಕಂಸ ಹಾಗೂ ಅನೇಕ ದುಷ್ಟರ ಸಂಹಾರಕ್ಕಾಗಿ ಅವತರಿಸಲಾಗಿತ್ತು.

ಸಹೋದರಿಯನ್ನೇ ಬಂಧನದಲ್ಲಿಟ್ಟ ಕಂಸ

ಸಹೋದರಿಯನ್ನೇ ಬಂಧನದಲ್ಲಿಟ್ಟ ಕಂಸ

ಕಂಸ ತಂದೆ ಉಗ್ರಸೇನರನ್ನು ಬಂಧಿನದಲ್ಲಿಟ್ಟು, ತಾನು ರಾಜನಾಗಿದ್ದನು. ನಂತರ ತನ್ನ ಪ್ರೀತಿಪಾತ್ರಳಾದ ತಂಗಿ ದೇವಕಿಗೆ ಮದುವೆ ಮಾಡುತ್ತಾನೆ. ಅಣ್ಣಕಂಸನು ದೇವಕಿ-ವಸುದೇವರ ಮದುವೆಯಾದ ಮೇಲೆ ಅವರನ್ನು ಗಂಡನ ಮನೆಗೆ ಕರೆದೊಯ್ಯುತ್ತಿದ್ದಾಗ, ಅವನಿಗೆ ಒಂದು ಅಶರೀರವಾಣಿ ಕೇಳಿಸಿತು. ಅದರ ಪ್ರಕಾರ ದೇವಕಿಯ ಎಂಟನೇ ಮಗುವೂ ಕಂಸನ ವಧನವನ್ನು ಮಾಡುತ್ತದೆ ಎಂದು.

ಇದನ್ನು ಕೇಳಿದ ಕಂಸನು, ದೇವಕಿಯನ್ನು ಆ ತಕ್ಷಣವೇ ಕೊಲ್ಲಲು ಹೊರಟನು. ಆಗ ವಸುದೇವನು ಅವನನ್ನು ತಡೆದು ಪ್ರತಿ ಮಗುವನ್ನು ಹುಟ್ಟಿದ ತಕ್ಷಣ ಕಂಸನ ಮಡಿಯಲ್ಲಿ ಅರ್ಪಿಸುವುದು ಎಂದು ಹೇಳಿದನು. ಅವರನ್ನು ಬಂಧಿಸಿ ಅವರಿಗೆ ಹುಟ್ಟಿದ 7 ಮಕ್ಕಳನ್ನು ಕೊಂದನು. 8ನೇ ಮಗು ಕೃಷ್ಣನನ್ನು ಅವನಿಗೆ ತಿಳಿಯದ ಹಾಗೆ ಯಮುನಾ ದಾಟಿ ಗೋಕುಲಕ್ಕೆ ಕರೆದು ಕೊಂಡು ಹೋದನು.

ಅಲ್ಲಿ ಆಗತಾನೆ ಹುಟ್ಟಿದ್ದ ಯಶೋದೆ ಮಗಳನ್ನು ಇಲ್ಲಿಗೆ ತಂದನು. ಆದರೆ ಕಂಸ ಅವಳನ್ನು ಕೊಲ್ಲಲು ಬಂದಾಗ ಅವಳು ವಿಷ್ಣುವಿನ ಸಹಾಯಕಿ ಯೋಗಮಾಯಾ ರೂಪಕ್ಕೆ ಬದಲಾಗಿ ಅವನ ಸಾವಿನ ಬಗ್ಗೆ ಅರಿಯಬೇಕೆಂದು ಹೇಳಿ ಮಾಯವಾದಳು. ಕೃಷ್ಣ ಗೋಕುಲ ಹಾಗೂ ವೃಂದಾವನದಲ್ಲಿ ಬಲರಾಮನ ಜತೆ ಬೆಳೆದು, ಕೊನೇಗೆ ಮಥುರಾಗೆ ಬಂದು ಕಂಸನನ್ನು ಕೊಂದನು ಎಂದು ಪುರಾಣ ಕಥೆ ತಿಳಿಸುತ್ತದೆ.

ಪ್ರಮುಖವಾದ ಹಬ್ಬ

ಪ್ರಮುಖವಾದ ಹಬ್ಬ

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

ಜನ್ಮಾಷ್ಟಮಿಯ ಆಚರಣೆ

ಜನ್ಮಾಷ್ಟಮಿಯ ಆಚರಣೆ

ಕೃಷ್ಣ ಜನ್ಮಾಷ್ಟಮಿ ಅನ್ನು ಜನ್ಮಾಷ್ಟಮಿ ಮತ್ತು ಗೋಕುಲಷ್ಟಮಿ ಎಂದೂ ಕರೆಯುತ್ತಾರೆ. ಇದು ಭಗವಾನ್ ಕೃಷ್ಣನ ಜನ್ಮವನ್ನು ಆಚರಿಸುವ ವಾರ್ಷಿಕ ಹಿಂದೂ ಹಬ್ಬ. ಇದು ವಿಷ್ಣುವಿನ ಎಂಟನೇ ಅವತಾರವೆಂದು ನಂಬಲಾಗಿದೆ. ಈ ವರ್ಷ(2019) ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 24, ಶನಿವಾರ ಬಂದಿದೆ. ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣನ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಮೆರವಣಿಗೆ, ಭಜನೆ, ಕೀರ್ತನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭೆ-ಸಮಾರಂಭಗಳನ್ನು ಆಚರಿಸಲಾಗುತ್ತದೆ. ಹಿಂದೂಗಳಿಗೆ ಪವಿತ್ರವಾದ ಹಬ್ಬ ಇದು. ಇದನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ವಿವಿಧ ಕ್ಷೇತ್ರಗಳು ಅಥವಾ ಸ್ಥಳಗಳಿಗೆ ಅನುಗುಣವಾಗಿ ವಿಭಿನ್ನ ರೀತಿಯಲ್ಲಿ ಆಚರಿಸುವುದನ್ನು ಕಾಣಬಹುದು. ಬೆಣ್ಣೆ ಮಡಿಕೆ ಒಡೆಯುವುದು, ಶ್ರೀಕೃಷ್ಣನ ವಿಶೇಷ ಮೂರ್ತಿಗೆ ಪೂಜೆ ಮಾಡುವುದು ಸೇರಿದಂತೆ ವಿವಿಧ ಬಗೆಯ ಆಚರಣೆ ಮತ್ತು ಪೂಜೆಗಳನ್ನು ಕಾಣಬಹುದು.

ಜನ್ಮಾಷ್ಟಮಿಯ ಪೂಜಾ ಸಮಯ:

ಜನ್ಮಾಷ್ಟಮಿಯ ಪೂಜಾ ಸಮಯ:

ಜನ್ಮಾಷ್ಟಮಿಗೆ ವಿಶೇಷವಾದ ಪೂಜಾ ಸಮಯ ಎಂದರೆ ಮುಂಜಾನೆ 12.01 ರಿಂದ ಮುಂಜಾನೆ 12.46.

ವಿಶೇಷ ಆಚರಣೆ

ವಿಶೇಷ ಆಚರಣೆ

ಶ್ರೀಕೃಷ್ಣನ ಭಕ್ತರು ಕೃಷ್ಣ ಜನ್ಮಾಷ್ಟಮಿಯಂದು ಉಪವಾಸ ಮಾಡುತ್ತಾರೆ. ಶ್ರೀಕೃಷ್ಣನ ವಿಗ್ರಹಗಳನ್ನು ಶುದ್ಧ ಬಟ್ಟೆ ಮತ್ತು ಆಭರಣಗಳಿಂದ ಅಲಂಕರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮ ಸಂಕೇತಿಸಲು ವಿಗ್ರಹವನ್ನು ತೊಟ್ಟಿಲಲ್ಲಿ ಇರಿಸಿ ತೂಗುವರು. ಮಹಿಳೆಯರು ತಮ್ಮ ಮನೆಯ ಬಾಗಿಲು ಮತ್ತು ಅಡುಗೆಮನೆಯ ಹೊರಗೆ ಪುಟ್ಟ ಮಗುವಿನ ಹೆಜ್ಜೆಯ ರಂಗೋಲಿಯನ್ನು ಹಾಕುತ್ತಾರೆ. ಇದು ಶ್ರೀಕೃಷ್ಣನು ತಮ್ಮ ಮನೆಗೆ ಬಂದಿದ್ದಾನೆ ಎನ್ನುವ ಸಂಕೇತವನ್ನು ತೋರುವುದು.

ಕೃಷ್ಣ ಜನ್ಮಾಷ್ಟಮಿ ಪ್ರಾಮುಖ್ಯತೆ

ಕೃಷ್ಣ ಜನ್ಮಾಷ್ಟಮಿ ಪ್ರಾಮುಖ್ಯತೆ

ಜನ್ಮಾಷ್ಟಮಿ ಹಬ್ಬದ ಮಹತ್ವದ ಬಗ್ಗೆ ಹೇಳಬೇಕು ಎಂದರೆ... ಪ್ರತಿಯೊಬ್ಬ ಮನುಷ್ಯನೊಳಗಿನ ಸದ್ಭಾವನೆಯನ್ನು ಉತ್ತೇಜಿಸಲು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ನಂಬಿಕೆಯು ಅದರ ಬೇರುಗಳನ್ನು ಭಗವದ್ಗೀತೆಯಲ್ಲಿ ಕಂಡುಕೊಳ್ಳುತ್ತದೆ. ಧರ್ಮ-ನೀತಿಯ ಮಾರ್ಗದಲ್ಲಿ ನಡೆಯಬೇಕು. ಆಗಲೇ ಜೀವನದಲ್ಲಿ ಸದ್ಗತಿ ಹಾಗೂ ಯಶಸ್ಸು ಲಭಿಸುವುದು ಎನ್ನುವ ಜೀವನದ ಸಾರವನ್ನು ಹಬ್ಬ ತಿಳಿಸುತ್ತದೆ ಎಂದು ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಕುಟುಂಬದವರು, ಬಂಧುಗಳು ಮತ್ತು ಸ್ನೇಹಿತರೆಲ್ಲರೂ ಒಗ್ಗೂಡುವುದರಿಂದ ಜೀವನವು ಹೆಚ್ಚು ಸಂತೋಷದಿಂದ ಕೂಡಿರುತ್ತದೆ ಎನ್ನುವುದನ್ನು ತೋರುವುದು.

English summary

Krishna Janmashtami 2019: Date, Time and Significance

Janmashtami, the birthday of Lord Krishna is celebrated with great devotion and enthusiasm in India. According to the Hindu calendar this religious festival is celebrated on the Ashtami of Krishna Paksh or the 8th day of the dark fortnight in the month of Bhadon.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X