For Quick Alerts
ALLOW NOTIFICATIONS  
For Daily Alerts

ಕೊಡಗಿನಲ್ಲಿಂದು ಹುತ್ತರಿ ಹಬ್ಬ: ಈ ಹಬ್ಬದ ವಿಶೇಷತೆ ಹಾಗೂ ಶುಭಾಶಯಗಳು

|

ಕೊಡಗಿನಲ್ಲಿಇಂದು ಅಂದರೆ ನವೆಂಬರ್‌ 20ರಂದು ಪುತ್ತರಿ/ಹುತ್ತರಿ ಹಬ್ಬದ ಸಂಭ್ರಮ. ಕೊಡಗಿನ ವೇಷ-ಭೂಷಣಗಳಷ್ಟೇ ಅಲ್ಲ ಅಲ್ಲಿಯ ಹಬ್ಬಗಳ ಆಚರಣೆಗಳಲ್ಲಿಯೂ ವಿಶೇಷವಿದೆ. ಕೊಡಗಿನ ಪ್ರಮುಖ ಹಬ್ಬಗಳೆಂದರೆ ಕೈಲ್‌ಪೊಳ್ದ್‌ ಹಾಗೂ ಹುತ್ತರಿ. ಎರಡೂ ಹಬ್ಬಗಳೂ ಕೃಷಿಯೊಂದಿಗೆ ಬೆಸೆದಿದೆ.

Kodagu Huttari Festival

ಪುತ್ತರಿ ಎಂದರೆ ಕೊಡವ ಭಾಷೆಯಲ್ಲಿ ಪುದಿಯ ಅರಿ ಅಂದ್ರೆ ಹೊಸ ಅಕ್ಕಿ ಎಂದರ್ಥ. ಹೊಸ ಅಕ್ಕಿ ತಂದು ಅದರಲ್ಲಿ ಪಾಯಸ ಮಾಡಿ ಸವಿಯುವ ಸಂಪ್ರದಾಯವಿದೆ. ಈ ದಿನ ತಂಬಿಟ್ಟು, ಪಾಯಸ ಹಾಗೂ ಇತರ ಸಿಹಿ ಖಾದ್ಯಗಳು ಹಬ್ಬದ ಅಡುಗೆಯಲ್ಲಿರುತ್ತದೆ.

ಹುತ್ತರಿ ಯಾವಾಗ ಆಚರಿಸಲಾಗುವುದು?

ಹುತ್ತರಿ ಯಾವಾಗ ಆಚರಿಸಲಾಗುವುದು?

ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿಯಂದು ಹುತ್ತರಿ ಹಬ್ಬವನ್ನು ಆಚರಿಸಲಾಗುವುದು. ರೋಹಿಣಿ ನಕ್ಷತ್ರವಿಲ್ಲದಿದ್ದರೆ ಕೃತಿಕೆಯಂದು ಹಬ್ಬವನ್ನು ಆಚರಿಸಲಾಗುವುದು. ರಾತ್ರಿ ಭತ್ತತ ಗದ್ದೆಗೆ ಹೋಗಿ ಪೂಜೆ ಮಾಡಿ ಕದಿರು ತರಲಾಗುವುದು. ಆ ತಂದ ಕದಿರನ್ನು ಎಲ್ಲಾ ಮನೆಗಳಲ್ಲಿ ತೋರಣವಾಗಿ ಕಟ್ಟಲಾಗುವುದು. ಹುತ್ತರಿ ಹಬ್ಬದಂದು ಕುಟುಂಬದ ಪ್ರತಿಯೊಬ್ಬ ಸದಸ್ಯರು ಐನ್‌ಮನೆಗೆ ಬರಬೇಕು. ಎಲ್ಲರೂ ಒಟ್ಟಾಗಿ ಈ ಹಬ್ಬವನ್ನು ಆಚರಿಸಲಾಗುವುದು.

ಪೊಲಿ ಪೊಲಿ ದೇವಾ ಎಂದು ಪ್ರಾರ್ಥಿಸುತ್ತಾ ಬೆಳೆ ತೆಗೆಯಲಾಗುವುದು

ಪೊಲಿ ಪೊಲಿ ದೇವಾ ಎಂದು ಪ್ರಾರ್ಥಿಸುತ್ತಾ ಬೆಳೆ ತೆಗೆಯಲಾಗುವುದು

ಈ ಹಬ್ಬದಂದು ಮೊದಲು ಇಗ್ಗುತ್ತಪ್ಪ ದೇವಾಲಯದ ಗದ್ದೆಯಲ್ಲಿ ಕದಿರು ತೆಗೆಯುತ್ತಾರೆ. ಎಲ್ಲರೂ ಒಟ್ಟಾಗಿ ಗದ್ದೆಗೆ ಬರುತ್ತಾರೆ. ಒಬ್ಬ ಕುತ್ತಿ, ಮತ್ತೊಬ್ಬ ಕೋವಿ ಹಿಡಿದಿರುತ್ತಾನೆ. ಕುತ್ತಿ ಹಿಡಿದವ ಭೂ ತಾಯಿಯನ್ನು ಪೂಜಿಸಿ ಪೊಲಿ ಪೊಲಿ ದೇವಾ ಎಂದು ಗಟ್ಟಿಯಾಗಿ ಹೇಳುತ್ತಾ ಕದಿರು ತೆಗೆಯುತ್ತಾನೆ. ಆಗ ಎಲ್ಲರೂ ಒಟ್ಟಾಗಿ ಪೊಲಿ-ಪೊಲಿ ದೇವಾ ಎಂದು ಹೇಳುತ್ತಾರೆ. ಕೋವಿ ಹಿಡಿದವ ಆಕಾಶಕ್ಕೆ ಗುಂಡು ಹಾರಿಸುತ್ತಾನೆ. ಕದಿರು ತೆಗೆದು ಅಲ್ಲಿದ್ದವರಿಗೆ ನೀಡಲಾಗುವುದು.

ಹೊಸ ಅಕ್ಕಿಯ ಪಾಯಸ

ಹೊಸ ಅಕ್ಕಿಯ ಪಾಯಸ

ತಂದ ಹೊಸ ಅಕ್ಕಿಯನ್ನು ಸ್ವಲ್ಪ ಬಿಡಿಸಿ ಪಾಯಸಕ್ಕೆ ಹಾಕಲಾಗುವುದು. ಈ ಹಬ್ಬದಲ್ಲಿ ತಂಬಿಟ್ಟು ಪ್ರಮುಖವಾದ ಅಡುಗೆಯಾಗಿದೆ. ಕುಟುಂಬದವರೆಲ್ಲಾ ಒಟ್ಟಾಗಿ ಈ ಹಬ್ಬವನ್ನು ಸಂಭ್ರಮಿಸುತ್ತಾರೆ. ಕೊಡಗಿನ ಈ ಸಂಸ್ಕೃತಿ, ಆಚರಣೆ ಬೇರೆಲ್ಲೂ ಕಂಡು ಬರಲ್ಲ, ಈ ಹಬ್ಬ ಕೊಡಗಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ ಹಾಗೂ ಕೃಷಿ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.

ಶುಭಾಶಯಗಳು

1. ಕೊಡಗಿನ ಜನತೆಗೆ ಹುತ್ತರಿ ಹಬ್ಬದ ಶುಭಾಶಯಗಳು

2. ಪುಲಿ ಪುಲಿ ದೇವಾ...

ಹುತ್ತರಿ ಹಬ್ಬದ ಶುಭಾಶಯಗಳು

3. ಪುತ್ತರಿ ನಮ್ಮೆರ ನಲ್ಲಾಮೆ

4. ಪುಲಿ ಪುಲಿ ದೇವಾ...

ಪುತ್ತರಿ ನಮ್ಮೆರ ನಲ್ಲಾಮೆ

English summary

Kodagu Huttari Festival 2021 Date, History, Significance and Wishes in Kannada

Kodagu Huttari Festival 2021 Date, History, Significance and Wishes in Kannada, read on.. .
X
Desktop Bottom Promotion