For Quick Alerts
ALLOW NOTIFICATIONS  
For Daily Alerts

ಕಾರ್ತಿಕ ಪೂರ್ಣಿಮಾ 2022: ರಾಶಿಚಕ್ರದ ಪ್ರಕಾರ ಈ ವಸ್ತು ದಾನ ಮಾಡಿದರೆ ಸಂಕಷ್ಟ ನಿವಾರಣೆಯಾಗುತ್ತದೆ

|

ದೇವ-ದೀಪಾವಳಿ ಅಥವಾ ದೇವರ ಬೆಳಕಿನ ಹಬ್ಬ ಎಂದು ಕರೆಯಲಾಗುವ ಕಾರ್ತಿಕ ಹುಣ್ಣಿಮೆ 2022ನೇ ಸಾಲಿನಲ್ಲಿ ನವೆಂಬರ್ 8ರಂದು ಆಚರಿಸಲಾಗುತ್ತಿದೆ. ಈ ದಿನದಂದು ಗಂಗಾ ಸ್ನಾನ ಅಥವಾ ಪವಿತ್ರ ನದಿಯಲ್ಲಿ ಸ್ನಾನ ಮಡಿದರೆ ಶ್ರೇಷ್ಟ ಎಂದು ಹೇಳಲಾಗುತ್ತದೆ. ವಿಷ್ಣು ಹಾಗೂ ಶಿವನನ್ನು ಪೂಜಿಸುವ ಈದಿನ ಯಾವುದೇ ರೀತಿಯ ದೌರ್ಜನ್ಯ ಹಾಗೂ ಹಿಂಸೆಯನ್ನು ನಿಷೇಧಿಸಲಾಗಿದೆ. ಕಾರ್ತಿಕ ಹುಣ್ಣಿಮೆಯು ವಿಷ್ಣುವು ನಿದ್ರಿಸುವನೆಂದು ನಂಬಲಾದ ನಾಲ್ಕು ತಿಂಗಳ ಅವಧಿಯಾದ ಚಾತುರ್ಮಾಸದ ಮುಕ್ತಾಯವನ್ನು ಸೂಚಿಸುವ ಪ್ರಬೋಧಿನಿ ಏಕಾದಶಿಯೊಂದಿಗೆ ನಿಕಟವಾಗಿ ಸಂಬಂಧಿಸಿದೆ.

Kartik Purnima

ಇಂಥಾ ವಿಶೇಷ ದಿನದಂದು ನೀವು ದಾನ ಮಾಡಿದರೆ ನಿಮ್ಮ ಕಷ್ಟ ಪರಿಹಾರವಾಗುತ್ತದೆ, ಸಂತೋಷ, ನೆಮ್ಮದಿ ನಿಮ್ಮದಾಗುತ್ತದೆ. ಶುಭಫಲಗಳು ಸಿಗಲಿದೆ ಎಂಬ ನಂಬಿಕೆ ಇದೆ. ಜ್ಯೋತಿಶಾಸ್ತ್ರದ ಪ್ರಕಾರ ರಾಶಿಚಕ್ರದ ಚಿಹ್ನೆಯ ಅನುಗುಣವಾಗಿ ನೀವು ದಾನ ಮಾಡಬೇಕು, ಯಾವ ರಾಶಿಯವರು ಏನನ್ನು ದಾನ ಮಾಡಬೇಕು, ಯಾವುದನ್ನು ದಾನ ಮಾಡಿದರೆ ಒಳ್ಳೆಯದಾಗುತ್ತದೆ ನಿಮಗೆ ತಿಳಿಸಿಕೊಡಲಿದ್ದೇವೆ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ಕಾರ್ತಿಕ ಪೂರ್ಣಿಮೆಯ ಈ ವಿಶೇಷ ದಿನ ಬೆಲ್ಲವನ್ನು ದಾನ ಮಾಡಬೇಕು. ಬೆಲ್ಲವನ್ನು ದಾನ ಮಾಡುವುದರಿಂದ ನೀವು ಆರ್ಥಿಕವಾಗಿ ಸಮೃದ್ಧಿಯನ್ನು ಪಡೆಯುತ್ತೀರಿ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯ ಜನರು ಸಕ್ಕರೆ ಅಥವಾ ಸಿಹಿ ಪದಾರ್ಥಗಳನ್ನು ದಾನ ಮಾಡಬೇಕು, ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನಿಮ್ಮದಾಗುತ್ತದೆ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರು ಕಾರ್ತಿಕ ಪೂರ್ಣಿಮೆಯ ವಿಶೇಷ ದಿನ ಹೆಸರುಬೇಳೆಯನ್ನು ದಾನ ಮಾಡಿ. ಬೇಳೆಯನ್ನು ದಾನ ಮಾಡುವುದರಿಂದ ನಿಮ್ಮ ವೈವಾಹಿಕ ಜೀವನ ಮಂಗಳಕರವಾಗಿರುತ್ತದೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರು ಈ ಸುದಿನ ಅನ್ನವನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಮಾನಸಿಕ ಶಾಂತಿ ನಿಮ್ಮದಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರು ಕಾರ್ತಿಕ ಪೂರ್ಣಿಮೆಯ ದಿನ ಗೋಧಿಯನ್ನು ದಾನ ಮಾಡಬೇಕು, ಏಕೆಂದರೆ ಹೀಗೆ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರು ಇಂದು ಪ್ರಾಣಿಗಳಿಗೆ ಹಸಿರು ಮೇವನ್ನು ತಿನ್ನಿಸಿದರೆ ಶುಭವಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ಇಂದು ಖೀರ್/ಪಾಯಸವನ್ನು ದಾನ ಮಾಡಬೇಕು, ಹೀಗೆ ಮಾಡುವುದರಿಂದ ನೀವು ಕೀರ್ತಿಯನ್ನು ಸಂಪಾದಿಸುತ್ತೀರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ದಿನದಂದು ಬೆಲ್ಲ ಮತ್ತು ಕಾಳುಗಳನ್ನು ದಾನ ಮಾಡಬೇಕು. ನೀವು ಹೀಗೆ ಮಾಡುವುದರಿಂದ ನಿಮ್ಮ ಶತ್ರುಗಳನ್ನು ನಾಶಪಡಿಸಲು ಇದು ಸಹಾಯ ಮಾಡುತ್ತದೆ.

ಧನು ರಾಶಿ

ಧನು ರಾಶಿ

ಧನು ರಾಶಿಚಕ್ರದವರು ದೇವಸ್ಥಾನದಲ್ಲಿ ಬೇಳೆಯನ್ನು ದಾನ ಮಾಡಬೇಕು, ಹೀಗೆ ಮಾಡುವುದರಿಂದ ನೀವು ಜೀವನದ ಎಲ್ಲಾ ಸಂತೋಷಗಳನ್ನು ಪಡೆಯುತ್ತೀರಿ, ನೆಮ್ಮದಿಯ ಬದುಕು ನಿಮ್ಮದಾಗುತ್ತದೆ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯ ಜನರು ಈ ದಿನ ಕಂಬಳಿಯನ್ನು ದಾನ ಮಾಡಿದರೆ ಶುಭವಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಕೆಲಸದಲ್ಲಿ ಬರುವ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು ಜನರು ಕಪ್ಪು ಉದ್ದಿನ ಬೇಳೆಯನ್ನು ದಾನ ಮಾಡಿ, ಇದನ್ನು ಮಾಡುವುದರಿಂದ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರು ಅರಿಶಿನ ಮತ್ತು ಕಡಲೆ ಹಿಟ್ಟಿನ ಸಿಹಿತಿಂಡಿಗಳನ್ನು ದಾನ ಮಾಡಿ, ಈ ಶುಭ ದಿನ ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ.ಡಿ

English summary

Kartik Purnima 2022: Donate these things according to the zodiac sign

Here we are discussing about Kartik Purnima 2021: Donate these things according to the zodiac sign. Read more.
X
Desktop Bottom Promotion