For Quick Alerts
ALLOW NOTIFICATIONS  
For Daily Alerts

ನ. 19ಕ್ಕೆ ಕಾರ್ತಿಕ ಪೂರ್ಣಿಮೆ: ಮನೆಗೆ ಅದೃಷ್ಟ ಬರಬೇಕಾದರೆ, ಈ ಕಾರ್ಯಗಳನ್ನು ಮಾಡಿ

|

ಹಿಂದೂ ಧರ್ಮದಲ್ಲಿ ಎಲ್ಲಾ ಹುಣ್ಣೆಮಗಳಿಗಿಂತ ಕಾರ್ತಿಕ ಪೂರ್ಣಿಮೆಗೆ ವಿಶೇಷ ಸ್ಥಾನವಿದೆ. ಕಾರ್ತಿಕ ಪೂರ್ಣಿಮೆಯ ದಿನ, ಶಿವನು ತ್ರಿಪುರಾಸುರನನ್ನು ಕೊಂದು, ದೇವತೆಗಳಿಗೆ ಮತ್ತೆ ಸ್ವರ್ಗವನ್ನು ನೀಡಿದ ಕಥೆ ಒಂದೆಡೆಯಾದರೆ, ಮತ್ತೊಂದೆಡೆ ಈ ದಿನ ಭಗವಾನ್ ವಿಷ್ಣುವು ಮತ್ಸ್ಯ ಅವತಾರವನ್ನು ತಾಳಿ, ಜೀವವನ್ನು ಉಳಿಸಿದನು ಎಂಬ ನಂಬಿಕೆಯಿದೆ.

ಈ ವರ್ಷ ಕಾರ್ತಿಕ ಪೂರ್ಣಿಮೆಯು ನವೆಂಬರ್ 19 ರ ಶುಕ್ರವಾರದಂದು ಬಂದಿದೆ. ಕಾರ್ತಿಕ ಮಾಸದಲ್ಲಿ ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದ್ದು, ಪೂಜೆ, ಪುನಸ್ಕಾರ ಹಾಗೂ ಉಪವಾಸವನ್ನು ಆಚರಣೆ ಮಾಡುತ್ತಾರೆ. ಇದರಿಂದ ವಿಷ್ಣು ಮತ್ತು ಲಕ್ಷ್ಮಿಯ ಆಶೀರ್ವಾದ ಲಭಿಸಿ, ತಮ್ಮೆಲ್ಲಾ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಇದರ ಜೊತೆಗೆ ಈ ಕೆಳಗೆ ನೀಡಿರುವ ಕಾರ್ಯಗಳನ್ನು ಮಾಡಿದರೆ, ಅದೃಷ್ಟ ನಿಮ್ಮದಾಗುವುದು.

ಕಾರ್ತಿಕ ಹುಣ್ಣಿಮೆಯ ದಿನ ಅದೃಷ್ಟಕ್ಕಾಗಿ, ಮಾಡಬೇಕಾದ ಕೆಲಸಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ದರ್ಬೆ ಸ್ನಾನ:

1. ದರ್ಬೆ ಸ್ನಾನ:

ಕಾರ್ತಿಕ ಪೂರ್ಣಿಮೆಯ ದಿನದಂದು ಗಂಗಾ-ಯಮುನಾ ನದಿಯಲ್ಲಿ ದರ್ಬೆ ಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಕೈಯಲ್ಲಿ ದರ್ಬೆ ಹುಲ್ಲು ಹಿಡಿದು ಪುಣ್ಯನದಿಯಲ್ಲಿ ಸ್ನಾನ ಮಾಡಿ, ದಾನ ಮಾಡಬೇಕು. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ ಜೊತೆಗೆ ಮನೆಗೆ ಅದೃಷ್ಟ ಬರುತ್ತದೆ ಎಂಬ ನಂಬಿಕೆಯಿದೆ.

2. ಮುಖ್ಯದ್ವಾರ ಹೀಗಿರಲಿ:

2. ಮುಖ್ಯದ್ವಾರ ಹೀಗಿರಲಿ:

ಕಾರ್ತಿಕ ಪೂರ್ಣಿಮೆಯ ದಿನ ಮನೆಯ ಮುಖ್ಯ ದ್ವಾರಕ್ಕೆ ಅರಿಶಿನ ಮಿಶ್ರಿತ ನೀರನ್ನು ಸುರಿದು, ಅರಿಶಿನದಿಂದ ಸ್ವಸ್ತಿಕವನ್ನು ಮಾಡಿ ಮತ್ತು ಬಾಗಿಲಿಗೆ ಮಾವಿನ ಎಲೆಗಳ ತೋರಣವನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ, ಲಕ್ಷ್ಮಿ ದೇವಿಯು ಮನೆಗೆ ಪ್ರವೇಶಿಸಿ, ಸಂಪತ್ತು ಮತ್ತು ಆಹಾರದ ಅನುಗ್ರಹವನ್ನು ನೀಡುತ್ತಾಳೆ.

3. ದೀಪದಾನ:

3. ದೀಪದಾನ:

ಕಾರ್ತಿಕ ಪೂರ್ಣಿಮೆಯ ದಿನ ಗಂಗಾ ಘಾಟಿಯಲ್ಲಿ ದೀಪ ಹಚ್ಚಿ, ನದಿಯಲ್ಲಿ ದೀಪ ದಾನ ಮಾಡಬೇಕೆಂಬ ನಿಯಮವಿದೆ. ಹೀಗೆ ಮಾಡುವುದರಿಂದ ಎಲ್ಲಾ ದೇವರುಗಳು ಆಶೀರ್ವಾದ ಮಾಡುತ್ತಾರೆ. ಹಾಗೂ ಮನೆಗೆ ಅದೃಷ್ಟ ಬರುತ್ತದೆ. ಒಂದು ವೇಳೆ ಅಲ್ಲಿಗೆ ಹೋಗಲಾಗದಿದ್ದರೆ, ಮನೆಯಲ್ಲಿ ದೀಪಗಳನ್ನು ಹಚ್ಚಿ, ಸಾಧ್ಯವಾದರೆ, ದೀಪಗಳನ್ನ ದಾನ ಮಾಡಿ.

4. ತುಳಸಿ ಪೂಜೆ:

4. ತುಳಸಿ ಪೂಜೆ:

ತುಳಸಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಪೂಜಿಸಲಾಗುತ್ತದೆ. ಕಾರ್ತಿಕ ಪೂರ್ಣಿಮೆಯ ದಿನದಂದು ತುಳಸಿಯ ಬಳಿ ದೀಪವನ್ನು ಹಚ್ಚಿದ ನಂತರ ಅವುಗಳ ಬೇರಿನ ಮಣ್ಣಿನಿಂದ ತಿಲಕವನ್ನು ಲೇಪಿಸಬೇಕು. ಹೀಗೆ ಮಾಡುವುದರಿಂದ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ.

5. ಶಿವಾರಾಧನೆ:

5. ಶಿವಾರಾಧನೆ:

ಕಾರ್ತಿಕ ಪೂರ್ಣಿಮೆಯ ದಿನದಂದು ತ್ರಿಪುರಾರಿ ಶಿವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಶಿವಲಿಂಗಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾಜಲದ ಪಂಚಾಮೃತವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ, ಶಿವನು ಪ್ರಸನ್ನನಾಗುತ್ತಾನೆ ಮತ್ತು ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.

English summary

Kartik Purnima 2021: Do this to get your home filled with good fortune in kannada

Here we talking about Kartik Purnima 2021: Do this to get your home filled with good fortune in kannada, read on
Story first published: Saturday, November 13, 2021, 17:25 [IST]
X
Desktop Bottom Promotion