For Quick Alerts
ALLOW NOTIFICATIONS  
For Daily Alerts

ಕಾರ್ತಿಕ ಮಾಸ 2021: ಈ ಮಾಸದಲ್ಲಿ ಈ ಆಹಾರ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು

|

ಕಾರ್ತಿಕ ಮಾಸವೆಂಬುವುದು ಹಿಂದುಗಳಿಗೆ ತುಂಬಾ ಪವಿತ್ರವಾದ ಮಾಸವಾಗಿದೆ. ಇದನ್ನು ದಾಮೋದರ ಮಾಸವೆಂದು ಕೂಡ ಕರೆಯಲಾಗುವುದು. ಈ ವರ್ಷ ಕಾರ್ತಿಕ ಮಾಸ ನವೆಂಬರ್‌ 5ಕ್ಕೆ ಪ್ರಾರಂಭವಾಗಿ ಡಿಸೆಂಬರ್‌ 4ಕ್ಕೆ ಮುಕ್ತಾಯವಾಗುವುದು.

kartik month 2021kartik month 2021

ಕಾರ್ತಿಕ ಮಾಸವೆಂದ ಮೇಲೆ ಈ ಸಮಯದಲ್ಲಿ ಆಹಾರದಲ್ಲಿ ಬದಲಾವಣೆಯಾಗಲೇಬೇಕು. ಈ ತಿಂಗಳಿನಲ್ಲಿ ಅನೇಕ ಧಾರ್ಮಿಕ ಚಟುವಟಿಕೆಗಳನ್ನು ಮಾಡಲಾಗುವುದು. ಹಾಗಾಗಿ ಸಾತ್ವಿಕ ಆಹಾರವನ್ನಷ್ಟೇ ಈ ತಿಂಗಳಿನಲ್ಲಿ ಸೇವಿಸಬೇಕು.

ಕಾರ್ತಿಕ ಮಾಸದಲ್ಲಿ ಅದರ ಸಂಪೂರ್ಣ ಫಲ ಪಡೆಯಲು ಈ ಆಹಾರ ನಿಯಮಗಳನ್ನು ಪಾಲಿಸಬೇಕು:

ಮಾಂಸಾಹಾರ ಸೇವಿಸಬಾರದು

ಮಾಂಸಾಹಾರ ಸೇವಿಸಬಾರದು

ಈ ತಿಂಗಳು ಮಾಂಸಾಹಾರ ಸೇವನೆ ಮಾಡಬಾರದು ಎಂದು ಹೇಳಲಾಗಿದೆ. ಇದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ ಈ ತಿಂಗಳಿನಲ್ಲಿ ಪ್ರಾಣಿಗಳಲ್ಲಿ ಸಂತಾನೋತ್ಪತ್ತಿಯಾಗುವುದು. ಆದ್ದರಿಂದ ಇವುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದು.

 ಹಾಲನ್ನು ಬೆಲ್ಲದ ಜೊತೆ ಕುಡಿಯಿರಿ

ಹಾಲನ್ನು ಬೆಲ್ಲದ ಜೊತೆ ಕುಡಿಯಿರಿ

ಹಾಲಿನಲ್ಲಿ ಬೆಲ್ಲ ಹಾಕಿ ಕುಡಿಯುವುದರಿಂದ ಶಕ್ತಿ ದೊರೆಯುವುದು. ಈ ತಿಂಗಳಿನಲ್ಲಿ ಈ ರೀತಿ ಕುಡಿಯಬೇಕು ಎಂದು ಹೇಳಲಾಗುವುದು.

 ಬೆಲ್ಲವನ್ನು ತಿನ್ನಿ

ಬೆಲ್ಲವನ್ನು ತಿನ್ನಿ

ದೇಹವನ್ನು ಬೆಚ್ಚಗಿಡಲು , ರಕ್ತದೊತ್ತಡ ನಿಯಂತ್ರಿಸಲು ಬೆಲ್ಲ ತುಂಬಾ ಸಹಕಾರಿ. ಈ ತಿಂಗಳಿನಲ್ಲಿ ಬೆಲ್ಲ ತಿನ್ನುವುದರಿಂದ ಕೆಮ್ಮು, ಶೀತದಂಥ ಸಮಸ್ಯೆ ತಡೆಗಟ್ಟಬಹುದು.

 ತಣ್ಣನೆಯ ನೀರು ಕುಡಿಯಬಾರದು

ತಣ್ಣನೆಯ ನೀರು ಕುಡಿಯಬಾರದು

ಕಾರ್ತಿಕ ಮಾಸ ಚಳಿಗಾಲದಲ್ಲಿ ಬರುವುದು. ಚಳಿಗಾಲದಲ್ಲಿ ತಣ್ಣನೆಯ ನೀರು ಕುಡಿಯುವುದರಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುವುದು. ಆದ್ದರಿಂದ ಈ ಸಮಯದಲ್ಲಿ ತಣ್ಣೀರು ಸೇವಿಸಬೇಡಿ.

ಕಲ್ಲುಪ್ಪು ಅಥವಾ ಬ್ಲ್ಯಾಕ್ ಸಾಲ್ಟ್ ಬಳಸಿ

ಕಲ್ಲುಪ್ಪು ಅಥವಾ ಬ್ಲ್ಯಾಕ್ ಸಾಲ್ಟ್ ಬಳಸಿ

ವಾತಾವರಣದಲ್ಲಿ ಬದಲಾವಣೆಯಾಗುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗಬಹುದು. ಬೆಲ್ಲ, ಕಲ್ಲುಪ್ಪು, ಬ್ಲ್ಯಾಕ್ ಸಾಲ್ಟ್‌ ಇವುಗಳನ್ನು ಆಹಾರದಲ್ಲಿ ಬಳಸುವುದರಿಂದ ಅಸಿಡಿಟಿ ನಿಯಂತ್ರಿಸಬಹುದು.

 ಕಾರ್ತಿಕ ಪೂರ್ಣಿಮೆಗೆ ಗೋಧಿ ಹಲ್ವಾ

ಕಾರ್ತಿಕ ಪೂರ್ಣಿಮೆಗೆ ಗೋಧಿ ಹಲ್ವಾ

ಕಾರ್ತಿಕ ಮಾಸದಲ್ಲಿ ಬರುವ ಕಾರ್ತಿಕ ಹುಣ್ಣಿಮೆ ತುಂಬಾ ವಿಶೇಷವಾದದ್ದು, ಈ ಹಬ್ಬದಲ್ಲಿ ಗೋಧಿ ಹಲ್ವಾ ಬಳಸಿ. ಗೋಧಿ ಹಿಟ್ಟು, ತುಪ್ಪ, ಸಕ್ಕರೆ, ಏಲಕ್ಕಿ ಪುಡಿ, ಒಣದ್ರಾಕ್ಷಿ ಹಾಕಿ ಮಾಡುವ ಗೋಧಿ ಹಲ್ವಾ ಆರೋಗ್ಯಕ್ಕೆ ಒಳ್ಳೆಯದು.

 ತುಳಸಿ ಬಳಸಿ

ತುಳಸಿ ಬಳಸಿ

ತುಳಸಿಯನ್ನು ಆಹಾರದಲ್ಲಿ ಬಳಸುವುದು ಒಳ್ಳೆಯದು. ಈ ಸಮಯದಲ್ಲಿ ತುಳಸಿ ಬಳಸಿದರೆ ಅದು ಮೈಯನ್ನು ಬೆಚ್ಚಗಿಡುವುದು ಹಾಗೂ ಶೀತ, ಕೆಮ್ಮಿನಂಥ ಸಮಸ್ಯೆ ತಡೆಗಟ್ಟಲು ಸಹಕಾರಿ.

ಹಾಗಾಲಕಾಯಿ ತಿನ್ನಬೇಡಿ

ಹಾಗಾಲಕಾಯಿ ತಿನ್ನಬೇಡಿ

ಕಾರ್ತಿಕ ಮಾಸದಲ್ಲಿ ಹಾಗಲಕಾಯಿ ತಿನ್ನುವುದು ಒಳ್ಳೆಯದಲ್ಲ. ಏಕೆಂದರೆ ಈ ತಿಂಗಳಿನಲ್ಲಿ ಅದು ಹಣ್ಣಾಗುವ ಸಮಯ, ಅದರ ಬೀಜಗಳಲ್ಲಿ ಬ್ಯಾಕ್ಟಿರಿಯಾ ಇರುತ್ತದೆ, ಇದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು, ಆದ್ದರಿಂದ ಈ ಸಮಯದಲ್ಲಿ ಹಾಗಲಕಾಯಿ ತಿನ್ನಬೇಡಿ.

English summary

Kartik Month 2021: food rules to follow in the month of Kartik

Kartik Month 2021: food rules to follow in the month of Kartik, Read on...
X
Desktop Bottom Promotion