For Quick Alerts
ALLOW NOTIFICATIONS  
For Daily Alerts

Aashritha V Olety : ಕರ್ನಾಟಕದ ಹೆಮ್ಮೆ: ಭಾರತದ ಮೊದಲ ಪ್ಲೈಟ್ ಟೆಸ್ಟ್ ಎಂಜಿನಿಯರ್ ಆಶ್ರಿತಾ ವಿ ಒಲೆಟಿ

|

ಕನಸ್ಸಿನ ಬೆನ್ನತ್ತಿ ಹೋದರೆ ಯಾವುದೂ ಅಸಾಧ್ಯವಲ್ಲ, ಯಾವ ಅಡೆತಡೆಗಳು ಲೆಕ್ಕಕ್ಕಿಲ್ಲ ಎಂಬುವುದಕ್ಕೆ ಸ್ಪೂರ್ತಿ ನಮ್ಮ ಕರ್ನಾಟಕದ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಯುವತಿ ಆಶ್ರಿತಾ ವಿ ಒಲೆಟಿ.

Karnatakas Aashritha V Olety is Indias 1st Woman Flight Test Engineer

ಇವರ ಸಾಧನೆಯ ಬಗ್ಗೆ ಹೇಳುವುದಾದರೆ ಭಾರತ ವಾಯು ಪಡೆಯ ಮೊದಲ ಮಹಿಳಾ ಪ್ಲಟ್‌ ಟೆಸ್ಟ್ ಎಂಜಿನಿಯರ್ ಆಗಿ ಆಯ್ಕೆ ಆಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಕೊಳ್ಳೇಗಾಲದವ ಒ.ವಿ. ವೆಂಕಟೇಶ್‌ ಬಾಬು ಹಾಗೂ ಒ.ವಿ ವಾಣಿ ದಂಪತಿಯ ಪುತ್ರಿ ಇದೀಗ ಕರ್ನಾಟಕದ ಹೆಮ್ಮೆಯ ಪುತ್ರಿಯಾಗಿದ್ದಾಳೆ. ತಾನು ಹೊಸದೊಂದು ಗುರಿ ತಲುಪುವ ಮೂಲಕ ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ.

ಅಶ್ರಿತಾ ವಿ ಒಲೆಟಿಯವರು ಭಾರತದ ಪ್ರತಿಷ್ಠಿತ ಏರ್‌ ಫೋರ್ಸ್ ಟೆಸ್ಟ್ ಪೈಲೆಟ್ ಸ್ಕೂಲ್‌ನಿಂದ ಪದವಿಯನ್ನು ಪಡೆದುಕೊಂಡಿದ್ದಾರೆ. ಈ ಪದವಿ ಪಡೆಯುವುದು ಸಾಮಾನ್ಯ ವಿಷಯವಲ್ಲ. ವಿಶ್ವದಲ್ಲಿರುವ ಏಳು ಪ್ರತಿಷ್ಠಿತ ಏರ್‌ಫೋರ್ಸ್ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಭಾರತದಲ್ಲಿದೆ. ಇದನ್ನು 1976ರಲ್ಲಿ ಸ್ಥಾಪನೆ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಅದರಿಂದ 275 ಪದವೀದಾರರು ಮಾತ್ರ ಈ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಈ ಕೋರ್ಸ್‌ ಪೂರ್ಣ ಗೊಳಿಸಿರುವ ಮೊದಲ ಮಹಿಳೆ ಆಶ್ರಿತಾ ವಿ. ಒಲೆಟಿ. ಇವರ ಸಾಧನೆಗೆ ನಮ್ಮದ್ದೊಂದು ಸಲ್ಯೂಟ್‌.

ದೇಶಕ್ಕೆ ಇವರು ಸಲ್ಲಿಸುವ ಸೇವೆಯಿಂದ ಮತ್ತಷ್ಟು ಖ್ಯಾತಿ ಗಳಿಸವಂತಾಗಲಿ ಎಂಬುವುದೇ ನಮ್ಮ ಹಾರೈಕೆ.

English summary

Karnataka's Aashritha V Olety is India's 1st Woman Flight Test Engineer

Karnataka's Aashritha V Olety is India's 1st woman flight test engineer, read on...
X
Desktop Bottom Promotion