For Quick Alerts
ALLOW NOTIFICATIONS  
For Daily Alerts

ಕರ್ಕ ಸಂಕ್ರಾಂತಿ 2021: ಯಾವಾಗ, ಈ ದಿನ ತುಂಬಾ ಮಹತ್ವವಾದದ್ದು ಏಕೆ?

|

ಸೂರ್ಯನು ಮಿಥುನ ರಾಶಿಯಿಂದ ಕರ್ಕ ರಾಶಿಗೆ ಸಂಚರಿಸುವುದನ್ನು ಕರ್ಕ ಸಂಕ್ರಾಂತಿ ಎಂದು ಕರೆಯಲಾಗುವುದು. ಈ ವರ್ಷ ಜುಲೈ 16ಕ್ಕೆ ಕರ್ಕ ಸಂಕ್ರಾಂತಿ. ಈ ಕರ್ಕ ಸಂಕ್ರಾಂತಿಯ ಮತ್ತೊಂದು ವಿಶೇಷವೆಂದರೆ ಈ ದಿನದಿಂದ ದಕ್ಷಿಣಾಯಾನ ಕಾಲ ಪ್ರಾರಂಭವಾಗುವುದು, ಅಂದರೆ ದಕ್ಷಿಣಾಭಿಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ.

ಹಿಂದೂ ಪುರಾಣದ ಪ್ರಕಾರ ಕರ್ಕ ಸಂಕ್ರಾಂತಿಯಿಂದ ಮಳೆಗಾಲ ಪ್ರಾರಂಭ ಎಂದರ್ಥ. ದಕ್ಷಿಣಾಯಾನ ನಾಲ್ಕು ತಿಂಗಳು ಇರುತ್ತದೆ, ಮಕರ ಸಂಕ್ರಾಂತಿಗೆ ದಕ್ಷಿಣಾಯಾನ ಮುಕ್ತಾಯವಾಗುವುದು.

ಕರ್ಕ ಸಂಕ್ರಾಂತಿಯ ವಿಶೇಷ

ಕರ್ಕ ಸಂಕ್ರಾಂತಿಯ ವಿಶೇಷ

ಕರ್ಕ ಸಂಕ್ರಾಂತಿಯಂದು ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು. ಈ ದಿನ ಭಕ್ತರು ಆಹಾರ ಹಾಗೂ ವಸ್ತ್ರಗಳನ್ನು ದಾನ ಮಾಡುತ್ತಾರೆ. ಪೌರಾಣಿಕ ಹಿನ್ನೆಲೆ ನೋಡಿದಾಗ ಕರ್ಕ ಸಂಕ್ರಾಂತಿಯ ದಿನದ ನಂತರ ಸೂರ್ಯ, ವಿಷ್ಣು ಹಾಗೂ ಇತರ ದೇವರು ಗಾಢ ನಿದ್ದೆಗೆ ಜಾರುತ್ತಾರೆ, ಈ ಸಮಯದಲ್ಲಿ ಶಿವನು ಇಡೀ ವಿಶ್ವವನ್ನು ನೋಡಿಕೊಳ್ಳುತ್ತಾನೆ ಎಂದು ಹೇಳಲಾಗುವುದು.

ಚಾತುರ್ಮಾಸದ ಪ್ರಾರಂಭ

ಚಾತುರ್ಮಾಸದ ಪ್ರಾರಂಭ

ಚಾತುರ್ಮಾಸ ಶ್ರಾವಣ ಮಾಸದಿಂದ ಪ್ರಾರಂಭವಾಗುವುದು. ಭಾದ್ರಪದದಲ್ಲಿ ಗಣೇಶ ಹಾಗೂ ಶ್ರೀಕೃಷ್ಣನನ್ನು ಆರಾಧಿಸಲಾಗುವುದು, ನಂತರ ನವರಾತ್ರಿ ಪ್ರಾರಂಭ ಅದಾದ ಬಳಿಕ ದೀಪಾವಳಿ... ಹೀಗೆ ಹಬ್ಬಗಳ ಸಂಭ್ರಮಕ್ಕೆ ನಾಂದಿ ಈ ಕರ್ಕ ಸಂಕ್ರಾಂತಿ.

ಕರ್ಕ ಸಂಕ್ರಾಂತಿ ದಿನದ ಮಹತ್ವ

ಕರ್ಕ ಸಂಕ್ರಾಂತಿ ದಿನದ ಮಹತ್ವ

ಈ ದಿನದಂದು ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಶ್ರಾದ್ಧ ಕಾರ್ಯ ಮಾಡಲಾಗುವುದು. ಈ ದಿನ ಶ್ರಾದ್ಧ ಕಾರ್ಯ ಮಾಡುವುದಿಂದ ಪಿತೃಗಳಿಗೆ ಮೋಕ್ಷ ಸಿಗುವುದು ಎಂದು ಹೇಳಲಾಗುವುದು.

ಕರ್ಕ ಸಂಕ್ರಾಂತಿ ಮುಹೂರ್ತ

ಕರ್ಕ ಸಂಕ್ರಾಂತಿ ಮುಹೂರ್ತ

ದಿನ: ಶುಕ್ರವಾರ

ದಿನಾಂಕ: ಜುಲೈ 16, 2021

ಸಂಕ್ರಾಂತಿ ಪ್ರಾರಂಭ ಸಮಯ : ಬೆಳಗ್ಗೆ 11:39ಕ್ಕೆ

ಸಂಕ್ರಾಂತಿ ರಾಶಿ: ಕನ್ಯಾ

ಸಂಕ್ರಾಂತಿ ನಕ್ಷತ್ರ: ಹಸ್ತಾ

English summary

Karka Sankranti 2021 date, Shubh Muhurat, History and Significance

Karka sankranti 2021 date, shubh muhurat, history and significance, read on...
Story first published: Friday, July 9, 2021, 12:50 [IST]
X
Desktop Bottom Promotion