For Quick Alerts
ALLOW NOTIFICATIONS  
For Daily Alerts

ಜೂ.24ಕ್ಕೆ ಕಾರ ಹುಣ್ಣಿಮೆ: ಸಾಂಸ್ಕೃತಿಕ ವೈಶಿಷ್ಟ್ಯ ಇರುವ ಈ ದಿನದ ವಿಶೇಷವೇನು?

|

ಉತ್ತರ ಕರ್ನಾಟಕದವರಿಗೆ ಕಾರ ಹುಣ್ಣಿಮೆ ಎಂದರೆ ತುಂಬಾನೇ ವಿಶೇಷ. ಈ ಹಬ್ಬದಂದು ಎತ್ತುಗಳಿಗೆ ಶೃಂಗರಿಸಿ ಅವುಗಳಿಗೆ ಕೃತಜ್ಞತೆ ಸಲ್ಲಿಸಲಾಗುವುದು. ರೈತರ ಸಡಗರ, ಸಂಭ್ರಮದ ಹಬ್ಬವಾದ ಕಾರ ಹುಣ್ಣಿಮೆ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದಾಗಿ ಅಷ್ಟೇನು ಸಡಗರದಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ.

ಕಾರ ಹುಣ್ಣಿಮೆ ಬಳಿಕವಷ್ಟೇ ಮುಂಗಾರು ಆರಂಭವಾಗುವುದು ಎಂದು ಹೇಳಲಾಗುವುದು. ಈ ವರ್ಷ ಜೂನ್‌ 24ರಂದು ಆಚರಿಸಲಾಗುತ್ತಿದೆ. ಇದಕ್ಕೆ ನಮ್ಮ ದ ರಾ ಬಂದ್ರೆಯವರು
" ಕಾರಹುಣ್ಣಿಮೆಯ ಮಾರನೆಯ ದಿನವೇ
ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ
ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ " ಎಂದು ಹೇಳಿರುವುದು.

ಕಾರ ಹುಣ್ಣಿಮೆ ಮಹತ್ವ

ಕಾರ ಹುಣ್ಣಿಮೆ ಮಹತ್ವ

ಬೇಸಿಗೆ ತಾಪ ಹೋಗಿ ಮುಂಗಾರು ಮಳೆಯಿಂದ ಭೂಮಿ ತಂಪಾಗುವುದು. ಭೂಮಿ ತಂಪಾದಾಗ ಉತ್ತು- ಬಿತ್ತಲು ಎತ್ತುಗಳು ನೆರವಾಗುವುದು. ಆದ್ದರಿಂದ ಈ ದಿನದಂದು ಅವುಗಳನ್ನು ಅಲಂಕರಿಸಿ ಧನ್ಯವಾದ ಅರ್ಪಿಸಲಾಗುವುದು.

ಊರಿನವರ ಸಂಭ್ರಮ ಹೆಚ್ಚಿಸುವ ಹಬ್ಬ

ಊರಿನವರ ಸಂಭ್ರಮ ಹೆಚ್ಚಿಸುವ ಹಬ್ಬ

ಈ ಹಬ್ಬ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿರುವ ಹಬ್ಬವಾಗಿದೆ. ಈ ದಿನ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಅವುಗಳ ಹಣೆಗಳಿಗೆ ಬಾಸಿಂಗ, ಹಣೆಪಟ್ಟಿ, ಕೊರಳಲ್ಲಿ ಘಂಟೆ, ಕೊರಳಿಗೆ ಚೆಂದದ ಫರಾರಿಯನ್ನು ಕಟ್ಟಿ ಅದಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು. ನಂತರ ಅವುಗಳನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಇಡೀ ಊರಿಗೇ ಊರೇ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು.

ಮಕ್ಕಳಿಗೆ ಸಡಗರವೋ ಸಡಗರ

ಮಕ್ಕಳಿಗೆ ಸಡಗರವೋ ಸಡಗರ

ಈ ದಿನ ಮಕ್ಕಳಿಗಂತೂ ತುಂಬಾನೇ ಸಡಗರ. ಮನೆಯ ಎತ್ತುಗಳಿಗೆ ಅಲಂಕಾರ ಮಾಡಲಾಗುವುದು. ಮಕ್ಕಳು ಹೊಸ ಬಟ್ಟೆ ಧರಿಸಿ ಹಬ್ಬದ ಅಡುಗೆಯಾದ ಹೋಳಿಗೆ, ತುಪ್ಪ ಸವಿಯಲಾಗುವುದು.

ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಲಾಗುವುದು

ಈ ದಿನ ಎಣ್ಣೆ ತೆಗೆಯುವ ಗಾಣಕ್ಕೂ ಅಲಂಕಾರ ಮಾಡಿ ಪೂಜೆ ಮಾಡಲಾಗುವುದು.

English summary

Kara Hunnime 2021 Date, History and Significance in kannada

Kara hunnime 2021 date, history and significance, read on...
X
Desktop Bottom Promotion