For Quick Alerts
ALLOW NOTIFICATIONS  
For Daily Alerts

ಮೇ 22ಕ್ಕೆ ಕಾಲಾಷ್ಟಮಿ: ರಾಹು, ಶನಿ ದೋಷ ನಿವಾರಣೆಗೆ ಕಾಲ ಭೈರವನನ್ನು ಹೇಗೆ ಪೂಜಿಸಬೇಕು?

|

ಮೇ 22ಕ್ಕೆ ಕಾಲಾಷ್ಟಮಿ, ಕಾಲ ಭೈರವನ ಪೂಜೆಗಂದೇ ಮೀಸಲಾಗಿರುವ ದಿನ. ವರ್ಷದಲ್ಲಿ 12 ಕಾಲಾಷ್ಟಮಿ ಆಚರಿಸಲಾಗುವುದು. ಪ್ರತೀ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕಾಲಾಷ್ಟಮಿ ಆಚರಿಸಲಾಗುವುದು.

Kalashtami May 2022

ಕಾಲಭೈರವನ ಪೂಜೆಗೆ ಕಾಲಾಷ್ಟಮಿ ತುಂಬಾ ವಿಶೇಷವಾದ ದಿನ ಏಕೆ, ಮೇ 22ರಂದು ಕಾಲ ಭೈರವನ ಪೂಜೆಗೆ ಶುಭ ಮುಹೂರ್ತ ಯಾವಾಗ? ಈ ದಿನದ ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ?

ಮೇ ತಿಂಗಳಿನಲ್ಲಿ ಕಾಲಾಷ್ಟಮಿ ದಿನಾಂಕ ಹಾಗೂ ಶುಭ ಮುಹೂರ್ತ

ಮೇ ತಿಂಗಳಿನಲ್ಲಿ ಕಾಲಾಷ್ಟಮಿ ದಿನಾಂಕ ಹಾಗೂ ಶುಭ ಮುಹೂರ್ತ

ಮೇ 22, ಭಾನುವಾರ 2022

ಅಷ್ಟಮಿ ತಿಥಿ ಪ್ರಾರಂಭ ಮೇ 22 ಮಧ್ಯಾಹ್ನ 1 ಗಂಟೆಗೆ

ಅಷ್ಟಮಿ ತಿಥಿ ಮುಕ್ತಾಯ ಮೇ 23 ಬೆಳಗ್ಗೆ 11:34ಕ್ಕೆ

ಕಾಲಾಷ್ಟಮಿ ಮಹತ್ವ

ಕಾಲಾಷ್ಟಮಿ ಮಹತ್ವ

ಕಾಲಾಷ್ಟಮಿಯಂದು ಶಿವನ ಕಾಲ ಭೈರವ ರೂಪ ಅಂದರೆ ರೌದ್ರಾವತಾರದ ರೂಪವನ್ನುಆರಾಧಿಸಲಾಗುವುದು. ಈ ದಿನ ಕಾಲ ಭೈರವನ ಭಕ್ತರು ಶಿವನ ಜೊತೆಗೆ ಪಾರ್ವತಿಗೂ ಪೂಜೆಯನ್ನು ಸಲ್ಲಿಸುತ್ತಾರೆ. ಪೂಜೆಯ ಬಳಿಕ ಕಾಲ ಭೈರವ ಕತೆ ಹೇಳಲಾಗುವುದು.

ಈ ದಿನದಂದು ಬೆಳಗ್ಗೆ ವಿಶೇಷ ಪೂಜೆಯನ್ನು ಮಾಡಲಾಗುವುಉದ, ಈ ದಿನದಂದು ಪೂರ್ವಜರಿಗೂ ಪೂಜೆ ಸಲ್ಲಿಸಲಾಗುವುದು.

ಈ ದಿನ ರಾತ್ರಿ ಎಚ್ಚರವಾಗಿದ್ದು ಕಾಲ ಭೈರವನ ಕತೆ ಓದುವುದು, ಕೇಳುವುದು ಮಾಡಲಾಗುವುದು. ಮಧ್ಯರಾತ್ರಿಯಲ್ಲಿ ಕಾಲ ಭೈರವನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು, ಸಾಂಪ್ರದಾಯಿಕವಾದ ಡ್ರಮ್ ಬಾರಿಸಲಾಗುವುದು ಗಂಟೆ ಬಾರಿಸಿ ಶಂಖ ಓದಿಸಲಾಗುವುದು.

ಈ ದಿನ ಉಪವಾಸವಿದ್ದು ಪೂಜೆಯನ್ನು ಸಲ್ಲಿಸಲಾಗುವುದು. ಈ ದಿನ ನಾಯಿಗಳಿಗೆ ಆಹಾರ ನೀಡುವುದು. ಈ ದಿನ ಕಾಲ ಭೈರವ ನಾಯಿಯ ಮೇಲೆ ಕುಳಿತು ಸವಾರಿ ಮಾಡುತ್ತಾನೆ ಆದ್ದರಿಂದ ಈ ದಿನ ನಾಯಿಗಳಿಗೆ ಆಹಾರ ನೀಡಿದರೆ ತೃಪ್ತನಾಗುತ್ತಾನೆ ಎಂದು ನಂಬಲಾಗುವುದು.

ಕಾಲ ಭೈರವನ ಪೂಜೆ ಮಾಡಿದರೆ ದೊರೆಯುವ ಪ್ರಯೋಜನಗಳೇನು?

ಕಾಲ ಭೈರವನ ಪೂಜೆ ಮಾಡಿದರೆ ದೊರೆಯುವ ಪ್ರಯೋಜನಗಳೇನು?

* ಈ ದಿನ ಭೈರವನ ಪೂಜೆ ಮಾಡುವುದರಿಂದ ಶಿವ ನಮ್ಮ ಪಾಪಗಳಿಂದ ವಿಮೋಚನೆ ಮಾಡುತ್ತಾನೆ ಎಂದು ನಂಬಲಾಗಿದೆ.

* ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು.

* ಶಿವ ಒಳ್ಳೆಯ ಆರೋಗ್ಯ, ಸಂಪತ್ತು ನೀಡಿ ಆಶೀರ್ವದಿಸುತ್ತಾನೆ.

* ರಾಹು ಹಾಗೂ ಶನಿ ದೋಷವಿರುವವರು ಕಾಲ ಭೈರವನ ಪೂಜಿಸಿದರೆ ಗ್ರಹ ದೋಷದ ಕೆಟ್ಟ ಪರಿಣಾಮ ಕಡಿಮೆಯಾಗುವುದು.

English summary

Kalashtami May 2022 Date, Tithi, Rituals, Puja Vidhi, Significance in Kannada

Kalashtami May 2022 Date, Tithi, Rituals, Puja Vidhi, Significance in Kannada, Read on...
X
Desktop Bottom Promotion