For Quick Alerts
ALLOW NOTIFICATIONS  
For Daily Alerts

ಕೈಲ್ ಮುಹೂರ್ತ: ಕೊಡಗಿನ ಈ ಹಬ್ಬ ಇತರ ಹಬ್ಬಗಳಿಗಿಂತ ಭಿನ್ನ ಹಾಗೂ ವೈಶಿಷ್ಟ್ಯವಾದ್ದದು

|

ಕರ್ನಾಟಕದ ಕಾಶ್ಮೀರವೆಂದು ಕರೆಯಲ್ಪಡುವ ಕೊಡಗು ಪ್ರಕೃತಿ ರಮಣೀಯವಾದ ಸ್ಥಳ ಎಷ್ಟು ಸುಂದರವೋ ಇಲ್ಲಿಯ ಉಡುಪು, ಆಚರಣೆ ಎಲ್ಲವೂ ವೈವಿಧ್ಯತೆಯಿಂದ ಕೂಡಿದೆ. ಇಲ್ಲಿಯ ಪ್ರಮುಖ ಹಬ್ಬಗಳೆಂದರೆ ಹುತ್ತರಿ ಹಾಗೂ ಕೈಲ್‌ ಪೋಳ್ದ್‌.

Kail Muhurtha 2021 Date, History and Significance of Coorg Traditional Festival in Kannada

ಕೊಡವರ ಪ್ರಮುಖ ಹಬ್ಬವಾದ ಈ ದಿನದಂದು ಆಯುಧಗಳನ್ನು ಪೂಹಿಸಲಾಗುವುದು. ಕೊಡಗಿನವರ ಪ್ರಮುಖ ಆಯುಧಗಳಾದ ಕೋವಿ, ಒಡಿಕತ್ತಿ, ಪೀಚೆ ಕತ್ತಿ, ಗೆಜ್ಜೆ ತಂಡ್‌ ಹಾಗೂ ಕೃಷಿಗೆ ಬಳಸುವ ಪರಿಕರಗಳನ್ನು ಈ ದಿನ ಪೂಜಿಸಲಾಗುವುದು.

2021ರಂದು ಕೈಲ್‌ ಪೋಳ್ದ್‌ ಆಚರಣೆ
ಸೆಪ್ಟೆಂಬರ್‌ 2 ಹಾಗೂ 3ರಂದು ಕೈಲ್‌ ಪೋಳ್ದ್‌ ಆಚರಿಸಲಾಗುವುದು.
ಈ ದಿನ ಕೊಡಗಿನಲ್ಲಿ ಸಾರ್ವಜನಿಕ ರಜೆ ದಿನವಾಗಿದೆ.

ಕೈಲ್ ಪೋಳ್ದ್‌ ಆಚರಣೆಯ ಹಿನ್ನೆಲೆ
ಸೆಪ್ಟೆಂಬರ್ ಹೊತ್ತಿಗೆ ನಾಟಿ ಕೆಲಸ, ತೋಟದ ಕೆಲಸವೆಲ್ಲಾ ಮಗಿದಿರುತ್ತದೆ. ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರಲು ಸಹಾಯವಾದ ಆಯುಧಗಳಿಗೆ ಈ ದಿನದಂದು ಪೂಜೆಯನ್ನು ಸಲ್ಲಿಸಲಾಗುವುದು.

ಮಾಂಸಾಹಾರವೇ ಈ ಅಡುಗೆಯಲ್ಲಿ ಹೈಲೈಟ್ಸ್‌
ಕೈಲ್‌ ಪೋಳ್ದ್‌ ಹಬ್ಬವೆಂದರೆ ಮಾಂಸಾಹಾರವೇ ಈ ಹಬ್ಬದಲ್ಲಿ ಪ್ರಮುಖವಾಗಿರುತ್ತದೆ. ಅದರಲ್ಲೂ ಕೊಡಗಿನಲ್ಲಿ ಪಂದಿ ಕರಿಗೆ ತುಂಬಾ ಪ್ರಾಮುಖ್ಯತೆ. ಈ ಹಬ್ಬದಲ್ಲಿ ಕಡಬು, ತಟ್ಟೆ ಇಡ್ಲಿ ಪಂದಿ ಕರಿ, ಕೋಳಿ ಸಾರು ಮಾಡಿ ಈ ಹಬ್ಬವನ್ನು ಆಚರಿಸಲಾಗುವುದು.

ಹಿಂದಿನ ಕಾಲದಲ್ಲಿ ಬೇಟೆಯಾಡಿ ಮಾಂಸ ತಂದು ಹಬ್ಬವನ್ನು ಆಚರಿಸಲಾಗುತ್ತಿತ್ತು. ಈಗ ಚೌಂಡಿಗೆ ಹಂದಿ, ಕೋಳಿಗಳನ್ನು ಬಲಿ ಕೊಟ್ಟು ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬದಲ್ಲಿ ವೈನ್ ಹಾಗೂ ಮದ್ಯ ಕೂಡ ಪ್ರಮುಖ ಆಕರ್ಷಣೆಯಾಗಿದೆ.

English summary

Kail Muhurtha 2021 Date, History and Significance of Coorg Traditional Festival in Kannada

Kail Muhurtha 2021 Date, History and Significance of Coorg Traditional Festival in Kannada, Read on...
X
Desktop Bottom Promotion