For Quick Alerts
ALLOW NOTIFICATIONS  
For Daily Alerts

ಕಾಳ ಸರ್ಪ ಯೋಗ – ವಿಧಗಳು ಮತ್ತು ಅದರ ಪರಿಣಾಮಗಳು

By Sushma Charhra
|

ವ್ಯಕ್ತಿಯ ಜಾತಕದಲ್ಲಿ ಎಲ್ಲಾ ಗ್ರಹಗಳು ರಾಹು ಮತ್ತು ಕೇತು, ಕೇತು ಮತ್ತು ರಾಹುಗಳ ನಡುವೆ ಬಂದರೆ ಅದನ್ನು ಕಾಳಸರ್ಪ ಯೋಗ ಎಂದು ಕರೆಯುತ್ತೇವೆ., ರಾಹು ಮತ್ತು ಕೇತು ಯಾವಾಗಲೂ ಪ್ರದಕ್ಷಿಣೆ ಹಾಕುತ್ತಾರೆ ಆದರೆ ಉಳಿದ ಎಲ್ಲಾ ಗ್ರಹಳು ಅಪ್ರದಕ್ಷಿಣೆಯಾಗಿ ಸುತ್ತುತ್ತಾರೆ. ಒಂದು ವೇಳೆ ಗ್ರಹಗಳು ರಾಹುವಿನಿಂದ ದೂರ ಸರಿಯುತ್ತಿದ್ದರೆ ಆಗ ರಾಹು ಮತ್ತು ಕೇತುಗಳ ನಡುವೆ ಎಂದು ಹೇಳಲ್ಪಡುತ್ತೆ. ಒಂದು ವೇಳೆ ಗ್ರಹಗಳು ರಾಹುವಿನ ಬಳಿಗೆ ಸರಿಯುತ್ತಿದ್ದರೆ ಆಗ ಕೇತು ಮತ್ತು ರಾಹು ಎಂದು ಪರಿಗಣಿಸಲ್ಪಡುತ್ತೆ.

ಒಂದು ಸಾಮಾನ್ಯ ನಂಬಿಕೆ ಏನೆಂದರೆ ಯಾರು ಈ ದೋಷದಿಂದ ಬಳಲುತ್ತಾರೋ ಅವರು ತಮ್ಮ ಜೀವನದಲ್ಲಿ ತಪ್ಪು ಎಸಗಿದ್ದಾರೆ ಎಂದು ಹೇಳಲಾಗುತ್ತೆ. ಅದು ಈ ಜನ್ಮದ್ದೂ ಆಗಿರಬಹುದು ಇಲ್ಲವೇ ಹಿಂದಿನ ಜನ್ಮದ್ದೂ ಆಗಿರಬಹುದು. ಒಂದು ವೇಳೆ ಕಾಳಸರ್ಪದೋಷ ಕಂಡುಬಂದರೆ ಜೀವನದಲ್ಲಿ ಬಹಳ ಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಅನಾರೋಗ್ಯ, ಹಣಕಾಸಿನ ಸಮಸ್ಯೆ, ದುಃಖೀ ದಾಂಪತ್ಯ, ಕೆಲವು ವ್ಯಕ್ತಿಗಳಿಗೆ ತಮ್ಮ ಮಕ್ಕಳ ವಿಚಾರದಲ್ಲೂ ಕೂಡ ಕೆಲವು ಸಮಸ್ಯೆಗಳು ಎದುರಾಗಬಹುದು ಅನ್ನುವುದೊಂದು ನಂಬಿಕೆ. ಈ ದೋ|ಷದಿಂದ ಕೇವಲ ಋಣಾತ್ಮಕ ಪರಿಣಾಮಗಳೇ ಆಗುತ್ತೆ ಎಂದು ಹೇಳಲಾಗುತ್ತೆ.

ಆದರೆ ಇದು ಸತ್ಯವಲ್ಲ. ಕಾಳಸರ್ಪ ಯೋಗವು ಯಾವಾಗಲೂ ಕೆಟ್ಟದ್ದನ್ನೇ ಮಾಡುವುದಿಲ್ಲ. ಕಾಳಸರ್ಪ ಯೋಗದ ಪರಿಣಾಮಗಳನ್ನು ಹೇಳಬೇಕಾದರೆ ಜಾತಕದ ಇನ್ನಿತರ ಗ್ರಹಗಳ ಸ್ಥಾನಗಳ ಪರಿವೀಕ್ಷಣೆಯನ್ನೂ ಕೂಡ ಮಾಡಬೇಕಾಗುತ್ತದೆ. ಇನ್ನೂ ಹಲವು ವಿಚಾರಗಳನ್ನು ಪರಿಗಣಿಸಿ ಜಾತಕದ ಪರಿಣಾಮಗಳನ್ನು ಹೇಳಲಾಗುತ್ತೆ. ಅನೇಕ ವ್ಯಕ್ತಿಗಳು ಬೇರೆಬೇರೆ ವಿಧಧ ಕಾಳಸರ್ಪ ಯೋಗವನ್ನು ಎದುರಿಸಲ್ಪಡುತ್ತಾರೆ. ಅದರಲ್ಲೂ ಕೆಲವರು ಈ ದೋಷವಿದ್ದರೂ ಕೂಡ ಬಹಳ ಎತ್ತರದ ಸ್ಥಾನಕ್ಕೆ ತೆರಳಿದ್ದಾರೆ ಎಂದರೆ ನೀವು ನಂಬಲೇಬೇಕು. ಜವರಲ್ ಲಾಲ್ ನೆಹರೂ, ಮೊರಾರ್ಜಿ ದೇಸಾಯಿ, ಚಂದ್ರಶೇಖರ್ ಸಿಂಗ್ ಅವರಲ್ಲಿ ಪ್ರಮುಖರು., ಅಂದರೆ ಕಾಳಸರ್ಪ ಯೋಗವು ಒಬ್ಬರ ಜೀವನವನ್ನೇ ಹಾಳು ಮಾಡಿ ಬಿಡುತ್ತದೆ ಎಂದು ಅರ್ಥವಲ್ಲ. ಕೆಲವರ ಸಾಧನೆ ಮತ್ತು ಏಳಿಗೆಯನ್ನೂ ಕೂಡ ಇದು ಗುರುತಿಸ್ಪಡುವಂತೆ ಮಾಡುವ ಸಾಧ್ಯತೆಯೂ ಇದೆ...

Kaalsarpa Yoga

ಅಷ್ಟೇ ಅಲ್ಲ ಕಾಳಸರ್ಪ ದೋಷವಿದೆ ಎಂದಾಕ್ಷಣ ಅದಕ್ಕೆ ಯಾವುದೇ ಪರಿಹಾರವಿಲ್ಲ ಎಂದೂ ಕೂಡ ಅಲ್ಲ. ನಮ್ಮ ಪುರಾಣ ಗ್ರಂಥಗಳು ಈ ಸಮಸ್ಯೆಯಿಂದ ಹೊರಬರಲು ಹಲವು ಪರಿಹಾರಗಳನ್ನೂ ಸೂಚಿಸಿದೆ. ಮೊದಲನೆಯದಾಗಿ ಕಾಳಸರ್ಪ ಯೋಗದಲ್ಲಿ 12 ವಿಧಗಳಿವೆ. ಕೆಲವೊಂದು ದೋಷದ ಪರಿಣಾಮ ಒಂದೇ ರೀತಿಯಾಗಿದ್ದರೆ ಇನ್ನೂ ಕೆಲವದ್ದು ಬೇರೆಬೇರೆ ರೀತಿಯಾಗಿದೆ.

ಕಾಳಸರ್ಪ ಯೋಗ ಯಾವಾಗ ಮುಗಿಯುತ್ತೆ
ಎಲ್ಲಾ ಗ್ರಹಗಳು ಜಾತಕದಲ್ಲಿ ರಾಹು ಮತ್ತು ಕೇತುಗಳ ನಡುವೆ ಇದ್ದು, ಕೇವಲ ಒಂದು ಗ್ರಹವು ಅದರಿಂದ ಹೊರಗಿದ್ದರೂ ಸಾಕು ಕಾಳಸರ್ಪ ದೋಷವು ಮುಗಿದು ಬಿಡುತ್ತದೆ.

ಕಾಳಸರ್ಪದೋಷದ ವಿಧಗಳು..
ಕಾಳಸರ್ಪ ಯೋಗದಲ್ಲಿ 12 ವಿಧಗಳಿವೆ. ಅವುಗಳೆಂದರೆ ಅನಂತ ಕಾಳಸರ್ಪ ಯೋಗ.,ಕುಲಿಕ ಕಾಳಸರ್ಪ ಯೋಗ,ವಾಸುಕಿ ಕಾಳಸರ್ಪ ಯೋಗ,ಶಂಖಪಾಲ ಕಾಳಸರ್ಪ ಯೋಗ,ಪದ್ಮ ಕಾಳಸರ್ಪ ಯೋಗ,ಮಹಾಪದ್ಮ ಕಾಳಸರ್ಪ ಯೋಗ, ತಕ್ಷಕ ಕಾಳಸರ್ಪ ಯೋಗ, ಕಾರ್ಕೋಟಕ ಕಾಳಸರ್ಪ ಯೋಗ, ಶಂಖಚೂಢ ಕಾಳಸರ್ಪ ಯೋಗ,ಘಟಕ ಕಾಳಸರ್ಪ ಯೋಗ,ವಿಷಧಾರ ಕಾಳಸರ್ಪ ಯೋಗ, ಶೇಷನಾಗ ಕಾಳಸರ್ಪ ಯೋಗ,. ಇಲ್ಲಿ ಆ ಎಲ್ಲಾ ದೋಷಗಳ ಬಗ್ಗೆ ವಿವರಣೆ ನೀಡಲಾಗಿದೆ. ದಯವಿಟ್ಟು ಗಮನಿಸಿ.

ಅನಂತ ಕಾಳ ಸರ್ಪ ಯೋಗ
ರಾಹು ಮೊದಲನೆ ಮನೆಯಲ್ಲಿದ್ದು,ಕೇತು ಏಳನೇ ಮನೆಯಲ್ಲಿದ್ದು,ಉಳಿದೆಲ್ಲ ಗ್ರಹಗಳು ಇವುಗಳ ನಡುವೆ ಇದ್ದರೆ ಅದನ್ನು ಅನಂತ ಕಾಳಸರ್ಪದೋಷವೆಂದು ಹೇಳಲಾಗುತ್ತೆ. ಇದು ಮದುವೆ,ಪ್ರೀತಿಯ ವಿಚಾರದಲ್ಲಿ ಸಮಸ್ಯೆ ಮಾಡಬಹುದು. ಆರೋಗ್ಯದಲ್ಲೂ ಕೂಡ ಏರುಪೇರಾಗುವು ಸಾಧ್ಯತೆಗಳಿವೆ., ಕೆಲವೊಂದು ಸಂದರ್ಬದಲ್ಲಿ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗಬಹುದು.

ಕುಲಿಕ ಕಾಳ ಸರ್ಪ ಯೋಗ
ಕುಲಿಕ ಕಾಳಸರ್ಪದೋಷವೆಂದರೆ ಎರಡನೇ ಮನೆಯು ರಾಹುವಿನಿಂದ ಆಕ್ರಮಿಸಪಟ್ಟಿದ್ದು,ಎಂಟನೇ ಮನೆಯಲ್ಲಿ ಕೇತುವಿರಬೇಕು., ಇದರ ಪರಿಣಾಮವಾಗಿ ವಿದ್ಯಾಭ್ಯಾಸ, ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಈ ಸಮಸ್ಯೆ ಇರುವವರು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯನ್ನು ಎದುರಿಸಬಹುದು.

ವಾಸುಕಿ ಕಾಳ ಸರ್ಪ ಯೋಗ
ರಾಹು ಮೂರನೇ ಮನೆಯಲ್ಲಿದ್ದು,ಕೇತು ಒಂಬತ್ತನೇ ಮನೆಯಲ್ಲಿದ್ದರೆ ಆಗ ಅದನ್ನು ವಾಸುಕಿ ಕಾಳಸರ್ಪ ದೋಷವೆಂದು ಹೇಳಲಾಗುತ್ತೆ. ಇದು ನಿಮ್ಮ ಮತ್ತು ಮಕ್ಕಳ ನಡುವಿನ ವೈಮನಸ್ಸಿಗೆ ಕಾರಣವಾಗಬಹುದು. ಆರೋಗ್ಯ ಕೂಡ ಅಷ್ಟೊಂದು ಉತ್ತಮವಾಗಿ ಇರುವುದಿಲ್ಲ. ಅದೇ ಕಾರಣಕ್ಕಾಗಿ ತುಂಬಾ ಹಣ ಖರ್ಚು ಮಾಡಬೇಕಾಗಿ ಬರಬಹುದು. ಅಷ್ಟೇ ಅಲ್ಲ, ನಿಮ್ಮ ಸಂಬಂಧಿಗಳಿಂದಲೇ ಇಲ್ಲ ಸ್ನೇಹಿತರಿಂದಲೇ ನಿಮಗೆ ಮೋಸವಾಗುವ ಸಾಧ್ಯತೆ ಇರುತ್ತೆ. ಆದರೆ ಇದೆಲ್ಲವನ್ನು ಎದುರಿಸಿ ದೊಡ್ಡ ಮಟ್ಟದ ಸಾಧನೆ ಮಾಡುವ ಅವಕಾಶವನ್ನು ಇದು ಕಲ್ಪಿಸಿ ಕೊಡುತ್ತೆ. ಹುಟ್ಟಿದ ಜಾಗದಿಂದ ದೂರವೆಲ್ಲಾದರೂ ಕೆಲಸ ಮಾಡುವುದು ಹೆಚ್ಚಿನ ಲಾಭ ಮತ್ತು ಗೆಲವಿಗೆ ಕಾರಣವಾಗುತ್ತೆ. ಕಷ್ಟಗಳನ್ನು ಹೊರತು ಪಡಿಸಿ, ಯಾರು ಕಷ್ಟ ಪಟ್ಟು ದುಡಿಯುತ್ತಾರೋ ಅವರಿಗೆ ಯಶಸ್ಸನ್ನು ಕೊಡುವುದು ಜಾತಕದ ಈ ಪರಿಣಾಮದಿಂದ ಆಗಲಿದೆ

ಶಂಖಪಾಲ ಕಾಳ ಸರ್ಪ ಯೋಗ
ರಾಹು ನಾಲ್ಕನೇ ಸ್ಥಾನದಲ್ಲಿದ್ದು, ಕೇತುವು 10 ನೇ ಮನೆಯಲ್ಲಿದ್ದರೆ ಆದ ಆ ಯೋಗವನ್ನು ಶಂಖಪಾಲ ಕಾಳಸರ್ಪ ಯೋಗವೆಂದು ಹೇಳಲಾಗುತ್ತೆ. ಈ ದೋಷವಿರುವವರು ತಮ್ಮ ಜಾಗದ ವಿಚಾರದಲ್ಲಿ ಸಮಸ್ಯೆಯನ್ನು ಎದುರಿಸಬಹುದು, ದಾಂಪತ್ಯ ಜೀವನ ಸುಖವಾಗಿರುತ್ತೆ ಆದರೂ ಸಣ್ಣಪುಟ್ಟ ವಿಚಾರಗಳಿಗೆ ಇಬ್ಬರ ನಡುವೆ ಸಣ್ಣಪುಟ್ಟ ಮನಸ್ತಾಪಗಳಿರುತ್ತವೆ. ಇನ್ನೂ ಬೇರೆಯವರಿಂದ ಸಮಸ್ಯೆಯನ್ನು ಎದುರಿಸುವಂತೆ ಮಾಡುವ ದೋಷ ಇದು. ಈ ದೋಷವಿದ್ದರೂ ಕೂಡ ಒಳ್ಳೆಯ ಕೆಲಸ ಪ್ರಾಪ್ತಿಯಾಗುತ್ತೆ, ರಾಜಕೀಯದಲ್ಲಿ ಮೇಲ್ದರ್ಜೆಗೆ ಹೋಗುವಿರಿ, ಸಮಾಜದಲ್ಲಿ ಗೌರವ ಸಿಗಲಿದೆ, ಕಷ್ಟಪಟ್ಟು ಕಾರ್ಯನಿರ್ವಹಿಸಿದರೆ ಉತ್ತಮ ಸಂಬಳ ದೊರೆಯಲಿದ್ದು ಯಶಸ್ಸು ಸಿಗಲಿದೆ.

ಪದ್ಮ ಕಾಳ ಸರ್ಪ ಯೋಗ
ರಾಹು ಐದನೇ ಮನೆಯಲ್ಲಿದ್ದು,ಕೇತುವು 11ನೇ ಮನೆಯಲ್ಲಿದ್ದು, ಉಳಿದೆಲ್ಲ ಗ್ರಹಗಳು ಇವುಗಳ ನಡುವೆ ಇದ್ದರೆ, ಅದನ್ನು ಪದ್ಮಕಾಳಸರ್ಪ ಯೋಗವೆಂದು ಹೇಳಲಾಗುತ್ತೆ. ಈ ಯೋಗವಿರುವವರು ಮಕ್ಕಳ ವಿಚಾರದಲ್ಲಿ ಸಮಸ್ಯೆಯನ್ನು ಎದುರಿಸುತ್ತಾರೆ. ಮಕ್ಕಳು ಮಾನಸಿಕ ಇಲ್ಲವೇ ದೈಹಿಕ ಸಮಸ್ಯೆಯಿಂದ ಬಳಲುವ ಸಾಧ್ಯತೆಗಳಿರುತ್ತೆ. ಒಂದು ವೇಳೆ ವ್ಯಕ್ತಿಯು ಯಾವುದೇ ಮೋಸ-ವಂಚನೆ, ಕುಡಿತ, ಇಂತಹ ಅಭ್ಯಾಸವಿಲ್ಲದೇ ಇರುವವರಾದರೆ ಅವರಿಗೆ ಈ ದೋಷವು ಯಾವುದೇ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ.

ಮಹಾ ಪದ್ಮ ಕಾಳ ಸರ್ಪ ಯೋಗ
ಮಹಾ ಪದ್ಮ ಕಾಳ ಸರ್ಪ ಯೋಗವಿರುವವರು ಒಂದು ರೀತಿಯಲ್ಲಿ ಅದೃಷ್ಟವಂತರು, ಯಾಕೆಂದರೆ ಇವರು ಸಂಪತ್ತಿನ ಗಳಿಕೆ ಮಾಡುವರು ಮತ್ತು ಸಂತೋಷವಾಗಿ ಇರುವರು. ಪ್ರವಾಸಕ್ಕೆ ಸಂಬಂಧಿಸಿದ ವ್ಯವಹಾರ ಮಾಡಿದರೆ ಹೆಚ್ಚು ಲಾಭ ಗಳಿಸಲು ಸಾಧ್ಯವಿದೆ. ಆದರೆ ಇವರ ಕೌಟುಂಬಿಕ ಜೀವನ ಅಷ್ಟೇನು ಸಂತೋಷಮಯವಾಗಿ ಇರುವುದಿಲ್ಲ. ಇವರ ಹತ್ತಿರದವರೇ ಇವರಿಗೆ ಮೋಸ ಮಾಡುವ ಸಾಧ್ಯತೆಗಳಿದ್ದು, ಅದೇ ಇರವ ದುಃಖಕ್ಕೆ ಕಾರಣವಾಗಬಹುದು.

ತಕ್ಷಕ ಕಾಳ ಸರ್ಪ ಯೋಗ
ಯಾವಾಗ ಕೇತುವು ಲಗ್ನದಲ್ಲಿದ್ದು, ರಾಹುವು ಏಳನೇ ಮನೆಯಲ್ಲಿದ್ದರೆ ಆಗ ಅದನ್ನು ತಕ್ಷಕ ಕಾಳಸರ್ಪ ಯೋಗವೆಂದು ಹೇಳುತ್ತಾರೆ. ಇವರ ಸಣ್ಣ ಎತ್ತರವೂ ಕೂಡ ದೊಡ್ಡ ತೂಕಕ್ಕೆ ಕಾರಣವಾಗಬಹುದು. ತಮ್ಮ ಕುಟುಂಬದಿಂದಲೇ ಹಲವು ಸಮಸ್ಯೆಗಳನ್ನು ಇವರು ಎದುರಿಸಬೇಕಾಗುತ್ತದೆ. ತಮ್ಮ ಜಾಗದ ವಿಚಾರದಲ್ಲಿ ಕುಟುಂಬದೊಂದಿಗೆ ಕಿರಿಕಿರಿ ಇಲ್ಲವೇ ಹೊಸ ಜಾಗ ಖರೀದಿಸಿದ್ದರೆ ಇತರರಿಂದ ಕಿರಿಕಿರಿಯನ್ನು ಅನುಭವಿಸಬೇಕಾದೀತು. ಇವರು ಎಷ್ಟೇ ಒಳ್ಳೆಯವರಾಗಿದ್ದು, ಋಣಾತ್ಮಕ ಆಲೋಚನೆ ಇಲ್ಲದೆ, ಮೋಸ ವಂಸನೆ, ಯಾವುದರಲ್ಲೂ ತೊಡಗಿಕೊಳ್ಳದೇ ಇದ್ದರೆ, ಇಂತಹ ಸಮಸ್ಯೆಗಳನ್ನು ಎದುರಿಸದೇ ಇರುವ ಸಾಧ್ಯತೆಗಳಿವೆ.

ಕಾರ್ಕೋಟಕ ಕಾಳ ಸರ್ಪ ಯೋಗ
ಕೇತುವು ಎರಡನೇ ಮನೆಯಲ್ಲಿದ್ದು, ರಾಹುವು ಎಂಟನೇ ಮನೆಯಲ್ಲಿದ್ದರೆ ಆಗ ಅದನ್ನು ಕಾರ್ಕೋಟಕ ಕಾಳಸರ್ಪ ಯೋಗವೆಂದು ಕರೆಯಲ್ಪಡುತ್ತೆ. ಇವರು ತಮ್ಮ ಬಾಲ್ಯದಿಂದಲೇ ಹೆಚ್ಚು ಕಷ್ಟಗಳನ್ನು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ಕೆಲಸ ಸಿಕ್ಕಿದ್ದರೂ ಅದರಲ್ಲಿ ಉತ್ತುಂಗಕ್ಕೆ ಹೋಗಲು ಸಾಧ್ಯವಿಲ್ಲ. ಮೇಲ್ದರ್ಜೆಯಿಂದ ಕೆಳದರ್ಜೆಗೆ ಇಳಿಯುವ ಸಾಧ್ಯತೆಗಳಿವೆ. ಇದೊಂದು ರೀತಿಯ ಶಿಕ್ಷೆಯನ್ನು ಈ ಯೋಗವು ಕರುಣಿಸಲಿದೆ.

ಶಂಖಚೂಢ ಕಾಳ ಸರ್ಪ ಯೋಗ
ಯಾವಾಗ ಕೇತುವು ಮೂರನೇ ಮನೆಯಲ್ಲಿದ್ದು , ರಾಹುವು 9 ನೇ ಮನೆಯಲ್ಲಿರುತ್ತಾನೋ ಆಗ ಶಂಖಚೂಢ ಕಾಳಸರ್ಪ ಯೋಗವೆಂದು ಕರೆಯಲ್ಪಡುತ್ತೆ. ಕೋರ್ಟ್ ಕೇಸು, ಇತ್ಯಾದಿ ವ್ಯಾಜ್ಯಕ್ಕೆ ಸಂಬಂಧಿಸಿದ ಕಿರುಕುಳವನ್ನು ಇವರು ಎದುರಿಸಬೇಕಾಗುತ್ತದೆ.ತಮ್ಮವರಿಂದಲೇ ಮೋಸವಾಗುವ ಸಾಧ್ಯತೆ ಇರುತ್ತೆ. ಕೆಲವೊಂದು ಸಂದರ್ಧದಲ್ಲಿ ವಿದ್ಯಾಭ್ಯಾಸದಲ್ಲೂ ಕೂಡ ದೊಡ್ಡ ಮಟ್ಟದ ಸಮಸ್ಯೆಗಳನ್ನು ಇದು ತಂದೊಡ್ಡಲಿದೆ. ತಮ್ಮ ಮಕ್ಕಳನ್ನು ಪ್ರೀತಿಸುತ್ತಾ, ಅವರ ಸ್ವಹಿತಾಸಕ್ತಿಗಳಿಗೆ ಮತ್ತು ಅವರ ಅಧಿಕಾರಗಳಿಗೆ ತೊಂದರೆ ನೀಡದೇ ಇದ್ದ ಪಕ್ಷದಲ್ಲಿ ಸುಖವಾಗಿರಲು ಸಾಧ್ಯವಿದೆ.

ಘಟಕ ಕಾಳ ಸರ್ಪ ಯೋಗ
ಒಂದು ವೇಳೆ ಕೇತುವು ನಾಲ್ಕನೇ ಮನೆಯಲ್ಲಿದ್ದು, ರಾಹುವು 10 ನೇ ಮನೆಯಲ್ಲಿದ್ದರೆ ಅದು ಘಟಕ ಕಾಳ ಸರ್ಪ ಯೋಗವಾಗುತ್ತೆ. ಈ ಯೋಗವಿದ್ದರು ಸಂತೋಷ ಪಡಲು ಕಷ್ಟಪಡಬೇಕಾಗುತ್ತದೆ. ಆದರೂ ಅಂದುಕೊಂಡಷ್ಟು ದೊಡ್ಡ ಮಟ್ಟದಲ್ಲಿ ಖುಷಿಯಾಗಿರಲು ಸಾಧ್ಯವಿಲ್ಲ. ಮೋಸ, ವಂಸನೆಯನ್ನು ಬಿಟ್ಟು, ಇದ್ದುದರಲ್ಲೇ ಸುಖವಾಗಿರುವುದನ್ನು ಅಭ್ಯಾಸ ಮಾಡಿಕೊಂಡರೆ ದೊಡ್ಡ ಮಟ್ಟದ ಕೆಟ್ಟ ಪರಿಣಾಮವನ್ನು ಈ ಯೋಗವು ಕರುಣಿಸುವುದಿಲ್ಲ.

ವಿಷಧಾರ ಕಾಳ ಸರ್ಪ ಯೋಗ
ಒಂದು ವೇಳೆ ಕೇತುವು ಐದನೇ ಮನೆಯಲ್ಲಿದ್ದು, ರಾಹುವು 11 ನೇ ಮನೆಯಲ್ಲಿದ್ದರೆ ಆಗ ಅದು ವಿಷ ಧಾರ ಕಾಳ ಸರ್ಪ ಯೋಗವಾಗುತ್ತೆ. ಈ ಯೋಗವಿರುವವರು ಹೆಚ್ಚೆಚ್ಚು ಪ್ರವಾಸ ಕೈಗೊಳ್ಳಬೇಕಾಗುತ್ತದೆ. ಅದು ಮುಂದೊಂದು ದಿನ ಸುಖಕ್ಕೆ ಕೊಂಡೊಯ್ಯುತ್ತದೆ. ಅವರು ತಾವು ಹುಟ್ಟಿದ ಊರಿನಿಂದ ದೂರವೇ ಇರಬೇಕಾಗುತ್ತದೆ.ಇವರ ಆರೋಗ್ಯ ಮತ್ತು ಕೌಟುಂಬಿಕ ಜೀವನದಲ್ಲಿ ಏನಾದರೂ ಪರಿಣಾಮಗಳಾಗಬಹುದು. ಆದರೆ ಅಜ್ಜಿತಾತರ ಆಶಿರ್ವಾದ ಮತ್ತು ತಂದೆತಾಯಿ ಆಶಿರ್ವಾದದಿಂದ ಉತ್ತಮ ಯೋಗಗಳನ್ನು ಪಡೆಯಬಹುದು.

ಶೇಷನಾಗ ಕಾಳ ಸರ್ಪ ಯೋಗ
ಒಂದು ವೇಳೆ, ಕೇತುವು ಆರನೇ ಮನೆಯಲ್ಲಿದ್ದು, ರಾಹುವು 12 ನೇ ಮನೆಯಲ್ಲಿದ್ದರೆ ಆಗ ಅದು ಶೇಷನಾಗ ಕಾಳಸರ್ಪ ಯೋಗವಾಗುತ್ತೆ. ಈ ದೋಷದಿಂದ ಇರುವವರಿಗೆ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಎದುರಾಗಲಿದೆ. ಇವರು ಜೊತೆಗಾರರೊಂದಿಗೆ ವಾದವಿವಾದದಲ್ಲಿ ತೊಡಗಿ ಸಮಸ್ಯೆಗಳಾಗುವುದು ಹೆಚ್ಚು. ಅಷ್ಟೇ ಕೋರ್ಟ್ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಋಣಾತ್ಮಕ ಆಲೋಚನೆಗಳಿಂದಾಗಿ ಯಾವಾಗಲೂ ಋಣಾತ್ಮಕ ಸನ್ನಿವೇಶಗಳು ಇವರನ್ನು ಅಟಕಾಯಿಸಿಕೊಂಡು ಬಿಡುತ್ತವೆ. ಹಾಗಾಗಿ ಈ ಯೋಗವಿರುವವರು ಆದಷ್ಟು ಧನಾತ್ಮಕ ಆಲೋಚನೆಗಳಲ್ಲಿ ತೊಡಗಬೇಕು ಮತ್ತು ಸಂಬಂಧಿಗಳ ಬಳಿ ಇಲ್ಲವೇ, ಸಹದ್ಯೋಗಿ, ಗೆಳೆಯ-ಗೆಳತಿಯರ ಬಳಿ ಯಾವುದೇ ವಾದವಿವಾದದಲ್ಲಿ ತೊಡಗದೇ ಇರುವುದು ಸೂಕ್ತ.

English summary

Kaalsarpa Yoga: Types And Effects

Kaalsarpa yoga is a position in the birth chart of person, where all the planets come between Rahu and Ketu or Ketu and Rahu. Rahu and Ketu always move clockwise, whereas all the other planets move anticlockwise. So if the planets are moving away from Rahu then they are said to be between Rahu and Ketu and if they appear moving into Rahu, then they are said to be between Ketu and Rahu.
X
Desktop Bottom Promotion