For Quick Alerts
ALLOW NOTIFICATIONS  
For Daily Alerts

ಕಾಳಸರ್ಪ ದೋಷದ ಅಪಾಯಗಳೇನು? ಇದಕ್ಕೆ ಪರಿಹಾರವೇನು?

|

ಯಾರಿಗಾದರೂ ಹಾವು ಕಚ್ಚಿ ಸತ್ತರೆ ಅಥವಾ ಒಬ್ಬ ವ್ಯಕ್ತಿಗೆ ಒಮ್ಮೆ ಹಾವು ಕಚ್ಚಿ ಬದುಕಿದರೂ ನಂತರ ಮತ್ತೆ ಹಾವು ಕಚ್ಚಿದೆ ಅವನಿಗೆ/ಅವಳಿಗೆ ಸರ್ಪ ದೋಷವಿದೆ, ಅದಕ್ಕೆ ಈ ರೀತಿ ಉಂಟಾಗಿದೆ ಎಂದು ಹೇಳುತ್ತಾರೆ. ನಾಗ ದೋಷಿವಿದ್ದರೆ ಅದಕ್ಕೆ ಪರಿಹಾರ ಮಾಡದಿದ್ದರೆ ಒಳ್ಳೆಯದಲ್ಲ ಎಂಬ ನಂಬಿಕೆ ನಮ್ಮಲ್ಲಿ ಬಲವಾಗಿದೆ. ದೊಡ್ಡ ಸೆಲೆಬ್ರಿಟಗಳಿಂದ ಹಿಡಿದು ಜನಸಾಮಾನ್ಯರವರೆಗೆ ನಾಗದೋಷಕ್ಕೆ ಭಯಪಡುತ್ತಾರೆ. ತುಂಬಾ ಜನರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ನಾಗ ದೋಷಕ್ಕೆ ಪರಿಹಾರ ಮಾಡಿಸುತ್ತಾರೆ. ನಾಗ ದೋಷವೆಂಬುವುದು ನಮ್ಮ ಜನ್ಮ ಕುಂಡಲಿಯಲ್ಲಿ ಇರುತ್ತದೆ ಎಂದು ಹೇಳಲಾಗುವುದು.

ಸರ್ಪ ದೋಷಕ್ಕೆ ಪರಿಹಾರ

ಸರ್ಪ ದೋಷಕ್ಕೆ ಪರಿಹಾರ

ಸರ್ಪ ದೋಷ ಇರುವವರು ಈ ದೋಷ ಪರಿಹಾರ ಮಾಡುವ ದೇವಾಲಯಕ್ಕೆ ಹೋಗಿ ಪರಿಹಾರ ಮಾಡಬೇಕು. ಕರ್ನಾಟಕದಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಉಜ್ವೈನ್‌ನ ಮಹಾಕಾಳೇಶ್ವರ ದೇವಾಲಯ, ಆಂಧ್ರದ ಶ್ರೀ ಕಾಳಹಸ್ತಿ ಮತ್ತು ಮೋಪಿದೇವಿ ಸುಬ್ರಹ್ಮಣ್ಯ ದೇವಾಲಯ, ತಮಿಳುನಾಡಿನ ರಾಮನಾಥ ಸ್ವಾಮಿ ದೇವಾಲಯ ಹೀಗೆ ಸರ್ಪದೋಷದ ಪರಿಹಾರಕ್ಕೆ ನಿರ್ದಿಷ್ಟವಾದ ದೇವಾಲಯಗಳಿಗೆ ಹೋಗಿ ಪೂಜೆಯನ್ನು ಮಾಡಿಸಬೇಕು.

* ರಾಹು-ಕೇತು ಪೂಜೆ ಮಾಡುವ ಮುನ್ನ ಗಣಪತಿಯನ್ನು ಪೂಜಿಸಬೇಕು. ನಂತರ ರಾಹು-ಕೇತುವಿಗೆ ಪೂಜಿಯನ್ನು ಸಲ್ಲಿಸಬೇಕು.

* ಸರ್ಪದೋಷ ಇರುವವರು ಉತ್ತಮ ಪರಿಹಾರ ಕಾಣುವವರಿಗೆ ವರ್ಷದಲ್ಲಿ ಎರಡು ಬಾರಿ ಅಂದ್ರೆ ಉತ್ತರಾಯಣ ಕಾಲದಲ್ಲಿ ಹಾಗೂ ದಕ್ಷಿಣಾಯನ ಕಾಲದಲ್ಲಿ ಪೂಜೆ ಮಾಡಬೇಕು. ಸ

* ರ್ಪದೊಷ ನಿವಾರಣೆಗೆ ಪ್ರತಿದಿನ ಹನುಮಾನ ಚಾಲೀಸ ಪಠಿಸಬೇಕು, ನರಸಿಂಹ ಸ್ವಾಮಿ ಅಥವಾ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಭೇಟಿ ಕೊಟ್ಟು ಪೂಜೆ ಸಲ್ಲಿಸಬೇಕು.

* ಪ್ರತೀವರ್ಷ ಗರುಡ ಪಂಚಮಿ ವ್ರತ ಪಾಲಿಸಿದರೆ ತುಂಬಾನೇ ಒಳ್ಳೆಯದು.

* 43 ಬುಧವಾರ ಬಡವರಿಗೆ ಧಾನ್ಯಗಳನ್ನು ದಾನ ಮಾಡಬೇಕು

* ಷಷ್ಠಿ ಪೂಜೆ ಮಾಡಬೇಕು

ಹೀಗೆ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಸರ್ಪದೋಷ ಎಂದರೇನು?

ಸರ್ಪದೋಷ ಎಂದರೇನು?

ರಾಹು 3ನೇ ಮನೆಯಲ್ಲಿದ್ದು ಕೇತು 9ನೇ ಮನೆಯಲ್ಲಿರುವಾಗ ಉಳಿದ ಗ್ರಹಗಳು 4, 8, 10, 2ನೇ ಮನೆಯಲ್ಲಿದ್ದರೆ ಸರ್ಪದೋಷವಿದೆ ಎಂದು ಹೇಳಲಾಗುವುದು.

ಸರ್ಪದೋಷವಿದ್ದರೆ ಏನಾಗುತ್ತೆ?

ಸರ್ಪದೋಷವಿದ್ದರೆ ಏನಾಗುತ್ತೆ?

* ವ್ಯಕ್ತಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ

* ಸಾವಿನ ಭಯ ಕಾಡುವುದು

* ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗುವುದು

* ಪ್ರೀತಿ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದು

* ಔಷಧಿ ತೆಗೆದುಕೊಂಡರೂ ಕಾಯಿಲೆ ಕಡಿಮೆಯಾಗುವುದಿಲ್ಲ.

* ಆರ್ಥಿಕ ತೊಂದರೆಗಳು ಉಂಟಾಗುವುದು, ವೃತ್ತಿ ಬದುಕಿನಲ್ಲಿ ತೊಂದರೆ ಉಂಟಾಗುವುದು.

* ಸಂಗಾತಿ ಅಥವಾ ವ್ಯವಹಾರ ಪಾಲುದಾರರಿಂದ ಮೋಸ ಉಂಟಾಗುವುದು

* ಯಶಸ್ಸು, ಗೌರವ ಸಿಗುವುದಿಲ್ಲ

* ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಕೂಡ ಮಾಡಲಾಗುವುದಿಲ್ಲ

* ಆತ್ಮವಿಶ್ವಾಸ ಕಡಿಮೆಯಾಗುವುದು

* ಮಾನಸಿಕ ನೆಮ್ಮದಿ ಕಡಿಮೆಯಾಗುವುದು

ಕಾಳಸರ್ಪ ದೋಷಕ್ಕೆ ಪರಿಹಾರ

ಕಾಳಸರ್ಪ ದೋಷಕ್ಕೆ ಪರಿಹಾರ

* ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ.

* ಕಾಳ ಸರ್ಪ ಯೋಗ ಯಂತ್ರವನ್ನು ದೇವರ ಕೋಣೆಯಲ್ಲಿ ಇಟ್ಟು ಪ್ರತಿದಿನ ಪೂಜಿಸಿ

* ಬುಧವಾರ ಮತ್ತು ಶುಕ್ರವಾರ ಕಾಳಸರ್ಪದೋಷ ನಿವಾರಣೆ ಪೂಜೆ ಆಡಿಸಿ

* ಅಶ್ಲೇಷ ಬಲಿ ಮಾಡಿಸಿ

* ನಾಗರಪಂಚಮಿಯಂದು ಸರ್ಪಶಾಂತಿ ಹೋಮ ಮಾಡಿಸಿ

* 14 ಮುಖದ ರುದ್ರಾಕ್ಷ ಧರಿಸಿ.

* ಪ್ರತಿದಿನ ಗೋಮೇಧಿಕ ಹರಳನ್ನು ಕೈಯಲ್ಲಿ ಹಿಡಿದು 108 ಬಾರಿ ರಾಹು ಬೀಜ ಮಂತ್ರ 'ಉನ್ ಭ್ರು ಭ್ರೂಂ: ರಾಹುವೇ ನಮಃ:' ಪಠಿಸಿ.

* ಶನಿವಾರ ಆಲದ ಮರಕ್ಕೆ ನೀರು ಹಾಕಿ.

ಇತರ ಪರಿಹಾರ

ಇತರ ಪರಿಹಾರ

* ಶನಿವಾರ ಅಥವಾ ಪಂಚಮಿ ತಿಥಿಯಂದು ನದಿಗೆ 11 ತೆಂಗಿನಕಾಯಿಯನ್ನು ಅರ್ಪಿಸಿ

* ಕಾಳ ಸರ್ಪ ಗಾಯತ್ತಿ ಮಂತ್ರ ಪಠಿಸಿ

* ವಿಷ್ಣು ಸಹಸ್ರನಾಮ ಪಠಿಸಿ

* ಮಾನಸ ದೇವಿಯನ್ನು ಪೂಜಿಸಿ

* ಮನೆಯಲ್ಲಿ ನಾಯಿಯನ್ನು ಸಾಕಿ. ಇದು ಆಪತ್ತುಗಳಿಂದ ಕಾಪಾಡುವ ಬಟುಕ ಭೈರವನನ್ನು ಸಂತೋಷಪಡಿಸುತ್ತದೆ.

English summary

Kaal Sarp Dosh- Symptoms and Remedies of Kaal Sarp Yoga in Kannada

Kall Sarp Dosh - Symptoms and Remedies of Kaal Sarp Yoga in Kannada, Read on...
Story first published: Saturday, January 22, 2022, 17:40 [IST]
X
Desktop Bottom Promotion