For Quick Alerts
ALLOW NOTIFICATIONS  
For Daily Alerts

ಮಗುವಿಗೆ ಕೃಷ್ಣನ ವೇಷ ಹಾಕುತ್ತಿದ್ದೀರಾ? ಈ ಟಿಪ್ಸ್ ಸಹಾಯವಾದೀತು

|

ಆಗಸ್ಟ್‌ 18ಕ್ಕೆ ಕೃಷ್ಣ ಜನ್ಮಾಷ್ಟಮಿ. ಈ ದಿನ ಮುದ್ದು ಕಂದಮ್ಮಗಳಿಗೆ ಕೃಷ್ಣ-ರಾಧೆಯ ವೇಷ ಹಾಕಿಸಿ ಅವರಲ್ಲಿ ಆ ದೇವರನ್ನು ಕಾಣುವುದೇ ಮಹದಾನಂದ. ಮಕ್ಕಳಿಗೆ ಕೃಷ್ಣ ವೇಷ ಹಾಕಿದರೆ ತುಂಬಾ ಮುದ್ದು-ಮುದ್ದಾಗಿ ಕಾಣುತ್ತಾರೆ, ಇನ್ನು ಶಾಲೆಗಳಲ್ಲೂ ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಕಳುಹಿಸಲು ಹೇಳಿರುತ್ತಾರೆ.

ನೀವು ನಿಮ್ಮ ಮಗುವಿಗೆ ಕೃಷ್ಣನ ವೇಷ ಹಾಕಬೇಕೆಂದು ಬಯಸುವುದಾದರೆ ಈ ಟಿಪ್ಸ್ ನಿಮಗೆ ತುಂಬಾ ಸಹಾಯವಾದೀತು ನೋಡಿ.

ಮಗುವಿಗೆ ಕೃಷ್ಣ ವೇಷ ಹಾಕಿಸಲು ಇವುಗಳನ್ನು ಜೋಡಿಸಿ

1. ಧೋತಿ

1. ಧೋತಿ

ಧೋತಿ ನೀವು ರೆಡಿಮೇಡ್‌ ಖರೀದಿಸಬಹುದು ಅಥವಾ ಶಲ್ಯದಿಂದಲೂ ಹಾಕಬಹುದು. ನೀವು ಸಿಲ್ಕ್‌ ಅಥವಾ ಕಾಟನ್ ಧೋತಿ ಬಳಸಬಹುದು.

2. ಕಿರೀಟ

2. ಕಿರೀಟ

ಇನ್ನು ಕೃಷ್ಣನಿಗೆ ಮುಕುಟ ಬೇಕು, ಕಿರೀಟ ಮಾರ್ಕೆಟ್‌ನಲ್ಲಿ ಸಿಗುತ್ತೆ ಅಥವಾ ನೀವೇ ಮಾಡಬಹುದು. ಮಾರ್ಕೆಟ್‌ನಿಂದ ತರುವುದಾದರೆ ಕಿರೀಟ ಲೈಟ್‌ವೇಯ್ಟ್ ಆಗಿರಲಿ, ತುಂಬಾ ಭಾರವಿದ್ದರೆ ಕಿರೀಟ ಧರಿಸಲು ಮಕ್ಕಳು ಇಷ್ಟಪಡಲ್ಲ.

3. ನವಿಲುಗರಿ

3. ನವಿಲುಗರಿ

ಇನ್ನು ಶ್ರೀಕೃಷ್ಣ ವೇಷಕ್ಕೆ ನವಿಲುಗರಿ ಬೇಕೇಬೇಕು. ಕೃಷ್ಣನ ವೇಷ ಕಂಪ್ಲೀಟ್‌ ಆಗುವುದೇ ನವಿಲುಗರಿ ಮುಡಿಸಿದ ಮೇಲೆಯೇ...

4. ಕೊಳಲು

4. ಕೊಳಲು

ಶ್ರೀಕೃಷ್ಣ ನಿಗೆ ಕೊಳಲು ಎಂದರೆ ಪ್ರಿಯ, ಆದ್ದರಿಂದ ಕೊಳಲು ಬೇಕೇಬೇಕು. ಇದನ್ನು ಕೂಡ ಖರೀದಿಸಬಹುದು, ಅಥವಾ ರಟ್ಟಿನಿಂದ ಮಾಡಿ ಅದಕ್ಕೆ ಶೈನಿಂಗ್ ಪೇಪರ್ ಹಚ್ಚಿದರೆ ಸಾಕು.

5. ಆಭರಣ

5. ಆಭರಣ

ಇನ್ನು ಶ್ರೀಕೃಷ್ಣನಿಗೆ ಆಭರಣಗಳು ಬೇಕು, ಆಭರಣಗಳು ಕೂಡ ಲೈಟ್‌ ವೇಯ್ಟ್‌ ಆಗಿರಲಿ, ತುಂಬಾ ಭಾರವಾದ ಆಭರಣಗಳನ್ನು ಹಾಕಿದರೆ ಮಗುವಿಗೆ ತುಂಬಾ ಹೊತ್ತು ಇರಲು ಕಷ್ಟ.

6. ಮೇಕಪ್

6. ಮೇಕಪ್

ಕೆಲವರು ನೀಲಿ ಬಣ್ಣ ಹಚ್ಚುತ್ತಾರೆ, ಆದರೆ ಹೀಗೆ ಹಚ್ಚುವಾಗ ಹುಷಾರು, ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಬಣ್ಣ ಮಕ್ಕಳಿಗೆ ತ್ವಚೆ ಅಲರ್ಜಿ ತರಬಹುದು. ಏನೂ ದೊಡ್ಡ ಮೇಕಪ್ ಬೇಕಾಗಿಲ್ಲ, ಹಣೆಗೆ ಒಂದು ಉದ್ದ ಕುಂಕುಮ ಇಟ್ಟರೂ ಸಾಕು ಚೆನ್ನಾಗಿ ಮಕ್ಕಳು ಕೃಷ್ಣ ವೇಷದಲ್ಲಿ ತುಂಬಾನೇ ಮುದ್ದಾಗಿ ಕಾಣುತ್ತಾರೆ.

7.ಬೆಣ್ಣೆ ಮಡಿಕೆ

7.ಬೆಣ್ಣೆ ಮಡಿಕೆ

ಇನ್ನು ಚಿಕ್ಕ ಮಣ್ಣಿನ ಮಡಿಕೆಯಲ್ಲಿ ಬೆಣ್ಣೆ ತುಂಬಿ ಕೊಟ್ಟರೆ ಬೆಣ್ಣೆ ಪ್ರಿಯ ಕೃಷ್ಣ ವೇಷ ಪೋಟೋಗೆ ಡ್ರೆಸ್ಸಿಂಗ್‌ ರೆಡಿ.

English summary

Krishna Janmashtami Special: How to dress up your kid like Krishna in kannada

Here are tips to dress up your kid like krishna,read on...
X
Desktop Bottom Promotion