For Quick Alerts
ALLOW NOTIFICATIONS  
For Daily Alerts

ಜಗ್ನನಾಥ ರಥಯಾತ್ರೆ 2022: ಈಗ ಏಕಾಂತದಲ್ಲಿರುವ ಪುರಿ ಜಗ್ನನಾಥ ಮತ್ತೆ ಭಕ್ತರಿಗೆ ದರ್ಶನ ನೀಡುವುದು ಯಾವಾಗ?

|

ಪುರಿ ಜಗ್ನನಾಥ ಯಾತ್ರೆ ಜಗತ್ಪ್ರಸಿದ್ದವಾದ ಆಚರಣೆಯಾಗಿದೆ. ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಜಗನ್ನಾಥ ರಥಯಾತ್ರೆಯನ್ನು ಪುರಿಯಲ್ಲಿ ನಡೆಸಲಾಗುತ್ತದೆ. ಭಗವಾನ್ ಜಗನ್ನಾಥನು ತನ್ನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೊಂದಿಗೆ ಮೂರು ಬೃಹತ್ ರಥಗಳ ಮೇಲೆ ಮೆರವಣಿಗೆ ಹೋಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.

Jagannath Rath Yatra

ನಂಬಿಕೆಗಳ ಪ್ರಕಾರ ಭಗವಾನ್ ಜಗನ್ನಾಥ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೊಂದಿಗೆ ತಮ್ಮ ಧಾಮವನ್ನು ತೊರೆದು ಗುಂಡಿಚಾ ದೇವಸ್ಥಾನಕ್ಕೆ ಹೋಗುತ್ತಾರೆ ಎಂದು ಹೇಳಲಾಗುವುದು. ಗುಂಡಿಚಾ ದೇವಾಲಯ ಜಗ್ನನಾಥನ ಚಿಕ್ಕಮ್ಮನ ಮನೆಯೆಂದು ಹೇಲಾಗುವುದು. ಈ ದೇವಾಲಯದಲ್ಲಿ ಜಗ್ನನಾಥ ಏಳು ದಿನ ಉಳಿದು ನಂತರ ತನ್ನ ಮೂಲ ಸ್ಥಾನಕ್ಕೆ ಮರಳುತ್ತಾನೆ ಎಂದು ಹೇಳಲಾಗುವುದು.

ಈ ವರ್ಷ ಜಗನ್ನಾಥ ರಥಯಾತ್ರೆ ಯಾವಾಗ?

ಈ ವರ್ಷ ಜಗನ್ನಾಥ ರಥಯಾತ್ರೆ ಯಾವಾಗ?

ಈ ವರ್ಷ ಜಗನ್ನಾಥ ರಥಯಾತ್ರೆ ಜುಲೈ 01 ರಂದು ನಡೆಯಲಿದೆ. ಪಂಚಾಂಗದ ಪ್ರಕಾರ, ಜಗನ್ನಾಥ ರಥಯಾತ್ರೆಯು ಆಷಾಢ ಶುಕ್ಲ ದ್ವಿತೀಯದಿಂದ ಪ್ರಾರಂಭವಾಗುತ್ತದೆ. ಈ ವರ್ಷ ಆಷಾಢ ಶುಕ್ಲ ದ್ವಿತೀಯ ತಿಥಿಯು ಜೂನ್ 30 ರಂದು ಬೆಳಗ್ಗೆ 10:49 ರಿಂದ ಪ್ರಾರಂಭವಾಗಲಿದ್ದು, ಇದು ಜುಲೈ 01 ರಂದು ಮಧ್ಯಾಹ್ನ 01:09 ಕ್ಕೆ ಕೊನೆಗೊಳ್ಳಲಿದೆ. ಆದ್ದರಿಂದ ಈ ವರ್ಷ ಜಗನ್ನಾಥ ರಥಯಾತ್ರೆ ಶುಕ್ರವಾರ ಜುಲೈ 01 ರಂದು ಆರಂಭವಾಗಲಿದೆ.

14 ದಿನಗಳ ಕಾಲ ಏಕಾಂತದಲ್ಲಿದ್ದು 15ನೇ ದಿನ ದರ್ಶನ ನೀಡಲಿರುವ ಜಗ್ನನಾಥ

14 ದಿನಗಳ ಕಾಲ ಏಕಾಂತದಲ್ಲಿದ್ದು 15ನೇ ದಿನ ದರ್ಶನ ನೀಡಲಿರುವ ಜಗ್ನನಾಥ

ಜ್ಯೇಷ್ಠ ಪೂರ್ಣಿಮೆ (ಜೂ. 14)ಯಂದು ದೇವರುಗಳಾದ ಜಗ್ನನಾಥ, ಬಲಭದ್ರ, ಸುಭದ್ರಾರಿಗೆ 108 ಮಡಿಕೆ ಸ್ನಾನ ಮಾಡಲಾಗಿದೆ. ಈ ಸ್ನಾನಕ್ಕೆ ಸಹಸ್ತ್ರಧಾರ ಸ್ನಾನ ಎಂದು ಕರೆಯಲಾಗುತ್ತದೆ, ಈ ಸ್ನಾನದ ಬಳಿಕ ಜಗ್ನನಾಥ ಅಸ್ವಸ್ಥನಾಗುತ್ತಾನೆ, ಇದರಿಂದಾಗಿ 14 ದಿನ ಏಕಾಂತಲ್ಲಿದ್ದು ವಿಶ್ರಾಂತಿ ಪಡೆದು, ಜಗ್ನನಾಥ 15ನೇ ದಿನ ತನ್ನ ಭಕ್ತರಿಗೆ ದರ್ಶನ ನೀಡುತ್ತಾರೆ. ಇದೀಗ ಏಕಾಂತದಲ್ಲಿರುವ ದೇವರುಗಳು ದರ್ಶನವನ್ನು ಜೂ. 1ರಂದು ಪಡೆಯಬಹುದು.

 ಏಕಾಂತ ವಾಸದ ಬಳಿಕ ದೇವರುಗಳು ಗುಂಡಿಚಾಗೆ ತೆರಳುತ್ತಾರೆ

ಏಕಾಂತ ವಾಸದ ಬಳಿಕ ದೇವರುಗಳು ಗುಂಡಿಚಾಗೆ ತೆರಳುತ್ತಾರೆ

ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನಾಂಕದಂದು ಜಗ್ನನಾಥನು ಸಹೋದರ, ಸಹೋದರಿ ಜೊತೆ ರಥಯಾತ್ರೆಯಲ್ಲಿ ಹೊರಡುತ್ತಾರೆ. ಈ ಮೂವರು ದೇವರುಗಳನ್ನು ಬೇರೆ-ಬೇರೆ ರಥದಲ್ಲಿ ಕರೆದುಕೊಂಡು ಹೋಗಲಾಗುವುದು, ಈ ರಥಗಳು ಗುಂಡಿಚಾ ದೇವಾಸ್ಥಾನಕ್ಕೆ ತೆರಳುತ್ತವೆ. ಆ ದೇವಾಲಯದಲ್ಲಿ 7 ದಿನಗಳು ನೆಲೆಸುವ ದೇವರುಗಳು ನಂತರ ಜಗ್ನನಾಥ ದೇವಾಲಯಕ್ಕೆ ಮರಳುತ್ತಾರೆ.

ಜಗನ್ನಾಥ ರಥಯಾತ್ರೆಯ ಮಹತ್ವ

ಜಗನ್ನಾಥ ರಥಯಾತ್ರೆಯ ಮಹತ್ವ

1. ಭಗವಾನ್ ಜಗನ್ನಾಥ ಶ್ರೀಹರಿಯು ವಿಷ್ಣುವಿನ ಮುಖ್ಯ ಅವತಾರಗಳಲ್ಲಿ ಒಬ್ಬರು. ಭಗವಾನ್ ಜಗನ್ನಾಥನ ರಥಯಾತ್ರೆಗಾಗಿ ರಥಗಳ ನಿರ್ಮಾಣವು ಅಕ್ಷಯ ತೃತೀಯದಿಂದ ಪ್ರಾರಂಭವಾಗುತ್ತದೆ.

2. ಈ ರಥಗಳನ್ನು ತಯಾರಿಸಲು ಸುಮಾರು 2 ತಿಂಗಳು ಬೇಕಾಗುತ್ತದೆ. ಪ್ರತಿ ವರ್ಷ ವಸಂತ ಪಂಚಮಿಯಿಂದ ದಶಪಲ್ಲದ ಕಾಡುಗಳಲ್ಲಿ ಕಟ್ಟಿಗೆ ಸಂಗ್ರಹಿಸುವ ಕೆಲಸ ಆರಂಭವಾಗುತ್ತದೆ.

3. ಈ ರಥಗಳನ್ನು ಶ್ರೀಮಂದಿರದ ಬಡಗಿಗಳು ಮಾತ್ರ ನಿರ್ಮಿಸುತ್ತಾರೆ. ಅವರನ್ನು ಭೋಯಿ ಸೇವಾಯತ್ ಎಂದು ಕರೆಯಲಾಗುತ್ತದೆ. 200ಕ್ಕೂ ಹೆಚ್ಚು ಬಡಗಿಗಳು ಸೇರಿ ಈ ಮೂರು ರಥಗಳನ್ನು ತಯಾರಿಸುತ್ತಾರೆ.

4. ರಥಯಾತ್ರೆಗೆ ಪ್ರತಿ ವರ್ಷ ಹೊಸ ರಥಗಳನ್ನು ತಯಾರಿಸಲಾಗುತ್ತದೆ. ಹಳೆಯ ರಥಗಳು ಮುರಿಯಲಾಗುವುದು.

5. ದಂತಕಥೆಯ ಪ್ರಕಾರ, ಜಗನ್ನಾಥ ಜೀ ಮೊದಲ ಬಾರಿಗೆ ಹುಣ್ಣಿಮೆಯಂದು ಸ್ನಾನ ಮಾಡಿದಾಗ, ಅವರು ಅನಾರೋಗ್ಯಕ್ಕೆ ಒಳಗಾದರು. ನಂತರ ಅವರು 14 ದಿನಗಳ ಕಾಲ ಏಕಾಂತದಲ್ಲಿ ಇದ್ದು ಗಿಡಮೂಲಿಕೆಗಳೊಂದಿಗೆ ಚಿಕಿತ್ಸೆ ಪಡೆಯುತ್ತಾರೆ, ನಂತರ 15ನೇ ದಿನ ಎಲ್ಲರಿಗೂ ದರ್ಶನ ನೀಡಿದರು ಎಂದು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ.

6. ಇದರಿಂದಾಗಿ ಪ್ರತಿ ವರ್ಷ ರಥಯಾತ್ರೆಗೆ ಮುನ್ನ ಈ ಪದ್ಧತಿ ಪಾಲಿಸಿಕೊಂಡು ಬರಲಾಗುವುದು.

English summary

Jagannath Rath Yatra 2022 Date, History, Significance, Rituals, Timings and why it is celebrated in Kannada

Jagannath Rath Yatra 2022 Date, History, Significance, Rituals, Timings and why it is celebrated in Kannada, read on...
X
Desktop Bottom Promotion