ದೀಪಾವಳಿ ಹಬ್ಬದ ವಿಶೇಷ: ಲಕ್ಷ್ಮೀ ದೇವಿಯ ಪೂಜಾ, ವಿಧಿವಿಧಾನ

By: Jaya subramanya
Subscribe to Boldsky

ದೀಪಗಳ ಹಬ್ಬ ದೀಪಾವಳಿಯನ್ನು ಹೆಚ್ಚು ಸಂಭ್ರಮ ಮತ್ತು ಸಡಗರದಿಂದ ದೇಶಾದ್ಯಂತ ಆಚರಿಸಲಾಗುತ್ತದೆ. ಈ ಹಬ್ಬವನ್ನು ಇನ್ನಷ್ಟು ವಿಧಿವತ್ತಾಗಿ ಆಚರಿಸುವುದಕ್ಕಾಗಿ ಕೆಲವೊಂದು ಕ್ರಮಗಳಿವೆ ಮತ್ತು ದೀಪಗಳ ಹಬ್ಬ ದೀಪಾವಳಿಯು ಕೂಡ ಅರ್ಥವತ್ತಾದ ಹಿನ್ನೆಲೆಯೊಂದನ್ನು ಹೊಂದಿದೆ. ನಮ್ಮ ಮನದೊಳಗಿರುವ ಅಜ್ಞಾನವನ್ನು ತೊಲಗಿಸಿ ಅಲ್ಲಿ ಒಳ್ಳೆಯತನದ ಜ್ಞಾನದ ದೀವಿಗೆಯನ್ನು ಬೆಳಗುವುದು ಎಂಬ ಅರ್ಥವನ್ನು ದೀಪಾವಳಿ ಸಾರುತ್ತಿದೆ.

ದೀಪಾವಳಿಯಂದು ಬಂಧು ಮಿತ್ರರೊಂದಿಗೆ ಹಬ್ಬವನ್ನು ಆಚರಿಸುವುದರ ಜೊತೆಗೆ ಕುಟುಂಬ ಸದಸ್ಯರಿಗೆ ಉಡುಗೊರೆಗಳನ್ನು ನೀಡುವುದು ಸಿಹಿ ಹಂಚುವ ಕ್ರಮವನ್ನು ಅನುಸರಿಸಲಾಗುತ್ತದೆ. ಮನೆಯಲ್ಲಿ ಸಕಲ ಸಂಪತ್ತು ತುಂಬಿರಲಿ ಎಂದು ಭಕ್ತರು ಈ ದಿನ ದೇವರನ್ನು ವಿಶೇಷವಾಗಿ ಪೂಜಿಸುತ್ತಾರೆ. ಈ ಹಬ್ಬವನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.

Deepavali lamp

17 ಅಕ್ಟೋಬರ್‌ನಂದು ಈ ಬಾರಿಯ ದೀಪಾವಳಿ ಆರಂಭವಾಗುತ್ತಿದ್ದು ಇದು ಧನ್‌ತೇರಾಸ್ ಆಗಿದ್ದು ದೀಪಾವಳಿಯ ಆರಂಭದ ಸೂಚಕವಾಗಿದೆ. 18 ರಂದು ಚೋತಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಇನ್ನು 19ನೇಯ ತಾರೀಕಿನಂದು ದೀಪಾವಳಿ ಹಬ್ಬವಾಗಿದೆ. ಗೋವಿನ ಪೂಜೆಯನ್ನು 20 ನೆಯ ಅಕ್ಟೋಬರ್‌ನಂದು ನಡೆಸಲಾಗುತ್ತದೆ. ಇನ್ನು ಕೊನೆಯ ದಿನ ಅಂದರೆ ಅಕ್ಟೋಬರ್ 21 ರಂದು ಭಾಯ್ ದೂಜ್ ಆಚರಿಸಲಾಗುತ್ತದೆ. 

ದೀಪಾವಳಿಯಂದು ಲಕ್ಷ್ಮೀ ಪೂಜೆಯನ್ನು ಮಾಡುವುದು ಏಕೆ ಶುಭಕರ?

ದೀಪಾವಳಿಯಂದು ಲಕ್ಷ್ಮೀ ಪೂಜೆಗೆ ಮಹತ್ತರ ಸ್ಥಾನವನ್ನು ನೀಡಲಾಗುತ್ತದೆ. ಈ ದಿನದಂದು ನೀವು ಪೂಜೆಗೆ ಬಳಸುವ ಪರಿಕರಗಳನ್ನು ತಿಳಿದುಕೊಂಡಿರಬೇಕು. ಇಂದಿನ ಲೇಖನದಲ್ಲಿ ಪೂಜಾ ಸಾಮಾಗ್ರಿಗಳು ಯಾವುವು ಎಂಬುದರ ವಿವರಗಳನ್ನು ನಾವು ನೀಡುತ್ತಿದ್ದು ವಿವರಗಳನ್ನು ತಿಳಿದುಕೊಳ್ಳಿ.

light lamp

ಪೂಜೆಗೆ ಬೇಕಾಗುವ ಸಾಮಾಗ್ರಿಗಳು

*ಹೂವುಗಳು

*ದೀಪ

*ಘಂಟೆ

*ಅಗರ್‌ಬತ್ತಿ

*ಶ್ರೀಗಂಧದ ಪೇಸ್ಟ್

*ಶಂಖ

laxmi pooja

ನಿಮ್ಮ ಪೂಜಾ ತಟ್ಟೆಯಲ್ಲಿ ಮೇಲೆ ತಿಳಿಸಿದ ಸಾಮಾಗ್ರಿಗಳು ಅವಶ್ಯವಾಗಿ ಇರಲೇಬೇಕು. ಈ ತಾಲಿಯನ್ನು ನಿಮ್ಮ ಹತ್ತಿರದವರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಇದರಿಂದ ಅವರ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಥಾಲಿಯ ಆಯ್ಕೆಯನ್ನು ಮಾಡುವುದು ಹೇಗೆ

*ವೃತ್ತಾಕಾರದಲ್ಲಿರುವ ಥಾಲಿಯನ್ನು ಆರಿಸಿಕೊಳ್ಳಿ

*ಮಧ್ಯಭಾಗದಲ್ಲಿ ಸ್ವಸ್ತಿಕಾ ಚಿಹ್ನೆಯನ್ನು ಬಿಡಿಸಿ ಇದನ್ನು ಬಿಡಿಸಲು ನೀವು ಶ್ರೀಗಂಧದ ಪೇಸ್ಟ್ ಅನ್ನು ಬಳಸಿಕೊಳ್ಳಬಹುದು.

*ಮಧ್ಯಭಾಗದಲ್ಲಿ ದೀಪವನ್ನು ಇರಿಸಿ

*ಘಂಟೆ ಮತ್ತು ಅಗರಬತ್ತಿಯನ್ನು ಇರಿಸಿಕೊಳ್ಳಿ

*ತಟ್ಟೆಯಲ್ಲಿ ಶಂಖವನ್ನು ಇರಿಸಿ ಬೇಕಾದಲ್ಲಿ ಖಾಲಿ ಇರುವ ಸ್ಥಳವನ್ನು ಹೂವುಗಳಿಂದ ವಿಶೇಷವಾಗಿ ದಾಸವಾಳದಿಂದ ಅಲಂಕರಿಸಿಕೊಳ್ಳಬಹುದಾಗಿದೆ.

*ಲಕ್ಷ್ಮೀ ಪೂಜೆಗೆ ಬೇಕಾಗುವ ಸಾಮಾಗ್ರಿಗಳು

*ಓಂ ಬರೆದಿರುವ ಚಿನ್ನ ಅಥವಾ ಬೆಳ್ಳಿಯ ನಾಣ್ಯ

*ಹಣತೆಗಳು

*ವ್ಯಾಕ್ಸ್ ಲ್ಯಾಂಪ್ಸ್

*ಪೂಜಾ ತಟ್ಟೆ

*ಹಸಿ ಹಾಲು

*ರೋಲಿ, ಅಕ್ಕಿ

*ಲಕ್ಷ್ಮೀ ಮತ್ತು ಗಣೇಶನ ಫೋಟೋ

*ರೇಷ್ಮೆ ಬಟ್ಟೆ

*ಸಿಹಿತಿಂಡಿಗಳು

*ಅಗರ್‌ಬತ್ತಿ

*ಹೂವುಗಳು

*ಕಮಲದ ಹೂವುಗಳು

*ನೀರಿನಿಂದ ತುಂಬಿರುವ ಕಲಶ

*ಆರತಿ ಬೆಳಗುವ ತಟ್ಟೆ

crackers

ಗಮನದಲ್ಲಿರಿಸಬೇಕಾದ ಅಂಶ:

ಪೂಜೆಯಲ್ಲಿ ನಿಮಗೆ ಮುಖ್ಯವಾಗಿ ಬೇಕಾಗಿರುವುದು ನಾಣ್ಯಗಳಾಗಿವೆ. ಚಿನ್ನ ಅಥವಾ ಬೆಳ್ಳಿಯ ನಾಣ್ಯಗಳನ್ನು ನೀವು ಬಳಸಿಕೊಳ್ಳಬಹುದು. ಬಳಸುವ ನಾಣ್ಯಗಳ ಸಂಖ್ಯೆ 11, 21, 31 ಅಥವಾ 101 ಆಗಿರಬೇಕು.

ಪೂಜಾ ತಟ್ಟೆಯಲ್ಲಿ ಮಣ್ಣಿನ ಹಣತೆಗಳನ್ನು 21 ಅಥವಾ 31 ಸಂಖ್ಯೆಯಲ್ಲಿ ಇರಿಸಬೇಕು. ಮನೆಯನ್ನು ಅಲಂಕರಿಸಲು ವ್ಯಾಕ್ಸ್ ದೀಪಗಳನ್ನು ಬಳಸಬಹುದಾಗಿದೆ.

ಎಲ್ಲಾ ದೀಪಗಳನ್ನು ಇರಿಸಿಕೊಳ್ಳುವುದಕ್ಕಾಗಿ ದೊಡ್ಡ ತಟ್ಟೆಯನ್ನು ಬಳಸಿ. ನಾಣ್ಯಗಳನ್ನು ಇದರಲ್ಲಿ ಇರಿಸಬಹುದು. ರೋಲಿ, ಅಕ್ಕಿ, ಹಸಿ ಹಾಲನ್ನು ಎರಡು ಭಾಗವನ್ನಾಗಿ ಮಾಡಿ. ಒಂದು ಭಾಗವನ್ನು ಪೂಜೆಗೆ ಬಳಸಬೇಕು ಇನ್ನೊಂದು ಭಾಗದಿಂದ ಪೂಜೆಯಲ್ಲಿ ಪಾಲ್ಗೊಂಡವರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಚೋತಿ ದೀಪಾವಳಿಯಂದು ಲಕ್ಷ್ಮೀ ಮತ್ತು ಗಣೇಶನ ಫೋಟೋಗಳನ್ನು ಬಳಸಲಾಗುತ್ತದೆ. ಮೂರ್ತಿಗಳನ್ನು ಧನ್‌ತೇರಾಸ್ ದಿನದಂದು ಬಳಸಲಾಗುತ್ತದೆ.

ರೇಷ್ಮೆ ಬಟ್ಟೆಯು ಗಾಢವಾಗಿರಬೇಕು. ನಾಣ್ಯಗಳ ತಟ್ಟೆಯೊಂದಿಗೆ ಇದನ್ನು ಬಳಸಬೇಕು ಮತ್ತು ಪೂಜೆ ಮಾಡುವ ಪ್ರದೇಶದಲ್ಲಿ ಬಳಸಲಾಗುತ್ತದೆ. ದೀಪಾವಳಿಯಂದು ಬೆಳಗ್ಗೆ ಪೂಜೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಂಜೆ ಪೂಜೆಯನ್ನು ನಡೆಸಬೇಕು. ಪಟಾಕಿ ಹಚ್ಚುವುದು, ಮೊದಲಾದ ದೀಪಾವಳಿ ಸಡಗರವನ್ನು ಪೂಜೆಯ ನಂತರ ನಿರ್ವಹಿಸಲಾಗುತ್ತದೆ.

English summary

Items You Need To Perform Diwali Pooja

Lakshmi Pooja forms an important part of the Diwali festivities. Therefore, it is important to know what Lakshmi Pooja samagri are to be used on that day. It may not be possible to organise everything on that day, especially if you are new to this or if this is the first time you have to host the pooja yourself. It is to help such readers that we bring to you a concise list of things you need for Lakshmi Pooja.
Subscribe Newsletter