For Quick Alerts
ALLOW NOTIFICATIONS  
For Daily Alerts

ಸರಸ್ವತಿ ದೇವರಿಗೆ ಸಂಬಂಧಿಸಿದ ಇಂತಹ ಸಾಮಗ್ರಿಗಳು ಮನೆಯಲ್ಲಿದ್ದರೆ ಬಹಳ ಒಳ್ಳೆಯದು

|

ವಿದ್ಯೆ ಹಾಗೂ ಜ್ಞಾನದ ದೇವತೆಯೆಂದು ಹಿಂದೂಗಳು ಸರಸ್ವತಿ ದೇವರನ್ನು ಪೂಜಿಸುವರು. ನವರಾತ್ರಿ ಸಂದರ್ಭದಲ್ಲಿ ಸರಸ್ವತಿಯ ಆರಾಧನೆಯು ನಡೆಯುತ್ತದೆ. ಸರಸ್ವತಿ ದೇವಿಯ ಮೂರ್ತಿಯನ್ನು ಇಟ್ಟುಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾರ್ಜನೆ ಮಾಡಲು ನೆರವಾಗುವುದು ಎಂದು ಹೇಳಲಾಗುತ್ತದೆ. ಶಾಶ್ವತ ಜ್ಞಾನವನ್ನು ನೀಡುವ ಮೂಲಕ ಸರಸ್ವತಿ ದೇವಿಯು ಭಕ್ತರನ್ನು ಆಶೀರ್ವದಿಸುವರು.

Important Items Associated With Goddess Saraswati

ಅಜ್ಞಾನವನ್ನು ತೊಡೆದು ಹಾಕಿ, ಜ್ಞಾನದ ದೀಪವನ್ನು ಬೆಳಗುವರು. ಇದರಿಂದ ಸರಸ್ವತಿ ದೇವರ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳುವುದು ಶುಭವೆಂದು ಪರಿಗಣಿಸಲಾಗಿದೆ. ಸರಸ್ವತಿ ದೇವಿಗೆ ಸಂಬಂಧಿಸಿರುವ ಕೆಲವೊಂದು ಸಾಮಗ್ರಿಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅವರ ಆಶೀರ್ವಾದ ಸಿಗುವುದು. ಶೈಕ್ಷಣಿಕವಾಗಿ ಉತ್ತಮ ಪ್ರದರ್ಶನ ನೀಡಲು ವಿದ್ಯಾರ್ಥಿಗಳು ಸರಸ್ವತಿ ದೇವಿಯ ಮೂರ್ತಿಯನ್ನು ವಿದ್ಯಾರ್ಥಿಗಳು ತಮ್ಮ ಓದುವ ಕೋಣೆಯಲ್ಲಿ ಇಟ್ಟುಕೊಳ್ಳಬೇಕು ಎಂದು ವಾಸ್ತುಶಾಸ್ತ್ರವು ಹೇಳುತ್ತದೆ. ಮನೆಯಲ್ಲಿ ಯಾವ ಸಾಮಗ್ರಿಗಳನ್ನು ಇಡಬಹುದು ಎಂದು ನೀವು ಮುಂದೆ ಓದುತ್ತಾ ತಿಳಿಯಿರಿ.

ಸರಸ್ವತಿ ದೇವಿಯ ಮೂರ್ತಿ

ಸರಸ್ವತಿ ದೇವಿಯ ಮೂರ್ತಿ

ಹಿಂದೂ ಧರ್ಮದ ಅನುಯಾಯಿಗಳು ಸರಸ್ವತಿಯನ್ನು ವಿದ್ಯಾದೇವತೆ ಎಂದು ಪರಿಗಣಿಸುತ್ತಾರೆ. ಇಲ್ಲಿ ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ, ಬದಲಿಗೆ ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ, ತಿಳಿವಳಿಕೆ, ಸಂಸ್ಕೃತಿ, ಕಲೆ ಎಲ್ಲವೂ ಒಳಗೊಂಡಿದೆ. ಉತ್ತಮ ಮಾನವನಾಗಲು ಹಣವಿಲ್ಲದೇ ಹೋದರೂ ಈ ಗುಣಗಳು ಅಗತ್ಯವಾಗಿ ಬೇಕು. ಇದಕ್ಕೇ ಹಿರಿಯರು 'ಗುಣ ನೋಡಿ ಹೆಣ್ಣು ಕೊಡು' ಎಂದು ಹೇಳಿದ್ದಾರೆ. ವಿದ್ಯಾದೇವತೆಯನ್ನು ಆರಾಧಿಸುವ ಮೂಲಕ ವಿದ್ಯೆ ವಿವೇಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ಸರಸ್ವತಿಯನ್ನು ಬಸಂತ ಪಂಚಮಿಯಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಇನ್ನು ವಿದ್ಯಾರ್ಜನೆ ವೇಳೆ ಸರಸ್ವತಿ ದೇವಿಯ ಮೂರ್ತಿಯ ಮೆದುಳಿಗೆ ಬೆಳಕು ಮತ್ತು ಆತ್ಮಕ್ಕೆ ಮಾರ್ಗದರ್ಶನ ನೀಡುವುದು. ಸರಸ್ವತಿ ದೇವರನ್ನು ತಾಯಿಯೆಂದು ಸ್ವೀಕರಿಸಿದರೆ ಆಗ ಮೂರ್ಖನೂ ಬುದ್ಧಿವಂತನಾಗುವನು. ವೇದಗಳ ದೇವತೆಯೆಂದು ಕರೆಯಲ್ಪಡುವಂತಹ ಸರಸ್ವತಿ ದೇವಿಯು ಜೀವನದಲ್ಲಿ ಯಶಸ್ಸು ಪಡೆಯಲು ನೆರವಾಗುವರು. ಸರಸ್ವತಿ ದೇವಿಯ ಫೋಟೊ ಇಟ್ಟುಕೊಂಡರೆ ಆಗ ಏಕಾಗ್ರತೆ ಮತ್ತು ಬದ್ಧತೆಯಿಂದ ಯಶಸ್ಸು ಪಡೆಯಲು ನೆರವಾಗುವುದು.

ವೀಣೆ

ವೀಣೆ

ಸರಸ್ವತಿ ದೇವಿಯು ಯಾವಾಗಲೂ ತನ್ನ ಕೈಯಲ್ಲಿ ವೀಣೆ ಹಿಡಿದುಕೊಂಡಿರುವರು. ಇದು ಸಂಗೀತದ ದೇವಿಗೆ ತುಂಬಾ ಪ್ರಿಯವಾಗಿರುವುದು. ಆಕೆ ನಮ್ಮ ಮನಸ್ಸನ್ನು ಸರಿಯಾದ ಪಥದಲ್ಲಿ ಸಾಗುವಂತೆ ಮಾಡುವರು. ಮನೆಯಲ್ಲಿ ವೀಣೆಯನ್ನು ಇಟ್ಟುಕೊಂಡರೆ ಶಾಂತಿ ಸಿಗುವುದು. ಇದರಿಂದ ಮಕ್ಕಳಲ್ಲಿ ಕ್ರಿಯಾತ್ಮಕತೆಯು ಹೆಚ್ಚಾಗುವುದು.

ಹಂಸ

ಹಂಸ

ಹಿಂದೂ ಧರ್ಮದಲ್ಲಿ ಹಲವಾರು ದೇವ ದೇವತೆಗಳನ್ನು ಬೇರೆ ಬೇರೆ ಕಾರಣಕ್ಕಾಗಿ ಪೂಜಿಸಲಾಗುತ್ತದೆ. ಬ್ರಹ್ಮನನ್ನು ಸೃಷ್ಟಿಕರ್ತ ಎಂದು ಪೂಜಿಸಿದರೆ, ವಿಷ್ಣುವನ್ನು ಪರಿಪಾಲಕ ಎಂಬುದಾಗಿ ಆರಾಧಿಸುತ್ತಾರೆ. ಶಿವನನ್ನು ವಿನಾಶ ಮಾಡಿ ಪೊರೆಯುವವರು ಎಂಬುದಾಗಿ ಬಣ್ಣಿಸಿ ಪೂಜಿಸಲಾಗುತ್ತದೆ. ಋಣಾತ್ಮಕ ಅಂಶಗಳನ್ನು ನಮ್ಮಿಂದ ಹೊಡೆದೋಡಿಸಿ ಒಳ್ಳೆಯತನವನ್ನು ನೆಲೆಸುವಂತೆ ಮಾಡುವವರು ಎಂಬುದಾಗಿ ಆರಾಧಿಸುತ್ತಾರೆ. ಈ ಮೂವರು ದೇವತೆಗಳನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಪೂಜನೀಯ ಸ್ಥಾನದಲ್ಲಿ ಕಾಣಲಾಗುತ್ತದೆ. ಅಂತೆಯೇ ಸರಸ್ವತಿ, ಲಕ್ಷ್ಮೀ, ಮತ್ತು ಪಾರ್ವತಿಯನ್ನು ಸಮಾನ ಶಕ್ತಿ ನೆಲೆಯಲ್ಲಿ ಪೂಜಿಸಲಾಗುತ್ತದೆ. ತ್ರಿದೇವಿಗಳಲ್ಲಿ ಒಬ್ಬರಾಗಿರುವ ಸರಸ್ವತಿಯನ್ನು ವಿದ್ಯಾ ದೇವತೆಯಾಗಿ ಪೂಜಿಸಲಾಗುತ್ತದೆ. ಭಾರತದ ಹೆಚ್ಚಿನ ಸ್ಥಳಗಳಲ್ಲಿ ಸರಸ್ವತಿಯನ್ನು ವಿದ್ಯಾ ದೇವತೆಯಾಗಿ ಕಂಡು ಪೂಜಿಸುತ್ತಾರೆ ಹಂಸದ ಮೇಲೆ ಸರಸ್ವತಿ ನೆಲೆಗೊಂಡು ಪೂಜಿಸಲ್ಪಡುತ್ತಾರೆ. ಹಿಂದೂ ದೇವರುಗಳಿಗೆ ಏನಾದರೂ ಒಂದು ಪ್ರಾಣಿ ಅಥವಾ ಪಕ್ಷಿ ವಾಹನವಿದ್ದೇ ಇರುತ್ತದೆ. ಹಂಸವು ಸರಸ್ವತಿ ದೇವಿಯ ವಾಹನವಾಗಿದೆ. ಹಂಸವು ಶಾಂತಿ ಮತ್ತು ಧನಾತ್ಮಕತೆಯ ಸಂಕೇತವಾಗಿದೆ. ಹಂಸದ ಫೋಟೊ ಅಥವಾ ಮೂರ್ತಿ ಇಟ್ಟುಕೊಂಡರೆ ಅದು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಬರುವುದು ಮತ್ತು ಇದರಿಂದ ಅವರು ಒಳ್ಳೆಯ ವಿದ್ಯೆ ಪಡೆಯುವುದು.

ನವಿಲು ಗರಿ

ನವಿಲು ಗರಿ

ಹಿ೦ದೂ ಪುರಾಣಶಾಸ್ತ್ರಗಳಲ್ಲಿ ನವಿಲನ್ನು ಅತ್ಯ೦ತ ಮ೦ಗಳಕರವಾದ ಪಕ್ಷಿಗಳ ಪೈಕಿ ಒ೦ದೆ೦ದು ಪರಿಗಣಿಸಲಾಗಿದೆ. ನವಿಲು ಒ೦ದು ಅತ್ಯ೦ತ ಮನಮೋಹಕ ಪಕ್ಷಿಯಾಗಿದ್ದು, ಭಾರತ ದೇಶದ ರಾಷ್ಟ್ರೀಯ ಪಕ್ಷಿ ಎ೦ಬ ಗೌರವವನ್ನೂ ಕೂಡ ಗಳಿಸಿಕೊ೦ಡಿದೆ. ಸಾಕಷ್ಟು ಮ೦ದಿ ತಮ್ಮ ಮನೆಗಳಲ್ಲಿ ನವಿಲುಗರಿಗಳನ್ನು ತೂಗುಹಾಕಿಕೊ೦ಡಿರುವುದನ್ನು ನೀವು ಗಮನಿಸಿರಬಹುದು. ನವಿಲುಗರಿಗಳನ್ನು ಮನೆಯಲ್ಲಿರಿಸಿಕೊ೦ಡಿರುವುದರಿ೦ದ ಮನೆಗೆ ಅದೃಷ್ಟ ಹಾಗೂ ಅಭ್ಯುದಯದ ಆಗಮನವಾಗುತ್ತದೆ ಎ೦ದು ನ೦ಬಲಾಗಿದೆ. ಇನ್ನು ಹಿಂದೂ ಧರ್ಮದಲ್ಲಿ ನವಿಲಿನ ಗರಿಯನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಇದು ಸರಸ್ವತಿಗೆ ಸಂಬಂಧಪಟ್ಟಿರುವುದು. ಶ್ರೀಕೃಷ್ಣ ದೇವರ ತಲೆಯಲ್ಲೂ ಇದು ಇದೆ. ಹೆಚ್ಚಿನ ವಿದ್ಯಾರ್ಥಿಗಳು ಇದನ್ನು ತಮ್ಮ ಪುಸ್ತಕದ ಒಳಗಡೆ ಇಟ್ಟುಕೊಳ್ಳುವರು. ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಾಗುವುದು ಎಂದು ನಂಬಲಾಗಿದೆ. ಕಲಿಯುವ ಸಾಮರ್ಥ್ಯವು ಇದರಿಂದ ಹೆಚ್ಚಾಗುವುದು. ನವಲು ಹೃದಯದಿಂದ ತುಂಬಾ ಪರಿಶುದ್ಧವೆಂದು ಪರಿಗಣಿಸಲಾಗಿದೆ. ನವಿಲಿನ ಗರಿಯು ನಕಾರಾತ್ಮಕತೆ ಹೋಗಲಾಡಿಸಿ ಏಕಾಗ್ರತೆ ಹೆಚ್ಚಿಸುವುದು. ಇನ್ನು ಮಯೂರ ಅಥವಾ ನವಿಲನ್ನು ಗರುಡನ ರೆಕ್ಕೆಯಿ೦ದ ಸೃಷ್ಟಿಸಲಾಗಿದೆ ಎ೦ದು ನ೦ಬಲಾಗಿದೆ (ಹಿ೦ದೂಪುರಾಣಶಾಸ್ತ್ರಗಳಲ್ಲಿ ಪ್ರಸ್ತಾಪಿತವಾಗಿರುವ ಮತ್ತೊ೦ದು ಪಕ್ಷಿ, ಭಗವಾನ್ ಶ್ರೀ ಮಹಾವಿಷ್ಣುವಿನ ವಾಹನ). ಚಿತ್ರಪಟಗಳಲ್ಲಿ, ಹಾವನ್ನು ಕೊಲ್ಲುತ್ತಿರುವ೦ತಹ ಒ೦ದು ಕಾಲ್ಪನಿಕ ಪಕ್ಷಿಯ ರೂಪದಲ್ಲಿ ನವಿಲನ್ನು ಚಿತ್ರಿಸಲಾಗಿರುತ್ತದೆ. ಅನೇಕ ಹಿ೦ದೂ ಪುರಾಣಗಳ ಪ್ರಕಾರ, ಈ ಚಿತ್ರವು ಕಾಲಚಕ್ರದ ಸ೦ಕೇತವಾಗಿರುತ್ತದೆ.

ತಾವರೆ ಹೂ

ತಾವರೆ ಹೂ

ತಾವತೆ ಹೂ ಲಕ್ಷ್ಮೀ ದೇವಿ ಮತ್ತು ಸರಸ್ವತಿ ದೇವಿ ಅವರಿಗೆ ಸಂಬಂಧಿಸಿದ್ದಾಗಿದೆ. ಇದು ಶಾಂತಿ ಮತ್ತು ಜ್ಞಾನ ಪಡೆಯುವ ಸಂಕೇತವಾಗಿದೆ. ಕೆಸರಿನಲ್ಲಿ ಕಮಲವು ಅರಳಿದಾಗ ವಾತಾವರಣ ತುಂಬಾ ಸುಂದರವಾಗಿ ಕಾಣಿಸುವುದು. ಇದು ಸ್ವಂತ ಜ್ಞಾನದ ಪ್ರಾಮುಖ್ಯತೆಯನ್ನು ಹೇಳುವುದು ಮತ್ತು ಯಶಸ್ಸಿಗೆ ದಾರಿಯನ್ನು ಮಾಡಿಕೊಡುವುದು.

ಭಗವದ್ ಗೀತೆಯ 5 ನೇ ಅಧ್ಯಾಯದಲ್ಲಿ ಕೃಷ್ಣನು ತಾವರೆ ಹೂವಿನ ಪ್ರಾಮುಖ್ಯತೆಯನ್ನು ತಿಳಿಸುತ್ತಾರೆ: ಹೀಗಾಗಿ, ತಾವರೆಯು ಅಜ್ಞಾನದ ಮಧ್ಯೆ ಶುದ್ಧತೆ ಮತ್ತು ಜ್ಞಾನೋದಯ ಸಂಕೇತವಾಗಿದೆ. ನಿರಂತರವಾಗಿ ನೀರಿನಲ್ಲಿರುವಾಗಲೂ ಸಹ, ತಾವರೆ ಎಂದಿಗೂ ತೇವವಾಗುವುದಿಲ್ಲ. ಇದು ನಯವಾದ ಜೌಗು ಅಥವಾ ಕೊಳಕು ನೀರಿನಲ್ಲಿ ಬೆಳೆಯುತ್ತದೆ, ಆದರೆ ಅದರ ಕೊಳಕು ಸುತ್ತಮುತ್ತಲಿನ ಬಗ್ಗೆ ಚಿಂತಿಸುವುದಿಲ್ಲ. ಇದು ಅರಳಿ (ಅದರ ಕರ್ಮವನ್ನು ನಿರ್ವಹಿಸುತ್ತದೆ) ನಂತರ ಅದೃಶ್ಯವಾಗುತ್ತದೆ. ಹೀಗಾಗಿ ಕಮಲದ ಹೂವು ಈ ಭೂಮಿಯ ಮೇಲಿನ ಜೀವಂತ ಜೀವಿಗಳ ಅಂತಿಮ ಗುರಿಯೆಂದರೆ ಬಾಹ್ಯ ಅಂಶಗಳು ಅಥವಾ ಫಲಿತಾಂಶಗಳ ಬಗ್ಗೆ ಕಳವಳವಿಲ್ಲದೆಯೇ ಅವರ ಕರ್ಮಗಳನ್ನು (ಕರ್ತವ್ಯಗಳು) ನಿರ್ವಹಿಸುವುದು. ತಾವರೆ ಹೂವು ಸೃಷ್ಟಿಯಾದ ಕಾಸ್ಮಿಕ್ ನೀರಿನಿಂದ ಆದಿಸ್ವರೂಪದ ಜನನದ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತದೆ. ಭಗವಾನ್ ವಿಷ್ಣುವಿನ ಹೊಕ್ಕುಳದಿಂದ ಹೊರಹೊಮ್ಮುತ್ತಿರುವ ಬ್ರಹ್ಮ ಕಮಲದ ಹೂವಿನ ಮೇಲೆ ಕುಳಿತು, ಜೀವನ ನೀರಿನಲ್ಲಿ ಪ್ರಾರಂಭವಾಗುತ್ತದೆ ಎಂದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಾರೆ.

English summary

Items Associated With Goddess Saraswati

Goddess Saraswati symbolises wisdom and knowledge. She blesses her devotees with success and helps students improve at learning. As per Vastu Shastra, keeping items associated with Goddess Saraswati at home helps to improve the performance of the child in academics. Such items which symbolize the goddess also help bring peace in the house.
Story first published: Thursday, September 6, 2018, 16:05 [IST]
X
Desktop Bottom Promotion