For Quick Alerts
ALLOW NOTIFICATIONS  
For Daily Alerts

ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವೇ 'ರಾಖಿ ಹಬ್ಬ'

By Manu
|

ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸುಗ್ಗಿ....ಅದರಲ್ಲೂ ನಾಗರ ಪಂಚಮಿ ಮುಗಿದ ನಂತರ ಒಂದಾದ ಮೇಲೊಂದರಂತೆ ಸಾಲು ಸಾಲಾಗಿ ಹಬ್ಬಗಳು ಬರುತ್ತಾ ಹೋಗುತ್ತವೆ, ಸಂತೋಷವನ್ನು ನೀಡುತ್ತಾ ಹೋಗುತ್ತವೆ. ಅದರಲ್ಲಿ ಅತ್ಯಂತ ಸಂತೋಷ ತರುವ ಹಬ್ಬವೆಂದರೆ ತಂಗಿಯು ಅಣ್ಣನಿಗೆ ರಾಖಿ ಕಟ್ಟುವ ರಕ್ಷಾಬಂಧನ ಹಬ್ಬ. ಅಣ್ಣನ ಕೈಗಂಟಿಗೆ ಬಣ್ಣದ ರಾಖಿ ಕಟ್ಟುವ ಮೂಲಕ ತಂಗಿ ತನ್ನ ಅಣ್ಣನು ತನಗೆ ದುಷ್ಟಶಕ್ತಿಗಳಿಂದ ಸುರಕ್ಷತೆಯನ್ನು ನೀಡುವಂತಾಗಲಿ ಎಂದು ಹಾರೈಸುತ್ತಾಳೆ. ರಕ್ಷಣೆಯನ್ನು ನೀಡುವ ಬಂಧನ- ಅದುವೇ 'ರಕ್ಷಾ ಬಂಧನ'

ಹೌದು, ಅಣ್ಣ ತಂಗಿಯ ಅನುಬಂಧ ಬೆಲೆ ಕಟ್ಟಲಾಗದ್ದು. ತಾಯಿಯ ಮಮತೆಯಂತೆಯೇ ಅಣ್ಣನ ರಕ್ಷಣೆ ಪ್ರೀತಿ ಹೆಣ್ಣಿಗೆ ಬಲವಿದ್ದಂತೆ. ಅನಾದಿ ಕಾಲದಿಂದಲೂ ಅಣ್ಣ ತಂಗಿಯ ಪವಿತ್ರ ಅನುಬಂಧ ಗಟ್ಟಿಯಾಗಿ ನೆಲೆ ನಿಂತಿರುವಂಥದ್ದು. ಸಹೋದರನ ಶ್ರೀರಕ್ಷೆ ಎಂದಿಗೂ ಸಹೋದರಿಯ ಮೇಲಿರಲಿ ಎಂಬ ಆಶಯದೊಂದಿಗೆ ರಕ್ಷಾ ಬಂಧನವನ್ನು ಭಾರತದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ...ಅಷ್ಟೇ ಏಕೆ ದೇವತೆಯರ ಕಾಲದಲ್ಲಿಯೂ ರಾಖಿ ಹಬ್ಬದ ಮಹತ್ವದ ಬಗ್ಗೆ ವಿಶ್ಲೇಷಿಸಲಾಗಿದೆ ಅಚ್ಚರಿವಾಯಿತಲ್ಲವೇ? ಹಾಗಾದರೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

Interesting story behind raksha bandhan

ಒಮ್ಮೆ ಇಂದ್ರನ ಅಮರಾವತಿಯ ಮೇಲೆ ರಾಕ್ಷಸನೊಬ್ಬ ದಾಳಿ ಮಾಡಿದನಂತೆ. ಆಗ ಇಂದ್ರನ ಪತ್ನಿಯಾದ ಶಚಿ ದೇವಿಯು ಸಹಾಯಕ್ಕಾಗಿ ವಿಷ್ಣುವಿನ ಮೊರೆ ಹೋದಾಗ, ವಿಷ್ಣು ಶಚಿ ದೇವಿಗೆ ಒಂದು ಹತ್ತಿಯ ದಾರವನ್ನು ನೀಡಿ, ಅದನ್ನು ಆಕೆಯ ಗಂಡನ ಕೈಗೆ ಕಟ್ಟುವಂತೆ ಹೇಳಿದನಂತೆ. ಆಕೆಯು ಹಾಗೆಯೇ ಮಾಡಿದಾಗ, ಇಂದ್ರನು ಯುದ್ಧದಲ್ಲಿ ರಾಕ್ಷಸನನ್ನು ಸೋಲಿಸದನಂತೆ. ಅಂದಿನಿಂದ ಈ ದಾರವನ್ನು ಕಟ್ಟುವ ರಕ್ಷಾ ಬಂಧನ ಪರಿಕಲ್ಪನೆಯು ಆರಂಭವಾಯಿತು. ರಾಖಿ ಹಬ್ಬದ ಸ್ಪೆಷಲ್-ಕೇಸರಿ ಸಂದೇಶ್ ಸ್ವೀಟ್

ಪುರಾಣಗಳಲ್ಲಿ ದ್ರೌಪದಿಯು ಶ್ರೀ ಕೃಷ್ಣನಿಗೆ ರಕ್ಷಾಬಂಧನವನ್ನು ಕಟ್ಟಿದಳಂತೆ. ಇದರ ಜೊತೆಗೆ ಪಾರ್ವತಿಯು ಸಹ ವಿಷ್ಣುವಿಗೆ ರಕ್ಷಾ ಬಂಧನವನ್ನು ಕಟ್ಟಿ ಆತನನ್ನು ತನ್ನ ಅಣ್ಣನಾಗಿ ಸ್ವೀಕರಿಸಿದಳಂತೆ. ಅದಕ್ಕೆ ಪ್ರತಿಯಾಗಿ ವಿಷ್ಣು ಪಾರ್ವತಿ ದೇವಿಗೆ ಅಪಾಯವೊದಗಿದಾಗ ಆಕೆಯನ್ನು ತಾನು ಕಾಪಾಡುವುದಾಗಿ ಅಭಯವನ್ನಿತ್ತನಂತೆ.

ಇನ್ನೊಂದು ಕಥೆಯ ಪ್ರಕಾರ ಬಲಿ ಚಕ್ರವರ್ತಿಯು ವಿಷ್ಣು ದೇವರನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ. ಬಲಿಯ ಅರಮನೆಯಲ್ಲಿ ಉಳಿಯಲು ವಿಷ್ಣು ದೇವರು ಬಯಸುತ್ತಾರೆ. ಆದರೆ ಲಕ್ಷ್ಮಿ ದೇವಿಗೆ ಇದು ಇಷ್ಟವಾಗುವುದಿಲ್ಲ ಮತ್ತು ಆಕೆ ವಿಷ್ಣು ದೇವರನ್ನು ಹಿಂಬಾಲಿಸಿಕೊಂಡು ಬಂದು ಬಲಿ ಚಕ್ರವರ್ತಿ ಮುಂದೆ ಬಂದು ನಿಲ್ಲುತ್ತಾರೆ.

ಬಲಿ ಚಕ್ರವರ್ತಿಯ ಭಕ್ತಿಯಿಂದ ಪ್ರಸನ್ನಳಾದ ಲಕ್ಷ್ಮಿ ದೇವಿಯು ಆತನನ್ನು ತನ್ನ ಸಹೋದರನೆಂದು ಸ್ವೀಕರಿಸಿ ರಾಖಿ ಕಟ್ಟುತ್ತಾಳೆ. ತನ್ನ ರಾಜ್ಯದಿಂದ ಏನು ಬೇಕಾದರೂ ಕೇಳಬಹುದೆಂದು ಬಲಿ ಚಕ್ರವರ್ತಿಯು ಲಕ್ಷ್ಮೀ ದೇವಿಗೆ ಹೇಳುತ್ತಾನೆ. ವಿಷ್ಣು ದೇವರು ವೈಕುಂಠಕ್ಕೆ ಮರಳಬೇಕೆಂದು ಲಕ್ಷ್ಮಿ ದೇವಿ ಕೇಳಿಕೊಳ್ಳುತ್ತಾಳೆ. ಇದಕ್ಕೆ ಬಲಿ ಚಕ್ರವರ್ತಿ ಒಪ್ಪಿಕೊಳ್ಳುತ್ತಾನೆ. ರಾಖಿ ಕಟ್ಟುವ ಸಂಪ್ರದಾಯವು ಈ ದಿನದಿಂದ ಆರಂಭವಾಯಿತೆಂದು ನಂಬಲಾಗಿದೆ.

English summary

Interesting story behind raksha bandhan

The traditional Hindu festival 'Raksha Bandhan' was came into origin about 6000 years back when Aryans created first civilization. Rakshabandhan is a mark of bonding between brothers and sisters. The word itself means a bond of protection which implies protection from both sides. It is also a mark of social bonding. Following are some historical evidences of Raksha Bandhan celebration from the Indian history.
X
Desktop Bottom Promotion