For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ 2020: ಭಗವಾನ್ ಗಣಪತಿ ಕುರಿತು ನಾವು ಅರಿಯದ ಸತ್ಯಕಥೆಗಳು

|

ಆಗಸ್ಟ್ 22ಕ್ಕೆ ಗಣೇಶ ಚತುರ್ಥಿ. ಗಣೇಶನ ಹಬ್ಬವಾಗಿರುವ ಈ ದಿನ ಗಣಪನನ ಹುಟ್ಟುಹಬ್ಬವೆಂದೇ ಖ್ಯಾತಿವೆತ್ತ ದಿನವಾಗಿದೆ. ವಿಘ್ನವಿನಾಶಕ, ಗಣಪತಿ, ಲಂಬೋದರ, ಗಣಪ ಹೀಗೆ ಭಕ್ತರಿಂದ ಬೇರೆ ಬೇರೆ ಹೆಸರುಗಳಿಂದ ಕರೆಯಿಸಿಕೊಂಡಿರುವ ಮೋದಕ ಪ್ರಿಯನಿಗೆ 2019ರ ಸೆಪ್ಟೆಂಬರ್ 2ರಂದು ಸೋಮವಾರ ಚತುರ್ಥಿಯಂದು ವಿಶೇಷ ಹಬ್ಬವನ್ನೇ ನಡೆಸಲಾಗುತ್ತದೆ.

ganesha festival

ಭಾರತದಾದ್ಯಂತ ಗಣಪನ ಹಬ್ಬವನ್ನು ತಿಂಗಳುಗಳ ಕಾಲ ಕೊಂಡಾಡಲಾಗುತ್ತದೆ. ಇನ್ನೇನು ಗಣಪನ ಬಗೆ ಬಗೆಯ ವಿಗ್ರಹಗಳು ಮಾರುಕಟ್ಟೆಗೆ ಬಂದಿಳಿದಿದೆ. ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೆ ಎಲ್ಲಾ ಬಗೆಯ ಗಣಪತಿ ಪೂಜಿಸುವವರಿಗೆ ದೊರೆಯಲಿದೆ.

ಯಾವುದೇ ಬಗೆಯ ಕಾರ್ಯವನ್ನು ಆರಂಭಿಸುವ ಮುನ್ನ ಆ ಕಾರ್ಯಕ್ಕೆ ವಿಘ್ನ ಬರದಿರಲಿ ಎಂದು ಗಣಪನನ್ನು ಪೂಜಿಸುತ್ತಾರೆ. ಅದಕ್ಕಾಗಿಯೇ ವಿಘ್ನ ವಿನಾಶಕನಿಗೆ ಪ್ರಥಮ ಪೂಜೆಯನ್ನು ನೆರವೇರಿಸುತ್ತಾರೆ. ಶಿವನ ವರವೇ ಗಣಪನಿಗೆ ದೊರೆತಿರುವ ಪ್ರಥಮ ಪೂಜೆಯಾಗಿದೆ. ಪಾರ್ವತಿಯ ಬೆವರಿನಿಂದ ಉತ್ಪನ್ನಗೊಂಡ ಬಾಲಕನನ್ನು ತನ್ನ ಮಹಾದ್ವಾರವನ್ನು ಕಾಯುವಂತೆ ಮತ್ತು ಯಾರೂ ಬಂದರೂ ಒಳಕ್ಕೆ ಬಿಡಬಾರದೆಂದು ಪಾರ್ವತಿ ಆಜ್ಞೆಯಿತ್ತು ಹೋಗಿರುತ್ತಾರೆ.

ಈ ಸಮಯದಲ್ಲಿ ಬಂದ ಶಿವನನ್ನೇ ಬಾಲಕ ತಡೆಯುತ್ತಾರೆ. ತನ್ನ ತಾಯಿಯ ಆಣತಿಯಂತೆ ತಾನು ಯಾರನ್ನೂ ಒಳಕ್ಕೆ ಬಿಡುವುದಿಲ್ಲವೆಂದು ಶಿವನನ್ನು ಬಾಲಕ ಅಡ್ಡಗಟ್ಟುತ್ತಾರೆ. ಇದರಿಂದ ಕೋಪಗೊಂಡ ಶಿವ ಬಾಲಕನ ತಲೆಯನ್ನು ಹತಮಾಡುತ್ತಾರೆ. ಸ್ವಲ್ಪ ಸಮಯದ ನಂತರ ಬಂದ ಪಾರ್ವತಿ ಬಾಲಕನ ರುಂಡವಿಲ್ಲದ ದೇಹವನ್ನು ಕಂಡು ಶಿವನ ಮೇಲೆ ಕೋಪಗೊಳ್ಳುತ್ತಾರೆ. ತನ್ನ ಆಣತಿಯಂತೆಯೇ ಬಾಲಕನು ದ್ವಾರವನ್ನು ಕಾಯುತ್ತಿದ್ದುದಾಗಿ ಪರಿಸ್ಥಿತಿಯನ್ನು ಮಾತೆ ಪತಿಗೆ ವಿವರಿಸುತ್ತಾರೆ.

ಗಣೇಶ ಚತುರ್ಥಿ: ಗಣೇಶನಿಗೆ ಪೂಜೆ ಮಾಡುವ ವಿಧಿವಿಧಾನಗಳು ಹೀಗಿರಲಿ ...

ವಿಷಯವನ್ನರಿತ ಶಿವನು ಬಾಲಕನ ರುಂಡದ ಬದಲಿಗೆ ಉತ್ತರದಲ್ಲಿ ಮಲಗಿರುವವರ ತಲೆಯನ್ನು ತರುವಂತೆ ಆಜ್ಞಾಪಿಸುತ್ತಾರೆ. ಆನೆಯ ತಲೆಯನ್ನು ಶಿವ ಗಣಗಳು ತರುತ್ತಾರೆ ಮತ್ತು ಆನೆಯ ತಲೆಯನ್ನೇ ಬಾಲಕನ ತಲೆಯ ಬದಲಿಗೆ ಕೂರಿಸುತ್ತಾರೆ. ಹೀಗೆ ಗಣಪ ಜನ್ಮತಾಳುತ್ತಾರೆ ಅಂತೆಯೇ ಶಂಕರ ಗಣಪನಿಗೆ ಪ್ರಥಮ ಪೂಜೆಯ ವರವನ್ನು ನೀಡುತ್ತಾರೆ. ಶಿವ ಮತ್ತು ಪಾರ್ವತಿಯರ ಪುತ್ರನಾಗಿ ಗಣಪತಿಯನ್ನು ಲೋಕವೇ ಕೊಂಡಾಡುತ್ತಿದೆ. ಇಂದಿನ ನಮ್ಮ ಲೇಖನದಲ್ಲಿ ಗಣಪನ ಕುರಿತಾದ ಮತ್ತಷ್ಟು ಮಹತ್ವಪೂರ್ಣ ವಿವರಗಳನ್ನು ನಾವು ತಿಳಿಸುತ್ತಿದ್ದು ಅದೇನೆಂಬುದನ್ನು ತಿಳಿದುಕೊಳ್ಳೋಣ.

ಪಾರ್ವತಿ ಸ್ನಾನಕ್ಕೆ ಹೋದ ಸಂದರ್ಭದಲ್ಲಿ ಪಾರ್ವತಿಯಿಂದ ಉತ್ಪನ್ನಗೊಂಡ ಬಾಲಕ ಗಣಪನು ದ್ವಾರವನ್ನು ಕಾಯುತ್ತಿದ್ದರು. ಶಿವನು ಬಂದಾಗ ಬಾಲಕ ತಾಯಿಯ ಆಣತಿಯಂತೆಯೇ ತಾನು ಯಾರನ್ನೂ ಒಳಕ್ಕೆ ಬಿಡುವುದಿಲ್ಲವೆಂದು ಹೇಳುತ್ತಾರೆ. ಗಣಪನಿಗೆ ಶಿವ ಯಾರೆಂಬುದು ತಿಳಿದಿರಲಿಲ್ಲ. ಅದೇ ರೀತಿ ಗಣಪನು ಯಾರೆಂಬುದು ಶಿವನೂ ಅರಿತಿರಲಿಲ್ಲ. ಕೋಪಗೊಂಡ ಶಿವನು ಬಾಲಕನ ತಲೆಯನ್ನು ಕಡಿಯುತ್ತಾರೆ. ತನ್ನ ತಪ್ಪನ್ನು ಅರಿತುಕೊಂಡ ಮಹಾದೇವ ಬಾಲಕನ ಕಡಿದ ತಲೆಯ ಬದಲಿಗೆ ಆನೆಯ ತಲೆಯನ್ನು ಇರಿಸುತ್ತಾರೆ. ಬಾಲಕನಿಗೆ ಮನುಷ್ಯ ದೇಹ ಮತ್ತು ಆನೆಯ ತಲೆ ಇರುತ್ತದೆ. ಶಿವನು ಗಣಪನಿಗೆ ಪ್ರಥಮ ಪೂಜೆ ಮತ್ತು ವಿಘ್ನವನ್ನು ನಿವಾರಿಸುವ ವರವನ್ನು ಕರುಣಿಸುತ್ತಾರೆ.

ಮಹಾಭಾರತ ಬರೆದರು

ಮಹಾಭಾರತ ಬರೆದರು

ಗಣೇಶನು ಮಹಾಭಾರತವನ್ನು ಬರೆದರು ಎಂದು ನಂಬಲಾಗಿದೆ. ವೇದವ್ಯಾಸರು ಮಹಾಭಾರತವನ್ನು ಓದುತ್ತಿದ್ದಾಗ ಅದನ್ನು ಗಣೇಶನು ಹಾಗೆಯೇ ಬರೆದರು. ವ್ಯಾಸರು ಅದನ್ನು ನಿರಂತರವಾಗಿ ಓದುತ್ತಾರೆ ಮತ್ತು ಅದೇ ರೀತಿ ವ್ಯಾಸರು ಓದಿದ್ದನ್ನು ಗಣಪನು ಅರ್ಥಮಾಡಿಕೊಳ್ಳಬೇಕು ಮತ್ತು ತದನಂತರವೇ ಅದನ್ನು ಲೇಖನಿಗೆ ಇಳಿಸಬೇಕು ಎಂಬ ಷರತ್ತನ್ನು ಗಣಪ ಮತ್ತು ವ್ಯಾಸರು ವಿಧಿಸಿಕೊಂಡಿದ್ದರು.

ಇಂಡೋನೇಷ್ಯಾ ಕರೆನ್ಸಿಯಲ್ಲಿ ಅವರ ಚಿತ್ರ

ಇಂಡೋನೇಷ್ಯಾ ಕರೆನ್ಸಿಯಲ್ಲಿ ಅವರ ಚಿತ್ರ

ಇಂಡೋನೇಷ್ಯಾದ 20,000 ನೋಟಿನಲ್ಲಿ ಕೂಡ ಗಣೇಶನ ಚಿತ್ರವನ್ನು ಮುದ್ರಿಸಲಾಗಿದೆ. ಇಂಡೋನೇಷ್ಯಾದಲ್ಲಿ 4 ಮಿಲಿಯನ್ ಹಿಂದೂಗಳಿದ್ದಾರೆ.

ಬೌದ್ಧರೂ ಗಣಪನನ್ನು ಪೂಜಿಸುತ್ತಾರೆ

ಬೌದ್ಧರೂ ಗಣಪನನ್ನು ಪೂಜಿಸುತ್ತಾರೆ

ಬೌದ್ಧ ಧರ್ಮದಲ್ಲಿ ಕೂಡ ಗಣಪನನ್ನು ಪೂಜಿಸುತ್ತಾರೆ. ನೃತ್ಯ ಭಂಗಿಯಲ್ಲಿರುವ ಗಣಪನನ್ನು ಅವರು ಪೂಜಿಸುತ್ತಾರೆ.

ಗಣೇಶನ ಕುಟುಂಬ

ಗಣೇಶನ ಕುಟುಂಬ

ಗಣಪನಿಗೆ ರಿಧಿ ಮತ್ತು ಸಿದ್ಧಿ ಎಂಬ ಇಬ್ಬರು ಪತ್ನಿಯರಿದ್ದಾರೆ. ರಿಧಿ ಎಂಬುದು ಏಳಿಗೆಯಾದರೆ ಸಿಧಿ ಎಂಬುದು ಯಶಸ್ಸಾಗಿದೆ. ಶುಭ ಮತ್ತು ಲಾಭ ಎಂಬ ಇಬ್ಬರು ಪುತ್ರರೂ ಇವರಿಗಿದ್ದಾರೆ. ಶುಭ ಎಂಬುದು ಶುಭಕರವಾಗಿದ್ದು ರಿಧಿ ಮತ್ತು ಗಣಪನ ಪುತ್ರರಾಗಿದ್ದಾರೆ ಲಾಭ ಸಿಧಿ ಮತ್ತು ಗಣೇಶನ ಪುತ್ರರಾಗಿದ್ದಾರೆ.

ಗಣೇಶನ ಮುರಿದ ಸೊಂಡಿಲು

ಗಣೇಶನ ಮುರಿದ ಸೊಂಡಿಲು

ಗಣಪನಿಗೆ ಆನೆಯ ತಲೆ ಇದೆ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಆದರೆ ಅವರು ಮುರಿದ ಸೊಂಡಿಲನ್ನು ಹೊಂದಿದ್ದಾರೆ ಕೂಡ. ಒಮ್ಮೆ ಗಣೇಶನು ಕೈಲಾಸದ ಆವರಣದ ಮುಂಬಾಗಿಲನ್ನು ಕಾಯುತ್ತಿದ್ದರು. ಆ ಸಮಯದಲ್ಲಿ ಪರಶುರಾಮ ಯೋಧ ಸನ್ಯಾಸಿ ಅಲ್ಲಿಗೆ ಬಂದರು. ವಿಷ್ಣುವಿನ ಅವತಾರವಾಗಿರುವ ಪರಶುರಾಮರು ಶೀಘ್ರ ಕೋಪಿಗಳಾಗಿದ್ದರು. ಗಣೇನು ಅವರನ್ನು ಒಳಕ್ಕೆ ಹೋಗಲು ಬಿಡಲಿಲ್ಲ. ಪರಶುರಾಮನು ತಮ್ಮ ಆಯುಧವಾದ ಕೊಡಲಿಯನ್ನು ಗಣೇಶನ ಮೇಲೆ ಎಸೆದರು. ಕೊಡಲಿಯನ್ನು ತನ್ನ ತಂದೆ ಶಿವನೇ ಅವರಿಗೆ ನೀಡಿದ್ದಾರೆ ಎಂಬುದು ಗಣಪನಿಗೆ ತಿಳಿದಿತ್ತು, ಆದ್ದರಿಂದ ಗಣಪನು ಅದನ್ನು ಖುಷಿಯಿಂದ ಒಪ್ಪಿಕೊಂಡರು ಹೀಗೆ ಗಣಪನ ಸೊಂಡಿಲು ಮುರಿಯಿತು.

ಗಣಪನಿಗೆ ಇಲಿ ವಾಹನ ಹೇಗಾಯಿತು?

ಗಣಪನಿಗೆ ಇಲಿ ವಾಹನ ಹೇಗಾಯಿತು?

ಒಮ್ಮೆ ಗಣಪ ಮತ್ತು ಕಾರ್ತಿಕೇಯರಿಗೆ ವಾಗ್ವಾದ ನಡೆಯಿತು. ಇಡಿಯ ವಿಶ್ವವನ್ನು ಯಾರು ಬೇಗ ಸವಾರಿ ಮಾಡುತ್ತಾರೆಯೋ ಅವರೇ ಜಯಶಾಲಿಗಳು ಎಂದು ತೀರ್ಮಾನಿಸಿಕೊಳ್ಳುತ್ತಾರೆ. ಕೂಡಲೇ ಕಾರ್ತಿಕೇಯ ತನ್ನ ವಾಹನವಾದ ನವಿಲನ್ನು ಏರಿ ವಿಶ್ವವನ್ನು ಸುತ್ತಲು ಪ್ರಾರಂಭಿಸುತ್ತಾರೆ ಆದರೆ ಗಣಪನಿಗೆ ಯಾವುದೇ ವಾಹನ ಇರುವುದಿಲ್ಲ. ತನ್ನ ತಂದೆ ಶಿವನಲ್ಲಿ ಗಣಪನು ಯಾಚಿಸಿದಾಗ ಶಿವನು ಗಣಪನಿಗೆ ಇಲಿಯನ್ನು ನೀಡುತ್ತಾರೆ. ಆದರೆ ಇಲಿಯ ಮೇಲೆ ಕೂತು ತಾನು ಪ್ರಯಾಣಿಸುವುದು ಕಷ್ಟವೆಂಬುದು ಗಣಪನಿಗೆ ತಿಳಿದಿರುತ್ತದೆ. ಮಗುವಿಗೆ ತನ್ನ ತಂದೆ ತಾಯಿಯೇ ಜಗತ್ತಾಗಿರುವುದರಿಂದ ಗಣಪನು ತನ್ನ ತಂದೆ ತಾಯಿಗೆ ಸುತ್ತು ಬರುತ್ತಾರೆ. ಇಲಿಯ ಮೇಲೆ ಸವಾರಿ ಮಾಡಿಕೊಂಡು ತನ್ನ ತಂದೆ ತಾಯಿಗೆ ಗಣಪನು ಸುತ್ತು ಹಾಕುತ್ತಾರೆ ಮತ್ತು ಸ್ಪರ್ಧೆಯನ್ನು ಗೆಲ್ಲುತ್ತಾರೆ.

ಗಜಾನನ ಎಂದು ಏಕೆ ಕರೆಯುತ್ತಾರೆ

ಗಜಾನನ ಎಂದು ಏಕೆ ಕರೆಯುತ್ತಾರೆ

ಗಜ ಎಂದರೆ ಆನೆ. ಆನನ ಎಂದರೆ ತಲೆಯಾಗಿದೆ. ಆದ್ದರಿಂದ ಗಣಪನನ್ನು ಗಜಾನನ ಎಂದು ಕರೆಯುತ್ತಾರೆ. ಆನೆಯ ತಲೆಯನ್ನು ಹೊತ್ತುಕೊಂಡಿರುವ ಭಗವಾನ್ ಗಣೇಶನಾಗಿದ್ದಾರೆ. ಗ ಎಂಬುದು ಗತಿಯಾಗಿದೆ, ಜ ಎಂಬುದು ಜನ್ಮದಿಂದ ಬಂದಿದೆ, ಅಂದರೆ ಜನ್ಮವಾಗಿದೆ. ಪ್ರತಿಯೊಂದು ಅವರಿಂದ ಜನ್ಮತಾಳಿದೆ ಮತ್ತು ಪ್ರತಿಯೊಂದು ಅವರನ್ನು ಸಂಧಿಸುತ್ತಿದೆ ಎಂದಾಗಿದೆ.

ಗಣಪತಿ ಎಂದು ಅವರು ಏಕೆ ಪ್ರಸಿದ್ಧರಾಗಿದ್ದಾರೆ

ಗಣಪತಿ ಎಂದು ಅವರು ಏಕೆ ಪ್ರಸಿದ್ಧರಾಗಿದ್ದಾರೆ

ಅವರನ್ನು ಗಣಪತಿ ಎಂದು ಕರೆಯುತ್ತಾರೆ. ಗಣ ಎಂಬುದು ಇನ್ನೊಂದು ಪದವಾಗಿದೆ ಅಂದರೆ ವರ್ಗಗಳಿಗೆ ಅವರು ನಾಯಕರು ದೇವರು ಎಂದಾಗಿದೆ. ವಿಶ್ವದಲ್ಲಿರುವ ಪ್ರತಿಯೊಂದು ಐದು ಅಂಶಗಳಿಂದ ಸಂರಕ್ಷಿಸಲಾಗಿದೆ ಮತ್ತು ಯಾವ ಅರ್ಥದಲ್ಲಿ ಎಂಬುದನ್ನು ವರ್ಗೀಕರಿಸಲಾಗಿದೆ. ಈ ಎಲ್ಲಾ ವರ್ಗಗಳಿಗೆ ಗಣಪತಿ ಅದಿದೇವತೆಯಾಗಿದ್ದಾರೆ. ಅವರಿಂದಲೇ ಪ್ರತಿಯೊಂದು ಜನ್ಮತಾಳಿದೆ.

ಅಂತೆಯೇ ಪಾರ್ವತಿಯನ್ನು ಕಾಯುವವರನ್ನು ಗಣಗಳು ಎಂದು ಕರೆಯಲಾಗಿದೆ. ಶಿವನೊಂದಿಗೆ ಗಣಗಳು ಯುದ್ಧಕ್ಕೆ ಹೋದಾಗ ಪಾರ್ವತಿಯನ್ನು ಕಾಯುವವರು ಗಣಪತಿ ಆಗಿದ್ದಾರೆ. ಇದನ್ನರಿತ ಶಿವನೇ ಗಣಪನಿಗೆ ಗಣೇಶ ಗಣಪತಿ ಎಂದು ನಾಮಕರಣ ಮಾಡಿದ್ದಾರೆ. ಎಲ್ಲಾ ಗಣಗಳಿಗೆ ಅಧಿಪತಿ ಎಂದಾಗಿದೆ.

English summary

Ganesh Chaturthi 2020 : Interesting Facts About Lord Ganesha That You Have Never Heard

Lord Ganesha is the embodiment of perfection. He is the one who not only removes the hindrances from the lives of his devotees, but also guides them in the right direction.We know that he was born out of the sandalwood paste that Goddess Lakshmi had applied on her body. We also know that he is the son of Lord Shiva. However, here are a few more interesting facts about Lord Ganesha, that you might not know of. Take a reading.
X
Desktop Bottom Promotion