For Quick Alerts
ALLOW NOTIFICATIONS  
For Daily Alerts

ಪಿತೃಪಕ್ಷದ ಇಂದಿರಾ ಏಕಾದಶಿ ವ್ರತ ತುಂಬಾ ಮಹತ್ವವಾದದ್ದು, ಏಕೆ?

|

ಹಿಂದೂ ಧರ್ಮದಲ್ಲಿ ಅಶ್ವಿನ್ ಮಾಸದಲ್ಲಿ ಗತಿಸಿದ ಹಿರಿಯರಿಗೆ ಭಕ್ತಿಯಿಂದ ಶ್ರಾದ್ಧವನ್ನು ಮಾಡಲಾಗುವುದು. ಈ ದಿನಗಳನ್ನು ಪಿತೃಪಕ್ಷವೆಂದು ಕರೆಯಲಾಗುವುದು. ಪಿತೃಪಕ್ಷದ 11ನೇ ದಿನ ತುಂಬಾ ವಿಶೇಷವಾದದ್ದು. ಈ ದಿನವನ್ನು ಇಂದಿರಾ ಏಕಾದಶಿಯೆಂದು ಆಚರಿಸಲಾಗುವುದು. ಈ ವರ್ಷ ಅಕ್ಟೋಬರ್ 13ನೇ ತಾರೀಕು ಇಂದಿರಾ ಏಕಾದಶಿಯನ್ನು ಆಚರಿಸಲಾಗುವುದು.

ಪಿತೃಪಕ್ಷದಲ್ಲಿ 2 ಏಕಾದಶಿಗಳು ಬರುತ್ತವೆ. ವರ್ಷಕ್ಕೆ 22 ಏಕಾದಶಿಗಳು ಬರುತ್ತವೆ, ಮಲ ಮಾಸ ಬಂದರೆ ಮಲ ಮಾಸದ ಎರಡು ಏಕಾದಶಿಗಳು ಸೇರಿದರೆ ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ.

ಒಂದೊಂದು ಏಕಾದಶಿಗೂ ಒಂದೊಂದು ವಿಶೇಷವಿದೆ. ಇಂದಿರಾ ಏಕಾದಶಿಯನ್ನು ಮೋಕ್ಷ ಪ್ರಾಪ್ತಿಗಾಗಿ ಮಾಡಲಾಗುವುದು. ಮರಣವೊಂದಿದ ನಮ್ಮ ಹಿರಿಯರಿಗೆ ಮೋಕ್ಷ ಸಿಗಲು ಈ ಏಕಾದಶಿಯನ್ನು ಆಚರಿಸಲಾಗುವುದು. ಇಂದಿರಾ ಏಕಾದಶಿಯ ಕುರಿತು ಭಗವಾನ್ ಶ್ರೀ ಕೃಷ್ಣ ಹೇಳಿದ ಕತೆ ಹೀಗಿದೆ:

ಶ್ರೀಕೃಷ್ಣ ಹೇಳಿದ ಇಂದಿರಾ ಏಕಾದಶಿಯ ಕತೆ

ಶ್ರೀಕೃಷ್ಣ ಹೇಳಿದ ಇಂದಿರಾ ಏಕಾದಶಿಯ ಕತೆ

ಸತ್ಯಯುಗದಲ್ಲಿ ಮಹಿಷ್ಮತಿ ಎಂಬ ಹೆಸರಿನ ನಗರದಲ್ಲಿ ಇಂದ್ರಸೇನ ಎಂಬ ರಾಜನಿದ್ದ. ಈ ರಾಜ ಧರ್ಮ ಪಾಲನೆಯಲ್ಲಿ ಹೆಸರುವಾಸಿಯಾಗಿದ್ದ. ಅವನ ಆಡಳಿತದಲ್ಲಿ ಪ್ರಜೆಗಳು ತುಂಬಾ ಸುಖವಾಗಿದ್ದರು. ರಾಜ್ಯದಲ್ಲಿ ಧರ್ಮ-ಕರ್ಮಗಳ ಕಾರ್ಯವನ್ನು ತುಂಬ ಶ್ರದ್ಧೆಯಿಂದ ಮಾಡುತ್ತಿದ್ದ.

ಹೀಗಿರುವಾಗ ಒಮ್ಮೆ ನಾರದದರು ಇಂದ್ರಸೇನನ ದರ್ಬಾರ್‌ಗೆ ಬರುತ್ತಾರೆ. ಆಗ ನಾರದ ಮುನಿಗಳಿಗೆ ವಂದಿಸಿದ ಇಂದ್ರಸೇನ ಅವರ ಬರುವಿಕೆಯ ಉದ್ದೇಶವೇನು ಎಂದು ಕೇಳುತ್ತಾನೆ. ಆಗ ನಾರದರು ನಾನು ನಿನ್ನ ಮರಣವೊಂದಿದ ತಂದೆಯ ಸಂದೇಶ ಕೊಂಡು ತಂದಿದ್ದೇನೆ ಎಂದು ಹೇಳುತ್ತಾರೆ. ನಿನ್ನ ತಂದೆ ತನ್ನ ಪಾಪ ಕರ್ಮದ ಫಲವಾಗಿ ಯಮನ ಬಳಿ ಕಷ್ಟವನ್ನು ಅನುಭವಿಸುತ್ತಿದ್ದಾನೆ ಎಂದು ಹೇಳುತ್ತಾನೆ. ತಂದೆಯ ಸ್ಥಿತಿ ತಿಳಿದು ಇಂದ್ರಸೇನನಿಗೆ ತುಂಬಾ ಬೇಸರವಾಗುತ್ತೆ. ನಾರದರ ಬಳಿ ಇದಕ್ಕೆ ಪರಿಹಾರವೇನು ಎಂದು ಹೇಳಿದಾಗ ನಾರದರು ಅಶ್ವಿನಿ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಆಚರಿಸಿದರೆ ಅದರ ಪುಣ್ಯಫಲವಾಗಿ ನಿನ್ನ ತಂದೆಗೆ ಮೋಕ್ಷ ಪ್ರಾಪ್ತಿಯಾಗುವುದು ಹೇಳುತ್ತಾರೆ. ಇಂದ್ರಸೇನ ಏಕಾದಶಿ ವ್ರತ ಪಾಲಿಸುತ್ತಾನೆ, ಇದರಿಂದ ತಂದೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಅಲ್ಲದೆ ಇಂದ್ರಸೇನ ಕೂಡ ಮರಣದ ನಂತರ ವೈಕುಂಠವನ್ನು ಸೇರುತ್ತಾನೆ.

ಏಕಾದಶಿ ಪ್ರಾರಂಭ ಮತ್ತು ಅಂತ್ಯ

ಏಕಾದಶಿ ಪ್ರಾರಂಭ ಮತ್ತು ಅಂತ್ಯ

ಏಕಾದಶಿ ತಿಥಿ ಪ್ರಾರಂಭ: ಅಕ್ಟೋಬರ್ 13, 2020 ಬೆಳಗ್ಗೆ 4:13

ಏಕಾದಶಿ ತಿಥಿ ಅಂತ್ಯ: ಅಕ್ಟೋಬರ್ 14, 2020, ಬೆಳಗ್ಗೆ 3: 16

ಪಾರಣ ಸಮಯ: ಅಕ್ಟೋಬರ್ 14 ಮಧ್ಯಾಹ್ನ 1:17ರಿಂದ 3:44ವರೆಗೆ

ಇಂದಿರಾ ಏಕಾದಶಿಯ ಪೂಜಾ ವಿಧಾನಗಳು ಹೇಗೆ?

ಇಂದಿರಾ ಏಕಾದಶಿಯ ಪೂಜಾ ವಿಧಾನಗಳು ಹೇಗೆ?

ಇಂದಿರಾ ಏಕಾದಶಿಯನ್ನು ದಶಮಿಯ ದಿನದ ಸಾಯಂಕಾಲ ಪ್ರಾರಂಭಿಸಬೇಕು. ಈ ವ್ರತ ಮಾಡುವವರು ದಶಮಿ ತಿಥಿ ಸಂಜೆಯಿಂದ ಯಾವುದೇ ಆಹಾರ ಸೇವಿಸಬಾರದು. ಮಾರನೇಯ ದಿನ ಮುಂಜಾನೆ ದ್ದು ನಿತ್ಯಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ, ಶ್ರದ್ಧೆಯಿಂದ ವ್ರತದ ಸಂಕಲ್ಪ ತೆಗೆದುಕೊಳ್ಳಬೇಕು.

ವಿಷ್ಣು ದೇವ ನಾನು ನಿನಗೆ ಶರಣಾಗುತ್ತೇನೆ, ನನ್ನನ್ನು ರಕ್ಷಿಸಿ, ಈ ವ್ರತದ ಪುಣ್ಯವನ್ನು ನನ್ನ ಪಿತೃಗಳಿಗೆ ನೀಡು ಎಂದು ಕೇಳಿಕೊಳ್ಳಲಾಗುವುದು.

ನಂತರ ವಿಷ್ಣು ಸಾಲಿಗ್ರಾಮಕ್ಕೆ ಪೂಜೆ ಮಾಡಿ, ಬ್ರಾಹ್ಮಣರಿಗೆ ಊಟ, ಉಪಚಾರ ಮಾಡಿ, ದಾನವನ್ನು ಮಾಡಬೇಕು. ವ್ರತ ಮುಗಿದ ಬಳಿಕ ಭೋಜನ ಮಾಡಬಹುದು.

ಇಂದಿರಾ ಏಕಾದಶಿಯ ಮಹತ್ವ

ಇಂದಿರಾ ಏಕಾದಶಿಯ ಮಹತ್ವ

ಇಂದಿರಾ ಏಕಾದಶಿ ಆಚರಣೆ ಮಾಡುವುದರಿಂದ ಪಿತೃರಿಗೆ ಮೋಕ್ಷ ಸಿಗುವುದು ಮಾತ್ರವಲ್ಲ, ಈ ವ್ರತ ಮಾಡಿದವರಿಗೂ ಒಳಿತು ಉಂಟಾಗುವುದು. ಮೋಕ್ಷ ಪ್ರಾಪ್ತಿ ಹಾಗೂ ಪುಣ್ಯ ಪ್ರಾಪ್ತಿಯಿಂದಾಗಿ ಜೀವನದಲ್ಲಿ ಸುಖ, ಸಮೃದ್ಧಿ, ಧನ ಪ್ರಾಪ್ತಿಯಾಗುವುದು.

English summary

Indira Ekadashi Vrat 2020: Date, Time and Significance in kannada

Here are date and significance of Indira Ekadashi, Read on...
X