For Quick Alerts
ALLOW NOTIFICATIONS  
For Daily Alerts

ಸ್ವಾತಂತ್ರ್ಯ ದಿನಾಚರಣೆ 2020: ನಾವು ಮರೆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು

|

ಭಾರತವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗಿ ಆಗಸ್ಟ್ 15, 2020ಕ್ಕೆ 74 ವರ್ಷಗಳಾಗುತ್ತದೆ. ನಾವೆಲ್ಲಾ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಅನೇಕ ಮಹಾನ್‌ರ ತ್ಯಾಗದ ಫಲ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ. ಪ್ರತೀವರ್ಷ ಆಗಸ್ಟ್ 15 ಸ್ವಾತಂತ್ರ್ಯಾ ದಿನಾಚರಣೆಯನ್ನು ತುಂಬಾ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ಆ ದಿನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು , ಮಹಾನ್‌ರನ್ನು ಸ್ಮರಿಸಲಾಗುವುದು ಹಾಗೂ ದೇಶವನ್ನು ಮತ್ತಷ್ಟು ಪ್ರಬಲವಾಗಿಸಬೇಕೆಂಬ ಛಲ ಪ್ರತಿಯೊಬ್ಬ ಭಾರತೀಯರಲ್ಲಿ ಮೂಡುವುದು.

Independence Day 2020: Do you remember this Freedom Fighter Alluri Sitaram Raju

ಈ ವರ್ಷ ಕೋವಿಡ್-19 ಎಂಬ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತೀ ವರ್ಷದಂತೆ ಆಚರಿಸಲು ಸಾಧ್ಯವಾಗದೇ ಇರಬಹುದು, ಆದರೆ ಆ ದಿನ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸೋಣ, ಮಕ್ಕಳಿಗೆ ಅವರ ತ್ಯಾಗದ ಬಗ್ಗೆ ಹೇಳೋಣ.

ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರನ್ನು ಹೇಳುವಾಗ ಮಹಾತ್ಮಗಾಂಧಿ, ಸುಭಾಶ್‌ಚಂದ್ರಬೋಸ್, ಕಿತ್ತೂರ್ ರಾಣಿ ಚೆನ್ನಮ್ಮ ಹೀಗೆ ಪ್ರಮುಖ ನಾಯಕರ ಹೆಸರನ್ನುಗಳನ್ನಷ್ಟೇ ಹೇಳುತ್ತೇವೆ. ಕೆಲವೊಂದು ಮಹಾನ್‌ರ ತ್ಯಾಗವನ್ನು ಮರತೇ ಬಿಟ್ಟಿದ್ದೇವೆ ಎಂದೇ ಹೇಳಬಹುದು. ಕನ್ನಡ ಬೋಲ್ಡ್ ಸ್ಕೈ ನಾವೆಲ್ಲಾ ಮರೆತು ಹೋಗಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಪ್ರಯತ್ನ ಮಾಡಿದ್ದೇವೆ, ಈ ಲೇಖನದಲ್ಲಿ ನಾವು ಅಲ್ಲೂರಿ ಸೀತಾರಾಮ್ ರಾಜು ಅವರ ಸಾಹಸ, ತ್ಯಾಗ, ದೇಶ ಪ್ರೇಮದ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಅಲ್ಲೂರಿ ಸೀತಾರಾಮ್ ರಾಜು

ಆದಿವಾಸಿ ಜನರ ಅಪ್ರತಿಮ ನಾಯಕ. ಭಾರತದ ಸ್ವಾತಂತ್ರ್ಯಕ್ಕಾಗಿ ಹಾಗೂ ಆದಿವಾಸಿ ಜನರ ಹಕ್ಕುಗಳಿಗೆ ತನ್ನ ಪ್ರಾಣವನ್ನು ತೆತ್ತ ಕ್ರಾಂತಿಕಾರಿ ಹೋರಾಟಗಾರ. ಆದಿವಾಸಿಗಳು ತಮ್ಮದೇ ಆದ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವಂಥ ಜನಾಂಗದವರು. ಆದಿವಾಸಿಗಳ ಹಕ್ಕುಗಳ ಬಗ್ಗೆ ಮೊದಲ ಬಾರಿಗೆ ಧ್ವನಿ ಎತ್ತಿದವರೇ ಅಲ್ಲೂರಿ ಸೀತಾರಾಮ್ ರಾಜು. ಇವರು ಅಪ್ಪಟ ದೇಶಪ್ರೇಮಿ, ಇವರನ್ನು ಜನರು ಪ್ರೀತಿ ಹಾಗೂ ಗೌರವದಿಂದ ಮಾನ್ಯಂ ವೀರುಡು' ಎಂದೇ ಕರೆಯುತ್ತಿದ್ದರು.

ಇಂದಿನ ಬಸ್ತಾರ್ ಅರಣ್ಯ ಪ್ರದೇಶವೆಂದು ಕರೆಯುವ ಆಂಧ್ರ ಗಡಿ ಭಾಗದ ಅರಣ್ಯ ಸೇರಿದಂತೆ ಮಧ್ಯಪ್ರದೇಶ, ಒಡಿಶಾ ಬುಡಕಟ್ಟು ಜನಾಂಗದ ಪರವಾಗಿ 1920ರಲ್ಲಿ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿ ಇದೇ ಕಾರಣಕ್ಕಾಗಿ ಬ್ರಿಟಿಷರಿಂದ ಹತ್ಯೆಯಾದ ಹುತಾತ್ಮ ಈ ಅಲ್ಲೂರಿ ಸೀತಾರಾಮ ರಾಜು.

ತಂದೆ ಕಲಿಸಿದ ದೇಶಭಕ್ತಿ

ಅಲ್ಲೂರಿ ಸೀತಾರಾಮ್‌ ರಾಜು ತಂದೆ ದೇಶಭಕ್ತರಾಗಿದ್ದರು, ಮಗನಿಗೆ ದೇಶಪ್ರೇಮದ ಪಾಠ ಹೇಳಿ ಕೊಡುತ್ತಾ ಬೆಳೆಸಿದರು. ಇವರೊಮ್ಮೆ ಪುಟ್ಟ ಬಾಲಕನಾಗಿದ್ದಾಗ ಆಂಗ್ಲ ಅಧಿಕಾರಿಗೆ ಸೆಲ್ಯೂಟ್ ಹೊಡೆದಿದ್ದನ್ನು ನೋಡಿದ ಅವರ ತಂದೆ ಮಗನಿಗೆ ಏಟು ಕೊಟ್ಟು ಇನ್ನು ಮುಂದೆ ನೀನು ಯಾವತ್ತೂ ಆಂಗ್ಲರಿಗೆ ಸಲಾಂ ಹೇಳಬಾರದು ಎಂದು ಹೇಳಿದ್ದರು. ಹೀಗೆ ಚಿಕ್ಕ ಪ್ರಾಯದಲ್ಲಿಯೇ ಬ್ರಿಟಿಷರ ವಿರುದ್ಧ ದ್ವೇಷದ ಮನೋಭಾವವನ್ನು ಇವರಲ್ಲಿ ಮೂಡಿಸಿ, ದೇಶಪ್ರೇಮವನ್ನು ಬೆಳೆಸಿದ್ದರು.

ಅಲ್ಲೂರಿ ಮೆಟ್ರಿಕ್ ಓದುತಿದ್ದಾಗಲೇ ಕ್ರಾಂತಿಕಾರಿ ವಿಚಾರಗಳಿಂದ ಪ್ರಭಾವಿತರಾಗಿದ್ದರು, ಕಾಲೇಜು ಶಿಕ್ಷಣದ ಮೂಲಕ ದೇಶ ಪರ್ಯಟನೆಯಲ್ಲಿ ತೊಡಗಿದಾಗ ಅವರಿಗೆ ಅನೇಕ ಕ್ರಾಂತಿಕಾರಿ ನಾಯಕರ ಪರಿಚಯವಾಯ್ತು. ಹೀಗಾಗಿ ದೇಶ ಪರ್ಯಟನೆ ಮುಗಿಸಿ ಹಿಂತಿರುಗಿದ ಅವರು ಕ್ರಾಂತಿಕಾರಿ ಹೋರಾಟಕ್ಕೆ ಇಳಿದರು ಇದರ ಜೊತೆಗೆ ಧಾರ್ಮಿಕ ಪ್ರವೃತ್ತಿ ಹುಟ್ಟಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂಬ ಇಚ್ಛೆ ಪ್ರಬಲವಾಗಿತ್ತು. ತಾನು ಸನ್ಯಾಸಾಶ್ರಮ ಸ್ವೀಕರಿಸಿ ತನ್ನ ಜೀವನವನ್ನು ದೇಶಸೇವೆ, ಜನಸೇವೆಗಳಲ್ಲಿ ತೊಡಗಿಸಬೇಕೆಂದು ಪ್ರತಿಜ್ಞೆ ಮಾಡಿದರು.

ಈ ದೇಶ ಅದರ ಸಂಸ್ಕೃತಿ ಇವುಗಳ ಕುರಿತು ಮತ್ತಷ್ಟು ಅರಿಯಲು ಶ್ರೇಷ್ಠ ಗ್ರಂಥಗಳ ಅಧ್ಯಯನ ಮಾಡಿದರು.ಬಿಲ್ವಿದ್ಯೆ, ಕುದುರೆ ಸವಾರಿಗಳಲ್ಲಿ ಪ್ರವೀಣನಾದರು. ಇದೇ ವೇಳೆಗೆ ಬ್ರಿಟಿಷರು ಆದಿವಾಸಿ ಬುಡಕಟ್ಟು ಜನಾಂಗಗಳ ವಿರುದ್ಧಅರಣ್ಯ ಕಾಯ್ದೆ ಜಾರಿಗೆ ತಂದರು. ಇದನ್ನು ವಿರೋಧಿಸಿ ಅಲ್ಲೂರಿ ಕಾನೂನು ಹೋರಾಟಕ್ಕೆ ಸಿದ್ಧರಾದರು. ಬ್ರಿಟಿಷರ ವಿರುದ್ಧ ಪ್ರತಿಭಟಿಸುವ ಸಲುವಾಗಿ ಆದಿವಾಸಿಗಳನ್ನು ಸಂಘಟಿಸಿ ಹೋರಾಟ ನಡೆಸಿದರು. ಈ ಕಾರಣದಿಂದಾಗಿ ಮನ್ಯಂ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿದ್ದ ಕೋಯಾ ಹಾಗೂ ಚೆಂಚು ಗುಡ್ಡಗಾಡು ಜನಾಂಗದವರ ಆರಾಧ್ಯ ದೈವವೇ ಆದರು. ಈ ಜನಾಂಗದಲ್ಲಿ ಬೇರು ಬಿಟ್ಟಿದ್ದ ನರಬಲಿ ಪದ್ಧತಿ ಮತ್ತು ಅನೇಕ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಿದ್ದಲ್ಲದೆ, ಈ ಜನಾಂಗವನ್ನು ಮದ್ಯದ ದಾಸ್ಯದಿಂದ ಮುಕ್ತಿಗೊಳಿಸಿದರು.

ಆದಿವಾಸಿಗಳ ರಕ್ಷಣೆಗೆ ಪಣ ತೊಟ್ಟರು

ಆದಿವಾಸಿಗಳ ಮೇಲೆ ಆಂಗ್ಲರು ಮಾಡುತ್ತಿದ್ದ ದಬ್ಬಾಳಿಕೆ ವಿರುದ್ಧ ಸಿಡಿದೆದ್ದರು, ಆದಿವಾಸಿಗಳ ದೊಡ್ಡ ಪಡೆಯನ್ನೇ ಸಿದ್ಧ ಮಾಡಿ ಪೊಲೀಸ್‌ ಸ್ಟೇಷನ್ ಮೇಲೆ ದಾಳಿ ಮಾಡಿ ಅವರ ಶಸ್ತ್ರಾಸ್ತ್ರ ವಶಪಡಿಸಿಕೊಂಡು, ಇವರ ಮೇಲೆ ದಾಳಿಗೆ ಅರಣ್ಯಕ್ಕೆ ಬಂದ ಅನೇಕ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿ, ಬ್ರಿಟಿಷರ ಪಾಲಿಗೆ ಸಿಂಹ ಸ್ವಪ್ನವಾದರು. ಇವರ ಹೋರಾಟದ ಫಲಬವಾಗಿ ಆದಿವಾಸಿಗಳು ಬ್ರಿಟಿಷರ ಆಳ್ವಿಕೆಯಿಂದ ಮುಕ್ತರಾದರು. ಅಲ್ಲೂರಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದರ್ಥ ಬ್ರಿಟಿಷರು ಮೋಸದಲ್ಲಿ ಅವರನ್ನು ಕೊಲ್ಲಲು ಸಂಚು ಮಾಡಿದರು. ಅವರ ಸಂಧಾನಕ್ಕೆ ಕರೆದು ಮೋಸದಲ್ಲಿ ಬಂಧಿಸಿದರು. ನಂತರ ಅವರನ್ನು ದರೋಡೆಕೋರನಂತೆ ಬಿಂಬಿಸಲು ಹೊರಟರು. ಆಗ ಅಲ್ಲೂರಿಯವರು ' ನೀವು ನನ್ನನ್ನು ಕೊಲ್ಲಬಹುದು, ಆದರೆ ಭಾರತಮಾತೆಯ ಗರ್ಭದಲ್ಲಿ ನನ್ನಂಥ ಅನೇಕ ಮಕ್ಕಳು ಹುಟ್ಟುತ್ತಾರೆ, ಅವರು ನಿಮ್ಮ ಹುಟ್ಟಡಗಿಸುತ್ತಾರೆ' ಎಂದು ಗುಡುಗಿದ್ದರು. ಅವರನ್ನು ಅಮಾನುಷವಾಗಿ ಮೇ 7, 1924ರಲ್ಲಿ ಹತ್ಯೆ ಮಾಡಲಾಯಿತು.

ನೇತಾಜಿ ಮಾತುಗಳು

ಈ ವೀರನ ಕುರಿತು ಹೇಳುವಾದ ನೇತಾಜಿ ಶುಭಾಶ್‌ ಚಂದ್ರಬೋಸ್‌ ಒಂದು ಮಾತು ಹೇಳುತ್ತಾರೆ ' ಅಲ್ಲೂರಿ ಸೀತಾರಾಮ ರಾಜು ಬೇರೆ ದೇಶದಲ್ಲಿ ಜನಿಸಿದ್ದರೆ ಅವರಿಗೆ ಇಲ್ಲಿಗಿಂತಲೂ ಹೆಚ್ಚು ಗೌರವ ಪಡೆಯುತ್ತಿದ್ದ'

ಮಾನ್ಯಂ ವೀರುಡು

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕದ ಬಳಿಕ ಆಂದ್ರ ಸರಕಾರ ಒಡಿಶಾ, ಮಧ್ಯಪ್ರದೇಶ (ಇಂದಿನ ಛತ್ತೀಸ್‌ಗಡ್), ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಕ್ಕೆ ಅಲ್ಲೂರಿ ಸೀತಾರಾಮ ರಾಜು ಅರಣ್ಯ ವಲಯ ಎಂದು ಘೋಷಿಸಿ ಗೌರವಿಸಿದೆ. ವಿಶಾಖಪಟ್ಟಣ ನಗರದ ಕಡಲ ತಡಿಯ ರಸ್ತೆಗೆಸೀತಾರಾಮ ರಾಜುವಿನ ಹೆಸರಿಟ್ಟು, ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿದೆ. ಭಾರತ ಸರಕಾರ 1997ರಲ್ಲಿ ಇವರ ಜನ್ಮ ದಿನದ ಅಂಗವಾಗಿ ಅಂಚೆ ಚೀಟಿಯನ್ನು ಹೊರತಂದಿತ್ತು.

English summary

Independence Day 2020: Do you remember this Freedom Fighter Alluri Sitaram Raju

Nicknamed as the Manyam Veerudu meaning the Hero of the jungles, Alluri Sitaram Raju led the ‘Rampa Rebellion' which took place from 1922-1924. He is famous for fighting against the Madras Forest Act that came in the year 1882.
X
Desktop Bottom Promotion