For Quick Alerts
ALLOW NOTIFICATIONS  
For Daily Alerts

ಮಹಾ ಶಿವರಾತ್ರಿ ಹಬ್ಬದ ಮಹತ್ವ ಹಾಗೂ ರೋಚಕ ಕಥಾನಕ...

ಕೈಲಾಸನಾಥನು ಶಿವರಾತ್ರಿ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.

By Manohar
|

ಶಿವರಾತ್ರಿಗೆ ಇನ್ನೇನು ಬೆರಳಣಿಕೆ ದಿನಗಳು ಮಾತ್ರ ಉಳಿದಿವೆ, ಈ ವರ್ಷ ಶಿವರಾತ್ರಿ ಮಾರ್ಚ್ 4 ರಂದು ಬಂದಿದೆ ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ. ಮಹಾ ಶಿವರಾತ್ರಿ: ಕೈಲಾಸವಾಸಿ ಶಿವನಿಗೆ ಇದು ಮಂಗಳಕರ ರಾತ್ರಿ!

ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ. ಅಲ್ಲದೆ, ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು. ಶಿವರಾತ್ರಿ ವಿಶೇಷ-ಕನ್ಯೆಯರಿಗೂ ಕಾದಿದೆ, ಸಿಹಿ ಸುದ್ದಿ!

ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು, ಬನ್ನಿ ಇಂದಿನ ಲೇಖನದಲ್ಲಿ ಶಿವರಾತ್ರಿ ಆಚರಣೆಗೆ ಸಂಬಂಧವನ್ನು ಪಡೆದಿರುವ ಕೆಲವೊಂದು ಐತಿಹಾಸಿಕ ಕಥೆಗಳನ್ನು ತಿಳಿಸಿಕೊಡಲಿದ್ದೇವೆ. ಶಿವರಾತ್ರಿ ಏಕೆ ಅತಿ ಮಹತ್ವದ್ದು ಮತ್ತು ಪವಿತ್ರವಾದುದು ಎಂಬುದನ್ನು ನಿಮಗಿಲ್ಲಿ ತಿಳಿದುಕೊಳ್ಳಬಹುದಾಗಿದೆ....

ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ

ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ

ಹೆಚ್ಚು ಜನಜನಿತವಾಗಿರುವ ಶಿವರಾತ್ರಿಯ ಕಥೆಯು ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ತಮ್ಮಲ್ಲಿ ಯಾರು ಶ್ರೇಷ್ಠರು ಎಂಬುದಾಗಿ ಇಬ್ಬರಲ್ಲಿ ಸಂಘರ್ಷ ನಡೆಯುತ್ತಿತ್ತು. ಈ ರೀತಿ ಜಗಳ ಮುಂದುವರಿಯುತ್ತಿದ್ದರೆ ಇದು ವಿನಾಶಕ್ಕೆ ಕಾರಣವಾಗಬಹುದು ಎಂದು ಭಾವಿಸಿದ ದೇವತೆಗಳು ಬ್ರಹ್ಮ ಮತ್ತು ವಿಷ್ಣುವಿನ ವಿರಸದ ಕುರಿತಾಗಿ ಶಿವನಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಇಬ್ಬರು ದೇವರನ್ನು ಸಂತೈಸಲು ಶಿವ ಆಗಮಿಸುತ್ತಾರೆ.ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ

ಬ್ರಹ್ಮ ಮತ್ತು ವಿಷ್ಣುವಿಗೆ ಸಂಬಂಧಿಸಿದ ಕಥೆ

ಶಿವನು ಬೆಂಕಿಯಿಂದ ಕೂಡಿದ ಲಿಂಗಧಾರಣೆಯನ್ನು ಮಾಡಿಕೊಂಡು ಲಿಂಗದ ಮೇಲ್ಭಾಗ ಮತ್ತು ತಳಭಾಗವನ್ನು ಹೋಗಿ ಯಾರು ಶ್ರೇಷ್ಠರು ಎಂಬುದನ್ನು ನೋಡಲು ಇಬ್ಬರಲ್ಲೂ ತಿಳಿಸುತ್ತಾರೆ. ಬ್ರಹ್ಮನು ಬಾತುಕೋಳಿಯ ರೂಪದಲ್ಲಿ ಮೇಲ್ಭಾಗಕ್ಕೂ ವಿಷ್ಣುವು ಹಂದಿಯ ರೂಪದಲ್ಲಿ ಲಿಂಗದ ಕೆಳಭಾಗವನ್ನು ಗುರುತಿಸಲು ಮುಂದಾಗುತ್ತಾರೆ. ಆದರೆ ಇವರಿಬ್ಬರಿಗೂ ಕೊನೆ ಮತ್ತು ಆರಂಭ ದೊರೆಯುವುದೇ ಇಲ್ಲ.

ಬ್ರಹ್ಮನನ್ನು ಯಾರೂ ಪೂಜಿಸಬಾರದು- ಶಿವನ ಆಜ್ಞೆ!

ಬ್ರಹ್ಮನನ್ನು ಯಾರೂ ಪೂಜಿಸಬಾರದು- ಶಿವನ ಆಜ್ಞೆ!

ಸ್ಪರ್ಧೆಯಲ್ಲಿ ಸೋಲಲು ಇಷ್ಟಪಡದ ಬ್ರಹ್ಮನು ಕೇತಕಿ ಪುಷ್ಪವನ್ನು ತೆಗೆದುಕೊಂಡು ಬಂದು ಬೆಂಕಿಯ ಮೇಲ್ಭಾಗದಲ್ಲಿ ಇದು ದೊರಕಿತು ಎಂದಾಗಿ ಸುಳ್ಳು ಹೇಳುತ್ತಾರೆ. ಕೇತಕಿ ಪುಷ್ಪ ಕೂಡ ಬ್ರಹ್ಮನನ್ನು ಬೆಂಬಲಿಸುತ್ತದೆ. ಇದರಿಂದ ಕೋಪಗೊಂಡ ಶಿವನು ಬ್ರಹ್ಮನು ಸುಳ್ಳು ಹೇಳಿದ್ದಕ್ಕಾಗಿ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂದಾಗಿ ಶಪಿಸುತ್ತಾರೆ. ಅಂತೆಯೇ ಪೂಜೆ ಸಮಯದಲ್ಲಿ ಕೇತಕಿ ಹೂವನ್ನು ಯಾರೂ ಬಳಸಬಾರದು ಎಂಬುದಾಗಿ ಶಾಪವನ್ನೀಯುತ್ತಾರೆ. ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು!

ಮಹಾಶಿವರಾತ್ರಿ ಹಬ್ಬದ ಮಹತ್ವ

ಮಹಾಶಿವರಾತ್ರಿ ಹಬ್ಬದ ಮಹತ್ವ

ಮಹಾಶಿವರಾತ್ರಿಯ ಮಧ್ಯರಾತ್ರಿಯಂದು ಮಹಾದೇವನು ಲಿಂಗ ಸ್ವರೂಪವನ್ನು ಧರಿಸುತ್ತಾರೆ. ಫಲ್ಗಣ ಮಾಸದ 14 ನೇ ಗಾಢ ಮಾಸದಂದು ಇದು ಸಂಭವಿಸುತ್ತದೆ. ಶಿವನು ಪ್ರಥಮ ಬಾರಿ ಲಿಂಗ ರೂಪವನ್ನು ಧರಿಸುವುದು ಎಂಬುದಾಗಿ ಇದನ್ನು ಕಾಣಲಾಗುತ್ತದೆ. ಆ ದಿನವನ್ನೇ ಮಹಾಶಿವರಾತ್ರಿಯಾಗಿ ಆಚರಿಸಲಾಗುತ್ತದೆ. ಈ ದಿನಂದು ಶಿವನನ್ನು ಪೂಜಿಸುವುದು ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿದೆ ಮತ್ತು ಸುಖ ಸಂತೋಷವನ್ನು ತರಲಿದೆ ಎಂಬುದು ಪ್ರತೀತಿಯಾಗಿದೆ.

ಬುಡಕಟ್ಟು ಜನಾಂಗದ ಮನುಷ್ಯನ ಕಥೆ

ಬುಡಕಟ್ಟು ಜನಾಂಗದ ಮನುಷ್ಯನ ಕಥೆ

ಬುಡಕಟ್ಟು ಜನಾಂಗದ ಬಡ ಶಿವ ಭಕ್ತನನ್ನು ಆಧರಿಸಿ ಇನ್ನೊಂದು ಕಥೆಯಿದೆ. ರಾತ್ರಿ ವೇಳೆಯಲ್ಲಿ ಒಮ್ಮೆ ಆತನು ದಾರಿ ತಪ್ಪುತ್ತಾನೆ. ಕಾಡುಪ್ರಾಣಿಗಳ ಧ್ವನಿಯನ್ನು ಕೇಳಿ ಭಯದಿಂದ ಮರವನ್ನೇರಿ ಈತ ಕುಳಿತುಕೊಳ್ಳುತ್ತಾನೆ. ತಾನು ಮಲಗಿದ ಸಂದರ್ಭದಲ್ಲಿ ಪ್ರಾಣಿಗಳು ತನ್ನ ಮೇಲೆ ದಾಳಿ ನಡೆಸಿದರೆ ಎಂದು ಹೆದರಿ ಆತ ಎಚ್ಚರಗೊಂಡಿರುತ್ತಾನೆ. ಶಿವನ ಸ್ಮರಣೆಯನ್ನು ಮಾಡುತ್ತಿರುತ್ತಾನೆ. ಬೆಳಗ್ಗಿನ ಜಾವ ನೋಡಿದಾಗ ಶಿವಲಿಂಗದ ಮೇಲೆ ಎಲೆಗಳು ಬೀಳುತ್ತಿರುವುದನ್ನು ನೋಡುತ್ತಾನೆ. ಆತ ರಾತ್ರಿಯೆಲ್ಲಾ ಶಿವನ ನಾಮ ಸ್ಮರಣೆ ಮಾಡುತ್ತಿದ್ದುದು ಶಿವನು ಮೆಚ್ಚಿಕೊಳ್ಳುತ್ತಾರೆ ಮತ್ತು ಆತ ಶಿವನ ಕೃಪಾಕಟಾಕ್ಷಕಕ್ಕೆ ಒಳಗಾಗಿರುತ್ತಾನೆ.

ಬುಡಕಟ್ಟು ಜನಾಂಗದ ಮನುಷ್ಯನ ಕಥೆ

ಬುಡಕಟ್ಟು ಜನಾಂಗದ ಮನುಷ್ಯನ ಕಥೆ

ಶಿವರಾತ್ರಿ ಹಬ್ಬಕ್ಕೆ ಸಂಬಂಧಿಸಿದಂತೆ ಜನರು ಹೆಚ್ಚಿನ ಕಥೆಗಳನ್ನು ಹೇಳುತ್ತಿರುತ್ತಾರೆ. ಈ ದಿನವೇ ಶಿವನು ತಾಂಡವ ನೃತ್ಯವನ್ನು ಆಡಿದ್ದು ಮತ್ತು ಪಾರ್ವತಿ ದೇವಿಯನ್ನು ವರಿಸಿರುವುದು ಎಂಬುದಾಗಿ ಕೂಡ ಪುರಾಣಗಳಲ್ಲಿ ಉಲ್ಲೇಖಗೊಂಡಿದೆ. ಅದಾಗ್ಯೂ ಶಿವರಾತ್ರಿಯನ್ನು ದೇಶದೆಲ್ಲೆಡೆ ಒಂದೇ ದಿನ ಸಂಭ್ರಮದಂದು ಆಚರಿಸಲಾಗುತ್ತದೆ. ದೇವರಿಗೆ ಜಾಗರಣೆ, ವ್ರತಗಳನ್ನು ಈ ದಿನ ನಡೆಸಲಾಗುತ್ತದೆ.

English summary

Importance Of Maha Shivaratri

There are many stories related to Maha Shivratri that people believe and celebrate. This depends mainly of the regions. Not only the story behind Maha Shivratri, but also the way how people celebrate the festival will also differ depending on the regions.
X
Desktop Bottom Promotion