ಈ ಸಂಕ್ರಾಂತಿಗೆ ಎಳ್ಳು-ಬೆಲ್ಲ ಬೀರೋಣ ಒಳ್ಳೆಯ ಮಾತನಾಡೋಣ

By: Manasa K M
Subscribe to Boldsky

ಸಂಕ್ರಾಂತಿ ಎನ್ನುವುದು ಸಮೃದ್ಧಿಯ ಸಂಕೇತ. ಈ ಹಬ್ಬವು ಪೌರಾಣಿಕವಾಗಿಯೂ, ಸೂರ್ಯನ ಪಥ ಬದಲಾವಣೆಯ ಗುರುತಿಗಾಗಿಗೂ, ನಮ್ಮ ಅನ್ನದಾತ ರೈತರ ಸುಗ್ಗಿ ಹಾಗೂ ಕೊಯ್ಲಿನ ಸಂಕೇತವಾಗಿಯೂ ಆಚರಿಸುತ್ತೇವೆ. ಎಳ್ಳು ಬೆಲ್ಲ ಸಂಕ್ರಾಂತಿಯ ಬಹು ಮುಖ್ಯ ಭಾಗ. ಎಳ್ಳು ಬೆಲ್ಲ ಬೀರುವುದು ಕನ್ನಡಿಗರು ಸಂಕ್ರಾಂತಿಯ ದಿನ ನಡೆಸಿಕೊಂಡು ಬರುತ್ತಿರುವ ಅರ್ಥಪೂರ್ಣ ಆಚರಣೆ. "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ" ಎಂದು ಹಿರಿಯರು ಸಂಕ್ರಾಂತಿಯ ದಿನ ತಪ್ಪದೆ ಹೇಳುತ್ತಿರುತ್ತಾರೆ. ಮಕರ ಸಂಕ್ರಾಂತಿಗೆ ಎಳ್ಳು, ಸಕ್ಕರೆ ಅಚ್ಚು, ಹುಗ್ಗಿ   

sankranti festival
 

ಏನಿದು ಎಳ್ಳು-ಬೆಲ್ಲ? ಏತಕ್ಕೆ ಇಷ್ಟು ಮುಖ್ಯ ಎಂಬೆಲ್ಲ ಪ್ರಶ್ನೆಗಳಿಗೆ ವಿವರಣೆ ಹೀಗಿದೆ. ಇದೆಲ್ಲ ಓದಿದ ನಂತರ ತಯಾರು ಮಾಡುವ ವಿಧಾನವನ್ನು ಸಹ ತಿಳಿಸಿದ್ದೇವೆ. ಎಳ್ಳಿನಲ್ಲಿ ವಿಟಮಿನ್ಸ್, ಮಿನರಲ್ಸ್, ಕಾಪರ್, ಮ್ಯಾಂಗನೀಸ್, ಜಿಂಕ್, ಫೈಬೆರ್ ಹೀಗೆ ನಮ್ಮ ದೇಹಕ್ಕೆ ಬೇಕಾದ ಅನೇಕಾನೇಕ ಪೋಷಕಾಂಶಗಳು ಇವೆ. ಎಳ್ಳು ಶರೀರಕ್ಕೆ ಉಷ್ಣತೆಯನ್ನು ನೀಡುತ್ತದೆ. ಎಳ್ಳನ್ನು ನಾವು ಸಾಮಾನ್ಯವಾಗಿ ಮುಖ್ಯ ಪದಾರ್ಥವಾಗಿ ಯಾವ ಅಡುಗೆಯಲ್ಲೂ ಬಳಸುವುದಿಲ್ಲ. ಸ್ನೇಹ, ಪ್ರೀತಿಯ ಸಂಕೇತ ಪೊಂಗಲ್ ಹಬ್ಬದ ವೈಶಿಷ್ಟ್ಯ  

sankranti festival

ಅದೇನಿದ್ದರೂ ಇತರೆ ಆಹಾರ ಅಥವಾ ಸಿಹಿ ತಿಂಡಿಗಳಲ್ಲಿ ಒಂದು ಸಣ್ಣ ಭಾಗ ವಷ್ಟೇ. ಎಳ್ಳಿನ ಉಂಡೆ ಎಂದು ಮಾಡುತ್ತೇವೆಯಾದರೂ ಅವುಗಳನ್ನು ಹೆಚ್ಚು ಸೇವಿಸುವುದಿಲ್ಲ. ನವಗ್ರಹಗಳಿಗೆ ನೈವೇದ್ಯ ನೀಡುವ ನವ ಧಾನ್ಯಗಳಲ್ಲಿ ಎಳ್ಳು ಕೂಡ ಸೇರಿದೆ. ಇದರಿಂದ ತಯಾರಿಸುವ ಎಣ್ಣೆಯನ್ನು ಅಡಿಗೆಗೆ ಬಳಸುತ್ತೇವೆಯಾದರೂ ದೇವರಿಗೆ ಹಚ್ಚುವ ದೀಪಕ್ಕೆ ಶ್ರೇಷ್ಠವಾಗಿ ಬಳಸುತ್ತೇವೆ. 

sankranti festival
 

ಎಳ್ಳು ತಿನ್ನುವುದರಿಂದ ಉಷ್ಣತೆ ಹಾಗೂ ಪಿತ್ತ ದೇಹದಲ್ಲಿ ಹೆಚ್ಚಾಗುತ್ತದೆ. ಆದರೂ ಈ ಜನವರಿ ಕಾಲದಲ್ಲಿ ನಮ್ಮ ದೇಹಕ್ಕೆ ಎಳ್ಳು ಬೇಕಾಗಿದೆ. ಆದ್ದರಿಂದ ನಮ್ಮ ಪೂರ್ವಿಕರು ಎಳ್ಳನ್ನು ಬೆಲ್ಲದ ಜೊತೆ ಮಾಡಿ ಸೇವಿಸಲು ಹೇಳಿದರು. ಎಲ್ಲರಿಗೂ ತಿಳಿದಂತೆ ಬೆಲ್ಲ ಪಿತ್ತ ಶಮನಕಾರಿ.

sankranti festival
 

ಬೆಲ್ಲದ ಪೋಷಕಾಂಶಗಳಲ್ಲಿ ಕೊರತೆಯೆ ಇಲ್ಲ. ಎಳ್ಳು ಹಾಗೂ ಬೆಲ್ಲ ಜೊತೆಗೂಡಿ ನಮಗೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತವೆ ಹಾಗೂ ಯಾವುದೇ ಹಾನಿಕಾರಕ ಪ್ರತಿಕ್ರಿಯೆಗಳನ್ನು ಉಂಟು ಮಾಡುವುದಿಲ್ಲ.

ಎಳ್ಳು ಬೆಲ್ಲಗಳ ಜೊತೆಯಲ್ಲಿ ಹುರಿದ ಕಡಲೆ ಬೀಜ, ಹುರಿಕಡಲೆ, ಒಣ ಕೊಬ್ಬರಿಯ ತುಂಡುಗಳನ್ನು ಸೇರಿಸಲಾಗುತ್ತದೆ. ಮನೆಯಲ್ಲಿ ಸುಲಭವಾಗಿ ತಯಾರಿಸಲ್ಪಡುವ ಎಳ್ಳು ಬೆಲ್ಲವನ್ನು ಸಕ್ಕರೆ ಅಚ್ಚು, ಕಬ್ಬಿನ ತುಂಡುಗಳೊಂದಿಗೆ ನೆಂಟರ, ಸ್ನೇಹಿತರ ಮನೆ ಮನೆಗೆ ಹೋಗಿ ಸಂಕ್ರಾಂತಿಯ ಶುಭಾಶಯ ಕೋರಿ ನೀಡಿ ಬರುವುದು ಕನ್ನಡಿಗರ ಸಂಪ್ರದಾಯ.

English summary

Importance of Ellu-Bella in sankranti festival

Makar Sankranti is a very auspicious festival that is celebrated across India. On this special festival, there are several traditions that are followed by the people celebrating it. These customs and traditions have been followed from many years now...Read more to know the interesting facts and rituals of Sankranti that is followed in South India
Story first published: Saturday, January 14, 2017, 7:00 [IST]
Please Wait while comments are loading...
Subscribe Newsletter