For Quick Alerts
ALLOW NOTIFICATIONS  
For Daily Alerts

ಮಂಗಳವಾರ ಶಕ್ತಿ ದೇವ ಹನುಮಂತನನ್ನು ಪೂಜಿಸಿದರೆ- ಕಷ್ಟ-ಕಾರ್ಪಣ್ಯ ದೂರವಾಗುತ್ತೆ

By Manu
|

ಭಗವಾನ್ ಶ್ರೀ ರಾಮಚ೦ದ್ರನ ಪರಮಭಕ್ತನಾದ ಹನುಮ೦ತನು ಶಕ್ತಿ, ವಿವೇಕ, ಹಾಗೂ ಜ್ಞಾನಗಳ ಅಧಿದೇವತೆಯೆ೦ದೇ ಪರಿಗಣಿಸಲ್ಪಟ್ಟಿದ್ದಾನೆ. ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ, ರಕ್ಕಸರನ್ನೆಲ್ಲಾ ಸ೦ಹರಿಸಿ ಜಗತ್ತಿನಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನಿವಾರಸಲು ಭಗವಾನ್ ಶಿವನು ಹನುಮ೦ತನ ಅವತಾರವನ್ನು ಧರಿಸಿದನೆ೦ದು ಹೇಳಲಾಗುತ್ತಿದೆ. ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ತನ್ನ ಅಗಾಧವಾದ ಶಕ್ತಿಯ ಕಾರಣದಿ೦ದಲೇ ಲ೦ಕೆಯಲ್ಲಿ ರಾವಣನ ಕುಟು೦ಬವನ್ನು ಅ೦ತ್ಯಗೊಳಿಸುವಲ್ಲಿ ಮಹತ್ತರವಾದ ಪಾತ್ರವನ್ನು ನಿಭಾಯಿಸಿದ ಹನುಮಂತನನ್ನು ಶಕ್ತಿಯ ದೇವತೆಯೆಂದು ಪೂಜಿಸಲಾಗುತ್ತದೆ.

ರಾಮ ಭಕ್ತ ಹನುಮಂತನನ್ನು ಬಜರಂಗಿ ಆಂಜನೇಯ ಮುಂತಾದ ಹೆಸರುಗಳಿಂದ ಪ್ರಪಂಚದಾದ್ಯಂತ ಭಕ್ತರು ಪೂಜಿಸುತ್ತಾರೆ. ಧೈರ್ಯ, ಸ್ಥೈರ್ಯಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಂಜನೇಯ ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದವರು. ರಾಮ ಸೀತೆಯರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುವಷ್ಟು ಕಟ್ಟಾ ಭಕ್ತರಾಗಿದ್ದಾರೆ. ಹನುಮಂತನಿಗೆ ತನ್ನ ಸಾಹಸಗಳಿಂದ ಹೋದಲ್ಲೆಲ್ಲಾ ಹಲವಾರು ಹೆಸರುಗಳಿವೆ. ಮಾರುತಿ, ಪವನ ಪುತ್ರ, ಆಂಜನೀಪುತ್ರ ಹೀಗೆ ಭಕ್ತರ ಭಕ್ತಿಗೆ ಅನುಗುಣವಾಗಿ ಕರೆಯಲ್ಪಟ್ಟ ಹೆಸರುಗಳಿಂದ ಹನುಮಾನ್ ಪ್ರಸಿದ್ಧರು. ರಾಮಾಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಹನುಮಂತನು ತಮ್ಮ ವಾನರ ಸೇನೆಯಿಂದ ಪರಾಕ್ರಮಗಳಿಂದ ಯುದ್ಧದ ಸಮಯದಲ್ಲಿ ಹೆಚ್ಚು ಸ್ಮರಣೀಯರಾಗಿದ್ದಾರೆ. ಹಿಂದೂ ಮಹಾನ್ ಗ್ರಂಥಗಳಾದ ಮಹಾಭಾರತ ಮತ್ತು ಅಗ್ನಿ ಪುರಾಣದಲ್ಲೂ ಹನುಮಂತನ ಹೊಗಳಿಕೆಯನ್ನು ಮಾಡಲಾಗಿದೆ.

ಮಂಗಳವಾರದಂದು ವಿಶೇಷವಾಗಿ ಹನಮಂತನ ಪೂಜೆಯನ್ನು ಮಾಡಲಾಗುತ್ತದೆ. ಪ್ರಾತಃ ಕಾಲದಲ್ಲಿಯೇ ಎದ್ದು ಹನುಮಾನ್ ಪೂಜೆಯನ್ನು ಮಾಡಿದರೆ ಭಕ್ತರು ಹನುಮಂತನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಆಚರಣೆಯಾಗಿದೆ. ಶಕ್ತಿ, ಬಲ ಮತ್ತು ಗೌರವವನ್ನು ಹೆಚ್ಚಿಸಿಕೊಳ್ಳಲು ಹನಮಂತನ ಪೂಜೆಯನ್ನು ಮಾಡಬೇಕು. ಹಾಗಿದ್ದರೆ ಇಂದಿನ ಲೇಖನದಲ್ಲಿ ಹನುಮಂತನ ಪೂಜೆಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ....

ಹನಮಾನ್ ಪೂಜೆಗೆ ನಿಮಗೆ ಬೇಕಾದ ಪೂಜಾ ಪರಿಕರಗಳು

ಹನಮಾನ್ ಪೂಜೆಗೆ ನಿಮಗೆ ಬೇಕಾದ ಪೂಜಾ ಪರಿಕರಗಳು

*ದೀಪ

*ಅಗರ್‌ಬತ್ತಿ

*ಯಾವುದೇ ಹಣ್ಣು ನಿರ್ದಿಷ್ಟವಾಗಿ ಬಾಳೆಹಣ್ಣು

*ನೀರು

*ಹೂವು

*ಕುಂಕುಮ

*ಕೆಂಪು ಬಣ್ಣದ ಬಟ್ಟೆ

*ಹನುಮಂತನ ಫೋಟೋ ಅಥವಾ ವಿಗ್ರಹ ಇಲ್ಲವೇ ಹನುಮಂತನ ಯಂತ್ರ

ಹನುಮಾನ್ ಪೂಜಾ ವಿಧಿ

ಹನುಮಾನ್ ಪೂಜಾ ವಿಧಿ

*ನೀವು ಪೂಜೆ ಮಾಡಬೇಕಾಗಿರುವ ಸ್ಥಳವನ್ನು ಶುದ್ಧ ಮಾಡಿ

ಹನುಮಂತನಿಗೆ ಪೂಜೆಯನ್ನು ಅರ್ಪಿಸಿ

*ಹನುಮಂತನ ವಿಗ್ರಹವನ್ನು ನೀರಿನಿಂದ ಶುದ್ಧೀಕರಿಸಿ

ನೀವು ಪೂಜೆ ಮಾಡಬೇಕಾಗಿರುವ ಸ್ಥಳಕ್ಕೆ ನೀರಿನ ಪ್ರೋಕ್ಷಣೆಯನ್ನು ಮಾಡಿ

*ಕೆಂಪು ಬಟ್ಟೆಯ ಮೇಲೆ ಹನುಮಾನ್ ವಿಗ್ರಹವನ್ನು ಇರಿಸಿ

*ಹನುಮಂತನ ಮೂರ್ತಿಯ ಮೇಲೆ ಕುಂಕುಮದ ಪೇಸ್ಟ್ ಹಚ್ಚಿ

*ಅಗರ್‌ಬತ್ತಿ ಮತ್ತು ದೀಪವನ್ನು ಹಚ್ಚಿ

*ದೇವರಿಗೆ ಹೂವು ಮತ್ತು ಹಣ್ಣು ಸಮರ್ಪಿಸಿ

ಪೂಜೆಯನ್ನು ಮಾಡುವ ಸಮಯದಲ್ಲಿ ಗಮನಿಸಬೇಕಾದ ಅಂಶಗಳು

ಪೂಜೆಯನ್ನು ಮಾಡುವ ಸಮಯದಲ್ಲಿ ಗಮನಿಸಬೇಕಾದ ಅಂಶಗಳು

*ಆ ದಿನ ನೀವು ತಲೆಸ್ನಾನ ಮಾಡಬೇಕು

*108 ಅಕ್ಷತೆ, 108 ವೀಳ್ಯದೆಲೆ, 108 ಹಣ್ಣುಗಳನ್ನು ಇರಿಸಿ

*ಈ ದಿನ ಸಾತ್ವಿಕ ಆಹಾರವನ್ನು ಸೇವಿಸಿ. ಮಾಂಸಾಹಾರ ಸೇವನೆ ಬೇಡ

*ಹನುಮಂತನಿಗೆ 5 ಬಾಳೆಹಣ್ಣು ಅರ್ಪಿಸಿ

*ಈಶಾನ್ಯ ದಿಕ್ಕಿನಲ್ಲಿ ಹನುಮಂತನ ಪ್ರಾರ್ಥನೆಯನ್ನು ಮಾಡಿ

ಮಂಗಳವಾರದ ವ್ರತ ವಿಧಾನ

ಮಂಗಳವಾರದ ವ್ರತ ವಿಧಾನ

21 ದಿನಗಳ ಕಾಲ ಸತತವಾಗಿ ಉಪವಾಸವನ್ನು ಕೈಗೊಳ್ಳಬೇಕು. ಪ್ರಾತಃ ಕಾಲದಲ್ಲಿ ಏಳಬೇಕು. ಸ್ನಾನವನ್ನು ಮಾಡಿ ಗಂಗಾಜಲವನ್ನು ಮನೆಯಲ್ಲಿ ಪ್ರೋಕ್ಷಿಸಿ ಕೆಂಪು ವಸ್ತ್ರವನ್ನು ಧರಿಸಿ. ಮೇಲೆ ತಿಳಿಸಿದ ವಿಧಾನದಲ್ಲಿ ಪೂಜೆಯನ್ನು ಮಾಡಿ. ಪೂಜೆಯ ನಂತರ ಹನುಮಾನ್ ಚಾಲೀಸವನ್ನು ಪಠಿಸಿ 15 ನಿಮಿಷ ಧ್ಯಾನ ಮಾಡಿ ನಿಮ್ಮ ಪ್ರಾರ್ಥನೆಗಳನ್ನು ದೇವರಿಗೆ ಅರ್ಪಿಸಿ. ಬೆಲ್ಲದಿಂದ ಮಾಡಿದ ಆಹಾರವನ್ನು ಒಂದು ಬಾರಿ ಸೇವಿಸಿ. ಸಂಜೆ ಚಾಲೀಸವನ್ನು ಪಠಿಸಿ ಮತ್ತು ವೃತವನ್ನು ಮುರಿಯುವ ಮೊದಲು ದೇವರಿಗೆ ನೈವೇದ್ಯ ಅರ್ಪಿಸಿ.

ಹನುಮಂತನಿಗೆ ಆರತಿ

ಹನುಮಂತನಿಗೆ ಆರತಿ

ಆರತಿ ಕಿ ಜೈ ಹನುಮಾನ್ ಲಾಲಾ ಕಿ | ದುಶಾತ್ ದಲಾನ್ ರಘುನಾಥ್ ಕಲಾ ಕಿ ||ಜೇಕ್ ಬಾಲ್ ಸೆ ಗಿರಿವರ್ ಕಾಪ್ | ರೋಗ್-ಡೋಶ್ ಜೇಕ್ ನಿಕಾತ್ ನಾ ಜಾಂಕೆ ||ಅಂಜನಿ ಪುತ್ತರ್ ಮಹಾ ಬಾಲ್ಡಿ | ಸಂತಾನ್ ಕೆ ಪ್ರಭು ಸದಾ ಸಹಯಿ ||

ಡಿ ಬಿರಾ ರಘುನಾಥ್ ಪಾಥಾಯೆ ಲಂಕಾ ಜರಿ ಸಿಯ ಸುದಿ ಲೇಯ್ ||

ಲಂಕಾ ಸೋ ಕೋಟ್ ಸಾಮುಂದ್ರ ಸಿ ಖೈ | ಜಾಟ್ ಪವನ್‌ ಸುತ್ ಬಾರ್ ನಾ ಲೇಯ್ ||

ಲಂಕಾ ಜರಿ ಅಸುರ್ ಸಬ್ ಮೇರಿ | ಸಿಯರಾಂ ಕಿ ಕಾ ಕಾಜ್ ಸಾವೆರ್ ||

ಲಂಕಾಶಮನ್ ಮುರ್ಚಿಟ್ ಪಡೆ ಸಕಾರೆ | ಲಯೆ ಸೇನ್ಜೀವಿನಿ ಪ್ರಾನ್ ಉಬರೆ ||

ಪೆಥಿ ಪಾಟಾಲ್ ಟೋರಿ ಜಮ್ಕರೆ | ಅಹಿರಾವನ್ ಕಿ ಭುಜಾ ಉಖೇರೆ ||

ಬಾಯಿ ಭುಜ ಅಸುರ್ ಸಂಘರೆ | ದಾಯಿ ಭುಜ ಸಂತ ಜಾನ್ ತಾರೆ ||

ಸುರ್ ನರ್ ಮುನಿ ಆರತಿ Utare|ಜಯ ಜಾಯೆ ಜೇ ಹನುಮಾನ್ ಉಚಾರೆ ||

ಕಾಂಚನ್ ಥಾರ್ ಕಪೂರ್ ಲೂ ಚಾಯ್ | ಆರತಿ ಕಾರ್ಟ್ ಅಂಜಾನ ಮಾಯಿ ||ಜೋ ಹನುಮಾನ್ ಜಿ ಕಿ ಆರತಿ ಗವೀ | ಬಾಸಿ ಬೈಕುಂತ್ ಪರ್ಪದ್ ಪೇವ್ ||

ಲಂಖ ವಿಧನ್ಸ್ ಕಿಯೆ ರಘುರೈ | ತುಳಸಿದಾಸ್ ಪ್ರಭು ಕೀರ್ತಿ ಗೈ || "

ಪ್ರಯೋಜನಗಳು

ಪ್ರಯೋಜನಗಳು

*ಬಲ ಮತ್ತು ಶಕ್ತಿ ಸಾಧನೆ

*ಧನ ಲಾಭ ಎಲ್ಲಾ ಆರ್ಥಿಕ ಸಂಕಷ್ಟ ದೂರಾಗುತ್ತದೆ

*ನಿಮ್ಮ ಇಚ್ಛೆಯ ಕೆಲಸ ದೊರೆಯುತ್ತದೆ

*ಮಕ್ಕಳ ಭಾಗ್ಯ

*ಪಾಪ ವಿಮೋಚನೆ

*ನಿಮ್ಮ ಉದ್ಯೋಗವನ್ನು ಯಶಸ್ವಿಯಾಗಿಸುತ್ತದೆ

*ಬುದ್ಧಿವಂತಿಕೆ ಮತ್ತು ಜಾಣ್ಮೆಯನ್ನು ಹೆಚ್ಚಿಸಲು ಹುಡುಗರು

*ವ್ರತವನ್ನು ಕೈಗೊಳ್ಳಬಹುದು. ಶನಿ ದೋಷ ನಿವಾರಣೆಗೆ ನೀವು ಹನುಮಂತನ ಪೂಜೆಯನ್ನು ಶನಿವಾರ ಮಾಡಬಹುದು. ಇನ್ನು ಮಂಗಳವಾರಹನುಮಂತ ದೇವರಿಗೆ ಸಿಹಿ ಇಷ್ಟವಾಗಿರುವ ಕಾರಣದಿಂದ ಕಡಲೆಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. ವಾನರಗಳು ಪತ್ತೆಯಾಗದೆ ಇದ್ದರೆ ಹನುಮಂತನ ಮೂರ್ತಿಗೆ ಬಾಳೆಹಣ್ಣನ್ನು ಅರ್ಪಿಸಿ. ಪುರುಷರು ಈ ಮೂಲಕ ಹನುಮಂತನನ್ನು ಪೂಜಿಸಬಹುದಾಗಿದೆ.

English summary

how to worship lord hanuman on tuesday

Tuesday is the day of Lord Hanuman and Hanuman puja is performed on this day. The puja can be remarkably effective when performed in early morning. This fast can be observed successfully to increase efforts, courage, strength and honor. People who have short-tempered and violent attitude can perform puja and fast on this day to get peace in their lives.
X
Desktop Bottom Promotion