For Quick Alerts
ALLOW NOTIFICATIONS  
For Daily Alerts

ಕಷ್ಟ ನಿವಾರಣೆ, ಸಂಪತ್ತು ವೃದ್ಧಿಗೆ ಗುರುವಾರ ಶ್ರೀ ವಿಷ್ಣುವಿನ ಪೂಜಾ ವಿಧಿಗಳೇನು?

|

ಹಿಂದೂ ಧರ್ಮದಲ್ಲಿ ಏಕಾದಶಿಯೆಂದರೆ ಆ ದಿನ ಮಹಾವಿಷ್ಣುವಿಗೆ ಸಮರ್ಪಿಸಲಾಗಿದೆ. ಇನ್ನು ವಾರದಲ್ಲೂ ಒಂದು ದಿನವನ್ನು ಮಹಾವಿಷ್ಣುವಿನ ಆರಾಧನೆಗೆ ಇಡಲಾಗಿದೆ, ಅದುವೇ ಗುರುವಾರ. ಗುರುವಾರ ರಾಯರ ದಿನ ಕೂಡ ಹೌದು.

ವಿಷ್ಣು ಭಕ್ತರು ಗುರುವಾರ ದಿನದಂದು ಮಹಾವಿಷ್ಣುವನ್ನು ಪೂಜಿಸುತ್ತಾರೆ. ಪ್ರತೀ ಗುರುವಾರ ವಿಷ್ಣುವಿನ ಪೂಜೆ ಮಾಡುವುದರಿಂದ ಶ್ರೇಯೋಭವೃದ್ಧಿ ಉಂಟಾಗುತ್ತದೆ ಎಂಬುವುದು ಆತನ ಭಕ್ತರ ನಂಬಿಕೆ. ಪ್ರತೀ ದೇವರ ಪೂಜೆಗೆ ಕೆಲವೊಂದು ವಿಧಿ ವಿಧಾನಗಳಿವೆ. ಮನೆಯಲ್ಲಿ ಮಹಾವಿಷ್ಣುವಿನ ಆರಾಧನೆ ಹೇಗೆ ಮಾಡಬೇಕು, ಪೂಜೆಗೆ ಪ್ರಮುಖವಾಗಿ ಇರಬೇಕಾದ ವಸ್ತುಗಳೇನು ಎಂದು ನೋಡೋಣ:

ವಿಷ್ಣು ಪೂಜಾ ವಿಧಾನ:

ವಿಷ್ಣು ಪೂಜಾ ವಿಧಾನ:

* ಬೆಳಗ್ಗೆ ಎದ್ದು ಸ್ನಾನ ಮಾಡಿ ಹಳದಿ ಬಣ್ಣದ ಮಡಿ ವಸ್ತ್ರ ಧರಿಸಿ.

* ನಂತರ ಹಳದಿ ಹೂಗಳು, ಹಣ್ಣುಗಳು ಹಾಗೂ ಪ್ರಮುಖವಾಗಿ ತುಳಸಿಯನ್ನು ಪೂಜೆಗೆ ಸಿದ್ಧಪಡಿಸಿ.

* ಮಹಾವಿಷ್ಣುವಿನ ಮೂರ್ತಿ ಅಥವಾ ಫೋಟೋವನ್ನು ತೊಳೆದು ಸ್ವಚ್ಛ ಮಾಡಿ ನಂತರ ಹೂಗಳಿಂದ ಅಲಂಕರಿಸಿ, ತುಪ್ಪದ ದೀಪ ಬೆಳಗಿ ಊದು ಕಡ್ಡಿ ಹಚ್ಚಿ. ನೈವೇದ್ಯ, ಹೂ ಹಣ್ಣುಗಳನ್ನು ಅರ್ಪಿಸಿ.

* ನಂತರ ಧ್ಯಾನ ಮನಸ್ಸಿನಿಂದ ಕೂತು ವಿಷ್ಣುವಿನ ಮಂತ್ರಗಳನ್ನು ಪಠಿಸಿ.

ವಿಷ್ಣು ಮಂತ್ರಗಳು

ವಿಷ್ಣು ಮಂತ್ರಗಳು

ವಿಷ್ಣು ಮೂಲ ಮಂತ್ರ

ಓಂ ನಮೋ ನಾರಾಯಣಾಯ

ನಾನು ನಿನಗೆ ನಮಸ್ಕರಿಸುತ್ತೇನೆ ಓ ನಾರಾಯಣ ದೇವರೇ ಮಹಾವಿಷ್ಣುವಿಗೆ ಸಮರ್ಪಿಸಲಾದ ಮಂತ್ರ ಇದಾಗಿದೆ. ಇದು ಹೆಚ್ಚು ಶಕ್ತಿಯುತವಾದ ಮಂತ್ರವಾಗಿದೆ.

ವಿಷ್ಣು ಭಗವತೇ ವಾಸುದೇವ ಮಂತ್ರ

ಓಂ ನಮೋ ಭಗವತೇ ವಾಸುದೇವಾಯ

ವಿಶ್ವವನ್ನು ಕಾಪಾಡುವ ಭಗವಂತನೇ ನಾನು ನಿನಗೆ ವಂದಿಸುತ್ತೇನೆ.

ವಿಷ್ಣು ಗಾಯತ್ರಿ ಮಂತ್ರ

ಓಂ ಶ್ರೀ ವೈಷ್ಣವೇ ಚ

ವಿದಾಮಹೇ ವಾಸುದೇವಾಯ ಧೀಮಹಿ

ತನ್ನೊ ವಿಷ್ಣು ಪ್ರಚೋದಯಾತ್

ವಿಷ್ಣು ಸಂಕಷ್ಟಹರ ಮಂತ್ರ

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ

ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ

ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭೃದ್ಯಾನಗಮ್ಯಂ

ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ

ವಿಷ್ಣು ಮಂತ್ರ ಹೇಳಲು ಸೂಕ್ತ ಸಮಯ ಯಾವುದು?

ವಿಷ್ಣು ಮಂತ್ರ ಹೇಳಲು ಸೂಕ್ತ ಸಮಯ ಯಾವುದು?

ಮಹಾವಿಷ್ಣುವಿಗೆ ಶಿರ ಭಾಗಿ ನಮಿಸಿ, ನಂತರ ಮರದ ಹಲಗೆ ಅಥವಾ ಚಾಪೆ ಮೇಲೆ ಕೂತು ಬ್ರಹ್ಮ ಮುಹೂರ್ತದಲ್ಲಿ (ಬೆಳಗ್ಗೆ 4 ಗಂಟೆಯಿಂದ 6 ಗಂಟೆ) ಮಂತ್ರ ಪಠಿಸಿ. ಮಂತ್ರಗಳನ್ನು ಹೇಳುವಾಗ ನಿಮ್ಮ ನೋಟ ಹಾಗೂ ಮನಸ್ಸಿನಲ್ಲಿ ಶ್ರೀವಿಷ್ಣುವೇ ತುಂಬಿರಲಿ.

ವಿಷ್ಣುವಿಗೆ ಬಾಳೆ ಹಣ್ಣು ಅರ್ಪಿಸಲು ಮರೆಯದಿರಿ

ನೀವು ವಿಷ್ಣುವಿಗೆ ಹೂ-ಹಣ್ಣುಗಳನ್ನು ಅರ್ಪಿಸುವಾಗ ಬಾಳೆ ಹಣ್ಣು ಕಡ್ಡಾಯವಾಗಿ ಇರಲಿ. ಆದರೆ ಈ ದಿನ ನೀವು ಬಾಳೆ ಹಣ್ಣು ತಿನ್ನಬೇಡಿ. ಇನ್ನು ಮಹಾವಿಷ್ಣುವಿಗೆ ನೈವೇದ್ಯ, ಹೂಗಳನ್ನು ಅರ್ಪಿಸುವಾಗ ತುಳಸಿ ಇರಲೇಬೇಕು.

ವಿಷ್ಣು ಪೂಜೆಯಲ್ಲಿ ಏನು ಮಾಡಬಾರದು

ವಿಷ್ಣು ಪೂಜೆಯಲ್ಲಿ ಏನು ಮಾಡಬಾರದು

* ವಿಷ್ಣುವಿಗೆ ಅಭಿಷೇಕ ಮಾಡುವಾಗ ಎಡಗೈಯಲ್ಲಿ ವಿಗ್ರಹ ಹಿಡಿಯಬಾರದು.

* ಪೂಜೆಗೆ ಬಳಸುವ ಸಾಮಗ್ರಿಗಳಲ್ಲಿ ಬಳಸಿದ್ದನ್ನು ಬಳಸಬಾರದು.

* ಈ ದಿನ ನೀಲಿ ಬಣ್ಣದ ಬಟ್ಟೆ ಧರಿಸಬೇಡಿ.

* ಮೊದಲು ತತ್ವ ದೇವತೆಗಳಿಗೆ ಪೂಜೆ ಸಲ್ಲಿಸಿದ ಬಳಿಕವಷ್ಟೇ ವಿಷ್ಣುವಿನ ಆರಾಧನೆ ಮಾಡಿ.

* ಬೇರೆಯವರು ಕೊಟ್ಟ ವಸ್ತುಗಳನ್ನು ವಿಷ್ಣುವಿನ ಪೂಜೆಗೆ ಇಡಬೇಡಿ.

ವಿಷ್ಣು ಪೂಜೆಯ ಫಲ

ವಿಷ್ಣು ಪೂಜೆ ಮಾಡುವುದರಿಂದ ಕಷ್ಟಗಳು ದೂರವಾಗುವುದು. ಅಲ್ಲದೆ ಮಹಾವಿಷ್ಣುವಿನ ಆರಾಧನೆಯಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚುವುದು.

English summary

How To Worship Lord Vishnu On Thursday in kannada

how to worship lord vishnu on Thursday in kannada,
Story first published: Tuesday, June 29, 2021, 18:06 [IST]
X
Desktop Bottom Promotion