For Quick Alerts
ALLOW NOTIFICATIONS  
For Daily Alerts

ಕಷ್ಟಗಳು ನೀಗಲು ಶನಿ ದೇವನನ್ನು ಒಲಿಸಿಕೊಳ್ಳುವುದು ಹೇಗೆ?

|

ನಮ್ಮ ಬದುಕಿನಲ್ಲಿ ಏಳಿಗೆಯಾಗಬೇಕಾದರೆ ಶನಿಯ ವಕ್ರದೃಷ್ಟಿ ಇರಬಾರದು, ಶನಿಯ ಕೃಪೆ ಇರಬೇಕೆಂದು ಹೇಳುತ್ತಾರೆ. ಶನಿವಾರ ಶನಿ ದೇವನಿಗೆ ಮೀಸಲು.

ಶನಿಯ ವಕ್ರದೃಷ್ಟಿಗೆ ಬಿದ್ದರೆ ಯಾವ ಗ್ರಹಗಳಿಂದಲೂ ನಮ್ಮನ್ನು ಪಾರು ಮಾಡಲು ಸಾಧ್ಯವಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಶನಿಯು ಕಷ್ಟದ ಸಂಕೇತವಾಗಿದೆ. ಯಾರು ಆತನ ಕಷ್ಟಗಳನ್ನು ಗೆಲ್ಲುತ್ತಾರೋ ಅವರು ಅವನ ಕೃಪೆಗೆ ಪಾತ್ರರಾಗುತ್ತಾರೆ, ಪ್ರಗತಿಯನ್ನು ಹೊಂದುತ್ತಾರೆ

ಶನಿಯ ಕೃಪೆಗೆ ಪಾತ್ರರಾಗಲು ಹಾಗೂ ಶನಿ ದೋಷವಿದ್ದರೆ ಆ ಕಷ್ಟಗಳು ಬೇಗನೆ ನೀಗಲು ಶನಿವಾರ ಶನಿಯನ್ನು ಈ ರೀತಿ ಪೂಜಿಸಿ:

ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ಅರ್ಪಿಸಿ

ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ಅರ್ಪಿಸಿ

ಶನಿ ದೇವನ ಕೃಪೆಗೆ ಪಾತ್ರರಾಗಲು ಇದೊಂದು ತುಂಬಾ ಜನಪ್ರಿಯವಾದ ವಿಧಾನವಾಗಿದೆ. ತಾಮ್ರದ ಪಾತ್ರೆಗೆ ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ತುಂಬಿ ಶನಿ ದೇವರ ಮೂರ್ತಿಗೆ ಅರ್ಪಿಸಬೇಕು. ಈ ರೀತಿ ಎಣ್ಣೆ ಅರ್ಪಿಸುವಾಗ ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ

ಓಂ ಐಂಗ್‌ ಹ್ರಿಂಗ್‌ ಶ್ರೀಂಗ್‌ ಶಂಗ್‌ ಶನೈಶ್ಚರಾಯ ನಮಃ ಓಂ

ಓಂ ಹಿಂ ಶಂ ಶನಯೇ ನಮಃ

ಓಂ ಶಂ ಶನೈಶ್ಚರಾಯ ನಮಃ ಎಂದು ಶನಿ ಬೀಜ ಮಂತ್ರ ಹೇಳಿ.

ಹನುಮಂತನನ್ನು ಪೂಜಿಸಿ

ಹನುಮಂತನನ್ನು ಪೂಜಿಸಿ

ಶನಿವಾರ ಹನುಮಂತನನ್ನು ಭಕ್ತಿಯಿಂದ ಪೂಜಿಸಿದರೆ ಶನಿಯ ಹನುಮಂತನ ಕೃಪೆಯ ಜೊತೆಗೆ ಶನಿಯ ಕೃಪೆಗೆ ಪಾತ್ರರಾಗುವಿರಿ. ಹಿಂದೂ ಪುರಾಣದ ಪ್ರಕಾರ ಹನುಮಂತ ಶನಿ ದೇವನನ್ನು ರಾಕ್ಷಸ ರಾವಣನಿಂದ ಕಾಪಾಡುತ್ತಾನೆ. ಆದ್ದರಿಂದ ಹನುಮಂತನಿಗೆ ಪೂಜೆ ಸಲ್ಲಿಸಿದರೆ ಶನಿ ದೇವ ನಿಮ್ಮನ್ನು ಹರಿಸುತ್ತಾನೆ.

 ದಾನ ಮಾಡಿ

ದಾನ ಮಾಡಿ

ಶನಿವಾರ ನಿಮ್ಮ ಕೈಯಲ್ಲಿ ಆದಷ್ಟು ಬಡವರಿಗೆ ದಾನ ಮಾಡಿ. ಯಾವುದೇ ಫಲ ಅಪೇಕ್ಷೆಯಿಲ್ಲದೆ ದಾನ ಮಾಡಬೇಕು.

ಮನೆಯನ್ನು ಸ್ವಚ್ಛವಾಗಿ ಇಡಬೇಕು

ಮನೆಯನ್ನು ಸ್ವಚ್ಛವಾಗಿ ಇಡಬೇಕು

ನೀವು ಮನೆಯಲ್ಲಿರುವ ಕಸವೆಲ್ಲಾ ತೆಗೆದು ಸ್ವಚ್ಛವಾಗಿಡಬೇಕು. ಮುರಿದ ವಸ್ತುಗಳನ್ನು ಹೊರಗಡೆ ಹಾಕಿ. ಮನೆಯನ್ನು ಮಾತ್ರವಲ್ಲ ಮನಸ್ಸನ್ನು ಶುದ್ಧ ಮಾಡಿ, ನಿಮ್ಮಲ್ಲಿರುವ ಎಲ್ಲಾ ಋಣಾತ್ಮಕ ಚಿಂತೆಗಳನ್ನು ಹೊರಹಾಕಿ.

ಆಲದ ಮರ ಹಾಗೂ ಕಾಗೆಯನ್ನು ಪೂಜಿಸಿ

ಆಲದ ಮರ ಹಾಗೂ ಕಾಗೆಯನ್ನು ಪೂಜಿಸಿ

ಶನಿವಾರ ಸ್ವಲ್ಪ ಸಾಸಿವೆಯೆಣ್ಣೆಯನ್ನು ಆಲದ ಮರಕ್ಕೆ ಹಾಕಿ ಪೂಜಿಸಿ ಅಲ್ಲದೆ ಶನಿವಾರ ಕಾಗೆಗಳಿಗೆ ತಿನ್ನಲು ಕೊಡಿ. ಇದರಿಂದ ಶನಿಯ ಕೃಪೆಗೆ ಪಾತ್ರರಾಗುವಿರಿ.

English summary

How To Worship Lord Shani To Keep Your Karma In Check In Kannada

How to worship Lord Shani to keep your karma in check in Kannada, Read on...
X