For Quick Alerts
ALLOW NOTIFICATIONS  
For Daily Alerts

ಹನುಮಂತನ ಪೂಜೆಗೆ ಮಂಗಳವಾರ ತುಂಬಾ ಶ್ರೇಷ್ಠ ಏಕೆ? ಪೂಜೆಯ ವಿಧಾನಗಳೇನು?

|

ಹಿಂದೂ ಧರ್ಮದ ಪ್ರಕಾರ ವಾರದ 7 ದಿನಗಳಲ್ಲಿ ಪ್ರತಿಯೊಂದು ದಿನವೂ ದೇವರ ಆರಾಧನೆಯಲ್ಲಿ ವಿಶೇಷವಾದ ದಿನಗಳು. ಭಾನುವಾರ ಸೂರ್ಯ, ಸೋಮವಾರ ಶಿವ ಹೀಗೆ ವಾರದ ಏಳೂ ದಿನಗಳಲ್ಲಿ ಬೇರೆ-ಬೇರೆ ದೇವರ ಆರಾಧನೆ ಮಾಡಲಾಗುವುದು. ಮುಕ್ಕೋಟಿ ದೇವರುಗಳನ್ನು ಯಾರು ಯಾವಾಗ ಬೇಕಾದರೂ ಪೂಜಿಸಬಹುದು, ಆದರೆ ಕೆಲವೊಂದು ವಿಶೇಷ ದಿನಗಳಲ್ಲಿ, ವಿಶೇಷ ಸಮಯದಲ್ಲಿ, ವಿಶೇಷ ಸಂದರ್ಭಗಳಲ್ಲಿ ಪೂಜಿಸಿದರೆ ಹೆಚ್ಚಿನ ಫಲ ಸಿಗುವ ಕಾರಣ ಆ ದಿನಗಳಲ್ಲಿ ಭಕ್ತರು ಉಪವಾಸವಿದ್ದು ತಮ್ಮ ಇಷ್ಟ ದೈವರ ಆರಾಧನೆ ಮಾಡುತ್ತಾರೆ. ನಾವಿಲ್ಲಿ ಹನುಮಂತನ ಪೂಜೆಗೆ ಶ್ರೇಷ್ಠ ದಿನ ಮಂಗಳವಾರ ಏಕೆ, ಪೂಜಾ ವಿಧಿಗಳೇನು ಎಂಬ ಮಾಹಿತಿ ನೀಡಿದ್ದೇವೆ ನೋಡಿ.

ಶ್ರೀರಾಮನ ಭಕ್ತ ಹನುಮಂತನನ್ನೂ ಮಂಗಳವಾರ ಹಾಗೂ ಶನಿವಾರದೆಂದು ಪೂಜಿಸಲಾಗುವುದು. ಹಿಂದೂ ಪುರಾಣಗಳ ಪ್ರಕಾರ ವಾಯು ಪುತ್ರ ಚೈತ್ರ ಮಾಸದ ಹುಣ್ಣಿಮೆಯೆಂದು ಜನಿಸಿದನು ಎಂದು ಹೇಳಲಾಗುತ್ತದೆ. ಆದ್ದರಿಂದ ಹನುಮಾನ್‌ ಜಯಂತಿಯನ್ನು ಆ ದಿನದಂದು ಆಚರಿಸಲಾಗುವುದು. ಹನುಮಂತನು ಚಿರಂಜೀವಿ ಅಂದ್ರೆ ಸಾವಿಲ್ಲದವ, ಆದ್ದರಿಂದ ಆತ ಒಂದಲ್ಲಾ ಒಂದು ರೂಪದಲ್ಲಿ ಈಗಲೂ ಇದ್ದಾನೆ ಹಾಗೂ ಕಷ್ಟದಲ್ಲಿ ಇರುವವರನ್ನು ಎಂದಿಗೂ ಕೈ ಬಿಡಲ್ಲ ಎಂಬುವುದು ಆತನ ನಂಬುವ ಭಕ್ತರ ಅಚಲ ನಂಬಿಕೆ.

ಹನುಮಂತನ ಪೂಜೆ ಮಂಗಳವಾರ ತುಂಬಾ ಶ್ರೇಷ್ಠ, ಏಕೆ?

ಹನುಮಂತನ ಪೂಜೆ ಮಂಗಳವಾರ ತುಂಬಾ ಶ್ರೇಷ್ಠ, ಏಕೆ?

ಮಂಗಳವಾರ ತುಂಬಾ ಶುಭಕರವಾದ ದಿನವಾಗಿರುವುದರಿಂದ ಈ ದಿನದಂದು ಹನುಮಂತನ ಪೂಜಿಸಿದರೆ ಬದುಕಿನಲ್ಲಿ ಯಶಸ್ಸು ದೊರೆಯುವುದು, ನೆಮ್ಮದಿ, ಸಂತೋಷ ನೆಲೆಸುವುದು ಹಾಗೂ ಸವಾಲುಗಳನ್ನು ಎದುರಿಸುವ ಛಲ ದೊರೆಯುವುದು ಎಂದು ಹೇಳಲಾಗುವುದು. ಆದ್ದರಿಂದಲೇ ಹನುಮಂತನ ಗುಡಿಗಳಲ್ಲಿ ಮಂಗಳವಾರದೆಂದು ವಿಶೇಷ ಪೂಜೆ ಇರುತ್ತದೆ.

ಹನುಮಂತನ ಪೂಜಾ-ವಿಧಿಗಳೇನು?

ಹನುಮಂತನ ಪೂಜಾ-ವಿಧಿಗಳೇನು?

* ಹನುಮಂತನ ಭಕ್ತರು ಮಂಗಳವಾರ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಉಪವಾಸ ವ್ರತ ಕೈಗೊಂಡರೆ ಒಳ್ಳೆಯದು.

* ನಂತರ ಸಮೀಪದ ಹನುಮಂತನ ಗುಡಿಗೆ ಹೋಗಿ ಕೈ ಮುಗಿಯಬೇಕು.

* ಭಜರಂಗಿಗೆ ಹೂ, ಹಣ್ಣುಗಳು, ಸುಗಂಧ ಕಡ್ಡಿಗಳನ್ನು ಅರ್ಪಿಸಿ, ದೀಪ ಬೆಳಗಬೇಕು.

* ಇನ್ನು ನೀವು ಆಲದ ಮರದ ಎಲೆಯಲ್ಲಿ ಶ್ರೀ ರಾಮ್ ಎಂದು ಬರೆದಿರುವ ಮಾಲೆಯನ್ನು ಹನುಮಂತನಿಗೆ ಅರ್ಪಿಸಿ.

* ನಂತರ ಆಲದ ಮರಕ್ಕೆ ನೀರು ಹಾಕಿ ಸುತ್ತು ಬಂದು ಹನುಮಾನ್ ಚಾಲೀಸ ಮಂತ್ರಗಳನ್ನು ಹೇಳಿ.

ಹನುಮಾನ ಚಾಲೀಸಾ ಮಂತ್ರ

ಹನುಮಾನ ಚಾಲೀಸಾ ಮಂತ್ರ

ಜಯ ಹನುಮಾನ್ ಜ್ಞಾನ ಗುಣಸಾಗರ ! ಜಯ ಕಪೀಶ ತಿಹುಲೋಕ ವುಜಾಗರ

ರಾಮದೂತ ಆತುಲಿತ ಬಲಧಮಾ

ಅಂಜನೀಪ್ರತ್ರ- ಪವನಸುತ ನಾಮಾ

ಮಹಾವೀರ ವಿಕ್ರಮ ಬಜರಂಗೀ ಕುಮತಿ ನಿವಾರಾ ಸುಮತಿ ಕೇ ಸಂಗೀ

ಕಂಚನವರಣ ವಿರಾಜ ಸುವೇಶಾ ಕಾನನ ಕುಂಡಲ ಕುಂಚಿತ ಕೇಶಾ

ಈ ಮಂತ್ರದ ಬಳಿಕ ಆರತಿ ತೆಗೆದುಕೊಳ್ಳಿ.

ಕಷ್ಟಗಳು ದೂರವಾಗಲು ಏನು ಮಾಡಬೇಕು

ಕಷ್ಟಗಳು ದೂರವಾಗಲು ಏನು ಮಾಡಬೇಕು

ಜೀವನದಲ್ಲಿ ತುಂಬಾ ಕಷ್ಟಗಳು ಎದುರಾಗುತ್ತಿದ್ದರೆ ಹನುಮಂತನನ್ನು ಭಕ್ತಿಯಿಂದ ಪ್ರಾರ್ಥಿಸಿ ಪ್ರಸಾದವನ್ನು ಅರ್ಪಿಸಿ, ಆ ಪ್ರಸಾದ ಹಂಚಿ. ಅಲ್ಲದೆ ಪ್ರತಿದಿನ ಹನುಮಾನ್‌ ಚಾಲೀಸ ಹೇಳುವುದರಿಂದ ಬದುಕಿನಲ್ಲಿ ಶುಭ ಫಲಗಳು ಕಂಡು ಬರುವುದು.

English summary

How To Worship Lord Hanuman On Tuesday And Saturday In Kannada

How to worship Lord Hanuman on Tuesday and Saturday in Kannada...
Story first published: Monday, June 28, 2021, 18:15 [IST]
X
Desktop Bottom Promotion