For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ ಉಪ್ಪು ಬಳಸಿ ಮನೆಯ ಸಂಪತ್ತು ಹೆಚ್ಚಿಸುವುದು ಹೇಗೆ?

|

ಯುಗದಿಂದಲೂ, ಆಹಾರದ ರುಚಿಯನ್ನು ಕಾಪಾಡುವಲ್ಲಿ ಉಪ್ಪು ಪ್ರಧಾನ ಪಾತ್ರ ವಹಿಸುತ್ತಿದೆ. ಉಪ್ಪಿಲ್ಲದೇ ಯಾವುದೇ ಆಹಾರವು ಸಂಪೂರ್ಣವಾಗಲಾರದು. ಅದಕ್ಕೆ ಪರಿಪೂರ್ಣತೆ ದೊರೆಯಲಾರದು. ಇಂತಹ ಉಪ್ಪು ಆಹಾರ ತಯಾರಿಸುವಲ್ಲಿ ಮಾತ್ರವಲ್ಲದೇ ವಾಸ್ತು ವಿಷಯದಲ್ಲೂ ಬಹಳ ಮುಖ್ಯ ಸ್ಥಾನ ಹೊಂದಿದೆ. ಮನೆಯಲ್ಲಿ ಪಾಸಿಟಿವ್ ವಾತಾವರಣವನ್ನು ಕಾಪಾಡಿಕೊಳ್ಳುವಲ್ಲಿ ಜೊತೆಗೆ ಮನೆಯ ವಾಸ್ತು ದೋಷವನ್ನು ನಿವಾರಣೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದು ಸಾಮಾನ್ಯ ಸಂಗತಿ.

astrological uses of salt

ಆದರೆ ಮನೆಯಲ್ಲಿನ ಸಂಪತ್ತು ಕಾಪಾಡಿಕೊಳ್ಳಲು ಈ ಉಪ್ಪು ಸಹಾಯ ಮಾಡುತ್ತೆ ಅಂದ್ರೆ ನಂಬ್ತೀರಾ? ಹೌದು, ಈ ಉಪ್ಪನ್ನು ಮನೆಯ ವಾಸ್ತುವಿಕೆ ತಕ್ಕಂತೆ ಇಡೋದ್ರಿಂದ ನಿಮ್ಮ ಮನೆಯಲ್ಲಿ ಸಂಪತ್ತು, ಹಣ ವೃದ್ಧಿಯಾಗಿ ಬಡತನ ನಿರ್ಮೂಲನೆಯಾಗುತ್ತೆ. ಹಾಗಾದ್ರೆ ಬನ್ನಿ, ಇಂತಹ ಉಪ್ಪನ್ನು ಮನೆಯ ಯಾವ ಮೂಲೆಯಲ್ಲಿ ಹೇಗೆ ಇಟ್ಟರೆ ನಿಮಗೆ ಉತ್ತಮ ಫಲಿತಾಂಶ ಲಭ್ಯವಾಗುತ್ತೆ ಎಂಬುದನ್ನು ನೋಡೋಣ.

ಮನೆಯಲ್ಲಿ ಸಂಪತ್ತು ನೆಲೆಸಲು ಉಪ್ಪನ್ನು ಈ ಕೆಳಗಿನಂತೆ ಬಳಸಬೇಕು:

ವಿಧಾನ 1:

ವಿಧಾನ 1:

ವಾಸ್ತು ಶಾಸ್ತ್ರದ ಪ್ರಕಾರ, ಸ್ವಲ್ಪ ಉಪ್ಪು ಮತ್ತು 4-5 ಲವಂಗವನ್ನು ಗಾಜಿನ ಪಾತ್ರೆಯಲ್ಲಿ ಅಥವಾ ಬಟ್ಟಲಿನಲ್ಲಿ ಹಾಕುವಂತೆ ಹಾಕಬೇಕು. ನಂತರ ಈ ಗಾಜಿನ ಬಟ್ಟಲನ್ನು ಮನೆಯ ಯಾವುದಾದರೊಂದು ಮೂಲೆಯಲ್ಲಿ ಇಡಿ. ಇದನ್ನು ಮಾಡುವುದರಿಂದ ಮನೆಯಲ್ಲಿ ಹಣ ಹಾಗೂ ಸಂಪತ್ತಿನ ಜೊತೆಗೆ, ಮನೆಯಲ್ಲಿ ಶಾಂತಿ, ಸಂತೋಷ, ಸಮೃದ್ಧಿ ನೆಲೆಸಿರುತ್ತದೆ. ಇದಲ್ಲದೆ, ಮನೆಯಲ್ಲಿ ಉಪ್ಪು ಮತ್ತು ಲವಂಗ ನೀರನ್ನು ಬಳಸುವುದರಿಂದ ಮನೆಯು ವಿಭಿನ್ನ ರೀತಿಯ ಸುಗಂಧದಿಂದ ಕೂಡಿರುತ್ತದೆ.

ವಿಧಾನ 2:

ವಿಧಾನ 2:

ಮನೆಯಲ್ಲಿ ಹಣದ ಹರಿವನ್ನು ಕಾಪಾಡಿಕೊಳ್ಳಲು, ಗಾಜಿನ ಹೂದಾನಿ ತೆಗೆದುಕೊಂಡು, ಅದನ್ನು ನೀರಿನಿಂದ ತುಂಬಿಸಿ, ಉಪ್ಪು ಸೇರಿಸಿ. ಇದನ್ನು ಮನೆಯ ನೈರುತ್ಯ ಮೂಲೆಯಲ್ಲಿ ಇರಿಸಿ. ಇದರೊಂದಿಗೆ, ಗಾಜಿನ ಹಿಂಭಾಗದಲ್ಲಿ ಕೆಂಪು ಬಣ್ಣದ ಬಲ್ಬ್ ಅನ್ನು ಹಾಕಿ. ಇದರಿಂದಾಗಿ ಬಲ್ಬ್ ಬೆಳಗಿದಾಗಲೆಲ್ಲಾ ಕಿರಣಗಳು ನೇರವಾಗಿ ಗಾಜಿನ ಮೇಲೆ ಬೀಳುತ್ತವೆ. ಗಾಜಿನಲ್ಲಿ ನೀರು ಖಾಲಿಯಾದಾಗಲೆಲ್ಲಾ ಹೂಜಿಯನ್ನು ಸ್ವಚ್ಛಗೊಳಿಸಿ ಹಾಗೂ ಮತ್ತೇ ಉಪ್ಪು ಹಾಕಿ ಇಡಿ.

ವಿಧಾನ 3:

ವಿಧಾನ 3:

ವಾಸ್ತು ಪ್ರಕಾರ ಉಪ್ಪನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದು ಕಾಸ್ಮಿಕ್ ಶಕ್ತಿಯನ್ನು ನೀಡುವುದರಿಂದ, ಉಪ್ಪನ್ನು ಮನೆಯಾದ್ಯಂತ ಬಳಸಬಹುದು ಮತ್ತು ಮನೆಯ ಮೂಲೆಗಳಲ್ಲಿ ಇಡಬಹುದು. ಉಪ್ಪನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿಡಿ. ಇದು ನಿಮ್ಮ ಮನೆಯ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದರಿಂದ ಮನೆಯಲ್ಲಿಯೇ ಸಂಪತ್ತು ವೃದ್ಧಿಯಾಗಿ ಕೆಟ್ಟ ಶಕ್ತಿಗಳು ಮನೆ ಪ್ರವೇಶಿಸದಂತೆ ಕಾಪಾಡುತ್ತದೆ. ಉಪ್ಪುನೀರನ್ನು ನಿಯಮಿತವಾಗಿ ಬದಲಾಯಿಸಿ. ಆದಾಗ್ಯೂ, ಅದನ್ನು ಒಟ್ಟಾರೆ ಎಸೆಯಬೇಡಿ. ಅದನ್ನು ಶೌಚಾಲಯದಲ್ಲಿ ಫ್ಲಶ್ ಮಾಡಿ ಅಥವಾ ಸಿಂಕ್‌ನಲ್ಲಿ ಚೆಲ್ಲಿ. ಈ ಉಪ್ಪು ನೀರು ಚೆಲ್ಲದಂತೆ ಹಾಗೂ ಯಾರೂ ಮುಟ್ಟದಂತೆ ಎಚ್ಚರಿಕೆ ವಹಿಸಿ.

ವಾಸ್ತುಶಾಸ್ತದಲ್ಲಿ ಉಪ್ಪಿಗೆ ಮಹತ್ವದ ಸ್ಥಾನ

ವಾಸ್ತುಶಾಸ್ತದಲ್ಲಿ ಉಪ್ಪಿಗೆ ಮಹತ್ವದ ಸ್ಥಾನ

ಕೇವಲ ಸಂಪತ್ತು ಅಥವಾ ಹಣದ ಉಳಿವಿಕೆಗಾಗಿ ಮಾತ್ರ ಈ ಉಪ್ಪನ್ನು ಬಳಕೆ ಮಾಡುವುದಿಲ್ಲ. ವಾಸ್ತುಶಾಸ್ತದಲ್ಲಿ ಈ ಉಪ್ಪು ಅತ್ಯುನ್ನತ ಸ್ಥಾನವನ್ನು ಪಡೆದಿದೆ. ಮನೆಗೆ ಸಂಬಂಧಿಸಿದ ಯಾವುದೇ ರೀತಿಯ ವಾಸ್ತು ದೋಷಗಳಿದ್ದರೂ ಈ ಉಪ್ಪಿನಿಂದ ಸರಿ ಪಡಿಸಿಕೊಳ್ಳಬಹುದು. ಅಡುಗೆ ಕೋಣೆ, ಸ್ನಾನಗೃಹ, ಮಲಗುವ ಕೋಣೆ ಇವುಗಳಿಗೆ ಸಂಬಂಧಿಸಿದ ಯಾವುದೇ ವಾಸ್ತುದೋಷಗಳಿದ್ದರೂ, ಉಪ್ಪಿನ ನಿರ್ದಿಷ್ಟ ಬಳಕೆಯ ವಿಧಾನದಿಂದ ಪರಿಹಾರ ಮಾಡಬಹುದು.

English summary

How To Use Salt To Avoid Money Problems At Home?

Here we told about How to Use Salt to Avoid Money Problems at Home, read on.
X
Desktop Bottom Promotion