Just In
- 9 min ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 1 hr ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- 9 hrs ago
ಶನಿವಾರದ ದಿನ ಭವಿಷ್ಯ (14-12-2019)
- 19 hrs ago
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
Don't Miss
- News
ಭಾರತ್ ಬಚಾವೋ ಕಹಳೆ ಮೊಳಗಿಸಿದ ಕಾಂಗ್ರೆಸ್
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Technology
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಗಣೇಶ ಚತುರ್ಥಿ 2019: ಸರಳವಾಗಿ ಪರಿಸರ ಸ್ನೇಹಿ ಗಣಪನ್ನು ತಯಾರಿಸುವುದು ಹೇಗೆ?
ಸಾಮಾನ್ಯವಾಗಿ ಹಬ್ಬಗಳೆಂದರೆ ಹೆಣ್ಣು ಮಕ್ಕಳ ಹಬ್ಬ ಎಂದು ಹಬ್ಬದ ಪ್ರಕ್ರಿಯೆಲ್ಲಿ ಭಾಗವಹಿಸಲು ಹಿಂದೇಟು ಹಾಕುವ ಗಂಡು ಮಕ್ಕಳು, ಪುಟ್ಟ ಮಕ್ಕಳು ಸಹ ಇಷ್ಟಪಟ್ಟು ಆಚರಿಸುವ ಹಬ್ಬ ಗಣೇಶ ಚತುರ್ಥಿ.
ಈಗಾಗಲೇ ಗಣೇಶನ ಅಬ್ಬರ ಎಲ್ಲೆಡೆ ಆರಂಭವಾಗಿದೆ, ಬೀದಿಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಭಿನ್ನ ಭಿನ್ನ ಗಣೇಶ ಮೂರ್ತಿಗಳು ರಾಸಾಯನಿಕ ಬಣ್ಣಕಟ್ಟಿಕೊಂಡು ರಾರಾಜಿಸುತ್ತಿದೆ.
ಆದರೆ ನಾವೆಲ್ಲಾ ಬಣ್ಣಗಳಲ್ಲೇ ಕಳೆದುಹೋದ, ಕೇವಲ ಆಕರ್ಷಣೆಗೆ ಮಾತ್ರ ಸೀಮಿತವಾದ ಗಣಪನನ್ನು ಪ್ರತಿಷ್ಠಾಪಿಸುವ ಹಾಗೂ ವಿಸರ್ಜಿಸುವ ಭರದಲ್ಲಿ ಪರಿಸರದ ಬಗ್ಗೆ ಕಾಳಜಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಹಿಂದಿನಂತೆ ಮಣ್ಣಿನ ಗಣಪ ನಾಪತ್ತೆಯಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್, ರಾಸಾಯನಿಕ ಗಣಪನ ಮೂರ್ತಿಗಳು ಎಲ್ಲೆಡೆ ತಲೆ ಎತ್ತುತ್ತಿದೆ, ಗಣಪನ ವಿಸರ್ಜನೆ ಮೂಲಕ ನೈಸರ್ಗಿಕದತ್ತವಾದ ನೀರನ್ನು ಸಂಪೂರ್ಣ ಕಲುಷಿತಗೊಳಿಸುತ್ತಿದ್ದೇವೆ.

ಮಣ್ಣಿನ ಗಣೇಶನ ಶ್ರೇಷ್ಠ
ನೆನಪಿಡಿ ಮಣ್ಣಿನಿಂದ ಮಾಡಿದ ಗಣೇಶನ ಆರಾಧನೆಯೇ ಶ್ರೇಷ್ಟ. ಪರಿಸರಕ್ಕೆ ತೊಡಕು ಉಂಟುಮಾಡುವುದನ್ನು ಯಾವ ಭಗವಂತನ ಸಹಿಸುವುದಿಲ್ಲ. ನಮ್ಮನ್ನ ಸಲಹುತ್ತಿರುವ ಪರಿಸರಕ್ಕೆ ಕ್ಷೋಭೆಯಾಗದಂತೆ ಮೂರ್ತಿಯನ್ನ ಸಿದ್ಧಪಡಿಸುವುದು ಧರ್ಮಸಮ್ಮತ.

ಪರಿಸರ ಸ್ನೇಹಿ ಗಣಪನ್ನು ಆರಾಧಿಸೋಣ
ಬನ್ನಿ ಎಲ್ಲರೂ ಕೈಜೋಡಿಸಿ ಈ ಬಾರಿ ಪರಿಸರ ಸ್ನೇಹಿ ಗಣಪನ್ನು ನಾವೇ ತಯಾರಿಸಿ ಮನೆಗಳಲ್ಲಿ ಪೂಜಿಸೋಣ. ರಾಸಾಯನಿಕಗಳು ಇಲ್ಲದೆಯೂ ಸುಂದರ ವಿಗ್ರಹ ತಯಾರಿಸಲು ಖಂಡಿತ ಸಾಧ್ಯವಿದೆ. ಹಿಟ್ಟುಗಳು, ಜೇಡಿಮಣ್ಣು, ಕಾಗದಗಳಿಂದಲೂ ವಿಗ್ರಹ ತಯಾರಿಸಿ ಬಣ್ಣ ಲೇಪಿಸಬಹುದು. ಮನೆಯಲ್ಲೇ ನೀರಿನಲ್ಲಿ ನಿರಾಯಾಸವಾಗಿ ಕರಗುವ ಗಣಪ ಪರಿಸರ ಸ್ನೇಹಿಯೂ ಹೌದು, ಪೂಜಿಸಲು ಸೂಕ್ತವೂ ಹೌದು. ಆದರೆ ಪರಿಸರ ಸ್ನೇಹಿ ಗಣಪ ಎಲ್ಲಾ ಕಡೆಯೂ ಸಿಗುವುದಿಲ್ಲ ಅಂತ ನಿರಾಶರಾಗಬೇಕಿಲ್ಲ. ಮನಸ್ಸು ಮಾಡಿದರೆ ನೀವೇ ಸ್ವತ: ಗಣೇಶ ಮೂರ್ತಿ ತಯಾರಿಸಬಹುದು. ಗಣಪನನ್ನು ಮನೆಯಲ್ಲೇ ಸರಳವಾಗಿ ತಯಾರಿಸಬಹುದು, ಇಲ್ಲಿದೆ ಕೆಲವು ಸಲಹೆಗಳು.

ಜೇಡಿಮಣ್ಣಿನಲ್ಲಿ ಪರಿಸರ ಸ್ನೇಹಿ ಗಣಪನನ್ನು ತಯಾರಿಸುವುದು ಹೇಗೆ?
1. ನೀವು ತಯಾರಿಸಲು ಇಚ್ಚಿಸುವ ಅಳತೆಗೆ ಸಾಧ್ಯವಾದಷ್ಟು ಶುದ್ಧವಾದ ಜೇಡಿಮಣ್ಣನ್ನು ತೆಗೆದುಕೊಳ್ಳಿ
2. ಜೇಡಿಮಣ್ಣು ಮೂರ್ತಿಯಾಗಿಸಲು ಹದ ಬರುವಷ್ಟು ನೀರನ್ನು ಬೆರೆಸಿ
3. ಮೊದಲಿಗೆ ಗಣಪನ ಕಿವಿ, ಸೊಂಡಿಲು, ಸಣ್ಣ ಸಣ್ಣ ಗುಂಡುಗಳು (ಮೋದಕ) ಹೊಟ್ಟೆಯ ಸುತ್ತ ಸರ್ಪವನ್ನು ಸಿದ್ಧಪಡಿಸಿ
4. ಮರದ ತುಂಡಿನ ಮೇಲೆ ಪಾದದಿಂದ ಆರಂಭಿಸಿ ಕಾಲು, ಹೊಟ್ಟೆ, ಭುಜ, ಕೈ ಬೆರಳುಗಳನ್ನು ತಯಾರಿಸಿ.
5. ಗಣಪನ ಧೋತಿಗೆ ಸಣ್ಣ ಟೂಥ್ ಪಿಕ್ ಅಥವಾ ಸ್ಪೂನ್ ನಿಧಂ ಗುರುತು ಮಾಡಿ
6. ಅಂತಿಮವಾಗಿ ತಲೆಯ ಭಾಗವನ್ನು ನಿಧಾನವಾಗಿ ದೇಹದ ಅಳತೆಗೆ ಹೊಂದುವಂತೆ ಆನೆಯ ಮುಖವನ್ನು ತಯಾರಿಸಿ
7. ನಂತರ ಮೊದಲೇ ಸಿದ್ಧಪಡಿಸಿದ್ದ ಕಿವಿ, ಸೊಂಡಿಲು ಮೋದಕವನ್ನು ಅಳತೆಗೆ ಅನುಗುಣವಾಗಿ ಸರಿಯಾದ ಸ್ಥಳದಲ್ಲಿ ಜೋಡಿಸಿ
8. ನಂತರ ಟೂಥ್ ಪಿಕ್ ಬಳಸಿ ಗಣೇಶನಿಗೆ ಆಭರಣಗಳು, ವಸ್ತ್ರವನ್ನು ವಿನ್ಯಾಸ ಮಾಡಿ
9. ಅಂತಿಮವಾಗಿ ಅರಿಶಿನ, ಕುಂಕುಮ ಸೇರಿದಂತೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಗಣೇಶನಿಗೆ ಇನ್ನಷ್ಟು ಮೆರಗು ನೀಡಿ
ಇದೇ ವಿಧಾನದಲ್ಲಿ ಹಿಟ್ಟುಗಳು, ಜೇಡಿಮಣ್ಣು, ಟೊಪೋಯಿಕಾ ಪುಡಿ, ಕಾಗದಗಳಿಂದಲೂ ವಿಗ್ರಹ ತಯಾರಿಸಬಹುದು. ಅರಿಶಿನ ಇದ್ದಿಲು, ಅಳಲೇಕಾಯಿ, ಅರಿಶಿನ, ಕುಂಕುಮ, ಅಶ್ವಗಂಧ, ವಿಭೂತಿ, ಗೋಪಿಚಂದನದಿಂದ ಸಹ ಗಣೇಶನನ್ನು ತಯಾರಿಸಿ ಅದಕ್ಕೆ ಬಣ್ಣ ಲೇಪಿಸಬಹುದು.

ಗಣಪ ಮೂರ್ತಿಯಲ್ಲಿ ಸಸ್ಯದ ಬೀಜ
ಇನ್ನು ಮುಂದುವರೆದು ಗಣೇಶನ ವಿಗ್ರಹವನ್ನು ತಯಾರಿಸುವ ವೇಳೆ ಹೂವು, ಹಣ್ಣು, ತರಕಾರಿಯ ಬೀಜಗಳನ್ನು ಇಡಬಹುದು. ಗಣೇಶ ಸಂಪೂರ್ಣವಾಗಿ ಕರಗಿದ ನಂತರ ಈ ನೀರನ್ನು ಮಣ್ಣಿನಲ್ಲಿ ಹಾಕುವುದರಿಂದ ಸಸ್ಯಗಳು ಬೆಳೆಯುತ್ತದೆ. ಪರಿಸರ ಸ್ನೇಹಿ ಗಣೇಶ ಹಬ್ಬದ ಸಾರ್ಥಕತೆ ಸಹ ಸಿಗುತ್ತದೆ.