For Quick Alerts
ALLOW NOTIFICATIONS  
For Daily Alerts

ಶುಕ್ರವಾರ: ಮನದ ಬಯಕೆ ಈಡೇರಲು ಮುತ್ತೈದೆಯರು ವೈಭವ ಲಕ್ಷ್ಮಿ ವ್ರತ ಹೇಗೆ ಆಚರಿಸಬೇಕು?

|

ವೈಭವ ಲಕ್ಷ್ಮಿ ವ್ರತ ಇದನ್ನು ಸುಮಂಗಲಿಯರ ವ್ರತವೆಂದು ಕರೆಯಬಹುದು. ಏಕೆಂದರೆ ಈ ವ್ರತವನ್ನು ಮುತ್ತೈದೆಯರು ಮಾತ್ರ ಮಾಡುತ್ತಾರೆ. ಪ್ರತೀ ಶುಕ್ರವಾರ ಈ ವ್ರತ ಮಾಡುವುದರಿಂದ ಮನದ ಬಯಕೆಗಳು ಈಡೇರುವುದು. ಆದ್ದರಿಂದ ಮದುವೆಯಾದವರು ಈ ವ್ರತವನ್ನು ಆಚರಿಸುತ್ತಾರೆ.

ಈ ವ್ರತವನ್ನು ಶುಕ್ರವಾರ ಪ್ರಾರಂಭಿಸಬೇಕು. ಈ ವ್ರತವನ್ನು ಒಟ್ಟು 11 ಅಥವಾ 21 ಶುಕ್ರವಾರ ಆಚರಿಸಲಾಗುವುದು. ವೈಭವ ಲಕ್ಷ್ಮಿ ವ್ರತ ಆಚರಿಸಿದರೆ ಜೀವನದಲ್ಲಿರುವ ಕಷ್ಟಗಳು ದೂರವಾಗುವುದು, ಸಂತೋಷ ಹೆಚ್ಚುವುದು.

ವಿವಾಹಿತ ಮಹಿಳೆಯರ ಜೀವನದಲ್ಲಿ ಹಲವಾರು ಸವಾಲುಗಳು, ಕಷ್ಟಗಳು ಎದುರಾದರೆ ಭಕ್ತಿಯಿಂದ ವೈಭವ ಲಕ್ಷ್ಮಿ ವ್ರತ ಮಾಡಿದರೆ ಸಾಕು ಅವರ ಕಷ್ಟಗಳು ದೂರವಾಗುವುದು ಅಲ್ಲದೆ ಮನದ ಬಯಕೆಗಳು ಈಡೇರುವುದು.

ವೈಭವ ಲಕ್ಷ್ಮಿ ವ್ರತದ ಪ್ರಯೋಜನಗಳು

ವೈಭವ ಲಕ್ಷ್ಮಿ ವ್ರತದ ಪ್ರಯೋಜನಗಳು

ವೈಭವ ಲಕ್ಷ್ಮಿ ವ್ರತ ಶುಕ್ರವಾರದೆಂದು ಆಚರಿಸಬೇಕು. ಶುಕ್ರವಾರ ಲಕ್ಷ್ಮಿಯ ದಿನ, ಈ ದಿನ ಆಕೆಯನ್ನು ಆರಾಧಿಸಿದರೆ ಸಂಪತ್ತು ವೃದ್ಧಿಯಾಗುವುದು. ಈ ವ್ರತವನ್ನು ಮಾಡುವವರು ಮೊದಲು ಅದರ ಬಗ್ಗೆ ನಂಬಿಕೆ ಇರಬೇಕು, ಅಲ್ಲದೆ ಶ್ರದ್ಧೆಯಿಂದ ಈ ವ್ರತವನ್ನು ಆಚರಿಸಬೇಕು. ಆಗ ನಾವು ಮನಸ್ಸಿನಲ್ಲಿ ಏನು ಬಯಸಿದೆವೋ ಅದು ಈಡೇರುವುದು.

ಒಂದು ವೇಳೆ ಈ ವ್ರತವನ್ನು ಆಚರಿಸುವಾಗ ಒಂದು ವಾರ ಮಾಡಲು ಸಾಧ್ಯವಾಗದಿದ್ದರೆ ಮುಂದಿನ ವಾರ ಮುಮದುವರೆಸಬಹುದು.

ವೈಭವ ಲಕ್ಷ್ಮಿ ವ್ರತ ಆಚರಿಸುವುದು ಹೇಗೆ?

ವೈಭವ ಲಕ್ಷ್ಮಿ ವ್ರತ ಆಚರಿಸುವುದು ಹೇಗೆ?

* ಮದುವೆಯಾದ ಮಹಿಳೆಯರು ಈ ವ್ರತವನ್ನು ಮಾಡಬೇಕು.

* ಮನಸ್ಸಿನಲ್ಲಿ ಏನಾದರೂ ಬಯಕೆ ಇದ್ದರೆ ಅದನ್ನು ಈಡೇರಲು ಸಂಕಲ್ಪ ತೆಗೆದುಕೊಂಡು ವ್ರತವನ್ನು ಆಚರಿಸಿ.

* ಪುರುಷರೂ ಈ ವ್ರತವನ್ನು ಮಾಡಬಹುದು

* ಯಾರೇ ಈ ವ್ರತವನ್ನು ಮಾಡುವುದಾದರೂ ಅವರಿಗೆ ಈ ವ್ರತದಲ್ಲಿ ತುಂಬಾ ನಂಬಿಕೆ ಇರಬೇಕು. ತುಂಬಾ ಶ್ರದ್ಧೆಯಿಂದ ಈ ವ್ರತವನ್ನು ಆಚರಿಸಬೇಕು.

* ಈ ವ್ರತವನ್ನು 11 ಅಥವಾ 21 ಶುಕ್ರವಾರಗಳವರೆಗೆ ಆಚರಿಸಬೇಕು.

* ಈ ವ್ರತವನ್ನು ಶಾಸ್ತ್ರದ ಪ್ರಕಾರ ಮಾಡಬೇಕು, ಅದು ತಪ್ಪಿದರೆ ಇದರ ಫಲ ಸಿಗಲ್ಲ.

* ಈ ವ್ರತವನ್ನು ಮಾಡುವವರು ಆಗಾಗ 'ಜೈ ಮಾ ಲಕ್ಷ್ಮಿ' ಎಂದು ಆಗಾಗ ಪಠಿಸುತ್ತಲೇ ಇರಿ.

* ಪೂಜೆಯನ್ನು ಶ್ರೀ ಯಂತ್ರದ ಮುಂದೆ ಮಾಡಿ

* 11 ಶುಕ್ರವಾರ ಆಚರಿಸುವುದು ಎಂದು ನಿರ್ಧರಿಸಿದರೆ 11 ವಾರ ತಪ್ಪದೆ ಮಾಡಬೇಕು, ಒಂದು ವೇಳೆ ಒಂದು ವಾರ ತಪ್ಪಿದರೆ ಮುಂದಿನ ವಾರ ಅದನ್ನು ಮಾಡಬೇಕು. 11 ಅಥವಾ 21 ಶುಕ್ರವಾರ ಮಾಡಬೇಕು, ತಪ್ಪಿಸಬಾರದು.

* ಪೂಜೆಯ ಬಳಿಕ ಮಹಾಲಕ್ಷ್ಮಿ ಸ್ತುತಿ ಪಠಿಸಿ.

* ಈ ದಿನ ಲಕ್ಷ್ಮಿಯ ಪುಸ್ತಕಗಳನ್ನು ಹಂಚಿ.

* ಇನ್ನು ವ್ರತ ಮಾಡುವವರು ಈ ದಿನ ಹಾಲು, ಹಣ್ಣುಗಳನ್ನು ಸೇವಿಸಬಹುದು ಅಲ್ಲದೆ ಪೂಜೆಯಾದ ಬಳಿಕ ಒಂದು ಹೊತ್ತಿನ ಆಹಾರ ಸೇವಿಸಬಹುದು.

ಏನು ಮಾಡಬಾರದು?

ಏನು ಮಾಡಬಾರದು?

* ವೈಭವ ಲಕ್ಷ್ಮಿ ವ್ರತವನ್ನು ಅರ್ಧಕ್ಕೆ ನಿಲ್ಲಿಸಬಾರದು.

* ಈ ವ್ರತವನ್ನು ಅರೆ ಮನಸ್ಸಿನಿಂದ ಮಾಡಬಾರದು.

* ಮನಸ್ಸಿನಲ್ಲಿ ಯಾವುದೇ ಕೆಟ್ಟ ಆಲೋಚನೆ ಇರಬಾರದು, ಪೂರ್ಣ ಮನಸ್ಸಿನಿಂದ ಲಕ್ಷ್ಮಿಯನ್ನು ಆರಾಧಿಸಬೇಕು.

ಲಕ್ಷ್ಮಿಯ ಅವತಾರ ಶ್ರೀಯಂತ್ರ

ಲಕ್ಷ್ಮಿಯ ಅವತಾರ ಶ್ರೀಯಂತ್ರ

ವೈಭವ ಲಕ್ಷ್ಮಿ ಪೂಜೆಯಲ್ಲಿ ಶ್ರೀ ಯಂತ್ರವನ್ನು ಬಳಸಿ. ಇದು ಲಕ್ಷ್ಮಿಯ ಅನೇಕ ಅವತಾರಗಳಲ್ಲಿ ಒಂದಾಗಿದೆ. ಈ ಅವತಾರಕ್ಕೆ ಗೌರವನ್ನು ಸಲ್ಲಿಸಿದ ಬಳಿಕ ವ್ರತವು ನೆರವೇರುವುದು.

ವೈಭವ ಲಕ್ಷ್ಮಿ ಪೂಜೆಯ ಮುನ್ನ ಗಣೇಶನ ಆರಾಧಿಸಿ

ವೈಭವ ಲಕ್ಷ್ಮಿ ಪೂಜೆಯ ಮುನ್ನ ಗಣೇಶನ ಆರಾಧಿಸಿ

ಹಿಂದೂ ಧರ್ಮದಲ್ಲಿ ಎಲ್ಲಾ ಪೂಜೆಗಳಿಗೆ ಮುನ್ನ ಗಣೇಶನ ಆರಾಧಿಸಲಾಗುವುದು, ವೈಭವ ಲಕ್ಷ್ಮಿ ವ್ರತ ಮಾಡುವವರು ಕೂಡ ಮೊದಲು ವಿಘ್ನ ನಿವಾರಕನನ್ನು ಆರಾಧಿಸಬೇಕು.

ಪೂಜೆಯಲ್ಲಿ ಅಕ್ಕಿ ಪಾಯಸ, ಸಿಹಿ ಖಾದ್ಯಗಳು, ಹೂ, ಹಣ್ಣುಗಳು, ಅರಿಶಿಣ, ಕುಂಕುಮ, ನಾಣ್ಯಗಳು, ತುಳಸಿ, ರೋಸ್‌ ವಾಟರ್, ಶುದ್ಧ ನೀರು ಇವುಗಳನ್ನು ಅರ್ಪಿಸಬೇಕು.

English summary

How To Do Vaibhav Lakshmi Vrat For Married Women To Fulfill Their Desires in kannada

How to do Vaibhav Lakshmi Vrat for married women to fulfill their desires, read on....
Story first published: Wednesday, June 30, 2021, 16:14 [IST]
X
Desktop Bottom Promotion