For Quick Alerts
ALLOW NOTIFICATIONS  
For Daily Alerts

ಶ್ರಾವಣ ಮೊದಲ ಸೋಮವಾರದ ವಿಶೇಷವೇನು? ಪೂಜೆ ಹೇಗಿರಬೇಕು?

|

ಶ್ರಾವಣ ಮಾಸ ಆಗಸ್ಟ್‌ 9ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 17ರವರೆಗೆ ಇರುತ್ತದೆ. ಆಗಸ್ಟ್‌ 9 ಶ್ರಾವಣ ಸೋಮವಾರ.

ಶ್ರಾವಣ ಸೋಮವಾರಕ್ಕೆ ತುಂಬಾ ವಿಶೇಷವಿದೆ. ಶಿವನನ್ನು ಪೂಜಿಸಿ ಒಲಿಸಿಕೊಳ್ಳಲು ಈ ದಿನ ತುಂಬಾ ಒಳ್ಳೆಯದಂದು ಹೇಳಲಾಗುತ್ತದೆ. ಶ್ರಾವಣ ಸೋಮವಾರದಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಶಿವನಿಗೆ ಪ್ರಿಯವಾದ ಹೂಗಳಿಂದ ಅರ್ಚನೆ ಮಾಡಿ, ಶಿವ ಮಂತ್ರ ಹೇಳಿ ಪೂಜೆ ಸಲ್ಲಿಸಲಾಗುವುದು.

How To Do Shravan Somwar Pooja and What Is Speciality First Shravan Somwar

ಶ್ರಾವಣ ಸೋಮವಾರ ಶಿವನಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗುವುದರಿಂದ ಕಷ್ಟಗಳು ದೂರವಾಗುವುದು. ಇಲ್ಲಿ ಸೋಮವಾರ ಶಿವನ ಪೂಜೆ ಹೇಗಿರಬೇಕೆಂದು ಹೇಳಲಾಗಿದೆ ನೋಡಿ:

 ಶಿವ ಪೂಜೆಗೆ ಬಿಲ್ವೆ ಪತ್ರೆ

ಶಿವ ಪೂಜೆಗೆ ಬಿಲ್ವೆ ಪತ್ರೆ

ಶಿವನಿಗೆ ಖುಷಿಯಾಗಲು ಯಾವ ಆಡಂಬರದ ಪೂಜೆ ಬೇಕಾಗಿಲ್ಲ, ಭಕ್ತಿಯಿಂದ ಬಿಲ್ವೆ ಪತ್ರೆ ಎಲೆಗಳನ್ನು ಅರ್ಪಿಸಿದರಷ್ಟೇ ಸಾಕು ನಿಮ್ಮ ಬಯಕೆ ನೆರವೇರುವುದು.

ಶಿವಪೂಜೆಗೆ ಬಿಲ್ವಪತ್ರೆ ಎಲೆಗಳ ಆಯ್ಕೆ ಹೇಗಿರಬೇಕು?

ಶಿವಪೂಜೆಗೆ ಬಿಲ್ವಪತ್ರೆ ಆಯ್ಕೆ ಮಾಡುವಾಗ ಆ ಎಲೆ ಹುಳಗಳು ತಿಂದು ಹಾಳಾಗಿರಬಹುದು, ಹರಿದಿರಬಹುದು, ಬಿಳಿ ಚುಕ್ಕಿಗಳು ಇರಬಾರದು. ಮೂರು ಎಲೆಗಳಿರುವ ದಂಟನ್ನು ಕಿತ್ತು ತಂದು ಶಿವನಿಗೆ ಅರ್ಪಿಸಬೇಕು. ಶಿವನಿಗೆ ಬಿಲ್ವಪತ್ರೆಯ ಮಾಲೆ ಮಾಡಿ ಹಾಕಬಹುದು, ಬಿಲ್ವಪತ್ರೆ ಎಲೆಗಳ ಜತೆಗೆ ಕಾಯಿಗಳನ್ನೂ ಪೂಜೆಗೆ ಅರ್ಪಿಸಬಹುದು.

ಬಿಲ್ವಪತ್ರೆಗಳನ್ನು ಹೇಗೆ ಅರ್ಪಿಸಬೇಕು?

ಬಿಲ್ವಪತ್ರೆಗಳನ್ನು ಹೇಗೆ ಅರ್ಪಿಸಬೇಕು?

ಬಿಲ್ವಪತ್ರೆಗಳನ್ನು ಲಿಂಗಕ್ಕೆ ಅರ್ಪಿಸುವಾಗ ಎಲೆಯ ತೊಟ್ಟು ನಮ್ಮ ಕಡೆಗೆ ಬರುವಂತೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಆ ಎಲೆಗಳಿಂದ ಬರುವ ಧನಾತ್ಮಕ ಶಕ್ತಿ ನಮ್ಮ ಆವರಿಸುತ್ತದೆ. ಬಿಲ್ವಪತ್ರೆ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ, ಎಲೆಗಳ ತುದಿಗಳನ್ನು ಶಿವನ ಕಡೆಗೆ ಇರುವಂತೆ ಅರ್ಪಿಸಿದರೆ ಆಗ ಬಲ್ವಪತ್ರೆ ಯಾರು ಅರ್ಪಿಸುತ್ತಾರೋ ಅವರಿಗೆ ಮಾತ್ರ ಶಿವತತ್ತ್ವ ಸಿಗುತ್ತದೆ.

ಬಿಲ್ವಪತ್ರೆ ಸೋಮವಾರ ಏಕೆ ಅರ್ಪಿಸಬೇಕು?

ಸೋಮವಾರ ಶಿವಪೂಜೆಗೆ ಶ್ರೇಷ್ಠವಾದ ದಿನ, ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ. ಬೆಳಗ್ಗೆ ಎದ್ದು ಸ್ನಾನ ಮಾಡಿ ಬಿಳಿ ಬಣ್ಣದ ಮಡಿ ಬಟ್ಟೆ ಧರಿಸಬೇಕು. ಬಿಲ್ವಪತ್ರೆಯನ್ನು ಅರ್ಚನೆ ಮಾಡುವಾಗ ಓಂ ನಮಃ ಶಿವಾಯ ಎಂಬ ಮಂತ್ರ ಪಠಣೆ ಮಾಡುತ್ತಾ ಶಿವಲಿಂಗಕ್ಕೆ ಒಂದೊಂದೇ ಎಲೆಗಳನ್ನು ಅರ್ಪಿಸಬೇಕು. ಬಿಲ್ವಪತ್ರೆ ಎಲೆಗಳು ಶಿವಲಿಂಗವನ್ನು ಮುಚ್ಚುವಂತೆ ಅರ್ಪಣೆ ಮಾಡಬೇಕು. ಬಿಲ್ವ ಪತ್ರೆ ಎಲೆಗಳ ಜತೆಗೆ ಶ್ರೀಗಂಧ, ಹೂಗಳು, ಹಣ್ಣುಗಳು, ಎಳ್ಳುಗಳನ್ನು ಅರ್ಪಿಸಬಹುದು.

ಮನೆಗೆ ಗೋಮೂತ್ರ ಸಿಂಪಡಿಸಿ

ಮನೆಗೆ ಗೋಮೂತ್ರ ಸಿಂಪಡಿಸಿ

ಪೂಜೆಗೆ ಮುನ್ನ ಮನೆಯನ್ನು ಸ್ವಚ್ಛ ಮಾಡಿ ಗೋಮೂತ್ರ ಸಿಂಪಡಿಸಿ ಶುದ್ಧ ಮಾಡಬೇಕು. ಇದರಿಂದ ಮನೆಯಲ್ಲಿ ಏನಾದರೂ ನಕಾರಾತ್ಮಕ ಶಕ್ತಿಯಿದ್ದರೆ ಅದು ಇಲ್ಲವಾಗಿ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು. ಗೋಮೂತ್ರ ಸಿಗದೇ ಇದ್ದವರು ತೀರ್ಥದ ನೀರನ್ನು ಸಿಂಪಡಿಸಬಹುದು.

ಶಿವನಿಗೆ ನೈವೇದ್ಯ

ಅವರವರ ಭಾವ, ಭಕ್ತಿಗೆ ತಕ್ಕಂತೆ ನೈವೇದ್ಯ ಅರ್ಪಿಸಬಹುಉದ. ಕೆಲವರು ಖರ್ಜೂರ, ಕಲ್ಲು ಸಕ್ಕರೆ ನೈವೇದ್ಯ ಅರ್ಪಿಸಿದರೆ, ಕೆಲವರು ಹಾಲು, ನೀರು, ಜೇನು ತುಪ್ಪ, ಎಳನೀರು, ಸಕ್ಕರೆ, ಖರ್ಜೂರ, ಮೊಸರು, ತುಪ್ಪ, ಹಣ್ಣುಗಳಿಂದ ಅಭಿಷೇಕ ಮಾಡಲಾಗುವುದು.

ಶ್ರಾವಣ ಮೊದಲ ಸೋಮವಾರದ ವಿಶೇಷವೇನು?

ಶ್ರಾವಣ ಮೊದಲ ಸೋಮವಾರದ ವಿಶೇಷವೇನು?

2020ರಲ್ಲಿ ಜುಲೈ 27ರಂದು ಮೊದಲ ಸೋಮವಾರ ಬಂದಿದೆ. ಈ ವರ್ಷ 5 ಶ್ರಾವಣ ಸೋಮವಾರ ಬಂದಿದೆ. ಮೊದಲ ಶ್ರಾವಣ ಸೋಮವಾರದಂದು ಪೂಜೆ ಸಲ್ಲಿಸುವುದರಿಂದ ಸೌಭಾಗ್ಯ ಯೋಗ, ದ್ವಿಪುಷ್ಕರ ಯೋಗ ಲಭಿಸುವುದು. ಈ ದಿನ ದಂಪತಿ ಸುಖ ದಾಂಪತ್ಯಕ್ಕಾಗಿ ಶಿವ-ಪಾರ್ವತಿಯನ್ನು ಪೂಜಿಸಬೇಕು. ಇನ್ನು ಮದುವೆ ವಯಸ್ಸಿನ ಹೆಣ್ಣು ಮಕ್ಕಳು ಶಿವನಂಥ ಪತಿ ದೊರೆಯಲಿ ಎಂದು ಬೇಡಿ ಪೂಜೆ ಸಲ್ಲಿಸುತ್ತಾರೆ.

ಈ ದಿನ ಎಳ್ಳು ಹಾಗೂ ಬಡವರಿಗೆ ಆಹಾರಗಳನ್ನು ದಾನ ಮಾಡಿದರೆ ಒಳ್ಳೆಯದು.

English summary

How To Do Shravan Somwar Pooja and What Is Speciality First Shravan Somwar

Shravan month known to worship lord shiva, Here are first shravan somwar speciality and how to dompooja in somwar, Have a look.
X
Desktop Bottom Promotion