For Quick Alerts
ALLOW NOTIFICATIONS  
For Daily Alerts

ಶನಿ ದೋಷ, ಕಷ್ಟದಿಂದ ಮುಕ್ತಿಗೆ ಶನಿವಾರ ಶನಿ ದೇವನ ಪೂಜೆ ಹೇಗಿರಬೇಕು?

|

ಶನಿವಾರವೆಂಬುವುದು ನ್ಯಾಯದ ದೇವರು ಶನಿಗೆ ಮೀಸಲಾದ ದಿನ. ಈ ದಿನ ಶನಿಯನ್ನು ಆರಾಧಿಸಿದರೆ ಶನಿ ದೋಷ, ಕಷ್ಟಗಳು ನೀಗುವುದು ಎಂಬ ನಂಬಿಕೆಯಿದೆ. ಮನುಷ್ಯನ ಕರ್ಮಕ್ಕೆ ತಕ್ಕ ಫಲ ಶನಿ ನೀಡುವುದು ಎಂದು ಹೇಳಲಾಗುವುದು.

ಶನಿವಾರ ಸಂಜೆ ಯಾರು ಶನಿ ದೇವನಿಗೆ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಾರೋ ಅವರ ಕಷ್ಟಗಳು ಶನಿಯ ಕೃಪೆಯಿಂದಾಗಿ ದೂರವಾಗಿವುದು, ಸಾಡೇಸಾತಿ ಸಮಸ್ಯೆ ಇರುವವರಿಗೆ ಉತ್ತಮ ಪರಿಹಾರವೂ ಸಿಗುವುದು.

ಶನಿ ದೇವನ ಕೃಪೆಗಾಗಿ ಶನಿವಾರ ಏನು ಮಾಡಬೇಕು?

ಶನಿ ದೇವನ ಕೃಪೆಗಾಗಿ ಶನಿವಾರ ಏನು ಮಾಡಬೇಕು?

ಶನಿವಾರ ಸಂಜೆ ಶನಿಯ ಪೂಜೆ ಮಾಡುವಾಗ ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ. ಕಪ್ಪು, ನೀಲಿ, ಬೂದು ಬಣ್ಣದ ಬಟ್ಟೆಯನ್ನು ಈ ದಿನ ಧರಿಸಬೇಡಿ.

50 ಗ್ರಾಂ ಉದ್ದಿನ ಬೇಳೆ, 50 ಗ್ರಾಂ ಕಪ್ಪು ಎಳ್ಳು, 50 ಗ್ರಾಂ ಸಾಸಿವೆಯೆಣ್ಣೆ, ಎರಡೂವರೆ ಮೀಟರ್ ಕಪ್ಪು ಬಟ್ಟೆ, 5 ಕಬ್ಬಿಣದ ಮೊಳೆ, ಒಣ ಹಣ್ಣುಗಳು ಅಥವಾ ಸಿಹಿ ಜೊತೆಗೆ ದೇವಾಲಯಕ್ಕೆ ಹೋಗಬೇಕು.

ನಂತರ ದೇವಾಲಯದಲ್ಲಿ ಕೂತು ಶನಿ ದೇವನನ್ನು ಧ್ಯಾನಿಸಿ. ಅವನನ್ನು ಗುಣಗಾನ ಮಾಡಿ.

ಶನಿ ದೇವನ ಮಂತ್ರ ಪಠಿಸಿ

ಶನಿ ದೇವನ ಮಂತ್ರ ಪಠಿಸಿ

"ಓಂ ಹಿಲ್ಮ್ ಶಾಮ್ ಶನಾಯ ನಮ"

"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"

"ಓಂ ಶಾಮ್ ಶನೇಶ್ಚಾರ ನಮಃ"

"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"

ಶನಿ ಗಾಯತ್ರಿ ಮಂತ್ರ

ಓಂ ಶನೈಶ್ಚರಾಯ ವಿದ್ಮಯೇ

ಸೂರ್ಯಪುತ್ರಾಯ ದಹಿಮಹಿ

ತನ್ನೊ ಮಂಡಾ ಪ್ರಚೋದಾಯತ್

ಶನಿ ಧ್ಯಾನ ಮಂತ್ರ

ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ

ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ

ದಾನ ಮಾಡಿ

ದಾನ ಮಾಡಿ

ಶನಿ ದೇವನ ಕೃಪೆಗೆ ಪಾತ್ರರಾಗಬೇಕೆಂದರೆ ಈ ದಿನ ನಿರ್ಗತಿಕರಿಗೆ ದಾನ ಮಾಡಬೇಕು. ಹಿರಿಯರನ್ನು, ನಿರ್ಗತಿಕರನ್ನು ನಿಂದಿಸಬಾರದು. ನಿರ್ಗತಿಕರಿಗೆ ಕಪ್ಪು ಎಳ್ಳು, ಆಹಾರ, ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ದಾನ ಮಾಡಬಹುದು.

ಆರತಿ ಮಾಡುವಾಗ ಏನು ಮಾಡಬೇಕು?

ಆರತಿ ಮಾಡುವಾಗ ಏನು ಮಾಡಬೇಕು?

ಆರತಿಯನ್ನು ಶನಿ ದೇವನ ವಿಗ್ರಹದ ಮುಂದೆ ನಿಂತು ಮಾಡಬೇಡಿ, ಶನಿಯ ದೃಷ್ಟಿ ನಿಮ್ಮ ಮೇಲೆ ಬೀಳದಂತೆ ಎಚ್ಚರವಹಿಸಿ. ಸ್ವಲ್ಪ ಬದಿಗೆ ಸರಿದು ಪೂಜೆ ಮಾಡಿ, ಆರತಿ ಬೆಳಗಿ. ನಂತರ ನೀವೂ ಆರತಿ ತಗೊಂಡು ದೇವರಿಗೆ ಪ್ರಸಾದ ಅರ್ಪಿಸಿ. ಬಳಿಕ ಶನಿ ದೇವನ ಮಂತ್ರ ಹೇಳುತ್ತಾ ಧ್ಯಾನಿಸಿ.

ಇದರಿಂದ ಶನಿ ದೋಷ, ಸಾಡೇಸಾತಿ, ಕಷ್ಟಗಳು ಇವೆಲ್ಲಾ ದೂರವಾಗುವುದು.

English summary

How To Do Shani Dev Puja On Saturday in Kannada

Lord Shani is know as god of justice. If one perform Shani puja on Saturday can avoid ill effect of saturn. Here is how to do shani puja on Saturday have a look.
X
Desktop Bottom Promotion