For Quick Alerts
ALLOW NOTIFICATIONS  
For Daily Alerts

ಗಂಡನ ಶ್ರೇಯೋಭಿವೃದ್ಧಿಗಾಗಿ ಭೀಮನ ಅಮವಾಸ್ಯೆ ಪೂಜಾ ವಿಧಿಗಳೇನು? ನಿಯಮಗಳೇನು?

|

ಆಷಾಢ ಅಮವಾಸ್ಯೆ, ಭೀಮನ ಅಮವಾಸ್ಯೆಯನ್ನು ಜುಲೈ 28ರಂದು ಆಚರಿಸಲಾಗುತ್ತಿದೆ. ಈ ದಿನ ಮುತ್ತೈದೆಯರು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುತ್ತಾರೆ, ಇದನ್ನು ಭೀಮನ ಅಮಾವಾಸ್ಯೆವ್ರತ, ಜ್ಯೋತಿಸ್ತಂಭ ವ್ರತ ಎಂದು ಕೂಡ ಕರೆಯಲಾಗುವುದು.

ಈ ದಿನ ಮುತ್ತೈದೆಯರು ಕೈಗೆ ಕಂಕಣ ಕಟ್ಟಿಕೊಂಡು ಜ್ಯೋರ್ತಿರ್ಭೀಮೇಶ್ವರನ್ನು ಧ್ಯಾನಿಸಿ, ವ್ರತ ಮಾಡುತ್ತಾರೆ. ಈ ವ್ರತವನ್ನು ರಾಹುಕಾಲದಲ್ಲಿ ಹೊರತು ಪಡೆಸಿ
ಉಳಿದ ಸಮಯದಲ್ಲಿ ಕೈಗೊಳ್ಳಬಹುದು.

2022ರಲ್ಲಿ ಭೀಮನಅಮಾವಾಸ್ಯೆ ಪೂಜೆಗೆ ಶುಭ ಸಮಯ ಹಾಗೂ ಪೂಜಾ ವಿಧಾನಗಳ ಬಗ್ಗೆ ತಿಳಿಯೋಣ:

ಭೀಮನ ಅಮಾವಾಸ್ಯೆ ಪೂಜೆಗೆ ಶುಭ ಸಮಯ

ಭೀಮನ ಅಮಾವಾಸ್ಯೆ ಪೂಜೆಗೆ ಶುಭ ಸಮಯ

ಭೀಮನ ಅಮಾವಾಸ್ಯೆ ಶುಭ ಮುಹೂರ್ತ: ಜುಲೈ 27, ರಾತ್ರಿ 9:11ರಿಂದ

ಭೀಮನ ಅಮಾವಾಸ್ಯೆ ಮುಕ್ತಾಯ: ಜುಲೈ 28 ಗುರುವಾರ ರಾತ್ರಿ 11:24ಕ್ಕೆ

ರಾಹುಕಾಲ ಹೊರತು ಪಡಿಸಿ ಯಾವುದೇ ಸಮಯದಲ್ಲಿ ಪೂಜೆಯನ್ನು ಮಾಡಬಹುದು.

ಯಾರು ಆಚರಿಸುತ್ತಾರೆ?

ಯಾರು ಆಚರಿಸುತ್ತಾರೆ?

ಕನ್ಯೆಯರು, ನವಾಹಿತ ಹೆಣ್ಮಕ್ಕಳು ಭೀಮನ ಅಮವಾಸ್ಯೆ ಮಾಡುತ್ತಾರೆ. ಹೆಣ್ಮಕ್ಕಳು ಒಳ್ಳೆಯ ಬಾಳ ಸಂಗಾತಿಗಾಗಿ ಈ ವ್ರತ ಮಾಡಿದರೆ, ಮುತ್ತೈದೆಯರು ಪತಿಯ ಆಯುಸ್ಸು, ಆರೋಗ್ಯಕ್ಕಾಗಿ ಈ ವ್ರತ ಮಾಡುತ್ತಾರೆ.

ಈ ವ್ರತವನ್ನು ಒಮ್ಮೆ ಮಾಡಿದರೆ ಐದು, ಒಂಭತ್ತು, 16 ವರ್ಷ ಮಾಡಬೇಕು ಎಂಬ ನಿಯಮವಿದೆ.

ನವ ವಿವಾಹಿತ ಹೆಣ್ಮಕ್ಕಳು ಆಷಾಢದಲ್ಲಿ ತಾಯಿ ಮನೆಗೆ ಹೋಗುವ ಪದ್ಧತಿ ಇದೆ. ಭೀಮನ ಅಮಾವಾಸ್ಯೆಗೆ ಹಿಂತಿರುಗಿ, ಗಂಡನ ಪಾದ ಮುಟ್ಟಿ ನಮಸ್ಕರಿಸಿ ಈ ವ್ರತ ಮಾಡುತ್ತಾರೆ.

ಪೂಜಾ ವಿಧಾನ:

ಪೂಜಾ ವಿಧಾನ:

ಒಂದು ತಟ್ಟೆಯಲ್ಲಿ ಧಾನ್ಯ ರಾಶಿ (ಅಕ್ಕಿ) ಹಾಕಿ , ಅದರ ಮೇಲೆ 2 ದೀಪದ ಕಂಭ ಇಡಬೇಕು. ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು .

ಪೂಜಾ ಸಾಮಾಗ್ರಿಗಳು:

ಮಣೆ / ಮಂಟಪ, ಭೀಮೇಶ್ವರ ದೇವರ ಪಟ * ನಂದಾ ದೀಪ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಬತ್ತಿ

* ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು

* ಅರಿಶಿನ, ಕುಂಕುಮ, ಮಂತ್ರಾಕ್ಷತೆ

* ಶ್ರೀಗಂಧ, ಊದಿನ ಕಡ್ಡಿ

* ವಿವಿಧ ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ

* ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ,ದಕ್ಷಿಣೆ

* ನೈವೇದ್ಯ - ಪಾಯಸ, ಹಣ್ಣು..ಭಂಡಾರಕ್ಕೆ ಮಾಡಿದ ಹಿಟ್ಟಿನ ಪದಾರ್ಥ

*ಆರತಿ ತಟ್ಟೆ, ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ.

9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು. ಸಂಕಲ್ಪದಿಂದ ಮೊದಲುಗೊಂಡು ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು. ಗಣಪತಿ ಅಷ್ಟೋತ್ತರ, ಶಿವ ಅಷ್ಟೋತ್ತರ, ದೇವರ ಆವಾಹನೆ,ಸ್ಥಾಪನೆ, ಅರ್ಚಣೆ, ಹೂವು, ನೈವೇದ್ಯ ಅರ್ಪಣೆ, ಆರತಿಯೊಂದಿಗೆ ಒಂದು ಹಂತ ಪೂಜೆ ಸಮಾಪ್ತಿಗೊಳಿಸಬಹುದು.

English summary

How to do Bheemana Amavasya pooja for husband well being in kannada

Bheemana Amavasya: How to do pooja for husband well being, what are rituals should follow read on...
X
Desktop Bottom Promotion