For Quick Alerts
ALLOW NOTIFICATIONS  
For Daily Alerts

ನಾಗರ ಪಂಚಮಿ: ನಾಗದೇವತೆಯ ಪೂಜಾ ವಿಧಾನ ಹಾಗೂ ಪಠಿಸಬೇಕಾದ ಮಂತ್ರ

|

ನಾಗರ ಪಂಚಮಿ ಹಬ್ಬ ಬಂತೆಂದರೆ ಸಾಲು-ಸಾಲು ಹಬ್ಬಗಳು ಶುರುವಾದೆವು ಎಂದೇ ಲೆಕ್ಕ. ಹಿಂದೂ ಸಂಪ್ರದಾಯದಲ್ಲಿ ಹಲವು ಪ್ರಾಣಿಗಳೂ ಪೂಜ್ಯಸ್ಥಾನ ಪಡೆದಿವೆ. ಗೋವು, ಕೋತಿ, ನಂದಿ, ಮೊದಲಾದವುಗಳನ್ನು ನಾವು ದೇವರಿಗೆ ಸಮಾನವಾಗಿ ಕಾಣುತ್ತೇವೆ. ಮನೆಯ ಪ್ರಾರಂಭೋತ್ಸವದಲ್ಲಿಯೂ ಗೋವನ್ನು ಮನೆಯೊಳಗೆ ತರುತ್ತಾರೆ. ರಾಜಸ್ಥಾನದಲ್ಲಿ ಇಲಿಗಳಿಗಾಗಿಯೇ ಒಂದು ದೇವಾಲಯವಿದೆ! ಪೂಜೆಗೊಳಪಡುವ ಇನ್ನೊಂದು ಜೀವಿಯೆಂದರೆ ಹಾವು.

ಪುರಾತನಕಾಲದಿಂದಲೂ ದೇವರ ಶಕ್ತಿಯ ವಿವಿಧ ರೂಪಗಳನ್ನು ಆರಾಧಿಸುವ ಹಿಂದೂಗಳು ಶ್ರಾವಣ ಮಾಸದ ಐದನೆಯ ದಿನ ಅರ್ಧಚಂದ್ರನಿರುವ ರಾತ್ರಿಹೊತ್ತಿನಲ್ಲಿ ನಾಗದೇವತೆಗೆ ಪೂಜೆ ಸಲ್ಲಿಸುವ ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಶ್ರಾವಣ ಮಾಸ ಹಿಂದೂ ಕ್ಯಾಲೆಂಡರ್‌ನ ಒಂದು ಮಾಸವಾಗಿದ್ದು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜುಲೈ ಆಗಸ್ಟ್ ತಿಂಗಳಲ್ಲಿ ಆಗಮಿಸುತ್ತದೆ.

ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ. ಇಂದಿನ ಲೇಖನದಲ್ಲಿ ನಾಗರ ಪಂಚಮಿ ಪೂಜೆಗೆ ಬೇಕಾಗಿರುವ ಪೂಜಾ ಸಾಮಾಗ್ರಿಗಳೇನು ಎಂಬುದನ್ನು ತಿಳಿದುಕೊಳ್ಳೋಣ...

ಪೂಜಾ ಸಾಮಾಗ್ರಿಗಳು

ಪೂಜಾ ಸಾಮಾಗ್ರಿಗಳು

ಕೆಂಪು ಮಣ್ಣು ಅಥವಾ ದನದ ಸೆಗಣಿಯಿಂದ ರಚಿಸಿದ ಹಾವಿನ ಚಿತ್ರವನ್ನು ಪೂಜೆಗೆ ಬಳಸಬೇಕು. ನೀವು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಈ ಪೂಜೆಯನ್ನು ಮಾಡುವಿರಾ ಎಂಬುದನ್ನು ಆಧರಿಸಿ ಇದರ ಅವಶ್ಯಕತೆ ನಿಮಗಿದೆ. ಸಿಹಿ ಹಾಲು, ಅಗರಬತ್ತಿ, ಕರ್ಪೂರ, ಹಣ್ಣು, ಧಾನ್ಯಗಳು, ಅರಶಿನ ಪೇಸ್ಟ್, ಬೇಳೆಕಾಳುಗಳು, ಹೂವುಗಳು, ಹಾಲು ಮತ್ತು ಇತರ ವಸ್ತುಗಳನ್ನು ನೀವು ನೀಡಲು ಆಯ್ಕೆ ಮಾಡಿಕೊಳ್ಳಿ.

ಪೂಜಾ ವಿಧಾನ

ಪೂಜಾ ವಿಧಾನ

ದೇವಸ್ಥಾನದಲ್ಲಿ ನೀವು ಪೂಜೆ ಮಾಡುವುದಾದರೆ ನಾಗನ ಚಿತ್ರ ನಿಮಗೆ ಬೇಕು. ಆಲದ ಮರದ ಅಡಿಯಲ್ಲಿ ನಾಗನ ಪ್ರತಿಮೆಗಳನ್ನು ಹೆಚ್ಚಿನ ದೇವಸ್ಥಾನಗಳು ಹೊಂದಿರುತ್ತವೆ. ಮಹಿಳೆಯರು ಆಲದ ಮರದಡಿಯಲ್ಲಿ ನಾಗರ ಪಂಚಮಿಯಂದು ಈ ಪ್ರತಿಮೆಗೆ ಹಾಲೆರೆಯುತ್ತಾರೆ ಅಂತೆಯೇ ಪ್ರತಿಮೆಯನ್ನು ಶುದ್ಧ ಮಾಡಿ ಅರಿಶಿನದ ಪೇಸ್ಟ್ ಹಚ್ಚುತ್ತಾರೆ. ನಂತರ ಸಿಹಿ ಹಾಲು, ಹಣ್ಣು ಮತ್ತು ಧಾನ್ಯಗಳನ್ನು ಪ್ರತಿಮೆಯ ಮುಂದೆ ಇಟ್ಟು ಪೂಜಿಸುತ್ತಾರೆ.

ಪೂಜಾ ನಿಯಮಗಳು

ಪೂಜಾ ನಿಯಮಗಳು

ನಾಗರ ಪಂಚಮಿಯ ದಿನದಂದು ಜನರು ಯಾವುದೇ ಹುರಿದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಬಾರದು. ಪೂಜೆಗೆ ಬೇಯಿಸಿದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಬೇಕು. ಹಾವಿಗೆ ಯಾವುದೇ ಉಪಟಳವಾಗಬಾರದು ಎಂದು ರೈತರು ಗದ್ದೆಯನ್ನು ಉಳುವುದಿಲ್ಲ. ಕೆಲವರು ಈ ದಿನ ಉಪವಾಸ ಕೈಗೊಂಡು ಸಂಜೆ ಆಹಾರ ಸೇವಿಸುತ್ತಾರೆ.

ನಾಗರ ಪಂಚಮಿ ಪೂಜಾ ಪ್ರಯೋಜನಗಳು

ನಾಗರ ಪಂಚಮಿ ಪೂಜಾ ಪ್ರಯೋಜನಗಳು

ಹಿಂದೂಗಳು ನಾಗರ ಪಂಚಮಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ತಮ್ಮ ಪತಿಯ ದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಹಾಗೂ ನಾಗ ದೋಷ ನಿವಾರಣೆಗೆ ಮಹಿಳೆಯರು ನಾಗರ ಪೂಜೆಯನ್ನು ಮಾಡುತ್ತಾರೆ. ರಾಹು ಮತ್ತು ಕೇತುವಿನ ದೋಷಗಳೇನಾದರೂ ಇದ್ದರೆ ನಾಗನನ್ನು ಪೂಜಿಸುವುದರಿಂದ ಅದು ದೂರಾಗುತ್ತದೆ ಮತ್ತು ಸಂತಸ ಧನ ಪ್ರಾಪ್ತಿ ಉಂಟಾಗುತ್ತದೆ. ಹಾವಿನ ಕನಸುಗಳು ಇಲ್ಲವೇ ಹಾವಿನ ಬಗ್ಗೆ ಭಯವನ್ನು ಜನರು ಹೊಂದಿದ್ದರೆ ಅದು ದೂರಾಗುತ್ತದೆ. ರೈತರಿಗೆ ಹಾವುಗಳು ಸ್ನೇಹಿತರಾಗಿದ್ದು ಬೆಳೆಗಳನ್ನು ನಾಶ ಮಾಡುವ ಇಲಿಗಳನ್ನು ಹಾವು ತಿನ್ನುವುದರಿಂದ ಹಾವು ರೈತರಿಗೆ ದೇವರ ಸಮಾನವಾಗಿದೆ. ಪ್ರಾಕೃತಿಕ ಅಂಶವನ್ನು ಈ ಪೂಜೆ ಒಳಗೊಂಡಿದೆ.

ನಾಗರ ಪಂಚಮಿಯಂದು ಪಠಿಸಬೇಕಾದ ಮಂತ್ರ

ನಾಗರ ಪಂಚಮಿಯಂದು ಪಠಿಸಬೇಕಾದ ಮಂತ್ರ

ಸರ್ವ ನಾಗಹ ಪ್ರಿಯಂತಂ ಮೇ ಯೇ ಕೇಚಿತ್ ಪ್ರಿತ್‌ವಿತ್‌ಲೇ

ಯೇ ಚ ಹೆಲಿಮರಿಚಿಸ್ತ ಯಂತರೇ ದಿವಿ ಸಮಿಸ್ತಿತಃ

ಯೆ ನದೀಶು ಮಹಾಂಗ ಯೆ ಸರಸ್ವತಿ ಗಾಮಿನಃ

ಯೆ ಚ ವಾಪಿ ತದಗಶು ತೇಶು ಸರ್ವೇಶು ವಾಯಿ ನಮಃ

 ನಾಗರ ಪಂಚಮಿ ಮಂತ್ರದ ಅರ್ಥ

ನಾಗರ ಪಂಚಮಿ ಮಂತ್ರದ ಅರ್ಥ

ಭೂಮಿ, ಆಕಾಶ, ಸ್ವರ್ಗ, ಸೂರ್ಯನ ಕಿರಣ, ನದಿ, ನೀರಿನ ಮೂಲಗಳು ಮತ್ತು ಇತರ ಸ್ಥಳಗಳು ಸೇರಿದಂತೆ ಹಾವುಗಳು ವಾಸವಾಗಿರುವ ಯಾವುದೇ ಸ್ಥಳದಲ್ಲಿ ಕೂಡ ನಾವು ಹಾವುಗಳನ್ನು ಸ್ವಾಗತಿಸುತ್ತೇವೆ ಮತ್ತು ನಾವು ಅವುಗಳ ಆರಾಧನೆಯನ್ನು ಮಾಡಿ ಹಾವುಗಳ ಆಶೀರ್ವಾದವನ್ನು ಪಡೆದುಕೊಳ್ಳುತ್ತೇವೆ.

English summary

How to perform Nag Panchami pooja?

Nag Panchami puja performed by the Hindus is dedicated to snake worship. The term Nag in Sanskrit refers to cobra and cobra is considered a highly auspicious reptile associated with most gods in the Hindu iconography. Lord Vishnu reclines on snake bed, Lord Shiva has snakes coiled around his body, Goddess Parvati, Subrahmanya and Ganesha are all shown to wear snakes. Therefore snakes have all the way enjoyed a great importance in Hinduism.
X
Desktop Bottom Promotion