For Quick Alerts
ALLOW NOTIFICATIONS  
For Daily Alerts

ಶಿವ-ಪಾರ್ವತಿಯನ್ನು ಒಟ್ಟಿಗೆ ಪೂಜಿಸುವ ಭೀಮನ ಅಮಾವಾಸ್ಯೆಯ ವ್ರತದ ಪೂಜಾ ವಿಧಿ-ವಿಧಾನಗಳು

By Deepu
|

ಹಿಂದೂ ಧರ್ಮದಲ್ಲಿರುವಷ್ಟು ಹಬ್ಬಗಳು ಮತ್ತು ಆಚರಣೆಗಳು ಬೇರೆ ಯಾವ ಧರ್ಮದಲ್ಲೂ ನಮಗೆ ಕಾಣಲು ಸಿಗುವುದಿಲ್ಲ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಹೀಗೆ ಪ್ರತಿಯೊಂದರಲ್ಲೂ ಆಗುವ ಬದಲಾವಣೆಗಳು ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರತೀ 15 ದಿನಕ್ಕೊಮ್ಮೆ ಹುಣ್ಣಿಮೆ ಮತ್ತು ಅಮವಾಸ್ಯೆ ಬರುತ್ತಾ ಇರುತ್ತದೆ. ಇದೆರಡಕ್ಕೂ ತಮ್ಮದೇ ಆದಂತಹ ವಿಶೇಷತೆಗಳಿವೆ. ಅದರಲ್ಲೂ ಭೀಮನ ಅಮಾವಾಸ್ಯೆಯನ್ನು ಆಷಾಢ ತಿಂಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.

ಯಾವುದೇ ಆಚರಣೆಯಾಗಿರಲಿ ಅದರ ಹಿಂದಿನ ಅರ್ಥ ತಿಳಿದಿದ್ದರೆ ಹಬ್ಬ ಮತ್ತು ಆಚರಣೆಯು ಹೆಚ್ಚು ಫಲಪ್ರದವಾಗಿರುತ್ತದೆ. ಭೀಮನ ಅಮಾವಾಸ್ಯೆಯ ಮಹತ್ವವೇನೆಂದು ನಿಮಗೆ ತಿಳಿದಿದೆಯಾ? ಪೂರ್ಣ ಚಂದ್ರನಾಗಲು ಚಂದ್ರನು ತನ್ನ ತಿರುಗಾಟವನ್ನು ಆರಂಭಿಸುವ ದಿನವನ್ನು ಅಮಾವಾಸ್ಯೆ ಎನ್ನುತ್ತೇವೆ.

ಆಕಾಶದಲ್ಲಿ ಚಂದ್ರ ಕಾಣಿಸಿಕೊಳ್ಳುವ ಈ ದಿನವನ್ನು ಹಿಂದೂಗಳು ತುಂಬಾ ಪವಿತ್ರವೆಂದು ಭಾವಿಸುತ್ತಾರೆ. ನಿಮ್ಮ ಇಹಲೋಕ ತ್ಯಜಿಸಿರುವ ಹಿರಿಯರಿಗೆ ಈ ದಿನ ಏನಾದರೂ ಅರ್ಪಣೆ ಮಾಡಿದರೆ ಅಥವಾ ಪ್ರಾರ್ಥನೆ ಮಾಡಿದರೆ ನಮಗೆ ಅವರಿಂದ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

ಭೀಮನ ಅಮಾವಾಸ್ಯೆ ವ್ರತ- ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ

ಭೀಮನ ಅಮಾವಾಸ್ಯೆಯ ಮಹತ್ವವನ್ನು ತಿಳಿದುಕೊಳ್ಳಬೇಕಾದರೆ ಇದರ ವಿವರಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಅಗಸ್ಟ್ ತಿಂಗಳಲ್ಲಿ ಕಾಣಿಸುವಂತಹ ಮೊದಲ ಚಂದ್ರನನ್ನು ಭೀಮನ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ಹಿಂದೂಗಳಿಗೆ ತುಂಬಾ ಪವಿತ್ರ ಮತ್ತು ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಇದನ್ನು ಆಚರಿಸಲಾಗುತ್ತದೆ. ಭೀಮನ ಅಮವಾಸ್ಯೆಯಂದು ವಿಶೇಷವಾಗಿ ಪೂಜೆಯನ್ನು ನಿರ್ವಹಿಸಲಾಗುತ್ತದೆ. ಇಂದಿನ ಲೇಖನದಲ್ಲಿ ಈ ಪೂಜೆಯನ್ನು ಹೇಗೆ ನಡೆಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ....

ಶಿವ ಮತ್ತು ಪಾರ್ವತಿ ಫೋಟೋ

ಶಿವ ಮತ್ತು ಪಾರ್ವತಿ ಫೋಟೋ

*ಶಿವ ಮತ್ತು ಪಾರ್ವತಿಯನ್ನು ಪ್ರತಿನಿಧಿಸುವ ಮಣ್ಣಿನ ದೀಪಗಳು ಅಥವಾ ಶಿವ ಮತ್ತು ಪಾರ್ವತಿ ಫೋಟೋ ಅಥವಾ ಬೆಳ್ಳಿ ದೀಪಗಳ .

ಹಿಟ್ಟಿನ ಚೆಂಡುಗಳು ಅಥವಾ ಕಡುಬು ಇದರಲ್ಲಿ ನಾಣ್ಯಗಳನ್ನು ಮರೆಮಾಡಿ (ಭಂಡಾರ).

*ತೆಂಬಿಟ್ಟಿ ದೀಪಗಳು ಅಥವಾ ಸಾಂಪ್ರದಾಯಿಕ ದೀಪಗಳು

ಶಿವ ಮತ್ತು ಪಾರ್ವತಿ ಫೋಟೋ

ಶಿವ ಮತ್ತು ಪಾರ್ವತಿ ಫೋಟೋ

*ಹಳದಿ ದಾರ

*ದಾರ - 9 ಗಂಟುಗಳನ್ನು ಹೊಂದಿದ್ದು, ಅರಶಿನದಲ್ಲಿ ಮುಳುಗಿಸಿ ಹೂವಿನೊಂದಿಗೆ ಕಟ್ಟಲಾಗುತ್ತದೆ (9 ಗಂಟಿನ ಗೌರಿ ದಾರ)

*ಹತ್ತಿ

*ಹೂವುಗಳು

*ವೀಳ್ಯದೆಲೆ ಮತ್ತು ಅಡಿಕೆ

*ಬಾಳೆಹಣ್ಣುಗಳು

*ನೀರು ಇರುವ ತೆಂಗಿನಕಾಯಿ

*ಹಣ್ಣುಗಳು

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಈ ಎಲ್ಲಾ ಪೂಜಾ ಸಾಮಾಗ್ರಿಗಳನ್ನು ಅಣಿಗೊಳಿಸಿ ಮತ್ತು ಮನೆಯನ್ನು ಸ್ವಚ್ಛಗೊಳಿಸಿ. ಅದರಲ್ಲೂ ಪೂಜಾ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಿ. ಈ ದಿನ ಹುರಿದ ಪದಾರ್ಥಗಳನ್ನು ಮಾಡಬೇಡಿ.

ಪೂಜೆಗೆ ಸಿದ್ಧತೆ

ಪೂಜೆಗೆ ಸಿದ್ಧತೆ

*ಕಡುಬು ಅಥವಾ ಹಿಟ್ಟಿನ ಮುದ್ದೆಗಳ ಒಳಗೆ ನಾಣ್ಯಗಳನ್ನು ಇರಿಸಿ ಸಿದ್ಧಪಡಿಸಿ. ಇಡ್ಲಿ ಅಥವಾ ಕೊಳಕೊಟ್ಟೆಯ ಒಳಗೆ ಕೂಡ ಕೆಲವರು ನಾಣ್ಯವನ್ನು ಇರಿಸುತ್ತಾರೆ. ಭಂಡಾರವನ್ನು ಅಡಗಿಸುವುದು ಎಂದು ಹೇಳಲಾಗುತ್ತದೆ.

*ಎರಡು ದೀಪಗಳನ್ನು ಖರೀದಿಸಿ ಈ ದಿನ ಪೂಜಿಸುವ ಶಿವ ಪಾರ್ವತಿಯನ್ನು ದೀಪ ಪ್ರತಿಬಿಂಬಿಸುತ್ತದೆ.

ದೀಪವನ್ನು ಸ್ವಚ್ಛಗೊಳಿಸಿ ಮತ್ತು ಅರಶಿನ ಶ್ರೀಗಂಧದ ಪೇಸ್ಟ್ ಹಚ್ಚಿ

ಅರಿಶಿನ ಕೊಂಬಿಗೆ ಕಟ್ಟಲು ಹಳದಿ ದಾರವನ್ನು ಬಳಸಿ ಇದನ್ನು ದೀಪಕ್ಕೆ ಕಟ್ಟಬೇಕು. ಪಾರ್ವತಿ ದೇವಿ ಇದಾಗಿದೆ.

*ಅಕ್ಕಿ ಅಥವಾ ಧಾನ್ಯದ ಮೇಲೆ ದೀಪವನ್ನಿಡಿ ಪೂರ್ವಕ್ಕೆ ದೀಪ ಮುಖ ಮಾಡಿರಲಿ

*ಹತ್ತಿಯನ್ನು ಬಳಸಿ ಮಾಲೆ ತಯಾರಿಸಿ ಮತ್ತು ದೀಪಕ್ಕೆ ಕಟ್ಟಿ

ಪವಿತ್ರ ಅರಿಶಿನ ದಾರ ಅಥವಾ ಹಳದಿ ದಾರವನ್ನು ದೀಪಗಳ ಮುಂದೆ ಅಥವಾ ಕೇಂದ್ರದಲ್ಲಿ ಕಟ್ಟಲಾಗುತ್ತದೆ.

ಪೂಜೆಗೆ ಸಿದ್ಧತೆ

ಪೂಜೆಗೆ ಸಿದ್ಧತೆ

*ಹೂವಿನ ಜೊತೆಯಲ್ಲಿ ಒಂಬತ್ತು ಸ್ಥಳಗಳಲ್ಲಿ ಹಳದಿ ದಾರವನ್ನು ಕಟ್ಟಿರಿ. ದೀಪದ ಮುಂದೆ ದಾರ, ವೀಳ್ಯದೆಲೆಗಳು ಮತ್ತು ಅಡಿಕೆಯನ್ನು ಇರಿಸಿ. ಇದನ್ನು ಮಡಕೆಯಲ್ಲಿಯೂ ಸಹ ಜೋಡಿಸಬಹುದು.

*ಪೂಜಾ ಕೊಠಡಿಯಲ್ಲಿನ ಸಾಮಾನ್ಯ ದೀಪಗಳನ್ನು ಸಾಮಾನ್ಯ ರೀತಿಯಲ್ಲಿ ಅಲಂಕರಿಸಲಾಗುತ್ತದೆ.

*ಪೂಜೆಯಲ್ಲಿ ಭಾಗವಹಿಸಿದವರ ಪೂಜಾ ಸಾಮಾಗ್ರಿಗಳನ್ನು ಹಾಜರಿರುವ ಮಹಿಳೆಯರು ಬಳಸಬಹುದು ಇಲ್ಲದಿದ್ದರೆ ನಿಮ್ಮದೇ ಆದ ದೀಪ ಪೂಜಾ ಪರಿಕರವನ್ನು ಸಿದ್ಧಮಾಡಿ.

ಪೂಜೆ ಮಾಡುವುದು ಹೇಗೆ?

ಪೂಜೆ ಮಾಡುವುದು ಹೇಗೆ?

ಈ ದಿನ ಕಂಬ ದೀಪಗಳನ್ನು ಪೂಜಿಸಲಾಗುತ್ತದೆ. ಅರಿಶಿನ ಮತ್ತು ಕುಂಕುಮ ಬಳಸಿ ಅರ್ಚನೆಯನ್ನು ಮಾಡಿ. ಶಿವ ಪಾರ್ವತಿಗೆ ಸಂಬಂಧಿಸಿದ ಶ್ಲೋಕವನ್ನು ಪಠಿಸಿ

'ಗೌರಿ ಮಂತ್ರ" ವನ್ನು ಪಠಿಸಿ ಗೌರಿ ಪೂಜೆಯನ್ನು ಮಾಡಿ

ತೆಂಗಿನ ಕಾಯಿ, ವೀಳ್ಯದೆಲೆ, ಅಡಿಕೆ, ಒಣ ಹಣ್ಣು, ಹಣ್ಣು, ಬಾಳೆಹಣ್ಣಿನ ನೈವೇದ್ಯ ಮಾಡಿ. ನೈವೇದ್ಯವನ್ನು ಅರ್ಪಿಸುವಾಗ ಕರ್ಪೂರದ ಆರತಿಯನ್ನು ಮಾಡಿ.

ನಿಮ್ಮ ಬಲಕೈಯ ಮಣಿಗಂಟಿಗೆ ಪವಿತ್ರ ದಾರವನ್ನು ಕಟ್ಟಿಕೊಳ್ಳಿ.

ಕಡುಬು ಅಥವಾ ಭಂಡಾರವನ್ನು ಒಡೆಯುವುದು

ಕಡುಬು ಅಥವಾ ಭಂಡಾರವನ್ನು ಒಡೆಯುವುದು

ಅರ್ಧ ಡಜನ್ ಅಥವಾ ಕೆಲವೊಂದು ನಾಣ್ಯಗಳನ್ನು ಕಡುಬಿನೊಳಗೆ ಇರಿಸಲಾಗುತ್ತದೆ ಮತ್ತು ಮನೆಯ ಪುರುಷರನ್ನು ಆಹ್ವಾನಿಸಿ. ಕಡುಬನ್ನು ಒಡೆಯಲು ಸಣ್ಣ ಮಕ್ಕಳನ್ನು ಕರೆಯಲಾಗುತ್ತದೆ. ಅವರು ಕಡುಬು ಒಡೆದು ನಾಣ್ಯವನ್ನು ಪಡೆದುಕೊಂಡು ಆಶೀರ್ವಾದವನ್ನು ಪಡೆಯುತ್ತಾರೆ. ಮನೆಯಲ್ಲಿರುವ ಮಹಿಳೆಯನ್ನು ಮನೆಯ ಹಿರಿಯ ಪುರುಷರು ಆಶೀರ್ವದಿಸುತ್ತಾರೆ. ವೀಳ್ಯದೆಲೆ, ಅಡಿಕೆ, ಸಿಹಿತಿಂಡಿ ಮತ್ತು ಹಣ್ಣುಗಳನ್ನು ಮಹಿಳೆಯರಿಗೆ ಹಂಚಲಾಗುತ್ತದೆ. ಈ ದಿನದಂದು ಮಹಿಳೆಯರು ಕಡುಬು ಮಾಡಿಕೊಂಡು ಅದರಲ್ಲಿ ನಾಣ್ಯವನ್ನು ಅಡಗಿಸಿಡುತ್ತಾರೆ. ಪೂಜೆ ಕೊನೆಗೊಂಡ ಬಳಿಕ ಬಾಲಕರು ಮತ್ತು ಪುರುಷರು ಕಡುಬನ್ನು ಒಡೆದು ಅದರಲ್ಲಿನ ನಾಣ್ಯವನ್ನು ತೆಗೆಯುತ್ತಾರೆ. ಇದರ ಹಿಂದೆ ತುಂಬಾ ಆಸಕ್ತಿದಾಯಕ ಕಥೆಯಿದೆ. ಹಿಂದಿನ ಕಾಲದಲ್ಲಿ ಹುಡುಗಿಯನ್ನು ರಾಜನ ಪ್ರೇತ್ಮತ್ಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆ ಹುಡುಗಿ ಶಿವ ಮತ್ತು ಪಾರ್ವತಿಯನ್ನು ತುಂಬಾ ಪೂಜಿಸುತ್ತಿದ್ದಳು. ಇದರಿಂದ ಶಿವ ಮತ್ತು ಪಾರ್ವತಿ ಆಕೆಯ ಭಕ್ತಿಗೆ ಒಲಿದು ಪ್ರತ್ಯಕ್ಷರಾಗಿ ರಾಜನಿಗೆ ಪುನರ್ಜೀವ ನೀಡುತ್ತಾರೆ. ಶಿವನು ಈ ಸಂದರ್ಭದಲ್ಲಿ ಮಣ್ಣಿನ ಕಡುಬನ್ನು ತುಂಡು ಮಾಡುತ್ತಾನೆ. ಇದನ್ನು ದೀರ್ಘಾಯುಷ್ಯ ಮತ್ತು ಸಮೃದ್ಧಿಯ ಸಂಕೇತವೆನ್ನಲಾಗುತ್ತದೆ.

ಮರುದಿನ

ಮರುದಿನ

ದೀಪವನ್ನು ತುಳಸಿ ಸಸ್ಯದ ಅಡಿಯಲ್ಲಿ ಇರಿಸಲಾಗುತ್ತದೆ ಅಥವಾ ಮಣ್ಣಿನ ದೀಪಗಳನ್ನು ನೀರಿನಲ್ಲಿ ಕರಗಿಸಲಾಗುತ್ತದೆ. ಮದುವೆಯಾಗಿ ಒಂಭತ್ತು ವರ್ಷಗಳ ನಂತರ ವಿವಾಹಿತ ಮಹಿಳೆಯರು ಭೀಮನ ಅಮವಾಸ್ಯೆಯನ್ನು ಕೈಗೊಳ್ಳುತ್ತಾರೆ. ಅವರು ದೀಪ ಹೊಂದಿದ್ದರೆ ಹೊಸದಾಗಿ ವಿವಾಹಿತರಾದವರಿಗೆ ಭೀಮನ ಅಮವಾಸ್ಯೆ ವ್ರತ ಮಾಡುತ್ತಿರುವವರಿಗೆ ಈ ದೀಪವನ್ನು ಉಡುಗೊರೆಯಾಗಿ ನೀಡಬೇಕು.

English summary

How to Perform Bheemana Amavasya Vratha?

Bheemana Amavasya Vrata is dedicated to Lord Shiva and Parvati and is observed by women in Karnataka. It takes place on the Amavasya or non moon day in the month of Ashada. Also referred as Jyoti Bheemeshwara Vratha, the ritual is observed for the well being of the male members in the family.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more