For Quick Alerts
ALLOW NOTIFICATIONS  
For Daily Alerts

ದೇವ ದೇವತೆಗಳಲ್ಲಿಯೇ ಹನುಮಂತ ದೇವರು ತುಂಬಾ ಬಲಿಷ್ಠರಂತೆ! ಇದರ ಹಿಂದಿನ ಕಾರಣವೇನು ಗೊತ್ತೇ?

|

ವಾಯು ಪುತ್ರ ಆಂಜನೇಯ ಬ್ರಹ್ಮಚಾರಿಯಾಗಿದ್ದು, ದೇವದೇವತೆಗಳಲ್ಲಿ ತುಂಬಾ ಶಕ್ತಿಶಾಲಿ, ಅಮರ ಹಾಗೂ ಅಜೇಯ ಎಂದು ಹೇಳಲಾಗುತ್ತದೆ. ಆಂಜನೇಯ ದೇವರು ಇಂದಿಗೂ ನಮ್ಮೊಂದಿಗೆ ಇದ್ದಾರೆ ಮತ್ತು ವಿವಿಧ ರೂಪಗಳಲ್ಲಿ ತನ್ನ ಭಕ್ತರ ಕರೆಗೆ ಓಗೊಟ್ಟು ಬರುವರು ಎಂದು ನಂಬಲಾಗಿದೆ. ಆಂಜನೇಯನ ಕೆಲವು ಭಕ್ತರು ಈ ಬಗ್ಗೆ ಅನುಭವ ಕೂಡ ಪಡೆದಿದ್ದಾರೆ.

ಯಾಕೆಂದರೆ ಭಕ್ತರು ಶ್ರದ್ಧಾ ಭಕ್ತಿಯಿಂದ ಹನುಮಂತ ದೇವರನ್ನು ಜಪಿಸಿದರೆ, ಆಗ ಖಂಡಿತವಾಗಿಯೂ ಅವರು ನಮಗೆ ಒಲಿದು ಬರುವರು ಎಂದು ನಂಬಲಾಗಿದೆ. ಹೀಗಾಗಿ ಹನುಮಂತ ದೇವರು ಕಲಿಯುಗದಲ್ಲಿ ನಮ್ಮ ಮುಂದೆ ಬರುವರು. ಅವರನ್ನು ಗುರುತಿಸುವುದು ಕಷ್ಟವಾದರೂ ನಮಗೆ ಸಂಕಷ್ಟದಲ್ಲಿ ಇರುವ ವೇಳೆ ಖಂಡಿತವಾಗಿಯೂ ನೆರವಾಗುವರು. ದೇವ ದೇವತೆಗಳಲ್ಲಿ ಹನುಮಂತ ದೇವರು ತುಂಬಾ ಬಲಿಷ್ಠರು ಎಂದು ಹೇಳಲಾಗುತ್ತದೆ. ಆದರೆ ಅವರು ಇಷ್ಟು ಶಕ್ತಿಶಾಲಿ ಆಗಲು ಕಾರಣವೇನು? ನೀವು ಮುಂದಕ್ಕೆ ಓದಿಕೊಳ್ಳಿ.

ಸ್ವರ್ಗದಲ್ಲಿನ ಅಪ್ಸರೆಗೆ ಬ್ರಹ್ಮ ದೇವರ ಶಾಪ

ಸ್ವರ್ಗದಲ್ಲಿನ ಅಪ್ಸರೆಗೆ ಬ್ರಹ್ಮ ದೇವರ ಶಾಪ

ಸ್ವರ್ಗದಲ್ಲಿ ಅಪ್ಸರೆಯಾಗಿದ್ದ ಅಂಜನಾ ಎಂಬಾಕೆಗೆ ಬ್ರಹ್ಮ ದೇವರು ಶಾಪ ನೀಡಿ, ನೀವು ವಾನರಳಾಗಿ ಹೋಗು ಎಂದು ಶಾಪ ನೀಡುವರು. ಆಕೆ ತನ್ನ ತಪ್ಪಿಗೆ ಕ್ಷಮೆ ಕೇಳಿದಾಗ ಬ್ರಹ್ಮ ದೇವರ ಮನಸ್ಸು ಕರಗುವುದು. ಆದರೆ ಶಾಪವನ್ನು ಹಿಂಪಡೆಯುವುದು ಅಸಾಧ್ಯವಾಗಿರುವುದು. ವಾನರನೊಬ್ಬನಿಗೆ ಜನ್ಮ ನೀಡಿದ ಬಳಿಕ ಮತ್ತೆ ಹಳೆಯ ರೂಪಕ್ಕೆ ಬರುತ್ತಿ ಎಂದು ಬ್ರಹ್ಮ ದೇವರು ಹೇಳುವರು. ಇಡೀ ಬ್ರಹ್ಮಾಂಡದಲ್ಲಿ ನಿನ್ನ ಮಗು ಜನಪ್ರಿಯತೆ ಪಡೆಯುತ್ತಾನೆ ಎಂದು ಕೂಡ ಅವರು ಹೇಳುವರು.

ಇಂದ್ರ ದೇವರು ವಜ್ರಾಯುಧದಿಂದ ದಾಳಿ ಮಾಡಿದರು

ಇಂದ್ರ ದೇವರು ವಜ್ರಾಯುಧದಿಂದ ದಾಳಿ ಮಾಡಿದರು

ಹನುಮಂತ ದೇವರು ಬಾಲಕನಾಗಿದ್ದ ವೇಳೆ ಸೂರ್ಯ ದೇವರನ್ನು ಹಣ್ಣು ಎಂದು ಭಾವಿಸಿ, ನುಂಗಲು ಹೋಗುತ್ತಾರೆ. ಆ ವೇಳೆ ಇದನ್ನು ನಿಲ್ಲಿಸಲು ಇಂದ್ರ ದೇವರು ತನ್ನ ವಜ್ರಾಯುಧದಿಂದ ದಾಳಿ ಮಾಡುವರು. ವಜ್ರಾಯುಧವನ್ನು ಇಂದ್ರ ದೇವರು ಹನುಮಂತನತ್ತ ಎಸೆಯುವರು. ಈ ವೇಳೆ ವಜ್ರಾಯುಧವು ಹನುಮಂತನಿಗೆ ಗಾಯ ಮಾಡುವುದು ಮತ್ತು ಅವರು ಕೆಳಗೆ ಬೀಳುವರು.

MOst Read: ನಾರದ ಮುನಿಗಳ ವೀಣೆಯ ನಾದಕ್ಕೆ ಮನಸೋತ ಹನುಮಂತ!

ಕೋಪಗೊಂಡ ವಾಯು ದೇವರು ಧರಣೆ ಮಾಡುವರು

ಕೋಪಗೊಂಡ ವಾಯು ದೇವರು ಧರಣೆ ಮಾಡುವರು

ಹನುಮಂತ ದೇವರ ತಂದೆ ಆಗಿರುವ ವಾಯು ದೇವರು ಈ ದಾಳಿಯಿಂದ ಕ್ರೋಧಗೊಂಡ ಧರಣೆ ನಡೆಸುವರು. ವಾಯು ದೇವರು ಧರಣಿ ಮೇಲೆ ಹೋದ ಕಾರಣದಿಂದಾಗಿ ಬ್ರಹ್ಮಾಂಡದಲ್ಲಿ ಗಾಳಿ ಇಲ್ಲದೆ ಅಲ್ಲೋಲ ಕಲ್ಲೋಲ ಉಂಟಾಗುವುದು. ಮೋಡಗಳು ಚಲಿಸದೆ ಹಾಗೆ ಉಳಿದುಕೊಂಡವು ಮತ್ತು ಬಿಸಿಲಿನ ತಾಪದಿಂದ ಆರಾಮ ನೀಡುತ್ತಿದ್ದ ತಣ್ಣಗಿನ ಗಾಳಿ ಕೂಡ ಬರುತ್ತಿರಲಿಲ್ಲ. ಇದರಿಂದಾಗಿ ಭೂಮಿ ಮೇಲೆ ಸಮತೋಲನವು ತಪ್ಪಿ ಹೋಯಿತು.

ಎಲ್ಲಾ ದೇವದೇವತೆಗಳು ಹನುಮಂತನಿಗೆ ವರ ನೀಡಿದರು

ಎಲ್ಲಾ ದೇವದೇವತೆಗಳು ಹನುಮಂತನಿಗೆ ವರ ನೀಡಿದರು

ವಾಯು ದೇವರನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ಎಲ್ಲಾ ದೇವ ದೇವತೆಗಳು ಹನುಮಂತನಿಗೆ ವರ ನೀಡಲು ಆರಂಭಿಸಿದರು. ಯಾವುದೇ ಆಯುಧವು ಹನುಮಂತನಿಗೆ ಗಾಯ ಮಾಡಲು ಸಾಧ್ಯವಿಲ್ಲ ಎಂದು ಬ್ರಹ್ಮ ದೇವರು ವರ ನೀಡಿದರು. ಹನುಮಂತ ತನ್ನ ರೂಪವನ್ನು ಬದಲಾಯಿಸಿಕೊಂಡು ಎಲ್ಲಿ ಬೇಕಿದ್ದರೂ ಪ್ರಯಾಣಿಸಬಹುದು. ವಜ್ರಾಯುಧವು ಇನ್ನು ಮುಂದೆ ಹನುಮಂತನಿಗೆ ಗಾಯ ಮಾಡುವುದಿಲ್ಲ ಮತ್ತು ಯಾವುದೇ ಆಯುಧಕ್ಕಿಂತಲೂ ಹನುಮಂತನ ದೇಹವು ಬಲಿಷ್ಠವಾಗಿರಲಿದೆ ಎಂದು ಇಂದ್ರ ದೇವರು ಹೇಳುವರು. ವರುಣ ದೇವರು ನೀರಿನಿಂದ ಮತ್ತು ಅಗ್ನಿ ದೇವರು ಬೆಂಕಿಯಿಂದ ಅವರಿಗೆ ರಕ್ಷಣೆ ನೀಡುವರು.

Most Read: ಪ್ರತಿ ದಿನ ಮುಂಜಾನೆ ಸೂರ್ಯ ದೇವನಿಗೆ ಪೂಜೆ ಸಲ್ಲಿಸುವ ವಿಧಾನ

ಯಮ ದೇವರು ಅವರಿಗೆ ಆರೋಗ್ಯವಂತ ಜೀವನ ಹಾಗೂ ಅಮರತ್ವ ನೀಡುವರು. ಇಚ್ಛೆಗೆ ಅನುಸಾರವಾಗಿ ತನ್ನ ಗಾತ್ರವನ್ನು ಬದಲಾಯಿಸುವಂತಹ ಶಕ್ತಿಯನ್ನು ಸೂರ್ಯ ದೇವರು ಹನುಮಂತನಿಗೆ ನೀಡುವರು. ವಾಸ್ತುಶಿಲ್ಪಿಯಾಗಿರುವಂತಹ ವಿಶ್ವಕರ್ಮ ದೇವರು, ತಾನು ನಿರ್ಮಿಸಿರುವ ಎಲ್ಲಾ ರೀತಿಯ ವಸ್ತುಗಳಿಂದ ಅವರಿಗೆ ಸುರಕ್ಷತೆ ಸಿಗುವುದು ಎಂದು ವರದ ನೀಡುವರು. ಹೀಗೆ ಪ್ರತಿಯೊಬ್ಬ ದೇವ ದೇವತೆಗಳು ಹನುಮಂತ ದೇವರಿಗೆ ವರವನ್ನು ನೀಡುವರು. ಇದರಿಂದ ವಾಯು ದೇವರು ಶಾಂತರಾಗಿ, ತನ್ನ ಕಾರ್ಯದಲ್ಲಿ ತೊಡಗಿಕೊಳ್ಳುವರು. ಇದರಿಂದ ಭೂಮಿ ಮೇಲೆ ಮತ್ತೆ ಸಮತೋಲನ ಬರುವುದು. ಹೀಗೆ ಎಲ್ಲಾ ದೇವ ದೇವತೆಗಳಿಂದ ವರ ಪಡೆದ ಹನುಮಂತ ದೇವರು ತುಂಬಾ ಬಲಿಷ್ಠರಾಗುವರು.

English summary

How Lord Hanuman Became So Powerful?

Lord Hanuman is the invincible, immortal God who comes as and when his devotees call him for help. An incarnation of Lord Shiva, he is one of the most powerful Gods. There is a story which explains how he attained power. The story goes back to the time when he was a kid and got injured due to an innocent mischief.
X
Desktop Bottom Promotion