For Quick Alerts
ALLOW NOTIFICATIONS  
For Daily Alerts

'ಸಾಡೇ ಸಾತಿ' ಇದು ಶನಿ ದೇವನ ಇನ್ನೊಂದು ಅಗ್ನಿ ಪರೀಕ್ಷೆ!

By Manu
|

ಹಿಂದೂ ಪುರಾಣಗಳ ಪ್ರಕಾರ ಸಾಡೆ ಸಾತಿ ಎಂಬುದು ಒಂದು ಕಾಟವಾಗಿದ್ದು ಈ ಸಮಯದಲ್ಲಿ ಪೀಡಿತ ವ್ಯಕ್ತಿ ಅತಿ ಕಷ್ಟದ ಸಮಯವನ್ನು ಎದುರಿಸಬೇಕಾಗುತ್ತದೆ. ಇವರ ಕರ್ಮದ ಪ್ರಕಾರವಾಗಿ ಇವರಿಗೆ ಕೊಂಚವೇ ಒಳ್ಳೆಯ ಮತ್ತು ಅತಿ ಹೆಚ್ಚು ಕೆಟ್ಟ ಸಮಯಗಳು ಎದುರಾಗುತ್ತವೆ. ಶನಿ ದೇವರಿಗೆ ಪ್ರಿಯವಾದ 'ಸಾಸಿವೆ ಎಣ್ಣೆಯ' ಹಿಂದಿನ ರಹಸ್ಯ

ಇವರು ಆರೋಗ್ಯದಲ್ಲಿ, ಹಣಕಾಸಿನಲ್ಲಿ, ವೈಯಕ್ತಿಕ ಬದುಕಿನಲ್ಲಿ, ವೃತ್ತಿಯಲ್ಲಿ ಎಲ್ಲೆಲ್ಲೂ ಸೋಲು ಮತ್ತು ನಷ್ಟ ಅನುಭವಿಸುತ್ತಿರುತ್ತಾರೆ. ಬನ್ನಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ...

ಸಾಡೆ ಸಾತಿ ಎಂದರೇನು?
 

ಸಾಡೆ ಸಾತಿ ಎಂದರೇನು?

ಹಿಂದಿಯಲ್ಲಿ ಏಳುವರೆ ವರ್ಷಗಳಿಗೆ ಸಾಡೆ ಸಾತಿ ಎಂದು ಕರೆಯುತ್ತಾರೆ. ಇದು ಶನಿಗ್ರಹದ ಒಂದು ಪರಿಭ್ರಮಣದ ಸಮಯವಾಗಿದೆ. ಹಿಂದೂ ಪುರಾಣಗಳ ಪ್ರಕಾರ ಶನಿದೇವರು ನ್ಯಾಯದ ದೇವರಾಗಿದ್ದಾನೆ. ವ್ಯಕ್ತಿಯ ಉತ್ತಮ ಮತ್ತು ಕೆಟ್ಟ ಕರ್ಮಗಳಿಗೆ ಫಲವನ್ನು ನೀಡುವವನೂ ಆತನೇ ಆಗಿದ್ದು ಪೂರ್ವಕರ್ಮಗಳ ಫಲವಾಗಿ ಮುಟ್ಟಿದ್ದೆಲ್ಲವೂ ಮಣ್ಣಾಗುವಂತೆ ಶಪಿಸುತ್ತಾರೆ.

ಸಾಡೆ ಸಾತಿ ಎಂದರೇನು?

ಸಾಡೆ ಸಾತಿ ಎಂದರೇನು?

ಈತನ ಒಂದು ಪರಿಭ್ರಮಣ ಮುಗಿಯುವವರೆಗೂ ಆತನ ಶಾಪ ಅಂಟಿಕೊಂಡಿದ್ದು ಇದರ ಪರಿಣಾಮವಾಗಿ ಎಲ್ಲೆಲ್ಲೂ ಸೋಲು, ಹತಾಶೆ, ನಿರಾಶೆ, ಹಣಕಾಸಿನ ತೊಂದರೆ ಮೊದಲಾದವುಗಳನ್ನು ಎದುರಿಸಬೇಕಾಗುತ್ತದೆ. ಇವೆಲ್ಲವೂ ಪ್ರತ್ಯಕ್ಷ ಪರಿಣಾಮಗಳಾದರೆ ಪರೋಕ್ಷವಾಗಿ ಸಂಗಾತಿಯೊಡನೆ ಸಂಬಂಧ ಸಡಿಲವಾಗುವುದು, ಮನೆಮಂದಿಯೊಂದಿಗೆ ವಿರಸ, ದೂರವಾಗುವ ಬಂಧುಗಳು ಮೊದಲಾದವು ವ್ಯಕ್ತಿಯನ್ನು ಏಕಾಂಗಿಯಾಗಿಸುತ್ತವೆ. ಯಾವುದೇ ಕ್ಷೇತ್ರದಲ್ಲಿ ನಡೆಸುವ ಪ್ರಯತ್ನಗಳು ಫಲ ನೀಡುವುದಿಲ್ಲ. ಶನಿ ಪೂಜಾ ವಿಧಿ - ಕೇಳಿ ಗೊತ್ತು, ಆಚರಿಸುವುದು ಹೇಗೆ?

ಸಾಡೆ ಸಾತಿ ಎಂದರೇನು?

ಸಾಡೆ ಸಾತಿ ಎಂದರೇನು?

ಆದರೆ ಶನಿದೇವರನ್ನು ಒಲಿಸಲು ಕೇವಲ ಹನುಮಂತನಿಗೆ ಮಾತ್ರ ಸಾಧ್ಯ. ಹನುಮಂತ ದೇವರ ಮೂಲಕ ಪ್ರಾರ್ಥಿಸಿ ಕ್ಷಮೆಯಾಚಿಸಿದರೆ ಶನಿದೇವರು ಕೃಪೆ ತೋರಿ ತನ್ನ ಶಾಪದ ಪ್ರಾಬಲ್ಯವನ್ನು ಕಡಿಮೆ ಮಾಡುತ್ತಾನೆ. ಬನ್ನಿ, ಹನುಮದೇವರಿಂದ ಈ ಸಹಾಯವನ್ನು ಹೇಗೆ ಪಡೆಯಬಹುದು ಎಂಬುದನ್ನು ನೋಡೋಣ, ಮುಂದೆ ಓದಿ ಶನಿ ದೇವರಿಗೆ ಪ್ರಿಯವಾದ 'ಸಾಸಿವೆ ಎಣ್ಣೆಯ' ಹಿಂದಿನ ರಹಸ್ಯ

ಹನುಮಾನ್ ಚಾಲೀಸವನ್ನು ಪಠಿಸಿ
 

ಹನುಮಾನ್ ಚಾಲೀಸವನ್ನು ಪಠಿಸಿ

ಶನಿದೇವನ ಕಾಟದಿಂದ ಮುಕ್ತಿ ಪಡೆಯಲು ಹನುಮದೇವರನ್ನು ಪ್ರತಿ ಮಂಗಳವಾರ ಮತ್ತು ಶನಿವಾರಗಳಂದು ಪೂಜಿಸಬೇಕು. ದೇವರಿಗೆ ಪ್ರಸಾದ ಅರ್ಪಿಸಿ ಹನುಮಾನ್ ಚಾಲೀಸವನ್ನು ಪಠಿಸಬೇಕು. ಮಲಗುವ ಮುನ್ನ 'ಹನುಮಾನ್ ಚಾಲೀಸಾ' ಪಠಿಸಲು ಮರೆಯದಿರಿ

ಶನಿವಾರ ದಾನ ಮಾಡಿ

ಶನಿವಾರ ದಾನ ಮಾಡಿ

ಸಾಡೆಸಾತಿಯ ಪ್ರಭಾವವನ್ನು ಕಡಿಮೆಗೊಳಿಸಲು ಪ್ರತಿ ಶನಿವಾರದಂದು ದಾನ ಮಾಡುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು. ವಿಶೇಷವಾಗಿ ಸಾಸಿವೆ ಎಣ್ಣೆ, ಕಪ್ಪು ಬಟ್ಟೆಗಳು ಅಥವಾ ಕರಿ ಎಳ್ಳುಗಳನ್ನು ಶನಿದೇವರ ದೇವಸ್ಥಾನದಲ್ಲಿ ಶನಿವಾರದಂದು ಅರ್ಪಿಸಬೇಕು. ಈ ದಿನದಂದು ನಿಜವಾಗಿ ಅರ್ಹತೆಯುಳ್ಳ ಬಡಬಗ್ಗರಿಗೆ ಹಣವನ್ನು ದಾನ ಮಾಡುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ದಾನ ಪಡೆಯುವವನಿಗೆ ಈ ಬಗ್ಗೆ ಅರಿವಿಲ್ಲದೇ ನೀಡಿದ ದಾನ ಅತ್ಯುತ್ತಮವಾಗಿದೆ.

ಆಹಾರ ಸಂತರ್ಪಣೆ ಮಾಡಿ

ಆಹಾರ ಸಂತರ್ಪಣೆ ಮಾಡಿ

ಶನಿವಾರದಂದು ಕಪ್ಪು ನಾಯಿಗೆ ಚಪಾತಿ ತಿನ್ನಿಸಿ. ಚಪಾತಿ ಸಾಧ್ಯವಾಗದಿದ್ದರೂ ಇತರ ಯಾವುದೇ ಸಸ್ಯಾಹಾರಿ ಊಟವನ್ನು ತಿನ್ನಿಸಿ.

ಮದ್ಯಪಾನ ಮಾಡಬೇಡಿ

ಮದ್ಯಪಾನ ಮಾಡಬೇಡಿ

ಮದ್ಯಪಾನ ಅಥವಾ ಇನ್ನಾವುದೇ ವ್ಯಸನಭರಿತ ಅಭ್ಯಾಸಗಳಿಂದ ಶನಿದೇವನು ಇನ್ನಷ್ಟು ಕುಪಿತನಾಗುತ್ತಾನೆ. ಪರಿಣಾಮವಾಗಿ ಸಾಡೆ ಸಾತಿ ಇನ್ನಷ್ಟು ಉಗ್ರರೂಪ ಪಡೆದುಕೊಳ್ಳುತ್ತದೆ. ಆದ್ದರಿಂದ ಸಾಡೆಸಾತಿ ಕಳೆಯುವವರೆಗೂ ಇವನ್ನು ಮರೆಯುವುದೇ ಉತ್ತಮ. ಒಂದು ವೇಳೆ ನೀವು ಮದ್ಯವ್ಯಸನಿಯಾಗಿದ್ದು ಮದ್ಯಪಾನ ಇಲ್ಲದೇ ಇದ್ದರೆ ಸಾಧ್ಯವೇ ಇಲ್ಲ ಎಂಬ ತೀವ್ರ ಸ್ಥಿತಿಗೆ ತಲುಪಿದ್ದಲ್ಲಿ ಮಾತ್ರ ಶನಿವಾರ ಮಂಗಳವಾರ ಬಿಟ್ಟು ಉಳಿದ ದಿನ ಕನಿಷ್ಟ ಪ್ರಮಾಣದಲ್ಲಿ ಮಾತ್ರ ಸೇವಿಸಿ.

ಕುದುರೆ ಲಾಳ

ಕುದುರೆ ಲಾಳ

ನಿಮ್ಮ ಮನೆಯ ಪ್ರಧಾನ ಬಾಗಿಲಿನ ಮೇಲೆ ಹಳೆಯ ಸವೆದ ಕುದುರೆ ಲಾಳವೊಂದನ್ನು ಮೊಳೆಹೊಡೆದು ಸ್ಥಾಪಿಸಿ. ಇದು ಇಂಗ್ಲಿಷ್ ನ ಯು ಅಕ್ಷರ ತಳೆ ಕೆಳಗಾದಂತೆ ಇರಬೇಕು. ಇದರಿಂದಲೂ ಸಾಡೆಸಾತಿಯ ಕಾಟ ಕನಿಷ್ಠವಾಗಿಸಲು ಸಾಧ್ಯ.

ಮಂತ್ರಗಳನ್ನು ಪಠಿಸಿ

ಮಂತ್ರಗಳನ್ನು ಪಠಿಸಿ

ನಿತ್ಯದ ಹನುಮಾನ್ ಚಾಲೀಸ್ ಪಠಣದ ಹೊರತಾಗಿ ಶಾಂತಿ ಮಂತ್ರವನ್ನೂ ಪಠಿಸಿ. (ಓಂ ಶಂ ಶನಿಚಾರಾಯಃ ನಮಃ). ಇದರ ಜೊತೆ ಸಾಧ್ಯವಾದರೆ ಮಹಾಮೃತ್ಯುಂಜಯ ಮಂತ್ರವನ್ನೂ ಪಠಿಸಿದರೆ ಇನ್ನಷ್ಟು ಉತ್ತಮವಾಗುತ್ತದೆ.

ಕಪ್ಪು ಬಟ್ಟೆಗಳನ್ನು ಧರಿಸಿ

ಕಪ್ಪು ಬಟ್ಟೆಗಳನ್ನು ಧರಿಸಿ

ಶನಿವಾರದಂದು ಪೂರ್ಣ ಮೈ ಆವರಿಸುವಂತೆ ಕಪ್ಪು ಬಟ್ಟೆಗಳನ್ನೇ ತೊಡಿ. ಶನಿವಾರದಂದು ಯಾವುದೇ ಕಾರಣಕ್ಕೆ ಕಪ್ಪು ಬಟ್ಟೆ, ಚರ್ಮದ ವಸ್ತುಗಳು, ಪೊರಕೆ ಮೊದಲಾದವುಗಳನ್ನು ಖರೀದಿಸಲು ಹೋಗಬೇಡಿ.

English summary

Home Remedies To Reduce Sade Sati

In Hindu astrology, Sade Sati holds a strong position. People hold fear for it as it this time is considered to be challenging where the sufferer goes through bad and good times, depending on their karmas. A person who is going through Sade Sati suffers from health, financial, personal and career problems.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more