For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ 2022: ಗಣಪನಿಗೆ ಪ್ರಿಯವಾದ ಎಲೆ, ಪುಷ್ಪಗಳು ಇದೇ ನೋಡಿ

|

ಹಿಂದೂ ಧರ್ಮದಲ್ಲಿ ನಾವು ರಾಮಾ, ಕೃಷ್ಣ, ಶಿವ, ಗಣಪ, ಲಕ್ಷ್ಮಿ ಹೀಗೆ ಅನೇಕ ದೇವರನ್ನು ಪೂಜಿಸುತ್ತೇವೆ. ಪ್ರತಿಯೊಂದು ದೇವರಿಗೆ ಪೂಜಾ ವಿಧಾನಗಳು, ಇಷ್ಟದ ಆಹಾರಗಳು, ಹೂಗಳು, ವಾಹನಗಳು ಬೇರೆ-ಬೇರೆಯಾಗಿರುತ್ತದೆ. ಅನೇಕ ಬಗೆಯ ಪೂಜೆಗಳಿರುತ್ತದೆ. ಆದರೆ ಯಾವುದೇ ಪೂಜೆ ಮಾಡುವ ಮುಂಚೆ ಗಣಪನಿಗೆ ಪೂಜೆ ಮಾಡಿ, 'ವಿಘ್ನಗಳನ್ನು ನಿವಾರಿಸು ತಂದೇ' ಎಂದು ಬೇಡಿಕೊಳ್ಳುತ್ತೇವೆ.

ಈ ವರ್ಷದ ಅಂದರೆ 2022ನೇ ಸಾಲಿನಲ್ಲಿ ಆಗಸ್ಟ್‌ನಲ್ಲಿ 31ರಂದು ಗಣೇಶ ಎಲ್ಲರ ಮನೆಗಳಿಗೆ ಬರಲಿದ್ದಾನೆ. ಆ ದಿನದಂದು ಗಣೇಶನಿಗೆ ಪುಷ್ಪಾರ್ಚನೆ ಮಾಡುವಾಗ ಅವನಿಗೆ ಇಷ್ಟವಾದ ಹೂಗಳಿಂದ ಮಾಡಿದರೆ ಗಣೇಶ ತುಂಬಾ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂದ ಗಣಪನ ಪೂಜೆಗೆ ಈ ಕೆಳಗಿನ ಹೂಗಳನ್ನು ಬಳಸಿ, ಗಣೇಶ ಕೃಪೆಗೆ ಪಾತ್ರರಾಗಿ.

ಕೆಂಪು ದಾಸವಾಳದ ಹೂ

ಕೆಂಪು ದಾಸವಾಳದ ಹೂ

ಗಣೇಶನಿಗೆ ಕೆಂಪು ಬಣ್ಣದ ಹೂಗಳೆಂದರೆ ಇಷ್ಟ, ಅದರಲ್ಲೂ ಕೆಂಪು ದಾಸವಾಳವೆಂದರೆ ತುಂಬಾ ಇಷ್ಟವಂತೆ. ಇದನ್ನು ಸಾಮಾನ್ಯ ಈ ಹೂವು ಮಾರಾಟಕ್ಕೆ ಸಿಗುವುದು ಅಪರೂಪ ಆದರೂ, ಮನೆಗಳಲ್ಲೇ ಸುಲಭವಾಗಿ ಬೆಳೆಯಬಹುದು.

 ಗರಿಕೆ ಹುಲ್ಲು

ಗರಿಕೆ ಹುಲ್ಲು

ಗಣಪನ ಪೂಜೆಗೆ ಗರಿಕೆ ಹುಲ್ಲು ಇರಲೇಬೇಕು. ಗರಿಕೆ ಹುಲ್ಲು ಬಳಸದಿದ್ದರೆ ಗಣಪನ ಪೂಜೆ ಪೂರ್ಣವಾಗುವುದಿಲ್ಲ. ಗರಿಕೆ ಇಲ್ಲದೆ ಗಣೇಶ ಸಂತೃಪ್ತನಾಗುವುದಿಲ್ಲ. ಆದ್ದರಿಂದ ಗಣೇಶನ ಪೂಜೆಗೆ ತಪ್ಪದೇ ಗರಿಕೆ ಇಡಿ.

ದಾಳಿಂಬೆ ಹೂ

ದಾಳಿಂಬೆ ಹೂ

ಗಣಪನಿಗೆ ದಾಳಿಂಬೆ ಹೂವೆಂದರೆ ತುಂಬಾ ಇಷ್ಟ.ಗಣಪನ ಪೂಜೆಯಲ್ಲಿ ಸಾಮಾನ್ಯವಾಗಿ ದಾಳಿಂಬೆ ಹೂ ಇದ್ದೇ ಇರುತ್ತದೆ. ಈ ಹೂವು ಸಿಗುವುದು ಅಪರೂಪವಾದರೂ, ಪೂಜೆಗೆ ಇಟ್ಟರೆ ಶುಭ ಎನ್ನಲಾಗುತ್ತದೆ.

ತುಳಸಿ

ತುಳಸಿ

ತುಳಸಿಯನ್ನು ಸಾಮಾನ್ಯವಾಗಿ ಎಲ್ಲಾ ಪೂಜೆಗೂ ಬಳಸುತ್ತೇವೆ. ತುಳಸಿಯನ್ನು ಮಾಲೆ ಮಾಡಿ ಗಣಪನಿಗೆ ಹಾಕಿದರೆ ಒಳ್ಳೆಯದು, ಬೇಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ.

ಶಂಖ ಪುಷ್ಪ

ಶಂಖ ಪುಷ್ಪ

ಈ ಹೂ ಸಾಮಾನ್ಯವಾಗಿ ಬಿಳಿ ಮತ್ತು ನೀಲಿ ಬಣ್ಣದಲ್ಲಿರುತ್ತದೆ. ಇದು ಶಂಖದ ಆಕೃತಿಯಲ್ಲಿರುವುದರಿಂದ ಇದನ್ನು ಶಂಖ ಪುಷ್ಪವೆಂದು ಕರೆಯುತ್ತಾರೆ. ಇದನ್ನು ಸಹ ಮನೆಯಲ್ಲೇ ಸುಲಭವಾಗಿ ಬೆಳೆಯಬಹುದು, ಇದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿಗುವುದಿಲ್ಲ. ನೋಡಲು ಬಹಳ ಆಕರ್ಷಕವಾಗಿ ಇರುವ ಈ ಹೂವು ಗಣಪನಿಗೆ ಅಚ್ಚುಮೆಚ್ಚಂತೆ.

ಕೇದಗೆ

ಕೇದಗೆ

ಕೇದಗೆ ಹೂ ಕೂಡ ಗಣಪನಿಗೆ ತುಂಬಾ ಪ್ರಿಯವಾದ ಹೂವಾಗಿದೆ.ಉದ್ದದ ಎಲೆಯ ಮಧ್ಯೆ ಹಳದಿ ಬಣ್ಣದ ಪತ್ರಗಳ ಆಕಾರದ ಹೂವಿನ ಸೌಂದರ್ಯ ಕಣ್ಮನ ಸೆಳೆಯುವಂತದ್ದು. ಅತ್ಯಂತ ವಿರಳ ಮತ್ತು ಸುವಾಸನೆಯುಕ್ತ ಹೂ. ಈ ಹೂವು ಗಣಪನಿಗೆ ಬಹಳ ಇಷ್ಟವಂತೆ.

ಕಣಗಲೆ ಹೂ (ಗೆನ್ನೇರು ಹೂ)

ಕಣಗಲೆ ಹೂ (ಗೆನ್ನೇರು ಹೂ)

ಈ ಹೂವನ್ನು ಸಾಮಾನ್ಯವಾಗಿ ಎಲ್ಲಾ ದೇವರ ಅರ್ಚನೆಗೆ ಬಳಸುತ್ತಾರೆ.ಕಣಗಲೆ ಹೂವಿನಿಂದ ಪೂಜೆ ಮಾಡಿದರೆ ನಮ್ಮಲ್ಲಿ ಕಾಣಿಸುವ ಭಯ ಭೀತಿಗಳು ನಿವಾರಣೆಯಾಗುತ್ತದೆ. ವಿಘ್ನ ನಿವಾರಕನಿಗೆ ಈ ಹೂವನ್ನು ಅರ್ಪಿಸಿದರೆ ನಮ್ಮಲ್ಲಿರುವ ಭಯವನ್ಉ ತೊಲಗಿಸುತ್ತಾನೆ ಎಂಬ ನಂಬಿಕೆ ಇದೆ.

English summary

Ganesh Chaturthi 2022: Favourite Flowers Of Lord Ganesha

It is believed that Lord Ganesha is attracted towards the red coloured hibiscus flower. Similarly there are some other flowers and leaves too used to worship Ganesha. Here are some favourite flowers and leaves of Lord Ganesha.
X
Desktop Bottom Promotion