For Quick Alerts
ALLOW NOTIFICATIONS  
For Daily Alerts

ಹೋಲಿಕಾ ದಹನ್‌ಗೆ ಶುಭ ಮುಹೂರ್ತ ಯಾವಾಗ? ಈ ಆಚರಣೆಯ ಮಹತ್ವವೇನು?

|

ಮಾರ್ಚ್‌ 18ಕ್ಕೆ ರಂಗು-ರಂಗಿನ ಹಬ್ಬ ಹೋಳಿ, ಆದರೆ ಇದರ ಆಚರಣೆಯ ವಿಧಿ ವಿಧಾನಗಳು ಮಾರ್ಚ್ 17ರಿಂದಲೇ ಅಂದರೆ ಹೋಲಿಕಾ ದಹನದಿಂದ ಆರಂಭವಾಗುವುದು. ಹೋಲಿಕಾ ದಹನವನ್ನು ಚೋಟಿ ಹೋಳಿಯೆಂದೂ ಕರೆಯಲಾಗುವುದು.

ಹೋಲಿಕಾ ದಹನವನ್ನು ಫಲ್ಗುಣ ಪೂರ್ಣಿಮಾ ತಿಥಿಯ ಸಂಜೆ ಆಚರಿಸುತ್ತಾರೆ.

ಹೋಲಿಕಾ ದಹನದ ಆಚರಣೆ ಹೇಗಿರುತ್ತೆ, ಈ ವರ್ಷ ಹೋಲಿಕಾ ದಹನವನ್ನು ಯಾವ ಶುಭ ಮುಹೂರ್ತದಲ್ಲಿ ಆಚರಿಸಲಾಗುತ್ತದೆ ಎಂಬೆಲ್ಲಾ ಮಾಹಿತಿ ಇಲ್ಲಿದೆ:

ಹೋಲಿಕಾ ದಹನ ಎಂದರೇನು?

ಹೋಲಿಕಾ ದಹನ ಎಂದರೇನು?

ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯ ಪ್ರತೀಕವಾಗಿ ಹೋಲಿಕಾ ದಹನವನ್ನು ಆಚರಿಸಲಾಗುವುದು. ಈ ದಿನ ಮರ, ಸೆಗಣಿ ಬಳಸಿ ಮಾಡಿದ ಆಕೃತಿಗೆ ಬೆಂಕಿ ಹಚ್ಚಲಾಗುವುದು. ನಮ್ಮಲ್ಲಿರುವ ಕೆಟ್ಟತನ ಎಲ್ಲಾ ನಾಶವಾಗಿ ಒಳ್ಳೆಯದು ಪಸರಿಸಲಿ ಎಂಬುವುದೇ ಈ ಆಚರಣೆಯ ಉದ್ದೇಶವಾಗಿದೆ.

ಹೋಲಿಕಾ ಹದನ ಶುಭ ಮುಹೂರ್ತ

ಹೋಲಿಕಾ ಹದನ ಶುಭ ಮುಹೂರ್ತ

ಹೋಳಿಯ ಪೂರ್ಣಿಮಾ ತಿಥಿ ಪ್ರಾರಂಭ: ಮಾರ್ಚ್ 17 ಗುರುವಾರ ಮಧ್ಯಾಹ್ನ 1:29ರಿಂದ ಪ್ರಾರಂಭ

ಪೂರ್ಣಿಮಾ ತಿಥಿ ಮುಕ್ತಾಯ: ಮಾರ್ಚ್ 18 ಮಧ್ಯಾಹ್ನ 12:47ಕ್ಕೆ

ಭಾದ್ರ ಪೂಂಚ್: ಮಾಚ್‌ 17 ರಾತ್ರಿ 09:06ರಿಂದ 10:16ರವರೆಗೆ (ಇದು ಹೋಲಿಕಾ ದಹನ್ ಸಮಯ)

ಭಾದ್ರ ಮುಖ: ಮಾರ್ಚ್ 17 ರಾತ್ರಿ 10:16ರಿಂದ ಮಾರ್ಚ್ 18, 12:13ರವರೆಗೆ

ಹೋಲಿಕಾ ದಹನ ಪೂಜಾ ವಿಧಿ ವಿಧಾನ

ಹೋಲಿಕಾ ದಹನ ಪೂಜಾ ವಿಧಿ ವಿಧಾನ

* ಹೋಲಿಕಾ ದಹನದ ದಿನ ಮುಂಜಾನೆ ಎದ್ದು ಉಪವಾಸದ ಸಂಕಲ್ಪ ಮಾಡಿ.

ಹೋಲಿಕಾ ದಹನ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ ಮತ್ತು ಒಣ ಮರಗಳು, ಹಸುವಿನ ಸೆಗಣಿ , ಒಣ ಮುಳ್ಳುಗಳು ಇತ್ಯಾದಿ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ.

* ಹೋಲಿಕಾ ಮತ್ತು ಪ್ರಹ್ಲಾದನ ವಿಗ್ರಹಗಳನ್ನು ಮಾಡಿ.

ಹೋಲಿಕಾ ದಹನದ ದಿನದಂದು ನರಸಿಂಹನನ್ನು ಪೂಜಿಸುವುದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ, ಆದ್ದರಿಂದ ಸ್ಥಳೀಯರು ಪೂಜೆಯ ಸಮಯದಲ್ಲಿ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಜೊತೆಗೂಡಿಸುವ ಮೂಲಕ ಭಗವಂತನನ್ನು ಪೂಜಿಸಬೇಕು.

* ರಾತ್ರಿ ಭಾದ್ರ ಪೂಂಚ್‌ ಸಮಯದಲ್ಲಿ ಹೋಲಿಕಾ ದಹನ ಮಾಡಬೇಕು.

* ಹೋಲಿಕಾ ದಹನ ಮಾಡಿದ ಬಳಿಕ ಅದರ ಮೂರು ಸುತ್ತು ಬಂದು ನರಸಿಂಹನ ನಾಮವನ್ನು ಪಠಿಸಿ ಮತ್ತು ಐದು ಧಾನ್ಯಗಳನ್ನು ಅಗ್ನಿಯಲ್ಲಿ ಅರ್ಪಿಸಿ.

ಪರಿಕ್ರಮ ಮಾಡುವಾಗ ಅರ್ಘ್ಯವನ್ನು ಅರ್ಪಿಸುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಹಸಿ ನೂಲನ್ನು ಹೊಲಿಕಾಗೆ ಸುತ್ತಿ.

ಇದರ ನಂತರ, ಹೋಲಿಕಾ ದಹನಕ್ಕೆ ಹಸುವಿನ ಸೆಗಣಿಯ ಬೆರಣಿ, ಬಾರ್ಲಿ, ಗೋಧಿಯನ್ನು ಅರ್ಪಿಸಿ.

* ಕೊನೆಗೆ ಹೋಳಿಕಾದಲ್ಲಿ ಬಣ್ಣ ಹಾಕಿ ಹಾಕಿ.

* ಹೋಲಿಕಾದ ಬೆಂಕಿಯು ಆರಿದ ನಂತರ, ಅದರ ಬೂದಿಯನ್ನು ಸ್ವಲ್ಪ ತೆಗೆದು ಅದನ್ನು ನಿಮ್ಮ ಮನೆಯಲ್ಲಿ ದೇವರ ಕೋಣೆಯಲ್ಲಿ ಅಥವಾ ಪವಿತ್ರ ಸ್ಥಳದಲ್ಲಿ ಇಡಿ.

ಹೋಲಿಕಾ ದಹನದ ಬಳಿಕ ಮಾಡಲೇಬೇಕಾದ ಕಾರ್ಯಗಳು

ಹೋಲಿಕಾ ದಹನದ ಬಳಿಕ ಮಾಡಲೇಬೇಕಾದ ಕಾರ್ಯಗಳು

* ಜ್ಯೋತಿಷ್ಯರ ಪ್ರಕಾರ ಹೋಲಿಕಾ ದಹನದ ನಂತರ ನೀವು ನಿಮ್ಮ ಇಡೀ ಕುಟುಂಬದೊಂದಿಗೆ ಚಂದ್ರನನ್ನು ನೋಡಿದರೆ, ಅಕಾಲಿಕ ಮರಣದ ಭಯವು ನಿವಾರಣೆಯಾಗುತ್ತದೆ. ಏಕೆಂದರೆ ಈ ದಿನ ಚಂದ್ರನು ತನ್ನ ತಂದೆಯ ರಾಶಿ ಬುಧದಲ್ಲಿ ಮತ್ತು ಸೂರ್ಯನು ತನ್ನ ತಂದೆಯ ರಾಶಿ ಗುರುವಿನಲ್ಲಿ ಇರುತ್ತಾರೆ.

* ಅಲ್ಲದೆ ಹೋಲಿಕಾ ದಹನಕ್ಕೂ ಮುನ್ನ ನೀವು ಹೋಲಿಕೆಯ ಸುತ್ತ ಏಳು ಪ್ರದಕ್ಷಿಣೆ ಹಾಕಿ ಸಿಹಿತಿಂಡಿ, ಹಸುವಿನ ಸಗಣಿಯ ಬೆರಣಿ, ಏಲಕ್ಕಿ, ಲವಂಗ, ಧಾನ್ಯಗಳು ಇತ್ಯಾದಿಗಳನ್ನು ಹೋಲಿಕಾದಲ್ಲಿ ಅರ್ಪಿಸಿದರೆ ಅವರ ಕುಟುಂಬ ಜೀವನ ಸುಖಮಯವಾಗುತ್ತದೆ.

English summary

Holika Dahan 2022: Date and Time, Muhurat, Tithi Timings and Significance

Holika Dahan 2022: Date and Time, Muhurat, Tithi Timings and Significance, read on...
Story first published: Thursday, March 17, 2022, 9:09 [IST]
X
Desktop Bottom Promotion