For Quick Alerts
ALLOW NOTIFICATIONS  
For Daily Alerts

ನವರಾತ್ರಿ 2019: ಹಬ್ಬದ ಹಿಂದಿರುವ ರೋಚಕ ದಂತಕಥೆ ಹಾಗೂ ಇತಿಹಾಸ

By Hemanth
|

ಹಿಂದೂ ಧರ್ಮದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುವುದು ರೂಢಿ. ಮಳೆಗಾಲ ಮುಗಿಯುತ್ತಿರುವಂತೆ ಹಬ್ಬಗಳು ಆರಂಭವಾಗುವುದು. ಹಬ್ಬವೆಂದರೆ ತುಂಬಾ ಸಂಭ್ರಮ ಹಾಗೂ ಸಡಗರದ ವಾತಾವರಣವಿರುವುದು. ಹಬ್ಬಗಳ ದಿನಗಳಲ್ಲಿ ಮನೆ, ರಸ್ತೆ ಹಾಗೂ ಇಡೀ ನಗರವೇ ಶೃಂಗರಿಸಲ್ಪಡುತ್ತದೆ. ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ಸಂಪೂರ್ಣ ನಗರವೇ ವಿದ್ಯುತ್ ಬೆಳಕಿನಿಂದ ಪ್ರಜ್ವಲಿಸುತ್ತಾ ಇರುತ್ತದೆ. ನವರಾತ್ರಿಯನ್ನು ದೇಶದ ಎಲ್ಲಾ ಕಡೆಗಳಲ್ಲಿ ವಿವಿಧ ರೀತಿಯಿಂದ ಆಚರಿಸಲಾಗುತ್ತದೆ.

ನವರಾತ್ರಿ ವೇಳೆ ದುರ್ಗಾ ದೇವಿಯನ್ನು ಆರಾಧಿಸಲಾಗುವುದು. ಒಂಬತ್ತು ದಿನಗಳ ಕಾಲ ದುರ್ಗೆಯನ್ನು ಭಕ್ತಿಭಾವದಿಂದ ಪೂಜಿಸಲಾಗುವುದು. ಹಿಂದೂ ಕ್ಯಾಲೆಂಡರ್ ಪ್ರಕಾರ ಬರುವ ಅಶ್ವಿನಿ ತಿಂಗಳಲ್ಲಿ ನವರಾತ್ರಿ ಆಚರಿಸಲಾಗುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯೆ ನವರಾತ್ರಿಯು ಪ್ರತೀ ವರ್ಷ ಆಚರಿಸಲ್ಪಡಲಾಗುವುದು. ಈ ವರ್ಷದ (2019) ನವರಾತ್ರಿ ಹಬ್ಬ ಸೆಪ್ಟೆಂಬರ್ 29ರಿಂದ ಆರಂಭವಾಗಿ ಅಕ್ಟೋಬರ್ 8ರವರೆಗೆ ಆಚರಿಸಲಾಗುತ್ತದೆ.

ನವರಾತ್ರಿಯ ವೇಳೆ ಭಜನೆ ಮಾಡಲಾಗುತ್ತದೆ. ನವರಾತ್ರಿ ಬಗ್ಗೆ ಇರುವ ದಂತಕಥೆ ಹೇಳುತ್ತದೆ ಮತ್ತು ದುರ್ಗೆಯ ಅಷ್ಟೋತ್ತರವು ಪಠಿಸಲಾಗುವುದು. 9ನೇ ದಿನದಂದು ದುರ್ಗೆಯ ಮೂರ್ತಿಯ ಜಲಸ್ತಂಭನ ನೆರವೇರಿಸಲಾಗುವುದು.

Durga

ಉತ್ತರ ಭಾರತದಲ್ಲಿ ನವರಾತ್ರಿ ಬಗ್ಗೆ ಇರುವ ದಂತಕಥೆ
ಉತ್ತರ ಹಾಗೂ ಪೂರ್ವೋತ್ತರ ಭಾರತದಲ್ಲಿ ನವರಾತ್ರಿ ಬಗ್ಗೆ ವಿವಿಧ ದಂತಕಥೆಗಳು ಇವೆ. ಉತ್ತರ ಭಾರತದ ದಂತಕಥೆಯ ಪ್ರಕಾರ ಶಿವನ ಭಕ್ತನಾಗಿದ್ದ ಮಹಿಷಾಸುರ ಘೋರ ತಪಸ್ಸು ಮಾಡಿ ಶಿವನಿಂದ ಅಮರನಾಗುವ ವರ ಪಡೆಯುತ್ತಾನೆ. ಮಹಿಷಾಸುರ ಜನರನ್ನು ಹಿಂಸಿಸುತ್ತಾನೆ ಮತ್ತು ಮೂರು ಲೋಕದ ಮೇಲೆ ತನ್ನ ಸಾಮ್ರಾಜ್ಯ ಕಟ್ಟುತ್ತಾನೆ. ಸ್ವರ್ಗಲೋಕದ ದೇವದೇವತೆಗಳೆಲ್ಲರೂ ಬಂದು ಶಿವನಲ್ಲಿ ತಮ್ಮ ಸಂಕಷ್ಟ ಹೇಳಿಕೊಳ್ಳುವರು ಮತ್ತು ತಮ್ಮ ರಾಜ್ಯ ಮರಳಿ ನೀಡಬೇಕೆಂದು ಪ್ರಾರ್ಥಿಸುವರು. ಮಹಿಷಾಸುರನ ಹಿಂಸೆಯಿಂದ ಮೂರು ಲೋಕಗಳನ್ನು ರಕ್ಷಿಸಲು ತ್ರಿಮೂತ್ರಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಜತೆಯಾಗಿ ದುರ್ಗೆಯ ಸ್ಥಾಪಿಸುವರು.

ನವರಾತ್ರಿ ವಿಶೇಷ: ನವರಾತ್ರಿಯಲ್ಲಿ ದುರ್ಗೆಯ ನವರೂಪಗಳು

ದುರ್ಗೆಯ ಸೌಂದರ್ಯಕ್ಕೆ ಮಾರುಹೋದ ಮಹಿಷಾಸುರ ತನ್ನನ್ನು ಮದುವೆಯಾಗಬೇಕೆಂದು ಆಕೆಯನ್ನು ಕೇಳಿಕೊಳ್ಳುತ್ತಾನೆ. ದುರ್ಗೆಯು ಇದಕ್ಕೆ ತಯಾರಾಗುತ್ತಾಳೆ. ಆದರೆ ತನ್ನ ವಿರುದ್ಧ ಯುದ್ಧ ಗೆಲ್ಲಬೇಕೆಂದು ಆಕೆ ಹೇಳುತ್ತಾಳೆ. ಈ ಯುದ್ಧವು ಒಂಭತ್ತು ದಿನಗಳ ಕಾಲ ನಡೆಯಿತು ಮತ್ತು 9ನೇ ದಿನದಂದು ದುರ್ಗೆಯು ಮಹಿಷಾಸುರನನ್ನು ವಧೆ ಮಾಡಿದಳು. ಈ 9 ದಿನಗಳನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. 9ನೇ ಹಾಗೂ ಕೊನೆಯ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ದುಷ್ಟ ಶಕ್ತಿ ವಿರುದ್ಧ ಒಳ್ಳೆಯದ ವಿಜಯ.

ಉತ್ತರ ಭಾರತದಲ್ಲಿ ನವರಾತ್ರಿಯ ಇತಿಹಾಸ
ದಂತಕಥೆಯ ಪ್ರಕಾರ ಹಿಮಾಲಯದ ರಾಜನಾಗಿ ದಕ್ಷನಿಗೆ ಉಮಾ ಎನ್ನುವ ಅಪೂರ್ವ ಸುಂದರಿ ಮಗಳಿದ್ದಳು. ಇವಳು ಶಿವ ದೇವರನ್ನು ಮದುವೆಯಾಗಲು ಬಯಸಿದ್ದಳು. ಆತನನ್ನು ಓಲೈಸಿಕೊಳ್ಳಲು ಆಕೆ ಆತನನ್ನು ಪ್ರಾರ್ಥಿಸಲು ಆರಂಭಿಸಿದಳು ಮತ್ತು ಅಂತಿಮವಾಗಿ ಆತನನ್ನು ಓಲೈಸಿದಳು. ಶಿವ ದೇವರು ಉಮಾಳನ್ನು ಮದುವೆಯಾಗಲು ಬಂದಾಗಳ ಕೇವಲ ಹುಲಿ ಚರ್ಮ ಸುತ್ತಿಕೊಂಡಿದ್ದರು. ಇದರಿಂದ ದಕ್ಷ ಕುಪಿತಗೊಂಡು ಉಮಾ ಮತ್ತು ಆಕೆಯ ಪತಿಯೊಂದಿಗೆ ಯಾವುದೇ ಸಂಬಂಧವಿಟ್ಟುಕೊಳ್ಳಲು ಬಯಸಲಿಲ್ಲ.

ಇದರ ಬಳಿಕ ದಕ್ಷ ರಾಜ ದೊಡ್ಡ ಯಜ್ಞವೊಂದನ್ನು ಆಯೋಜಿಸಿದ. ಇದಕ್ಕೆ ಶಿವನನ್ನು ಬಿಟ್ಟು ಎಲ್ಲರನ್ನೂ ಆಹ್ವಾನಿಸಿದ. ಇದರಿಂದ ಕುಪಿತಳಾದ ಉಮಾ ಯಜ್ಞಕುಂಡದ ಅಗ್ನಿಗೆ ಜಿಗಿದು ತನ್ನ ಪ್ರಾಣ ಕಳೆದುಕೊಳ್ಳಬೇಕೆಂದು ನಿರ್ಧರಿಸಿದಳು. ಉಮಾ ಮರುಜನ್ಮ ಪಡೆದು ಮತ್ತೆ ಶಿವನನ್ನು ಮದುವೆಯಾದಳು. ಈ ದಿನದಿಂದ ಉಮಾ ತನ್ನ ತವರು ಮನೆಗೆ ಲಕ್ಷ್ಮೀ, ಸರಸ್ವತಿ, ಕಾರ್ತಿಕ ಮತ್ತು ಗಣೇಶ ಹಾಗೂ ಸ್ನೇಹಿತೆಯರಾದ ಜಯ ಮತ್ತು ವಿಜಯದೊಂದಿಗೆ ಬರುತ್ತಾಳೆಂಬ ಪ್ರತೀತಿಯಿದೆ.

ರಾಮ ಮತ್ತು ರಾಮನನ ದಂತಕಥೆ
ನವರಾತ್ರಿಯು ರಾಮಾಯಣಕ್ಕೂ ಒಂದು ಸಂಬಂಧವಿದೆ ಎಂದು ಪುರಾಣಗಳು ಹೇಳುತ್ತವೆ. ರಾವಣನೆಂಬ ಬಲಶಾಲಿ ರಾಕ್ಷಸನನ್ನು ವಧೆ ಮಾಡಲು ರಾಮನು ಒಂಬತ್ತು ದಿನಗಳ ಕಾಲ ದುರ್ಗೆಯ ಪೂಜೆ ಮಾಡಿ ಆಕೆಯಿಂದ ಶಕ್ತಿ ಹಾಗೂ ಬಲ ಪಡೆದ ಎನ್ನಲಾಗುತ್ತದೆ. ಸೀತೆಯನ್ನು ಅಪಹರಿಸಿದ್ದ ರಾವಣನನ್ನು ಇದರ ಬಳಿಕ ರಾಮ ವಧಿಸಿದ. ಒಂಬತ್ತು ದಿನ ಕಾಲ ನವರಾತ್ರಿ ಎಂದು ಕರೆಯಲಾಗುವುದು ಮತ್ತು ರಾಮನು ರಾವಣನನ್ನು ಅಂತಿಮ ದಿನ ವಧಿಸಿದ.

ಈ ದಿನವನ್ನು ದಸರಾ ಅಥವಾ ವಿಜಯದಶಮಿ ಎಂದು ಕರೆಯಲಾಗುತ್ತದೆ. ಇದು ರಾವಣನಂತಹ ದುಷ್ಟ ರಾಕ್ಷಸನ ಮೇಲೆ ರಾಮನ ಗೆಲುವನ್ನು ತೋರಿಸುತ್ತದೆ. ನವರಾತ್ರಿಯು ದೀಪಾವಳಿಗೆ ನಾಂದಿಯಾಗಿದೆ. ಬೆಳಕಿನ ಹಬ್ಬ ದೀಪಾವಳಿಯು ದಸರಾದ 20 ದಿನಗಳ ಬಳಿಕ ಬರುತ್ತದೆ. ನವರಾತ್ರಿಯನ್ನು ದೇಶದೆಲ್ಲೆಡೆ ತುಂಬಾ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ.

ದುರ್ಗೆ ಆಗಮನ, ನಿರ್ಗಮನದ ವಾಹನವು ಘಟನೆಗಳ ಸಂಕೇತ

English summary

History Behind Celebrating The Navratri Festival

Navratri is amongst the most important and eminent festivals that the Hindus celebrate in India and in many other parts of the world. This festival is devoted to the goddess Durga. The Hindus celebrate this festival with a lot of dedication and loyalty all over the country. The festival is known to stretch for a constant period of nine daysand each day is dedicated to a different form of Goddess Durga. The festival is celebrated in accordance with the Hindu calendar and the festival falls on the Ashvin month, which is between the months of September to October.
X
Desktop Bottom Promotion