For Quick Alerts
ALLOW NOTIFICATIONS  
For Daily Alerts

ಕಠಿಣ ಪರಿಶ್ರಮ, ಶಿಸ್ತು- ಪ್ರಾಮಾಣಿಕತೆ ವ್ಯಕ್ತಿಗಳಿಗೆ ಶನಿಯ ಕೃಪೆ ಎಂದೂ ಇರುತ್ತದೆ

By Deepu
|

ವೇದ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಮನುಷ್ಯನೊಬ್ಬನ ಏಳಿಗೆ ಮತ್ತು ಅವನತಿಗೆ ಗ್ರಹಗತಿಗಳು ಮತ್ತು ಜನ್ಮರಾಶಿ ಕಾರಣವಾಗಿರುತ್ತವೆ. ಜನ್ಮಕುಂಡಲಿಯನ್ನು ಪರಿಶೀಲಿಸಿಕೊಂಡು ಮಾನವ ಜೀವನದಲ್ಲಿ ನಡೆಯುವ ಪ್ರಗತಿ ಮತ್ತು ಅವನತಿಯನ್ನು ಅವಲೋಕಿಸಬಹುದಾಗಿದೆ. ಈ ರಾಶಿಗಳು ಎಲ್ಲೆಲ್ಲಿ ಯಾವ ಯಾವ ಸ್ಥಾನವನ್ನು ಪಡೆದುಕೊಂಡಿವೆ ಎಂಬುದನ್ನು ಆಧರಿಸಿಕೊಂಡು ಋಣಾತ್ಮಕ ಮತ್ತು ಧನಾತ್ಮಕ ಪರಿಣಾಮಗಳನ್ನು ಕಂಡುಕೊಳ್ಳಬಹುದು. ಈ ಗ್ರಹಗಳು ಎಲ್ಲೆಲ್ಲಿ ಯಾವ ರೀತಿಯಲ್ಲಿ ಸ್ಥಾನಗೊಂಡಿವೆ ಎಂಬುದನ್ನು ಆಧರಿಸಿ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ತಿಳಿದುಕೊಳ್ಳಬಹುದು.

ರಾಶಿಯು ಧನಾತ್ಮಕ ಸ್ಥಾನದಲ್ಲಿದ್ದರೆ ಅದರಿಂದ ವ್ಯಕ್ತಿಯ ಜೀವನದಲ್ಲಿ ಏಳಿಗೆ ಉಂಟಾಗುತ್ತದೆ. ಗ್ರಹಗತಿಗಳನ್ನು ಅರಿತುಕೊಂಡು ನಿಮ್ಮ ಏಳಿಗೆಯ ಸೂತ್ರವನ್ನು ಕಂಡುಕೊಳ್ಳಬೇಕು ಎಂದಾದಲ್ಲಿ ಶನಿಯ ಪಾತ್ರ ಹಿರಿದಾದುದು. ನ್ಯಾಯಕ್ಕೆ ಹಸರುವಾಸಿಯಾದವರು ಶನಿ ಗ್ರಹವಾಗಿದೆ. ಹಿಂದಿನ ಜನ್ಮದಲ್ಲಿ ವ್ಯಕ್ತಿಯು ಅನುಭವಿಸಿದ ಪಾಪಕೃತ್ಯಕ್ಕೆ ಸರಿಯಾದ ಶಿಕ್ಷೆಯನ್ನು ಶನಿದೇವ ನೀಡುತ್ತಾರೆ.

ಶನಿ ಪೂಜಾ ವಿಧಿ - ಕೇಳಿ ಗೊತ್ತು, ಆಚರಿಸುವುದು ಹೇಗೆ?

ಯಾವುದೇ ದೋಷವಿದ್ದಲ್ಲಿ ಶನಿ ದೋಷಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ನೀವು ಹೇಳುವುದು ಕೇಳಿರಬಹುದು. ಏನು ಮಾಡಿದರೂ ಜೀವನದಲ್ಲಿ ಪ್ರಗತಿಯಾಗುತ್ತಿಲ್ಲ ಎಂದರೆ ಅದಕ್ಕೆ ಶನಿ ದೋಷ ಇಲ್ಲವೇ ಶನಿಯ ಕಾಟವೆಂದು ಕರೆಯುತ್ತಾರೆ. ಇಂದಿನ ಲೇಖನದಲ್ಲಿ ಈ ರಾಶಿಯ ಕುರಿತು ಕೆಲವೊಂದು ಮಾಹಿತಿಯುಕ್ತ ಸಂಗತಿಗಳನ್ನು ನೀಡುತ್ತಿದ್ದೇವೆ ಮುಂದೆ ಓದಿ...

ಶನಿ ದೇವ ಋಣಾತ್ಮಕ ಗ್ರಹವಲ್ಲ

ಶನಿ ದೇವ ಋಣಾತ್ಮಕ ಗ್ರಹವಲ್ಲ

ಶನಿ ದೇವ ಋಣಾತ್ಮಕ ಗ್ರಹವಲ್ಲ. ನ್ಯಾಯವು ದೊರೆಯಬೇಕೆಂದು ಅವರ ಇಂಗಿತವಾಗಿರುತ್ತದೆ. ಒಂದೊಮ್ಮೆ ರಾವಣನು ತನ್ನ ಪುತ್ರನ ಜನ್ಮ ಕುಂಡಲಿಯಲ್ಲಿ ಎಲ್ಲಾ ಗ್ರಹಗಳು ಹನ್ನೊಂದನೇ ಮನೆಯಲ್ಲಿರ ಬೇಕೆಂದು ಆದೇಶಿಸುತ್ತಾನೆ ಆದರೆ ಶನಿಯು ಇದಕ್ಕೆ ಸಮ್ಮತಿಯನ್ನು ನೀಡುವುದಿಲ್ಲ.

ಸೂರ್ಯ ದೇವರ ಪುತ್ರ

ಸೂರ್ಯ ದೇವರ ಪುತ್ರ

ಶನಿ ದೇವ ಸೂರ್ಯ ದೇವರ ಪುತ್ರರಾಗಿದ್ದಾರೆ. ಮಾತೆಯ ಹೆಸರು ಛಾಯಾ. ಅಂದರೆ ನೆರಳು. ಯಮ ಧರ್ಮರಾಜ ಶನಿಯ ಸಹೋದರರಾಗಿದ್ದಾರೆ. ಮಗ ಶನಿಯ ಜನ್ಮ ನಂತರ ಸೂರ್ಯ ದೇವನು ಪತ್ನಿ ಛಾಯಾ ಮತ್ತು ಪುತ್ರ ಶನಿಯನ್ನು ತೊರೆಯುತ್ತಾರೆ ಎಂಬುದಾಗಿ ಕಥೆಯಲ್ಲಿ ಹೇಳಲಾಗಿದೆ.

ಸೂರ್ಯ ದೇವರ ಪುತ್ರಶನಿಯ ಜನ್ಮಸ್ಥಳ

ಸೂರ್ಯ ದೇವರ ಪುತ್ರಶನಿಯ ಜನ್ಮಸ್ಥಳ

ಸೌರಾಷ್ಟ್ರದ ಶಿಂಗಾನಾಪುರ ಶನಿಯ ಜನ್ಮಸ್ಥಳವಾಗಿದೆ. ಶನಿ ದೇವರಿಗೆ ಕಾಣಿಕೆಯನ್ನು ಅರ್ಪಿಸುವುದರಿಂದ ಈ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ.

ಶನಿಯು ಏಳು ವರ್ಷಗಳ ಕಾಲ ನೆಲೆ ನಿಲ್ಲುತ್ತಾರೆ

ಶನಿಯು ಏಳು ವರ್ಷಗಳ ಕಾಲ ನೆಲೆ ನಿಲ್ಲುತ್ತಾರೆ

ಶನಿ ದೇವರು ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಅನಗತ್ಯವಾಗಿ ಹಾನಿಯನ್ನುಂಟು ಮಾಡುವುದಿಲ್ಲ. ಹಿಂದಿನ ಜನ್ಮದ ಪಾಪಕ್ಕೆ ಅನುಸಾರವಾಗಿ ಅವರು ವ್ಯಕ್ತಿಯನ್ನು ಶಿಕ್ಷಿಸುತ್ತಾರೆ. ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಶನಿಯು ಏಳು ವರ್ಷಗಳ ಕಾಲ ನೆಲೆ ನಿಲ್ಲುತ್ತಾರೆ. ಇತರ ಯಾವುದೇ ಗ್ರಹಗಳು ಹೀಗೆ ನೆಲೆನಿಲ್ಲುವುದಿಲ್ಲ.

ಪ್ರಾಮಾಣಿಕ ಶನಿಯು ಬೇಗನೇ ಒಲಿದು ಬಿಡುತ್ತಾರೆ

ಪ್ರಾಮಾಣಿಕ ಶನಿಯು ಬೇಗನೇ ಒಲಿದು ಬಿಡುತ್ತಾರೆ

ಯಾರು ಪ್ರರಿಶ್ರಮದಿಂದ ಕೆಲಸ ಮಾಡುತ್ತಾರೋ, ಪ್ರಾಮಾಣಿಕರು ಮತ್ತು ನಿಷ್ಠರೋ ಅಂತಹವರಿಗೆ ಶನಿಯು ಬೇಗನೇ ಒಲಿದು ಬಿಡುತ್ತಾರೆ. ಈ ಗುಣಗಳು ಶನಿಗೆ ಹೆಚ್ಚು ಪ್ರಿಯವಾದುದು ಮತ್ತು ಈ ಗುಣಗಳಿರುವ ವ್ಯಕ್ತಿಗಳನ್ನು ಶನಿಯು ಆಶೀರ್ವದಿಸುತ್ತಾರೆ.

 ಶನಿಗೆ ಕಪ್ಪು ಬಣ್ಣ ಇಷ್ಟ

ಶನಿಗೆ ಕಪ್ಪು ಬಣ್ಣ ಇಷ್ಟ

ಶನಿಯು ಕಪ್ಪು ಬಣ್ಣದಲ್ಲಿ ಕಂಡುಬರುತ್ತಾರೆ. ಕಪ್ಪು ಬಣ್ಣವೆಂದರೆ ಶನಿಗೆ ಹೆಚ್ಚು ಪ್ರಿಯವಾದುದು. ಅವರ ಆಶೀರ್ವಾದವನ್ನು ಪಡೆದುಕೊಳ್ಳಲು ಕಪ್ಪು ವಸ್ತ್ರಗಳನ್ನು ಶನಿಗೆ ನೀಡುವುದು ಒಳ್ಳೆಯದಾಗಿದೆ. ಇನ್ನು ಕಪ್ಪು ಎಳ್ಳನ್ನು ಕೊಟ್ಟು ದೇವರ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ.

ಶಿವನು ಶನಿಗೆ ಗುರುವಿದ್ದಂತೆ

ಶಿವನು ಶನಿಗೆ ಗುರುವಿದ್ದಂತೆ

ಒಂದು ಕಥೆಯ ಪ್ರಕಾರ ಶಿವನಿಗೆ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಿದ ನಂತರ ಶನಿಗೆ ಅನುಗ್ರಹಗಳನ್ನು ಮಹಾಶಿವನು ಮಾಡುತ್ತಾರೆ. ಆದ್ದರಿಂದ ಶಿವನು ಶನಿಗೆ ಗುರುವಿದ್ದಂತೆ.

 ಶನಿಯ ಸ್ನೇಹಿತರು

ಶನಿಯ ಸ್ನೇಹಿತರು

ಹನುಮಂತ, ಭೈರವ ಮತ್ತು ಬುಧ ಮತ್ತು ರಾಹುವನ್ನು ಶನಿಯ ಸ್ನೇಹಿತರು ಎಂದು ಪರಿಗಣಿಸಲಾಗುತ್ತದೆ. ಶನಿ ದೇವರ ಅನುಗ್ರಹವನ್ನು ಪಡೆದುಕೊಳ್ಳಲು ನೀವು ಈ ದೇವರುಗಳನ್ನು ಪೂಜಿಸುವುದೂ ಒಳಿತಾಗಿದೆ.

 ಶನಿಯ ಸ್ನೇಹಿತರು ದಾನ ಧರ್ಮ

ಶನಿಯ ಸ್ನೇಹಿತರು ದಾನ ಧರ್ಮ

ದಾನ ಧರ್ಮವೆಂದರೆ ಶನಿಗೆ ತುಂಬಾ ಇಷ್ಟ: ಶನಿ ದೇವರನ್ನು ಒಲಿಸಿಕೊಳ್ಳಬೇಕು ಎಂದಾದಲ್ಲಿ ದಾನ ಧರ್ಮಾದಿಗಳನ್ನು ಮಾಡುವುದನ್ನು ಮರೆಯದಿರಿ.

ಶನಿ ದೇವರಿಗೆ ಎಳ್ಳೆಣ್ಣೆಯನ್ನು ನೀಡಿ

ಶನಿ ದೇವರಿಗೆ ಎಳ್ಳೆಣ್ಣೆಯನ್ನು ನೀಡಿ

ಶನಿ ದೇವರಿಗೆ ಎಳ್ಳೆಣ್ಣೆಯನ್ನು ನೀಡಿ ಕೂಡ ಅವರ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ. ಎಳ್ಳೆಣ್ಣೆಯ ಅಭಿಷೇಕವನ್ನು ಶನಿ ದೇವರು ಮಾಡಿಸಿಕೊಳ್ಳುತ್ತಾರೆ.

ಶನಿವಾರ ಅತಿ ಪವಿತ್ರ

ಶನಿವಾರ ಅತಿ ಪವಿತ್ರ

ಕಪ್ಪು ಬಣ್ಣದ ನಾಯಿಗೆ ಆಹಾರವನ್ನು ನೀಡುವುದರಿಂದ ಕೂಡ ಅದರಲ್ಲೂ ಎಳ್ಳೆಣ್ಣೆಯಿಂದ ಮಾಡಿದ ಆಹಾರವು ಶನಿ ದೇವರನ್ನು ಸಂತೋಷಪಡಿಸುತ್ತದೆ. ಪ್ರತಿ ಶನಿವಾರವನ್ನು ಅತಿ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನ ವ್ರತವನ್ನಾಚರಿಸುವುದು ಒಳ್ಳೆಯದಾಗಿದೆ.

ಮದ್ಯಪಾನ ಬಿಟ್ಟುಬಿಡಲೇ ಬೇಕು

ಮದ್ಯಪಾನ ಬಿಟ್ಟುಬಿಡಲೇ ಬೇಕು

ಶನಿದೇವನನ್ನು ಒಲಿಸಿಕೊಳ್ಳಲು ಮದ್ಯಪಾನದ ವರ್ಜನೆ ಅಗತ್ಯ. ಏಕೆಂದರೆ ಶನಿ ಓರ್ವ ನ್ಯಾಯದೇವತೆಯೂ ಆಗಿದ್ದಾನೆ. ಕೆಟ್ಟ ಅಭ್ಯಾಸಗಳಾದ ಧೂಮಪಾನ, ಮದ್ಯಪಾನ, ಮಾಂಸಸೇವನೆ ಮೊದಲಾದವು ಶನಿದೇವನಿಗೆ ಕೋಪ ತರಿಸುತ್ತದೆ. ಆದ್ದರಿಂದ ಈ ಎಲ್ಲಾ ದುರಭ್ಯಾಸಗಳನ್ನು ತ್ಯಜಿಸುವುದರಿಂದ, ಅದರಲ್ಲೂ ವಿಶೇಷವಾಗಿ ಸಾಡೆಸಾತಿಯ ಅವಧಿಯಲ್ಲಿ ಅನುಸರಿಸುವ ಮೂಲಕ ಶೀಘ್ರವಾಗಿ ತೊಂದರೆಯಿಂದ ಪಾರಾಗಬಹುದು.

ಶನಿದೇವರಿಗೆ ಬಡವರೇ ಪ್ರಿಯರು

ಶನಿದೇವರಿಗೆ ಬಡವರೇ ಪ್ರಿಯರು

ಶನಿದೇವನಿಗೆ ಬಡವರು ಮತ್ತು ಬಲ್ಲಿದರು ಇಷ್ಟವಾಗಿದ್ದು ಅವರಿಗೆ ಹೆಚ್ಚಿನ ಸಹಾಯ ಮಾಡುತ್ತಾನೆಂದು ನಂಬಲಾಗಿದೆ. ಬಡವರಿಗೆ ನೆರವಾಗುವ ಮೂಲಕ ಶನಿದೇವನನ್ನು ಒಲಿಸಿಕೊಳ್ಳಬಹುದು ಮತ್ತು ಶನಿದೋಷದಿಂದ ಮುಕ್ತಿ ಹೊಂದಬಹುದು ಎಂದು ಭಾವಿಸುವ ಭಕ್ತರು ಬಡಬಗ್ಗರಿಗೆ ಅಗತ್ಯವಿವಸ್ತುಗಳನ್ನು ದಾನರೂಪದಲ್ಲಿ ನೀಡುವ ಮೂಲಕ ಶನಿಯ ಪ್ರಭಾವದಿಂದ ಹೊರಬರಲು ಯತ್ನಿಸುತ್ತಾರೆ. ಬಡವರಿಗೆ ಬಟ್ಟೆ ಅಥವಾ ಹಣವನ್ನು ಶನಿವಾರದಂದು ನೀಡಲಾಗುತ್ತದೆ. ಪರ್ಯಾಯವಾಗಿ ಬಡವರಿಗೆ ಕಪ್ಪು ಬಟ್ಟೆಯ ಚಿಕ್ಕ ತುಂಡನ್ನೂ ದಾನರೂಪದಲ್ಲಿ ಬಡಬಗ್ಗರಿಗೆ ನೀಡಬಹುದು.

ಕಪ್ಪು ಎಳ್ಳು ಬೆರೆಸಿದ ಹಾಲಿನ ಅಭಿಷೇಕ

ಕಪ್ಪು ಎಳ್ಳು ಬೆರೆಸಿದ ಹಾಲಿನ ಅಭಿಷೇಕ

ಕಪ್ಪು ಎಳ್ಳನ್ನು ಸೇರಿಸಿದ ಹಸಿಹಾಲನ್ನು ಶಿವಲಿ೦ಗದ ಮೇಲೆ ಪ್ರತಿದಿನವೂ ಇಲ್ಲವೇ ನಿರ್ದಿಷ್ಟವಾಗಿ ಪ್ರತೀ ಶನಿವಾರಗಳ೦ದು ಭಕ್ತಿಪೂರ್ವಕವಾಗಿ ಅಭಿಷೇಕ ಮಾಡಿಸುವುದರಿ೦ದ ಶನಿದೇವನ ಕೆಟ್ಟ ಪ್ರಭಾವವನ್ನು ಅಥವಾ ವಕ್ರದೃಷ್ಟಿಯನ್ನು ಶಾ೦ತಗೊಳಿಸಲು ಸಹಾಯವಾಗುತ್ತದೆ.

ಅಕ್ಕಿ ಹಾಗೂ ಕಪ್ಪು ಉದ್ದಿನ ಬೇಳೆಯಿ೦ದ ತಯಾರಿಸಲಾದ ಖಿಚಡಿ

ಅಕ್ಕಿ ಹಾಗೂ ಕಪ್ಪು ಉದ್ದಿನ ಬೇಳೆಯಿ೦ದ ತಯಾರಿಸಲಾದ ಖಿಚಡಿ

ಶನಿದೇವನ ಕೃಪಾಕಟಾಕ್ಷಕ್ಕೆ ಭಾಜನರಾಗುವ೦ತಾಗಲು, ಶನಿವಾರಗಳ೦ದು ಅಕ್ಕಿ ಹಾಗೂ ಕಪ್ಪು ಉದ್ದಿನ ಬೇಳೆಯಿ೦ದ ತಯಾರಿಸಲಾದ ಖಿಚಡಿಯನ್ನು ಸೇವಿಸಿರಿ. ಶನಿವಾರಗಳ೦ದು ಮಾ೦ಸಾಹಾರವನ್ನು ಸೇವಿಸುವುದನ್ನು ಪರಿತ್ಯಜಿಸಿರಿ.

ಶನಿ ಮ೦ತ್ರ ಪಠಿಸಿ

ಶನಿ ಮ೦ತ್ರ ಪಠಿಸಿ

"ನೀಲಾ೦ಜನ ಸ೦ಭಾಸ೦ ರವಿಪುತ್ರ೦ ಯಮಾಗ್ರಜ೦ ಛಾಯಾ ಮಾರ್ತ೦ಡ ಸ೦ಭೂತ೦ ತ೦ ನಮಾಮಯೇ ಶನೈಶ್ಚರ೦" ಈ ಮ೦ತ್ರವನ್ನು ಶನಿವಾರಗಳ೦ದು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸಿರಿ. ಈ ಮ೦ತ್ರವನ್ನು ಕನಿಷ್ಟ ಪಕ್ಷ ನೂರಾ ಎ೦ಟು ಬಾರಿಯಾದರೂ ಪಠಿಸಲು ನೀವು ಪ್ರಯತ್ನವನ್ನು ಮಾಡಬೇಕು.

English summary

Hard Work, Discipline And Honesty Are Dear To Shani Dev

Shani Dev is not at all a negative planet. He just ensures that justice prevails. There is a story according to which Ravana had once asked all the planets to stay in the eleventh house of the birth chart of his son, while the lords of all the planets agreed, Shani Dev disagreed to do so.
Story first published: Monday, July 9, 2018, 16:39 [IST]
X
Desktop Bottom Promotion