For Quick Alerts
ALLOW NOTIFICATIONS  
For Daily Alerts

Rama Navami 2024 Wishes: ಶ್ರೀ ರಾಮ ನವಮಿಗೆ ಶುಭ ಕೋರಲು ಇಲ್ಲಿವೆ ಶುಭಾಶಯಗಳು

|

ಆದರ್ಶ ಪುರುಷ ಶ್ರೀ ರಾಮನ ಹುಟ್ಟುಹಬ್ಬವನ್ನು ರಾಮನವಮಿಯೆಂದು ಆಚರಿಸಲಾಗುವುದು. ಈ ವರ್ಷ ಏಪ್ರಿಲ್‌ 17ರಂದು ಆಚರಿಸಲಾಗುವುದು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಮೊದಲ ರಾಮನವಮಿ ಇದಾಗಿದೆ.

ಶ್ರೀ ರಾಮನ ಭಕ್ತರು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ.

Ram Navami

ರಾಮ ನಾಮ ಜಪ ಮಾಡಿದರೆ ಸಾಕು ರಾಮ ನಮ್ಮನ್ನು ರಕ್ಷಿಸುತ್ತಾನೆ ಎಂಬ ಅಚಲ ನಂಬಿಕೆ ಭಕ್ತರದ್ದು. ಕಷ್ಟಗಳನ್ನು ಗೆಲ್ಲುವ ಶಕ್ತಿ ಶ್ರೀರಾಮ ಜಪದಿಂದ ಸಿಗುತ್ತದೆ.

ಈ ರಾಮ ನವಮಿಯಂದು ನಿಮ್ಮ ಸ್ನೇಹಿತರು, ಬಂಧುಗಳಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು:

1. ರಾಮ ನವಮಿ ಹಬ್ಬದ ಶುಭಾಶಯಗಳು

2. ಶ್ರೀ ರಾಮನ ಆಶೀರ್ವಾದ ನಿಮ್ಮ ಕುಟುಂಬದ ಮೇಲಿರಲಿ, ನಿಮ್ಮ ಕನಸು ನೆರವೇರಲು ಆ ಭಗವಂತ ಸಹಕರಿಸಲಿ, ಜೈ ಶ್ರೀ ರಾಮ್
ರಾಮ ನವಮಿ ಹಬ್ಬದ ಶುಭಾಶಯಗಳು


3. ಶ್ರೀ ರಾಮ ನಿಮ್ಮ ಜೀವನದಲ್ಲಿ ಐಶ್ವರ್ಯ, ಆರೋಗ್ಯ, ನೆಮ್ಮದಿ ಕರುಣಿಸಲು, ಜೈ ಶ್ರೀ ರಾಮ್
ರಾಮ ನವಮಿ ಹಬ್ಬದ ಶುಭಾಶಯಗಳು

4. ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ,
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ."
ಭಕ್ತರ ಜೀವನದಲ್ಲಿ ಇರುವ ದುಃಖಗಳನ್ನು ಕೊನೆಗೊಳಿಸಿ, ಸಂತೋಷವನ್ನು ಕರುಣಿಸುವ ರಾಮ ಜನ್ಮ ದಿನವೇ ರಾಮ ನವಮಿ.
ನಿಮ್ಮ ಬಾಳಿಗೆ ಆ ಭಗವಂತ ಶ್ರೀರಾಮ ಕರುಣಿಸಲಿ
ಜೈ ಶ್ರೀ ರಾಮ್

5. ಓಂ ಕ್ಲೀಮ್ ನಮೋ ಭಗವತೇ ರಾಮಚಂದ್ರಾಯ
ಸಕಲಜನ ವಶ್ಯಕಾರಾಯ ಸ್ವಾಹಃ"
ಹ್ಮಾಂಡದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಬಲ್ಲ ವರ್ಚಸ್ವಿ ದೇವ ಶ್ರೀರಾಮನ ಕೃಪೆ ನಿಮ್ಮ ಮೇಲಿರಲಿ: ಜೈ ಶ್ರೀ ರಾಮ್

6. ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವೇ ರಾಮ ನವಮಿ
ಎಲ್ಲಾ ರಾಮನ ಭಕ್ತರಿಗೆ ಶ್ರೀ ರಾಮ ನವಮಿಯ ಶುಭಾಶಯಗಳು

7. ಕಷ್ಟಗಳು ಎದುರಾದಾಗ ನಾವು ಹೇಗೆ ನಡೆದುಕೊಳ್ಳಬೇಕು ಎಂಬುವುದಕ್ಕೆ ರಾಮನೇ ಆದರ್ಶ, ರಾಮನ ವ್ಯಕ್ತಿತ್ವ ನೋಡಿ ಕಲಿತರೆ ಎಂಥ ಕಷ್ಟಗಳಿಂದಲೂ ಪಾರಾಗಬಹುದು.
ಶ್ರೀ ರಾಮ ನವಮಿಯ ಶುಭಾಶಯಗಳು

English summary

Happy Rama Navami 2024 Wishes, Images, Quotes, Messages, Wallpapers, Greetings, Whatsapp Status in Kannada

Happy Ram Navami 2021: Wishes, Messages, Quotes, Images, Facebook And Whatsapp status in Kannada, Have a look.
X
Desktop Bottom Promotion