Just In
Don't Miss
- Automobiles
ಹ್ಯುಂಡೈ ಹೊಸ ಕ್ರೆಟಾ 7 ಸೀಟರ್ ಎಸ್ಯುವಿ ಕಾರಿನ ಬಿಡುಗಡೆ ಮಾಹಿತಿ ಬಹಿರಂಗ
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- News
ವೈಟ್ಹೌಸ್ ಕಚೇರಿ ಡಿಸೈನ್ ಚೇಂಜ್ ಮಾಡಿಸಿದ ಜೋ ಬೈಡನ್..!
- Movies
ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುನೀತ್ ರಾಜ್ ಕುಮಾರ್
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Happy Bhogi 2021 Wishes : ಭೋಗಿ ಹಬ್ಬಕ್ಕೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ಭೋಗಿ ಎನ್ನುವುದು ಸಂಕ್ರಾಂತಿಯ ಮುಂಚಿತ ದಿನ ಆಚರಿಸುವ ಹಬ್ಬವಾಗಿದೆ. ಸಾಮಾನ್ಯವಾಗಿ ಈ ಹಬ್ಬವನ್ನು ಜನವರಿ 13 ಅಥವಾ 14ರಂದು ಆಚರಿಸಲಾಗುವುದು. ಈ ವರ್ಷ ಜನವರಿ 14ರಂದು ಆಚರಿಸಲಾಗುತ್ತಿದೆ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಭೋಗಿ ಹಬ್ಬ ಆಚರಿಸಲಾಗುವುದು.
ಕರ್ನಾಟಕದಲ್ಲಿ ಈ ದಿನ ಸಜ್ಜಿಗೆ, ರೊಟ್ಟಿ, ಬದನೆಕಾಯಿ ಮಾಡಿ ಸವಿಯಲಾಗುವುದು.
ಭೋಗಿ ಹಬ್ಬದಂದು ಇಂದ್ರನನ್ನು ಪೂಜಿಸಲಾಗುವುದು. ಬೆಳೆ ಪಡೆದ ಬಳಿಕ ಒಳ್ಳೆಯ ಮಳೆ ನೀಡಿ ಬೆಳೆ ಬೆಳೆಯಲು ಸಹಕರಿಸಿದ ಇಂದ್ರನನ್ನು ಈ ದಿನ ಪೂಜಿಸುತ್ತಾರೆ, ಮನೆಯಲ್ಲಿರುವ ಬೇಡದ ಹಳೆಯ ವಸ್ತುಗಳನ್ನು ಬೆಂಕಿಗೆ ಬಿಸಾಡಿ , ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಆಚರಿಸಲಾಗುವುದು.
ಹಳೆಯ ಋಣಾತ್ಮಕ ಚಿಂತೆ ದೂರವಾಗಿ ಧನಾತ್ಮಕ ಶಕ್ತಿ ತುಂಬಲಿ ಎಂಬುವುದೇ ಈ ಹಬ್ಬದ ಆಶಯವಾಗಿದೆ. ಭೋಗಿ ಹಬ್ಬಕ್ಕೆ ಶುಭ ಕೋರಲು ಶುಭಾಶಯಗಳನ್ನು ನೀಡಿದ್ದೇವೆ ನೋಡಿ.

ಶುಭಾಶಯ 1
ಈ ಸುಗ್ಗಿಯ ಹಬ್ಬ ನಿಮಗೆ ಸಂತೋಷ, ಅದೃಷ್ಟ ತರಲಿ, ಭೋಗಿ ಹಬ್ಬದ ಶುಭಾಶಯಗಳು

ಶುಭಾಶಯ 2
ಈ ಭೋಗಿ ಹಬ್ಬದಂದು ಲೆಕ್ಕಕ್ಕೆ ಸಿಗದಷ್ಟು ಖುಷಿ, ಸಂಪತ್ತು ನಿಮಗೆ ಆ ದೇವರು ಕರುಣಿಸಲಿ ಎಂದು ಹಾರೈಸುವೆ, ಭೋಗಿ ಹಬ್ಬದ ಶುಭಾಶಯಗಳು

ಶುಭಾಶಯ 3
ನಿಮಗೂ, ನಿಮ್ಮ ಕುಟುಂಬಕ್ಕೂ ಭೋಗಿ ಹಬ್ಬದ ಶುಭಾಶಯಗಳು

ಶುಭಾಶಯ 4
ಭೋಗಿ ಹಬ್ಬದ ಶುಭಾಶಯಗಳು, ಸಂಕ್ರಾಂತಿಯ ಎಳ್ಳು-ಬೆಲ್ಲದಂತೆ ಆರೋಗ್ಯವಾದ ಹಾಗೂ ಸಿಹಿಯಾದ ಬದುಕು ನಿಮ್ಮದಾಗಲಿ.

ಶುಭಾಶಯ 5
ಭೋಗಿಯ ಈ ಶುಭ ದಿನದಂದು ಸೂರ್ಯನ ರಶ್ಮಿಯಂತೆ ಪ್ರಕಾಶಮಾನವಾದ ಹಾಗೂ ಸಮೃದ್ಧಿಯ ಬದುಕು ನಿಮ್ಮದಾಗಲಿ ಎಂದು ಹಾರೈಸುವೆ, ಭೋಗಿ ಹಬ್ಬದ ಶುಭಾಶಯಗಳು.

ಶುಭಾಶಯ 6
ಸೂರ್ಯ ಉದಯಿಸುವ ಬೀರುವ ಪ್ರಭೆಯಂತೆ ನಿಮ್ಮ ಬದುಕು ಪ್ರಕಾಶಮಾನವಾಗಿರಲಿ ಎಂದು ಹಾರೈಸುವೆ, ಹ್ಯಾಪಿ ಭೋಗಿ.

ಶುಭಾಶಯ 7
ಭೋಗಿಯ ಈ ಶುಭ ದಿನದಂದು ನೀವು ಪ್ರಾರಂಭಿಸಿದ ಹೊಸ ಕಾರ್ಯ ಒಳ್ಳೆಯ ಫಲ ನೀಡಲಿ ಎಂದು ಹಾರೈಸುವೆ.

ಶುಭಾಶಯ 8
ಈ ಭೋಗಿ ಹೊಸ ಬದುಕಿನ ಶುಭಾರಂಭದ ದಿನಾಗಲಿ, ಹಳೆಯದನ್ನು ಮರೆತು ಭವಿಷ್ಯದ ಕಡೆ ಮುನ್ನುಗ್ಗೋಣ, ಭೋಗಿ ಹಬ್ಬದ ಶುಭಾಶಯಗಳು