For Quick Alerts
ALLOW NOTIFICATIONS  
For Daily Alerts

Akshaya Tritiya Wishes in Kannada: ಅಕ್ಷಯ ತೃತೀಯ 2023: ಶುಭ ಕೋರಲು ಇಲ್ಲಿದೆ ಶುಭಾಶಯಗಳು

|

ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ಅಕ್ಷಯ ತೃತೀಯ. ಈ ವರ್ಷ ಏಪ್ರಿಲ್ 22ರಂದು ಆಚರಿಸಲಾಗುವುದು. ದಿನ ಹಿಂದೂಗಳಿಗೆ ತುಂಬಾನೇ ಪ್ರಾಮುಖ್ಯವಾದ ದಿನ.

Akshaya Tritiya

ಚಿನ್ನ ಬೆಳ್ಳಿ ಕೊಳ್ಳಲು, ಆಸ್ತಿ ಖರೀದಿಸಲು, ವಾಹನ ಖರೀದಿಸಲು, ಯಾವುದಾದರು ಹೊಸ ವ್ಯವಹಾರಕ್ಕೆ ಕೈ ಹಾಕಲು, ರೈತರು ಹೊಲದಲ್ಲಿ ಹೊಸ ಬೆಳೆಗೆ ಕೆಲಸ ಪ್ರಾರಂಭಿಸಲು, ತುಂಬಾ ಶುಭವೆಂದು ಈ ದಿನವನ್ನು ಪರಿಗಣಿಸಲಾಗಿದೆ.

ಅಕ್ಷಯ ತೃತೀಯದಂದು ಯಾವುದೇ ಶುಭ ಕಾರ್ಯ ಮಾಡಿದರೂ ಅದರ ಫಲ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಈ ಅಕ್ಷಯ ತೃತೀಯಾದಂದು ಏನೇ ಮಾಡಿದರೂ ಅದು ಅಕ್ಷಯವಾಗಿರುತ್ತದೆ. ಈ ಶುಭ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಉತ್ತಮ ಶುಭಾಶಯಗಳು...

1. ಅಕ್ಷಯ ತೃತೀಯ ಶುಭಾಶಯಗಳು

2. ಈ ಅಕ್ಷಯ ತೃತೀಯ ನಿಮ್ಮ ಸಂಪತ್ತು, ಆರೋಗ್ಯ ವೃದ್ಧಿಸಲಿ, ಮನೆಯಲ್ಲಿ ಖುಷಿ ತುಂಬಲಿ...
ಅಕ್ಷಯ ತೃತೀಯ ಶುಭಾಶಯಗಳು

3. ಅಕ್ಷಯ ತೃತೀಯದಂದು ನೀವು ಕೈಗೊಂಡ ಕಾರ್ಯ ಅಕ್ಷಯವಾಗಲಿ, ಅದೃಷ್ಟದ ಲಕ್ಷ್ಮಿ ನಿಮಗೆ ಒಲಿಯಲಿ ಎಂದು ಹಾರೈಸುವೆ.
ಅಕ್ಷಯ ತೃತೀಯ ಶುಭಾಶಯಗಳು

4. ನಿಮ್ಮ ಹಾಗೂ ಮನೆಯವರ ಆರೋಗ್ಯ ಅಕ್ಷಯವಾಗಿರಲಿ
ಅದೃಷ್ಟ ನಿಮ್ಮ ಜೊತೆಗಿರಲಿ
ನೀವು ಮಾಡುತ್ತಿರುವ ಕಾರ್ಯದಲ್ಲಿ ಯಶಸ್ವಿ ಕಾಣಲಿ ಎಂದು ಹಾರೈಸುವೆ
ಅಕ್ಷಯ ತೃತೀಯ ಶುಭಾಶಯಗಳು

5. ಈ ಅಕ್ಷಯ ತೃತೀಯ ಶುಭ ದಿನದಂದು ನಿಮ್ಮ ಎಲ್ಲಾ ಕನಸುಗಳು ನೆರವೇರಲಿ, ಆ ದೇವರು ಆರೋಗ್ಯ, ಆಯುಸ್ಸು, ಐಶ್ವರ್ಯ ಕೊಟ್ಟು ನಿಮ್ಮನ್ನು, ನಿಮ್ಮ ಮನೆಯವರನ್ನು ಸಂರಕ್ಷಿಸಲಿ ಎಂದು ಮನ ತುಂಬಿ ಹಾರೈಸುವೆ.

6. ನಿನ್ನ ಕಾರ್ಯದಲ್ಲಿ ಯಶಸ್ವಿ ದೊರೆಯಲಿ, ಅದೃಷ್ಟ ಲಕ್ಷ್ಮಿ ಸದಾ ನಿನ್ನ ಜೊತೆಗಿರಲಿ...
ನಿನ್ನ ಮುಖದಲ್ಲಿ ನಗು ಅಕ್ಷಯವಾಗಿರಲಿ ಎಂಬುವುದೇ ನನ್ನಾಸೆ
ಅಕ್ಷಯ ತೃತೀಯ ಶುಭಾಶಯಗಳು

7. ಅಕ್ಷಯ ತೃತೀಯಾದಂದು ಮಾತ್ರವಲ್ಲ ಇಡೀ ನಿನ್ನ ಬಾಳಿನಲ್ಲಿ ಆರೋಗ್ಯ, ಸಂಪತ್ತು ತುಂಬಿರಲಿ. ಬೇಡಿದ್ದನ್ನು ಕೊಡುವ ನಿನ್ನ ಕೈಗಳು ಸದಾ ಅಕ್ಷಯವಾಗಿರಲಿ, ನಿಮ್ಮಿಂದ ಮತ್ತಷ್ಟು ಉಪಕಾರ ಈ ಸಮಾಜಕ್ಕೆ ಆಗುವಂತಾಗಲಿ
ನಿಮಗೆ, ನಿಮ್ಮ ಕುಟುಂಬಕ್ಕೆ ಅಕ್ಷಯ ತೃತೀಯಾ ಶುಭಾಶಯಗಳು
ದೇವರ ಕೃಪೆ ಸದಾ ನಿಮ್ಮ ಮೇಲಿರಲಿ.

English summary

Happy Akshaya Tritiya 2023: Wishes, Images, Greetings, Quotes, Messages, Whatsapp Status in Kannada

Happy Akshaya Tritiya 2021: Wishes, greetings, quotes, images, whatsapp and facebook status messages in kannada.
X
Desktop Bottom Promotion