For Quick Alerts
ALLOW NOTIFICATIONS  
For Daily Alerts

ಶ್ರಾವಣ ಮಾಸದಲ್ಲಿ ಶಿವನೊಂದಿಗೆ ಹನುಮಂತನನ್ನು ಪೂಜಿಸಿ- ಎಲ್ಲವೂ ಒಳ್ಳೆಯದಾಗುವುದು

|

ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದ್ದು ಈ ಮಾಸದಲ್ಲಿ ವಿಶೇಷವಾಗಿ ಶಿವನ ಆರಾಧನೆಯನ್ನು ಮಾಡಲಾಗುತ್ತದೆ. ಸರಳ ಪೂಜೆಗೆ ಭಕ್ತರಿಗೆ ಒಲಿಯುವ ಶಂಭೋ ಎಂದವರ ಕೈ ಬಿಡುವವರಲ್ಲ. ಕೈ ಹಿಡಿದು ಪೊರೆಯುವವರಾಗಿದ್ದಾರೆ. ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸಿದೊಡನೆಯೇ ಜನ್ಮ ಜನ್ಮಗಳ ಪಾಪ ಕೂಡ ವಿಮೋಚನೆಯಾಗುತ್ತದೆ ಅಂತಹ ಶಕ್ತಿ ಈ ಹೆಸರಿಗಿದೆ.

ಶ್ರಾವಣ ಮಾಸದಲ್ಲಿ ವಿಶೇಷವಾಗಿ ಶಿವನನ್ನು ಭಕ್ತಿಯಿಂದ ನೆನೆದು ಉಪವಾಸ ಮಾಡಿದರೆ ಆ ಪರಶಿವ ನಾವು ಬೇಡಿದ್ದನ್ನು ವರವಾಗಿ ಕರುಣಿಸುತ್ತಾರೆ ಎಂಬುದು ಹಿಂದಿನಿಂದಲೂ ಜನ ಜನಿತವಾಗಿರುವ ಸಿದ್ಧಾಂತವಾಗಿದೆ. ಶಿವ ಹೇಗೆ ಸರಳ ರೂಪಿಯಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆಯೋ ಅಂತೆಯೇ ಶಿವನ ಪೂಜೆ ಕೂಡ ಅಷ್ಟೇ ಸುಲಭವಾದುದು. ಪುರಾಣದಲ್ಲಿ ಕೂಡ ಶಿವನನ್ನು ಭಜಿಸಿ ಅವರನ್ನು ಪೂಜಿಸಿ ಆ ತಂದೆಯನ್ನು ತಮ್ಮ ಭಕ್ತಿಯ ಪಾಶದಲ್ಲಿ ಕಟ್ಟಿ ಹಾಕಿದವರಿದ್ದಾರೆ. ಭಕ್ತ ಮಾರ್ಕಂಡೇಯ, ಮಂಜುನಾಥ ಮೊದಲಾದ ಭಕ್ತರು ಇದಕ್ಕೆ ಸಾಕ್ಷಿಯಾಗಿದ್ದಾರೆ.

ವಿಶೇಷವಾಗಿ ಶ್ರಾವಣ ಮಾಸದಲ್ಲಿ ಕನ್ಯೆಯರು ಮತ್ತು ವಿವಾಹಿತ ಸ್ತ್ರೀಯರು ಶಿವನ ಪೂಜೆಯನ್ನು ಮಾಡುತ್ತಾರೆ. ಕನ್ಯೆಯರು ಶಿವನಂತಹ ಪತಿಯನ್ನು ಪಡೆಯಲು ಮತ್ತು ವಿವಾಹಿತ ಸ್ತ್ರೀಯರು ತಮ್ಮ ಪತಿಯ ಆರೋಗ್ಯ ಮತ್ತು ಸುಖಕ್ಕಾಗಿ ಶಿವನ ಪೂಜೆಯನ್ನು ಮಾಡುತ್ತಾರೆ. 16 ಸೋಮವಾರಗಳಂದು ವಿಶೇಷ ಪೂಜೆಯನ್ನು ಮಾಡಿ ಪ್ರಸಾದವನ್ನು ದೇವರಿಗೆ ಅರ್ಪಿಸಿ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ.

ಇಂದಿನ ನಮ್ಮ ಲೇಖನದಲ್ಲಿ ಶಿವನ ಇನ್ನೊಂದು ಅವತಾರವೆಂದೇ ಕರೆಯಿಸಿಕೊಂಡಿರುವ ಹನುಮಂತನ ಆರಾಧನೆಯನ್ನು ಮಾಡುವುದರಿಂದ ಉಂಟಾಗುವ ಫಲಗಳೇನು ಎಂಬುದನ್ನು ತಿಳಿಯೋಣ. ವಿಷ್ಣುವು ರಾಮನ ಅವತಾರವನ್ನು ಎತ್ತಿದ ಸಂದರ್ಭದಲ್ಲಿ ಶಿವನು ಹನುಮನಾಗಿ ರಾಮನ ಅನುಯಾಯಿಯಾಗಿದ್ದರು ಎಂದು ಹೇಳಲಾಗಿದೆ. ಈ ಮಾಸದಲ್ಲಿ ಶಿವನ ಅನುಗ್ರಹವನ್ನು ಪಡೆದುಕೊಳ್ಳಲು ದೇವರಿಗೆ ಹೇಗೆ ಪೂಜೆಯನ್ನು ಮಾಡುತ್ತೀರೋ ಅದೇ ಸಮಯದಲ್ಲಿ ಹನುಮ ಕೂಡ ನಿಮ್ಮ ಭಕ್ತಿಗೆ ಕಿವಿಗೊಡುತ್ತಾರೆ. ಇಂದಿಲ್ಲಿ ಹನುಮನನ್ನು ಈ ಮಾಸದಲ್ಲಿ ಯಾವ ವಿಧವಾಗಿ ಪೂಜಿಸಬೇಕು ಎಂಬುದನ್ನು ಅರಿತುಕೊಳ್ಳೋಣ...

ಪಂಚೋಪಚಾರ್ ಪೂಜನ್

ಪಂಚೋಪಚಾರ್ ಪೂಜನ್

ಮಂಗಳವಾರ ಶಿವ ದೇವಸ್ಥಾನವನ್ನು ಭೇಟಿ ಮಾಡಿ ಮತ್ತು ಹನುಮಂತನ ಪಂಚೋಪಚಾರ್ ಪೂಜೆಯನ್ನು ನಿರ್ವಹಿಸಿ. ಪಂಚೋಪಚಾರ್ ಪೂಜಾನ್ ಐದು ವಿಧಗಳ ಅಥವಾ ಐದು ಹಂತಗಳ ಪೂಜೆಯನ್ನು ಸೂಚಿಸುತ್ತದೆ. ಈ ಪೂಜೆಯಲ್ಲಿ, ದೇವತೆಯ ವಿಗ್ರಹಕ್ಕೆ ಮೊದಲು ಅಭಿಷೇಕ ಮಾಡಲಾಗುತ್ತದೆ. ಸ್ನಾನವನ್ನು ಅರ್ಚಕರು ಮಾಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಹನುಮಾನ್ ಬ್ರಹ್ಮಚಾರಿಯಾಗಿದ್ದು ಮತ್ತು ಮಹಿಳೆಯರು ಹನುಮನ ವಿಗ್ರಹವನ್ನು ಸ್ಪರ್ಶಿಸಬಾರದು ಎಂದು ಹೇಳಲಾಗಿದೆ. ಅಭಿಷೇಕದ ನಂತರ, ವಿಗ್ರಹದ ಅಲಂಕಾರವನ್ನು ಮಾಡಿ. ನಂತರ ಹೂವುಗಳನ್ನು ದೇವರಿಗೆ ಅರ್ಪಿಸಿ. ಇದರ ನಂತರ, ಸುತ್ತಮುತ್ತಲಿನ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕಲು ಧೂಪದ್ರವ್ಯವು ಹಾಕಿ. ನಂತರ, ದೀಪವನ್ನು ಬೆಳಗಿಸಿದ ನಂತರ, ಮಂತ್ರ ಪಠಿಸಿ ಮತ್ತು ಭೋಗ್ ಎಂದು ಕರೆಯಲ್ಪಡುವ ಪ್ರಸಾದವನ್ನು ದೇವರಿಗೆ ನೀಡಲಾಗುತ್ತದೆ.

ಆಲದ ಮರದ ಎಲೆ ಬಳಸಿ ಪರಿಹಾರ

ಆಲದ ಮರದ ಎಲೆ ಬಳಸಿ ಪರಿಹಾರ

ಈ ತಿಂಗಳಲ್ಲಿ ಯಾವುದೇ ಮಂಗಳವಾರ, ಒಂದು ಆಲದ ಮರದ ಎಲೆಯನ್ನು ತೆಗೆದುಕೊಂಡು ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಈಗ ಅದನ್ನು ಸ್ವಲ್ಪ ಸಮಯದವರೆಗೆ ಹನುಮಾನ್ ವಿಗ್ರಹದ ಮುಂದೆ ಇರಿಸಿ. ಇದರ ನಂತರ, ನೀವು ಕೇಸರಿ ಪುಡಿ ಬಳಸಿ 'ಶ್ರೀ ರಾಮ್' ಎಂದು ಬರೆಯಬೇಕು, ಮತ್ತು ಅದನ್ನು ತಿಲಕ ಎಂದು ಹಚ್ಚಿಕೊಳ್ಳಿ. ಈ ಎಲೆಯನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿಕೊಳ್ಳಿ ಮತ್ತು ಮುಂದಿನ ದಿನ ನೀವು ಇದನ್ನು ಪುರನಾವರ್ತಿಸುವವರೆಗೆ ನಿಮ್ಮ ಪರ್ಸ್ ಖಾಲಿಯಾಗಿರುವುದಿಲ್ಲ. ಮುಂದಿನ ವರ್ಷದಲ್ಲಿ, ಇದನ್ನು ಹೊಸ ಎಲೆಯ ಮೂಲಕ ಪುನರಾವರ್ತಿಸಿ ಮತ್ತು ಹಳೆಯ ಎಲೆಗಳನ್ನು ನೀರಿನಲ್ಲಿ ಮುಳುಗಿಸಿ.

ದೇವಾಲಯದಲ್ಲಿ ರಾಮ ರಕ್ಷಾ ಸ್ತೋತ್ರ

ದೇವಾಲಯದಲ್ಲಿ ರಾಮ ರಕ್ಷಾ ಸ್ತೋತ್ರ

ತಿಂಗಳಿನಲ್ಲಿ ಮಂಗಳವಾರ ಯಾವುದೇ ಹನುಮಾನ್ ದೇವಾಲಯಕ್ಕೆ ಹೋಗಿ ಅಲ್ಲಿ ರಾಮ್ ರಕ್ಷಾ ಸ್ತೋತ್ರವನ್ನು ಪಠಿಸಿ. ನಂತರ ಹನುಮಾನ್‌ಗೆ ಬೆಲ್ಲ ಮತ್ತು ಹುರಿದ ಧಾನ್ಯಗಳನ್ನು ಕೊಡಿ. ನೀವು ಜೀವನದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವರನ್ನು ಪ್ರಾರ್ಥಿಸಿ ಫಲ ಖಂಡಿತ.

ಶಿವ ಚಾಲೀಸ ಮತ್ತು ಹನುಮಾನ್ ಚಾಲೀಸ

ಶಿವ ಚಾಲೀಸ ಮತ್ತು ಹನುಮಾನ್ ಚಾಲೀಸ

ಶ್ರಾವಣ ಮಾಸದ ಯಾವುದೇ ಮಂಗಳವಾರ ಶಿವ ಮತ್ತು ಹನುಮಂತನ ವಿಗ್ರಹವನ್ನು ಹೊಂದಿರುವ ದೇವಸ್ಥಾನಕ್ಕೆ ಹೋಗಿ. ತುಪ್ಪದ ದೀಪವನ್ನು ಹಚ್ಚಿ. ನಿಮ್ಮೊಂದಿಗೆ ತಂದಿರುವ ಪೂಜಾ ವಸ್ತುಗಳನ್ನು ದೇವರಿಗೆ ಅರ್ಪಿಸಿ. ನಂತರ ದೇವರುಗಳ ಮುಂದೆ ಕುಳಿತು ಶಿವ ಚಾಲೀಸ ಮತ್ತು ಹನುಮಾನ್ ಚಾಲೀಸವನ್ನು ಪಠಿಸಿ. ಹನುಮ ಮತ್ತು ಶಿವನ ಅನುಗ್ರಹ ನಿಮ್ಮ ಮೇಲಿರುತ್ತದೆ.

ಹನುಮಾನ ಚಾಲೀಸಾ ಮಂತ್ರ

ಹನುಮಾನ ಚಾಲೀಸಾ ಮಂತ್ರ

ಜಯ ಹನುಮಾನ್ ಜ್ಞಾನ ಗುಣಸಾಗರ ! ಜಯ ಕಪೀಶ ತಿಹುಲೋಕ ವುಜಾಗರ

ರಾಮದೂತ ಆತುಲಿತ ಬಲಧಮಾ

ಅಂಜನೀಪ್ರತ್ರ- ಪವನಸುತ ನಾಮಾ

ಮಹಾವೀರ ವಿಕ್ರಮ ಬಜರಂಗೀ ಕುಮತಿ ನಿವಾರಾ ಸುಮತಿ ಕೇ ಸಂಗೀ

ಕಂಚನವರಣ ವಿರಾಜ ಸುವೇಶಾ ಕಾನನ ಕುಂಡಲ ಕುಂಚಿತ ಕೇಶಾ

ಹನುಮಂತನ ಮಂತ್ರ ಪಠಿಸಿ

ಹನುಮಂತನ ಮಂತ್ರ ಪಠಿಸಿ

ಮನೋಜವಂ ಮಾರುತತುಲ್ಯವೆಗಂ ಜಿತೇಂದ್ರಿಯಂ ಬುದ್ಧಿಮಾತಂ ವರಿಸ್ತಂ, ವಾತಾತಮಜಂ ವಾನರಾಯುಕ್ತಮುಖ್ಯಂ ಶ್ರೀರಾಮ ದೂತಂ ಸರನಾಮ ಪ್ರಪಾದಯೆ. ಪುರುಷರು ಈ ಮಂತ್ರವನ್ನು ಪಠಿಸಿ ಹನುಮಂತ ದೇವರನ್ನು ಪೂಜಿಸಬಹುದಾಗಿದೆ. ಸ್ನಾನ ಮಾಡಿದ ಬಳಿಕ ಅಥವಾ ರಾತ್ರಿ ವೇಳೆ ಈ ಮಂತ್ರವನ್ನು ಪಠಿಸಬಹುದು. ಮಧ್ಯರಾತ್ರಿ ವೇಳೆ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು, ಅಲ್ಲದೆ ಮಂಗಳವಾರದಂದು ಉಪವಾಸ ಮಾಡಿಕೊಂಡು ಹನುಮಂತ ದೇವರನ್ನು ಪ್ರಾರ್ಥಿಸಬಹುದು. ದಿನದಲ್ಲಿ ಒಂದು ಊಟವನ್ನು ಮಾಡಿ ಹನುಮಂತ ದೇವರ ಮಂತ್ರ ಅಥವಾ ಹನುಮಾನ್ ಚಾಲೀಸವನ್ನು ಪಠಿಸಬೇಕು. ಇನ್ನು ಹನುಮಂತ ದೇವರಿಗೆ ಸಿಹಿ ಇಷ್ಟವಾಗಿರುವ ಕಾರಣದಿಂದ ಕಡಲೆಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. ವಾನರಗಳು ಪತ್ತೆಯಾಗದೆ ಇದ್ದರೆ ಹನುಮಂತನ ಮೂರ್ತಿಗೆ ಬಾಳೆಹಣ್ಣನ್ನು ಅರ್ಪಿಸಿ. ಪುರುಷರು ಈ ಮೂಲಕ ಹನುಮಂತನನ್ನು ಪೂಜಿಸಬಹುದಾಗಿದೆ.

English summary

Hanuman Puja in Shravan Month For A Problem Free life

When all the people offer their prayers to Lord Shiva in this month, Lord Hanuman too hears the prayers of his devotees more easily on Shravana Tuesdays. His worship can remove pain and suffering as well as all kinds of negative energies such as the evil eye effects and the fear of ghosts. He teaches us to live life as a brave and fearless being.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more