For Quick Alerts
ALLOW NOTIFICATIONS  
For Daily Alerts

ಹನುಮಾನ್‌ ಜಯಂತಿ: ನಿಮ್ಮ ಇಷ್ಟಾರ್ಥ ನೆರವೇರಲು ಆಂಜನೇಯನ ಪೂಜೆಯಲ್ಲಿ ಈ ಪೂಜಾ ವಿಧಿಗಳನ್ನು ಪಾಲಿಸಿ

|

ಶ್ರೀರಾಮನ ಪರಮ ಭಕ್ತ, ವಾಯು ಪುತ್ರ ಆಂಜನೇಯನ ಭಕ್ತರಾದರೆ ಜೀವನದಲ್ಲಿ ಎಲ್ಲಾ ಕಷ್ಟಗಳನ್ನು ಧೈರ್ಯವನ್ನು ಗೆಲ್ಲುವ ಶಕ್ತಿ ಅವನು ನಮಗೆ ನೀಡುತ್ತಾನೆ. ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಹನುಮಂತ ಜನಿಸಿದ ಎಂದು ಪೌರಾಣಿಕ ಕತೆಗಳು ಹೇಳುತ್ತವೆ. ಆದ್ದರಿಂದ ಈ ದಿನ ಹನುಮಾನ್‌ ಜಯಂತಿಯನ್ನು ಆಚರಿಸಲಾಗುವುದು.

2022ರಲ್ಲಿ ಹನುಮಾನ್‌ ಜಯಂತಿಯನ್ನು ಏಪ್ರಿಲ್‌ 16ರಂದು ಆಚರಿಸಲಾಗುವುದು.

ಹುಣ್ಣಿಮೆ ತಿಥಿ ಪ್ರಾರಂಭ ಯಾವಾಗ, ಈ ದಿನ ಪಾಲಿಸುವ ಪೂಜೆಯ ಹಾಗೂ ವ್ರತದ ನಿಯಮಗಳೇನು? ಪೌರಾಣಿಕ ಕರೆ, ಹನುಮಾನ್‌ ಮಂತ್ರ, ಆರತಿ ಇವುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ:

ಹುಣ್ಣಿಮೆ ತಿಥಿ

ಹುಣ್ಣಿಮೆ ತಿಥಿ

ಹುಣ್ಣಿಮೆ ತಿಥಿ ಪ್ರಾರಂಭ: ಏಪ್ರಿಲ್‌ 16, 2022 02:25ಕ್ಕೆ

ಹುಣ್ಣಿಮೆ ತಿಥಿ ಮುಕ್ತಾಯ: ಏಪ್ರಿಲ್ 17, 2022 , 12:24ಕ್ಕೆ

ಹನುಮಾನ್‌ ಜಯಂತಿ ಪೌರಾಣಿಕ ಕತೆ

ಹನುಮಾನ್‌ ಜಯಂತಿ ಪೌರಾಣಿಕ ಕತೆ

ಪೌರಾಣಿಕ ಕತೆಯ ಪ್ರಕಾರ ಚೈತ್ರ ಪೂರ್ಣಿಮೆಯಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುವುದು. ಆದ್ದರಿಂದ ಈ ದಿನ ಹನುಮಂತನ ಭಕ್ತರಿಗೆ ತುಂಬಾ ವಿಶೇಷವಾದ ದಿನವಾಗಿದೆ. ಮಾತಾ ಅಂಜನಾ ಹಾಗೂ ಕೇಸರಿಯ ಪುತ್ರ ಹನುಮಂತ, ಆಂಜನೇಯನನ್ನು ವಾಯು ದೇವನ ಪುತ್ರವೆಂದು ಬಣ್ಣಿಸಲಾಗುವುದು.

ಹನುಮಾನ್‌ ಜಯಂತಿಯಂದು ಏನು ಮಾಡಬೇಕು?

ಹನುಮಾನ್‌ ಜಯಂತಿಯಂದು ಏನು ಮಾಡಬೇಕು?

* ಈ ದಿನ ಪೂರ್ತಿ ಉಪವಾಸ ಮಾಡಲಾಗುವುದು.

* ಷೋಡಶೋಪಚಾರ ಹನುಮಾನ್‌ ಪೂಜೆ ಮಾಡಿ

* ಹನುಮಂತನ ದೇವಾಲಯಕ್ಕೆ ಬೇಟಿ ನೀಡಿ

* ಹನುಮಂತನಿಗೆ ಕುಂಕುಮ ಅರ್ಪಿಸಿ.

ಹನುಮಾನ್‌ ಪೂಜಾ ವಿಧಿ

ಹನುಮಾನ್‌ ಪೂಜಾ ವಿಧಿ

1. ಸಂಕಲ್ಪ: ಹನುಮಂತನ ಪೂಜೆಯನ್ನು ಸಂಕಲ್ಪದೊಂದಿಗೆ ಪ್ರಾರಂಭಿಸಬೇಕು. ಮೊದಲಿಗೆ ಪಂಚ ಪಾತ್ರೆಯಿಂದ ಬಲಗೈಗೆ ನೀರು ಹಾಕಿ ಕೈಗಳನ್ನು ಸ್ವಚ್ಛಗೊಳಿಸಿ. ನಂತರ ಶುದ್ಧ ನೀರು, ಅಕ್ಷತೆ, ಹೂಗಳನ್ನು ತೆಗೆದುಕೊಳ್ಳಿ. ನಂತರ ಸಂಕಲ್ಪ ಮಂತ್ರ ಹೇಳಿ ಅವುಗಳನ್ನು ನೆಲಕ್ಕೆ ಹಾಕಿ.

ಸಂಕಲ್ಪ - ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು.

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ

2. ಆವಾಹನೆ ಮಾಡಬೇಕು

ಈಗ ಎರಡೂ ಕೈಗಳನ್ನು ಜೋಡಿಸಿ, ಹನುಮಂತನನ್ನು ಧ್ಯಾನಿಸಿ ಅವಾಹನೆ ಮಾಡಬೇಕು.

3. ಧ್ಯಾನ ಮಾಡಿ

ಹನುಮಂತ ಫೋಟೋ ಅಥವಾ ಮೂರ್ತಿಯ ಮುಂಎ ಹನುಮಂತನ ಮಂತ್ರಗಳನ್ನು ಹೇಳುತ್ತಾ ಧ್ಯಾನ ಮಾಡಿ.

4. ಆಸನ

ಈಗ 5 ಬಗೆಯ ಹೂಗಳನ್ನು ತೆಗೆದುಕೊಂಡು ಕೈ ಜೋಡಿಸಿ ಹನುಮಂತನಿಗೆ ಅರ್ಪಿಸಿ.

5. ಆರ್ಘ್ಯ ಅರ್ಪಿಸಿ

ಪಾಡ್ಯ ಅರ್ಪಿಸಿದ ಬಳಿಕ ಹನುಮಂತನ ಮೂರ್ತಿಗೆ ಅಭಿಷೇಕ ಮಾಡಿ. ಆರ್ಘ್ಯ ಮಾಡುವಾಗ ಮಂತ್ರಗಳನ್ನು ಹೇಳಿ.

6. ಅಚಮನ ಮಾಡಿ

ಆರ್ಘ್ಯ ಮಾಡಿದ ಬಳಿಕ ಮಂತ್ರಗಳನ್ನು ಹೇಳುತ್ತಾ ನೀರನ್ನು ಚಿಮುಕಿಸಿ.

7. ಸ್ನಾನ ಮಂತ್ರ

ಮಂತ್ರ ಹೇಳುತ್ತಾ ಹಾಲು, ಮೊಸರು, ಜೇನು, ತುಪ್ಪ ಮತ್ತು ಸಕ್ಕರೆ ಹಾಕಿ ಪಂಚಾಮೃತ ಅಭಿಷೇಕ ಮಾಡಿ.

8. ಶುದ್ಧ ನೀರಿನಿಂದ ಅಭಿಷೇಕ ಮಾಡಿ.

9. ನಂತರ ಗರಿಕೆಯನ್ನು ಸಮರ್ಪಿಸಿ

10. ನತರ ಕಟಿಸೂತ್ರ(ಪವಿತ್ರವಾದ ಬೆಲ್ಟ್) ಹಾಗೂ ಕೌಪಿನಾ(ಬಟ್ಟೆ)ಯನ್ನು ಅರ್ಪಿಸಿ.

11. ಕೌಪಿನಾವನ್ನು ಮಂತ್ರವನ್ನು ಹೇಳುತ್ತಾ ಅರ್ಪಿಸಿದ ಬಳಿಕ ಉತ್ತಾರಿಯಾವನ್ನು ಹನುಮಂತನ ಮೇಲ್ಭಾಗದ ಶರೀರಿಕ್ಕೆ ಹಾಕಿ

12. ಯಜ್ಞೋಪವಿತ ಅರ್ಪಿಸಿ.

13. ಶ್ರೀಗಂಧವನ್ನು ಅರ್ಪಿಸಿ.

14. ಅಕ್ಷತೆಯನ್ನು ಹಾಕಿ

15. ಪುಷ್ಪಗಳನ್ನು ಅರ್ಪಿಸಿ

16. ಗ್ರಂಥಿ ಪೂಜೆ ಮಾಡಿ (13 ಗಂಟು ಹಾಕಿದ ಪವಿತ್ರವಾದ ನೂಲು)

17. ಅಂಗಪೂಜೆ ಮಾಡಿ

18. ಧೂಪ ಹಚ್ಚಿ, ದೀಪ ಬೆಳಗಿ

19. ನೈವೇದ್ಯ ಅರ್ಪಿಸಿ

20 ಪಣ್ಯ ಅಂದ್ರೆ ಗಂಗಾಜಲವನ್ನು ಅರ್ಪಿಸಿ

21. ಉತ್ತರಪೋಷಾನ್ನ (ಅನ್ನದಾತನಿಗೆ ಧನ್ಯವಾದ ಹೇಳಿ)

22. ಹಸ್ತ ಪ್ರಕಾಶಲನ( ಹನುಮಂತನಿಗೆ ಕೈಗಳನ್ನು ಸ್ವಚ್ಛಗೊಳಿಸಲು ನೀರು ಅರ್ಪಿಸಿ)

22. ಈಗ ಗಂಗಾ ಜಲ ಅರ್ಪಿಸಿ, ಹಳದಿ ಹೂಗಳನ್ನು ಅರ್ಪಿಸಿ.

23. ತಾಂಬೂಲ ನೀಡಿ

24. ಆತಿ ಬೆಳಗಿ, ಪುಷ್ಪಾಂಜಲಿ ಮಾಡಿ, ನಂತರ ಪ್ರದಕ್ಷಣೆ ಹಾಕಿ ನಮಸ್ಕರಿಸಿ.

ಹನುಮಾನ್‌ ಮಂತ್ರ

ಮನೋಜವಂ ಮಾರುತತುಲ್ಯವೇಗಂ ಚಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಾಮ್ ವಾತಾತ್ಮಜಂ ವಾನರಯೂದ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ ಬುದ್ಧಿಬಲ ಯಶೋಧರ್ಮಂ ನಿರ್ಭಯತ್ವಂ ಅರೋಗತಾ ಅಜಾಡಂ ವಾಕ್ಪಟುತ್ವಂ ಹನುಮಂತ್ ಸ್ಮರಣಾರ್ಥ ಭವೇತ್

"ಓಂ ಹಂ ಹನುಮತಯೆ ನಮಃ".

ಇಚ್ಛೆ ಈಡೇರಲು ಈ ಮಂತ್ರ ಪಠಿಸಿ

ಇಚ್ಛೆ ಈಡೇರಲು ಈ ಮಂತ್ರ ಪಠಿಸಿ

ಓಂ ಹ್ರೀಮ್ ಕ್ಲೀಮ್ ದಿನಾನ್‌ಕಂಪಿ ಧರ್ಮಾತ್ಮ ಪ್ರೇಮಾಬ್ಧಿ ರಾಮವಲ್ಲಭ ಅದ್ವೈಯಂ ಮಾರುತೇ ವೀರ್ ಮೆ ಬಸ್ತೇದಿ ಸತ್ವಾರಂ ಕ್ಲೀಮ್ ಹ್ರೀಮ್ ಏಮ್ ಓಂ..........

ಹನುಮಾನ್ ಸ್ತುತಿ

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಮರೋಗಿತಾ |

ಅಜಾಡ್ಯಾಂ ವಾಕ್ಪಟುತ್ವಾಂ ಚ ಹನೂಮತ್ ಸ್ಮರಣಾದ್ ಭವೇತ್ ||

ಬುದ್ಧಿ, ಬಲ, ಕೀರ್ತಿ, ಧೈರ್ಯ, ನಿರ್ಭಯತೆ,

ಆರೋಗ್ಯ, ಚುರುಕುತನ, ಭಾಷಣಕೌಶಲ್ಯ

ಇವೆಲ್ಲ ಹನುಮನ ಸ್ಮರಣೆಯಿಂದ ಸಿದ್ಧಿಸುತ್ತದೆ.

ಹನುಮಾನ್‌ ಜಯಂತಿಗೆ ಶುಭ ಫಲಕ್ಕೆ ಹೀಗೆ ಮಾಡಿ:

* ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ.

* ಬಡವರಿಗೆ ದಾನ ಮಾಡಿ

English summary

Hanuman Jayanti 2022: Puja Vidhi, Vrat Vidhi, Samagri, Vrat Katha, Mantra and Aarti in Kannada

Hanuman Jayanti 2022: Puja Vidhi, Vrat Vidhi, Samagri, Vrat Katha, Mantra and Aarti in Kannada, read on.. .
X
Desktop Bottom Promotion